• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Sumalatha-Chetan: ಅಂಬರೀಶ್ ಯಾರ ಬಳಿಯೂ ಕೈಚಾಚಿಲ್ಲ, ಸ್ಮಾರಕಕ್ಕಾಗಿ ಸುಮಲತಾ ಕೈಚಾಚಿದ್ರು! ನಟ ಚೇತನ್ ಅಹಿಂಸಾ ಆರೋಪ

Sumalatha-Chetan: ಅಂಬರೀಶ್ ಯಾರ ಬಳಿಯೂ ಕೈಚಾಚಿಲ್ಲ, ಸ್ಮಾರಕಕ್ಕಾಗಿ ಸುಮಲತಾ ಕೈಚಾಚಿದ್ರು! ನಟ ಚೇತನ್ ಅಹಿಂಸಾ ಆರೋಪ

ಚೇತನ್, ಸುಮಲತಾ

ಚೇತನ್, ಸುಮಲತಾ

ಅಂಬರೀಶ್ ಸ್ಮಾರಕದ ಬಗ್ಗೆ ಹಾಗೂ ಸ್ಮಾರಕ ನಿರ್ಮಾಣಕ್ಕೆ ತಗುಲಿದ ವೆಚ್ಚದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಟ ಚೇತನ್ ಅಹಿಂಸಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

ಮಂಡ್ಯ ಗಂಡು, ರೆಬೆಲ್​ ಸ್ಟಾರ್​ ಅಂಬರೀಶ್ (Ambareesh) ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಜೀವಂತವಾಗಿದ್ದಾರೆ. ಅಂಬಿ ನಮ್ಮನ್ನು ಅಗಲಿ ಹಲವು ವರ್ಷಗಳೇ ಕಳೆದು ಹೋಗಿದೆ. ರೆಬೆಲ್ ಸ್ಟಾರ್ ಅಂಬರೀಶ್ ನವೆಂಬರ್ 24, 2018ರಂದು ನಿಧನರಾದ್ರು. ನಿನ್ನೆ (ಮಾರ್ಚ್ 27) ರಾಜ್ಯ ಸರ್ಕಾರ ಅಂಬಿ ಸ್ಮಾರಕ ನಿರ್ಮಿಸಿ  ಉದ್ಘಾಟನೆ ಕೂಡ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ವೇಳೆ ಸುಮಲತಾ ಅಂಬರೀಷ್​ ಬಗ್ಗೆ ಮಾತಾಡುತ್ತಾ ಭಾವುಕರಾದ್ರು. ಆದ್ರೆ ಸಂಸದೆ ಸುಮಲತಾ ಮಾತಿಗೆ ನಟ ಚೇತನ್ ಅಹಿಂಸಾ (Chetan Ahimsa) ತಿರುಗೇಟು ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. 


ಯಾರ ಮುಂದೆಯೂ ತಲೆ ತಗ್ಗಿಸಲಿಲ್ಲ ಅಂಬಿ


ಅಂಬರೀಷ್​ ಅಂದ್ರೆ ನೆನಪಾಗುವುದು ಅವರ ಗಟ್ಟಿ ಧ್ವನಿ, ಯಾರಿಗೂ ತಲೆಕೆಡಿಸಿಕೊಳ್ಳದ​ ಡೋಂಟ್ ಕೇರ್ ಸ್ವಭಾವ. ಜೊತೆಯಲ್ಲಿರುವವರನ್ನು ಪ್ರೀತಿಯಿಂದಲೇ ಬೈಯುತ್ತಿದ್ದ ಅಂಬಿ ಅಂದ್ರೆ ಅನೇಕರಿಗೆ ಅಚ್ಚುಮೆಚ್ಚು. ರಾಜಕೀಯದಲ್ಲಿ ಹೆಸರು ಮಾಡಿದ ಅಂಬರೀಷ್​, ಸಚಿವರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡ್ರು. ಸಿನಿಮಾ ರಂಗವೇ ಆಗಲಿ, ರಾಜಕೀಯವೇ ಆಗಲಿ ಅಂಬರೀಷ್ ಯಾರಿಗೂ ತಲೆ ಬಾಗಿದವರಲ್ಲ. ನೆರೆ ನುಡಿಯಿಂದಲೇ ಎಲ್ಲವನ್ನೂ ಎದುರಿಸುತ್ತಿದ್ರು.
ಅಂಬರೀಷ್​ ಯಾರ ಬಳಿಯೂ ಕೈಚಾಚಿಲ್ಲ


ಯಾರೇ ಅಂಬರೀಷ್ ಮನೆಯ ಬಳಿ ಸಹಾಯ ಕೇಳಿ ಹೋದ್ರೆ ಎಂದಿಗೂ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ. ಅಭಿಮಾನಿಗಳನ್ನು ಕೂಡ ಅಷ್ಟೇ ಪ್ರೀತಿಯಿಂದ ಸತ್ಕರಿಸುತ್ತಿದ್ದ ಅಂಬಿ, ಈ ಗುಣದಿಂದಲೇ ಎಲ್ಲರ ಮನಗೆದಿದ್ದರು. ನಿನ್ನೆ (ಮಾ. 27) ಅಂಬರೀಷ್ ಸ್ಮಾರಕ ಉದ್ಘಾಟನೆ ಸಮಾರಂಭದಲ್ಲಿ ಅಂಬಿ ನೆನೆದು ಸುಮಲತಾ ಭಾವುಕರಾಗಿ ಅಂಬರೀಷ್​ ಯಾರ ಬಳಿಯೂ ಕೈಚಾಚಿಲ್ಲ ಎಂದ್ರು.


ಸ್ಮಾರಕ ನಿರ್ಮಾಣಕ್ಕಾಗಿ ಸುಮಲತಾ ಕೈಚಾಚಿದ್ದಾರೆ- ಚೇತನ್


ಅಂಬರೀಶ್ ತಮ್ಮ ಜೀವಿತಾವಧಿಯಲ್ಲಿ ಯಾರ ಬಳಿಯೂ ಕೈಚಾಚಿಲ್ಲ ಎಂದಿದ್ದರು. ಇದೀಗ ಸಂಸದೆ ಸುಮಲತಾ ಅವರ ಮಾತನ್ನು ನಟ, ಹೋರಾಟಗಾರ ಚೇತನ್ ಅಹಿಂಸಾ ಕಟುವಾಗಿ ಟೀಕಿಸಿದ್ದಾರೆ. ಅಂಬರೀಶ್ ಯಾರ ಬಳಿಯೂ ಕೈಚಾಚಿರಲಿಲ್ಲ ಆದರೆ ಸ್ಮಾರಕ ನಿರ್ಮಾಣಕ್ಕಾಗಿ ಸುಮಲತಾ ಸರ್ಕಾರದ ಬಳಿ ಕೈಚಾಚಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.


12 ಕೋಟಿಯನ್ನು ಕೈಚಾಚಿ ಪಡೆದಿದ್ದಾರೆ


ಅಂಬರೀಶ್ ಸ್ಮಾರಕದ ಬಗ್ಗೆ ಹಾಗೂ ಸ್ಮಾರಕ ನಿರ್ಮಾಣಕ್ಕೆ ತಗುಲಿದ ವೆಚ್ಚದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಟ ಚೇತನ್ ಅಹಿಂಸಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನಗತ್ಯವಾಗಿದ್ದ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸುಮಲತಾ ಅವರು ಅಂದಾಜು ಎರಡು ಎಕರೆ ಜಾಗ ಮತ್ತು 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವೇ ಸರಿ ಎಂದಿದ್ದಾರೆ.


ಇದನ್ನೂ ಓದಿ: Ambareesh: ರೇಸ್‌ ಕೋರ್ಸ್‌ ರೋಡ್‌ಗೆ ಅಂಬರೀಶ್ ಹೆಸರು ಇಟ್ಟಿದ್ದೇಕೆ? ಆ ಸ್ಥಳದ ಜೊತೆಗಿದ್ಯಾ ರೆಬೆಲ್ ಸ್ಟಾರ್ ನಂಟು?


ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ?


ಜನರ ತೆರಿಗೆ ಹಣವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತದ 23.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ? ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ? ಎಂದು ಚೇತನ್​ ಪ್ರಶ್ನೆ ಮಾಡಿದ್ದಾರೆ.
ಅಂಬರೀಶ್ ಅವರ ಸ್ಮಾರಕವನ್ನು ಸರ್ಕಾರವು ಕಂಠೀರವ ಸ್ಟುಡಿಯೋನಲ್ಲಿ ನಿರ್ಮಾಣ ಮಾಡಿದೆ. ಒಂದು ಎಕರೆ 34 ಗುಂಟೆ ಪ್ರದೇಶದಲ್ಲಿ ಭವ್ಯವಾಗಿ ಸ್ಮಾರಕ ನಿರ್ಮಾಣವಾಗಿದ್ದು ಇದಕ್ಕೆ ಸುಮಾರು 12 ಕೋಟಿಗೂ ಹೆಚ್ಚಿನ  ಹಣ ಖರ್ಚಾಗಿದೆ. ಸ್ಮಾರಕವನ್ನು ಮಾರ್ಚ್ 27 ರಂದು ಸಿಎಂ ಬೊಮ್ಮಾಯಿ, ಸಚಿವ ಸುಧಾಕರ್, ಸಂಸದೆ ಸುಮಲತಾ ಅಂಬರೀಶ್ ಹಾಗೂ ಇತರರು ಉದ್ಘಾಟನೆ ಮಾಡಿದರು. ಅದೇ ದಿನ ಬೆಂಗಳೂರಿನ ರೇಸ್​ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಇಡಲಾಯಿತು.

top videos
  First published: