ರೆಬೆಲ್​ ಪುತ್ರನ ಅಮರ್​ ಸಿನಿಮಾದ ಫಸ್ಟ್​ ಪೋಸ್ಟರ್​ ಬಿಡುಗಡೆ

news18
Updated:July 30, 2018, 3:47 PM IST
ರೆಬೆಲ್​ ಪುತ್ರನ ಅಮರ್​ ಸಿನಿಮಾದ ಫಸ್ಟ್​ ಪೋಸ್ಟರ್​ ಬಿಡುಗಡೆ
  • Share this:
ನ್ಯೂಸ್​ 18 ಕನ್ನಡ 

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಚಂದನವನಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನಾಗಶೇಖರ್ ನಿರ್ದೇಶಿಸುತ್ತಿರೋ 'ಅಮರ್' ಸಿನಿಮಾದಲ್ಲಿ ಅಂಬಿ ಪುತ್ರ ಅಭಿಷೇಕ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಇಂದು ಈ ಚಿತ್ರದ ಫಸ್ಟ್ ಪೋಸ್ಟರ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಮೊದಲ ಸಿನಿಮಾಗಾಗಿ ಸಾಕಷ್ಟು ಸಿದ್ಧತೆಗಳನ್ನ ಮಾಡ್ಕೊಂಡಿದ್ದ ಅಭಿಷೇಕ್, ಸದ್ಯ ರಿಲೀಸಾಗಿರೋ ಪೋಸ್ಟರ್​ನಲ್ಲಿ ಮಾಸ್ ಲುಕ್ ಮೂಲಕ ಸಿನಿಪ್ರೇಕ್ಷಕರನ್ನ ಸೆಳೆದಿದ್ದಾರೆ.

ಈ ಸಿನಿಮಾದ ಚಿತ್ರೀಕರಣದ ಆರಂಭವಾಗಲಿದೆ ಎಂದು ಸಾಕಷ್ಟು ದಿನಗಳಿಂದ ಹೇಳಲಾಗುತ್ತಿದ್ದಾರೂ, ನಿರ್ದೇಶಕ ಯಾರೆಂಬುದು ಖಚಿತವಾಗಿರಲಿಲ್ಲ. ಈಗ ಕೊನೆಗೂ ನಿರ್ದೇಶಕನ ಜೊತೆಗೆ ಚಿತ್ರ ಪೋಸ್ಟರ್​ ಬಿಡುಗಡೆಯಾಗಿರೋದು ನಿಜಕ್ಕೂ ಅಂಬಿ ಅಭಿಮಾನಿಗಳಿಗೆ ಸಂತಸ ತಂದಿದೆ.

 
First published:May 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ