Amar Movie: ಅಮರ್​ ಸಿನಿಮಾ ಬಿಗುಡೆಗೂ ಮುನ್ನ ಲಕ್ಷ ರೂಪಾಯಿ ಕೊಟ್ಟು ಮೊದಲ ಶೋ ಟಿಕೆಟ್​ ಖರೀದಿಸಿದ ಅಭಿಮಾನಿ

ನಿನ್ನೆಯಷ್ಟೆ ಅಂಬಿ ಹುಟ್ಟುಹಬ್ಬವನ್ನು ಸ್ವಾಭಿಮಾನಿಗಳ ಸಮಾವೇಶದ ಹೆಸರಲ್ಲಿ ಮಂಡ್ಯದಲ್ಲಿ ಆಚರಿಸಲಾಯಿತು. ಇದರ ನಡುವೆಯೇ ಅಂಬಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಅಭಿಷೇಕ್​ ಅಭಿನಯದ ಚೊಚ್ಚಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ದಾಖಲೆ ಬರೆದಿದೆ.

Anitha E | news18
Updated:May 30, 2019, 3:54 PM IST
Amar Movie: ಅಮರ್​ ಸಿನಿಮಾ ಬಿಗುಡೆಗೂ ಮುನ್ನ ಲಕ್ಷ ರೂಪಾಯಿ ಕೊಟ್ಟು ಮೊದಲ ಶೋ ಟಿಕೆಟ್​ ಖರೀದಿಸಿದ ಅಭಿಮಾನಿ
ಮಂಜುನಾಥ್​ ಅವರು ಟಿಕೆಟ್​ ಖರೀದಿಸಿದ ನಂತರ ಒಂದು ಲಕ್ಷದ ಚೆಕ್​ ಅನ್ನು ನಿರ್ಮಾಪಕ ಸಂದೇಶ್​ ನಾಗರಾಜ್​, ಅಭಿಷೇಕ್​ ಹಾಗೂ ಸುಮಲತಾರಿಗೆ ಕೊಟ್ಟಿದ್ದಾರೆ
  • News18
  • Last Updated: May 30, 2019, 3:54 PM IST
  • Share this:
- ಅನಿತಾ ಈ, 

ಸುಮಲತಾ ಅವರಿಗೆ ಮೇ ಒಂದು ರೀತಿ ಅದೃಷ್ಟದ ತಿಂಗಳು ಎನ್ನಬಹುದು. ಹೌದು, ಒಂದು ಕಡೆ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ, ಮತ್ತೊಂದು ಕಡೆ ಅವರ ಮಗ ಅಭಿಷೇಕ್​ ಅಭಿನಯದ 'ಅಮರ್​' ಸಿನಿಮಾ ಬಿಡುಗಡೆಯ ಹೊಸ್ತಿನಲ್ಲಿದೆ.

ನಿನ್ನೆಯಷ್ಟೆ ಅಂಬಿ ಹುಟ್ಟುಹಬ್ಬವನ್ನು ಸ್ವಾಭಿಮಾನಿಗಳ ಸಮಾವೇಶದ ಹೆಸರಲ್ಲಿ ಮಂಡ್ಯದಲ್ಲಿ ಆಚರಿಸಲಾಯಿತು. ಇದರ ನಡುವೆಯೇ ಅಭಿಷೇಕ್​ ಅಭಿನಯದ ಚೊಚ್ಚಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ದಾಖಲೆ ಬರೆದಿದೆ.



ಹೌದು, ಈ ಸಿನಿಮಾದ ಮೊದಲ ಶೋನ ಟಿಕೆಟ್​ ಅನ್ನು ಬಿಡುಗಡೆಗೆ ಮುನ್ನವೇ ಒಂದು ಲಕ್ಷ  ಕೊಟ್ಟು ಅಭಿಮಾನಿಯೊಬ್ಬರು ಖರೀದಿಸಿದ್ದಾರೆ. ಈ ಬಗ್ಗೆ ಸಂದೇಶ್​ ನಾಗರಾಜು ಅವರೇ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.



ದಾವಣಗೆರೆಯ ನಿವಾಸಿ ಮಂಜುನಾಥ್​ ಎಂಬುವರು ನಿರ್ಮಾಪಕ ಸಂದೇಶ್​ ನಾಗರಾಜು ಅವರಿಗೆ ಒಂದು ಲಕ್ಷದ ಚೆಕ್​ ಕೊಟ್ಟು ಟಿಕೆಟ್​ ಖರೀದಿಸಿದ್ದಾರೆ.  ಮಂನುಜಾಥ್​ ಅವರು ಅಂಬರೀಷ್​ ಅವರ ಕಟ್ಟಾ ಅಭಿಮಾನಿ, ಅಂಬಿ ಮಗಬ ಚೊಚ್ಚಲ ಸಿನಿಮಾದ ಫಸ್ಟ್​ ಶೋವನ್ನು ನೋಡಲು ಕಾತರರಾಗಿದ್ದು, ಟಿಕೆಟ್ ಖರೀದಿಸಿದ್ದಾರಂತೆ.ಇದನ್ನೂ ಓದಿ: ಅಂಬಿಯ ಹುಟ್ಟುಹಬ್ಬದ ಜತೆಗೆ ಅಭಿಷೇಕ್​ರ ಚೊಚ್ಚಲ ಚಿತ್ರಕ್ಕೂ ಶುಭ ಕೋರಿದ ನಿಖಿಲ್​ ಕುಮಾರಸ್ವಾಮಿ

ಗುಣಶೇಖರ್​ ನಿರ್ದೇಶನದ ಹಾಗೂ ಸಂದೇಶ್​ ನಾಗರಾಜ್​ ನಿರ್ಮಾಣದ ಈ ಚಿತ್ರದಲ್ಲಿ ಅಭಿಷೇಕ್​ಗೆ ನಾಯಕಿಯಾಗಿ ತಾನ್ಯಾ ಹೋಪ್​ ಅಭಿನಯಿಸಿದ್ದಾರೆ. ಈ ಸಿನಿಮಾ ನಾಳೆ ಅಂದರೆ ಮೇ 31ರಂದು ಎಲ್ಲೆಡೆ ಬಿಡುಗಡೆಯಾಗಲಿದೆ.

 PHOTOS: ಗೌನ್​ನಲ್ಲಿ ಮಿಂಚುತ್ತಿರುವ ಟಾಲಿವುಡ್​ ಲಿಲ್ಲಿ ರಶ್ಮಿಕಾ ಮಂದಣ್ಣ..!
First published:May 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ