ತೆರೆಗೂ ಮುನ್ನವೇ ದಾಖಲೆಯತ್ತ ಸಾಗಿದೆ ರೆಬೆಲ್​ ಮಗ ಅಭಿನಯದ ಅಮರ್​ ಸಿನಿಮಾ..!

news18
Updated:August 21, 2018, 6:07 PM IST
ತೆರೆಗೂ ಮುನ್ನವೇ ದಾಖಲೆಯತ್ತ ಸಾಗಿದೆ ರೆಬೆಲ್​ ಮಗ ಅಭಿನಯದ ಅಮರ್​ ಸಿನಿಮಾ..!
news18
Updated: August 21, 2018, 6:07 PM IST
ನ್ಯೂಸ್​ 18 ಕನ್ನಡ

ರೆಬೆಲ್‍ಸ್ಟಾರ್ ಅಂಬರೀಷ ಅವರ ಮಗ ಅಭಿಷೇಕ್ ನಾಯಕನಾಗಿ ನಟಿಸುತ್ತಿರುವ 'ಅಮರ್'. ಈ ಸಿನಿಮಾ ಚಿತ್ರೀಕರಣಕ್ಕೂ ಮುಂಚಿತವಾಗಿಯೇ ಸ್ಯಾಂಡಲ್​ವುಡ್​ನಲ್ಲಿ ಬಹಳ ಸದ್ದು ಮಾಡಿತ್ತು. ಕನ್ನಡ ಚಿತ್ರರಂಗದಲ್ಲಿ ಅಂಬರೀಷ ಅವರ ಮಾತಿಗೆ ತಿರುಗಿ ಬಿದ್ದವರೇ ಇಲ್ಲ. ಇಂಡಸ್ಟ್ರಿಯಲ್ಲಿ ಇಷ್ಟು ಹವಾ ಇರೋ ಅಂಬಿ ಮಗನ ಸಿನಿಮಾ ಅಂದರೆ ಸುಮ್ಮನೆಯೇನಲ್ಲ. ಹೌದು ರೆಬೆಲ್​ ಮಗನ ಸಿನಿಮಾ ಎಂದರೇನೆ ಒಂದು ವಿಶೇಷ.

ಸಂದೇಶ್ ನಾಗರಾಜ್ ನಿರ್ಮಾಣದ ಈ ಸಿನಿಮಾಗೆ ನಾಗಶೇಖರ್ ಆ್ಯಕ್ಷನ್-ಕಟ್ ಹೇಳಿದ್ದು,  90ರ ದಶಕದಲ್ಲಿ ನಡೆದ ಒಂದು ನೈಜ ಘಟನೆಯಾಧರಿಸಿ ಈ ಚಿತ್ರಕ್ಕೆ ಕಥೆ ಹೆಣೆಯಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ 10 ದಿನಗಳ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ರಾಜ್ಯದ ಬಹುತೇಕ ಲೊಕೇಶನ್‍ಗಳಲ್ಲಿ ಶೂಟಿಂಗ್​ ನಡೆಸುತ್ತಿದೆ.

ಮಣಿಪಾಲದಲ್ಲಿ 7 ದಿನ, ಮಂಗಳೂರಿನಲ್ಲಿ 7 ದಿನ, ಮಡಿಕೇರಿಯಲ್ಲಿ 7 ದಿನ ಹಾಗೂ ಕೇರಳದ ಸುಲ್ತಾನ್ ಬತೇರಿಯಲ್ಲಿ 2 ದಿನಗಳ ಕಾಲ ಚಿತ್ರೀಕರಣ ಮಾಡಿದೆ. ಅಲ್ಲದೆ ಊಟಿಯಲ್ಲಿ 6 ದಿನ ಮತ್ತು ಮೈಸೂರಿನಲ್ಲಿ 2 ದಿನಗಳ ಕಾಲ ಚಿತ್ರೀಕರಣ ನಡೆಸುವ ಮೂಲಕ  ಈ ಸಿನಿಮಾ ಅತಿಹೆಚ್ಚು ಲೊಕೇಶನ್‍ಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಶೇಷ ಎಂದರೆ ಈ ಎಲ್ಲಾ ಪ್ರದೇಶಗಳಲ್ಲೂ ಚಿತ್ರೀಕರಣದ ಸಮಯದಲ್ಲಿ ಮಳೆ ಇವರನ್ನು ಹಿಂಬಾಲಿಸಿದೆ. ಈಗಾಗಲೇ 50 ದಿನಗಳ ಕಾಲ ಚಿತ್ರೀಕರಣ ನಡೆಸಿರುವ 'ಅಮರ್'  ಸಿನಿತಂಡ ಮುಂದಿನ ಷೆಡ್ಯೂಲ್‍ನಲ್ಲಿ ಜೈಪುರದಲ್ಲಿ 5 ದಿನ ಸ್ಕೂಟರ್ ರೇಸ್ ಚಿತ್ರೀಕರಣ ಹಾಗೂ ಹೊರದೇಶದಲ್ಲಿ ಪ್ರಮುಖ ಮಾತಿನ ಭಾಗದ ಚಿತ್ರೀಕರಣ ನಡೆಸುವ ಯೋಜನೆ ಹಾಕಿಕೊಂಡಿದೆ.

ಈ ಚಿತ್ರದಲ್ಲಿ ಬೈಕ್‍ರೇಸ್ ಪ್ರಮುಖ ಭಾಗವಾಗಿ ಮೂಡಿಬಂದಿದೆ. 'ಗೋ ಗ್ರೀನ್' ಅಡಿ ಬರಹದೊಂದಿಗೆ ಮರಗಿಡ ಬೆಳೆಸಿ ಅನ್ನೋ ಪರಿಕಲ್ಪನೆಯನ್ನು ಈ ಸಿನಿಮಾ ಮೂಲಕ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗಿದೆ. ಅದರಲ್ಲೂ ಈ ದೃಶ್ಯಕ್ಕೆಂದು 50 ಜನ ರಿಯಲ್ ಬೈಕರ್ಸ್​ಗಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
Loading...

ಚಿತ್ರದ ಕೊನೆಯ ಭಾಗವನ್ನು ಬೆಂಗಳೂರಿನಲ್ಲಿ 10 ದಿನಗಳ ಕಾಲ ಚಿತ್ರೀಕರಿಸಲಿದೆ. ಇನ್ನೂ 45 ದಿನಗಳ ಚಿತ್ರೀಕರಣ ಬಾಕಿಯಿದ್ದು, ಚಿತ್ರಕತೆಗೆ ಅಗತ್ಯವಿರುವ ಕಾರಣಕ್ಕೆ ವಿದೇಶದಲ್ಲಿ ಹಾಡುಗಳ ಚಿತ್ರೀಕರಣ ನಡೆಸಲಿದೆಯಂತೆ ಈ ತಂಡ.

ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇರುವ ಈ ಸಿನಿಮಾಗೆ ನಾಗಶೇಖರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜಾಲಿಬಾಸ್ಟಿನ್ ಹಾಗೂ ಪಾಡ್ಯನ್ ಅವರ ಸಾಹಸ, ಮೋಹನ್ ಬಿ.ಕೆರೆ ಅವರ ಕಲೆ, ದೀಪು ಎಸ್.ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಅಭಿಷೇಕ್, ತಾನ್ಯಾ ಹೋಪ್, ಚಿಕ್ಕಣ್ಣ, ಸುಧಾರಾಣಿ, ದೀಪಕ್ ಶೆಟ್ಟಿ, ಸಾಧುಕೋಕಿಲ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

 
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...