Viral Video: ಗೆದ್ದ ಮೇಲೆ ಬದಲಾಗಿಬಿಟ್ರಾ ಸುಮಲತಾ? ಕಾಲಿಗೆ ಬಿದ್ದ ಹಿರಿಯರ ಕಡೆ ತಿರುಗಿಯೂ ನೋಡಲಿಲ್ಲ ಎಂದು ಟ್ರೋಲ್!

Sumalatha: ಅಂಬಿ ಅವರ ಮಡದಿಯನ್ನು ಕಂಡು ಊರಿನ ಜನರು ಅವರ ಬಳಿ ಧಾವಿಸಿದ್ದಾರೆ. ನೆರೆದಿದ್ದವರು ಅವರ ಸಂಕಷ್ಟವನ್ನು ಹೇಳಿಕೊಳ್ಳುತ್ತಿದ್ದಾರೆ. ಈ ವೇಳೆ ಮಹಿಳೆ ಕೂಡ ತನ್ನ ಸಂಕಷ್ಟವನ್ನು ಹೇಳುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ

ಸಂಸದೆ ಸುಮಲತಾ

ಸಂಸದೆ ಸುಮಲತಾ

  • Share this:
    ನಟಿ, ಸಂಸದೆ ಸುಮಲತಾ (Sumalatha) ಅವರ ವಿಡಿಯೋವೊಂದು (Video) ವೈರಲ್ (Viral)​ ಆಗುತ್ತಿದೆ. ಕೆಲವು ಟ್ರೋಲ್​ ಪೇಜ್​ಗಳು (Troll Pages) ಅವರ ವಿಡಿಯೋವನ್ನು ವೈರಲ್​ ಮಾಡುತ್ತಿವೆ. ಸಂಸದೆ ಸ್ಥಾನದಲ್ಲಿ ಮಂಡ್ಯ (Mandya) ಪ್ರತಿನಿಧಿಯಾಗಿ ಗುರುತಿಸಿಕೊಂಡ ಸುಮಲತಾ ಅವರ ಕಾಲಿಗೆ  ಮಹಿಳೆಯೊಬ್ಬರು ನಮಸ್ಕರಿಸುವ ವಿಡಿಯೋ (Video) ಇದಾಗಿದೆ. ಆದರೆ ಈ ವಿಡಿಯೋದಿಂದ ಸಮಲತಾ ಅವರು ಏಕೆ ಟ್ರೋಲ್​ ಆಗುತ್ತಿದ್ದಾರೆ? ಟ್ರೋಲಿಗರ ಕಂಗೆಣ್ಣಿಗೆ ಸುಮಲತಾ ಏಕೆ ಗುರಿಯಾಗಿದ್ದಾರೆ? ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.

    ಏನಿದು ಘಟನೆ?

    ಸಿನಿಮಾದ ಬಳಿಕ ರಾಜಕೀಯಕ್ಕೆ ಎಂಟ್ರಿ ನೀಡಿ ಯಶಸ್ವಿ ಸಾಧಿಸಿದ ನಟ-ನಟಿಯರು ಕೆಲವೇ ಕೆಲವರು. ಅವರಲ್ಲೊಬ್ಬರು ನಟಿ ಸುಮಲತಾ. ಸಿನಿಮಾದಲ್ಲಿ ಸಾಕಷ್ಟು ಸಕ್ಸಸ್​ ಕಂಡು, ಮಂಡ್ಯದ ಗಂಡು ಅಂಬರೀಶ್​​ ಅವರ ಕೈಹಿಡಿದು, ಅಂಬರೀಶ್​ ಅವರು ದೈವಾಧೀನರಾದ ಬಳಿಕ ಮಂಡ್ಯ ಜನರ ಒತ್ತಾಯದ ಮೇರೆಗೆ ರಾಜಕೀಯದತ್ತ ಮುಖ ಮಾಡಿದವರು ಸುಮಲತಾ. ಅಂಬಿ ಮೇಲಿನ ಮಂಡ್ಯ ಜನರ ಪ್ರೀತಿಯಿಂದ ಸುಮಲತಾ ಸಂಸದೆಯಾಗಿ ಸ್ಥಾನ ಪಡೆದಿದ್ದಾರೆ. ಆದರೀಗ ಸಂಸದೆಯ ಬಳಿ ಮಹಿಳೆಯೊಬ್ಬರು ತನ್ನ ಸಂಕಷ್ಟ ಹೇಳುತ್ತಿರುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದ ಮೂಲಕ ಸುಮಲತಾ ಅವರು ಟ್ರೋಲಿಗರ ಆಹಾರವಾಗಿದ್ದಾರೆ.

    ವಿಡಿಯೋದಲ್ಲಿ ಏನಿದೆ?

    ಸಾಮಾನ್ಯವಾಗಿ ರಾಜಿಕೀಯ ವ್ಯಕ್ತಿಗಳು ಯಾವುದಾದರು ಊರಿಗೆ ಭೇಟಿ ನೀಡಿದಾಗ ಅಲ್ಲಿನ ಜನರು ಅವರನ್ನು ಕಾಣಲು ಓಡಿ ಬರುತ್ತಾರೆ. ಇನ್ನು ಕೆಲವರು ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಬರುತ್ತಾರೆ. ಅದರಂತೆಯೇ ಮಹಿಳೆಬ್ಬರು ಸಂಸದೆ ಸುಮಲತಾ ಅವರ ಬಳಿ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಎರಡು ಕೈ ಮುಗಿದು ಬೇಡುವುದು ದೃಶ್ಯದಲ್ಲಿ ಕಂಡಿದೆ. ಇಷ್ಟೇ ಅಲ್ಲ, ತನ್ನ ನೋವನ್ನು ಹೇಳಿಕೊಳ್ಳುವುದರ ಜೊತೆಗೆ ನೇರವಾಗಿ ಮಹಿಳೆ  ಸುಮಲತಾ ಅವರ ಕಾಲಿಗೆ ಬೀಳುವುದನ್ನು ಕಾಣಬಹುದಾಗಿದೆ.

    ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಯ್ತು ವಿಡಿಯೋ!

    ತನಗಿಂತ ಪ್ರಾಯದ ಮಹಿಳೆ ಕಣ್ಣೀರು ಸುರಿಸಿಕೊಂಡು, ಕೈ ಮುಗಿದುಕೊಂಡು, ಸಂಕಷ್ಟವನ್ನು ಹೇಳಿಕೊಂಡು ಕಾಲಿಗೆ ಬಿದ್ದರೂ ಸಹ ಸಂಸದೆ ಸುಮಲತಾ ಅವರು ಏನು ಮಾಡದೆ ಸುಮ್ಮನಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳೆ  ಕಾಲಿಗೆ ಬೀಳುವುದನ್ನು ತಡೆಯದೆ, ಆಕೆಯನ್ನು ಸಮಧಾನ ಮಾಡಲು ಕೂಡ ಸಂಸದೆ ಮುಂದಾಗಲಿಲ್ಲ.





    ಘಟನೆ ನಡೆದದ್ದು ಎಲ್ಲಿ?

    ಅಂಬರೀಶ್​ ಅವರ ಹುಟ್ಟೂರಿನಲ್ಲಿ ಈ ಘಟನೆ ನಡೆದಿದೆ. ಸಂಸದೆ ಸುಮಲತಾ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದಾರೆ.ಅಂಬಿ ಅವರ ಮಡದಿಯನ್ನು ಕಂಡು ಊರಿನ ಜನರು ಅವರ ಬಳಿ ಧಾವಿಸಿದ್ದಾರೆ. ನೆರೆದಿದ್ದವರು ಅವರ ಸಂಕಷ್ಟವನ್ನು ಹೇಳಿಕೊಳ್ಳುತ್ತಿದ್ದಾರೆ. ಈ ವೇಳೆ ಮಹಿಳೆ ಕೂಡ ತನ್ನ ಸಂಕಷ್ಟವನ್ನು ಹೇಳುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ.

    ಸಂಸದೆ ಸ್ಥಾನದಲ್ಲಿ ಕೂರಿಸಿದ್ದು ಮಂಡ್ಯ ಜನತೆ!

    ಮೊದಲೇ ಹೇಳಿದಂತೆ ಅಂಬರೀಶ್​ ಮಂಡ್ಯದ ಮಣ್ಣಿನ ಮಗ. ಮಂಡ್ಯದ ಜನರು ಅಂಬರೀಶ್​ ಅವರನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಅಂಬಿ ಸಾವನ್ನಪ್ಪಿದ ಬಳಿಕ ಸುಮಲತಾ ಅವರನ್ನು ಮತ ಹಾಕುವ ಮೂಲಕ ಜಯದ ದಡಕ್ಕೆ ಸೇರಿಸಿದ್ದು ಇದೇ ಮಂಡ್ಯ ಜನತೆ.

    ವೈರಲ್​ ಆಗುತ್ತಿದೆ ವಿಡಿಯೋ, ನಿಜಾಂಶ ಏನು?

    ಸದ್ಯ ಟ್ರೋಲಿಗರು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ. ಆದರೆ ನಿಜಾಂಶ ಏನು ಎಂಬುದು ಸರಿಯಾಗಿ ತಿಳಿದು ಬರಬೇಕಿದೆ. ಆದರೆ ದೃಶ್ಯದಲ್ಲಿ ಕಾಣುವಂತೆ ಸುಮಲತಾ ಅವರು ಮಹಿಳೆಯ ಕಣ್ಣೀರಿಗೆ ಕರಗದೇ ಸುಮ್ಮನಿದ್ದರೇ? ಎಂದು ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ.
    First published: