ಇಂದು ರೆಬೆಲ್ ಸ್ಟಾರ್ ಅಂಬರೀಷ್ ಅವರ 2ನೇ ವರ್ಷದ ಪುಣ್ಯ ಸ್ಮರಣೆ. ಅಂಬರೀಷ್ ಅವರು ಅಗಲಿ ಎರಡು ವರ್ಷಗಳೇ ಕಳೆದಿದೆ. ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ರೆಬೆಲ್ ಅಂಬಿಯನ್ನು ಸ್ಮರಿಸುತ್ತಿದ್ದಾರೆ. ಅವರೊಂದಿಗೆ ಕಳೆದ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಅವರ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಟಿ ಸುಮಲತಾ ಸಹ ತಮ್ಮ ಇನ್ಸ್ಟಾಗ್ರಾಂನಲ್ಲಿ ದೀರ್ಘವಾಗಿ ಪತ್ರವೊಂದನ್ನು ಬರೆದು ತಮ್ಮ ನೋವನ್ನು ಹೊರ ಹಾಕಿದ್ದಾರೆ. ರೆಬೆಲ್ ಕುಟುಂಬದ ಹಿರಿಯ ಮಗ ಎಂದೇ ಕರೆಸಿಕೊಳ್ಳುವ ದರ್ಶನ್ ಸಹ ಸೀನಿಯರ್ ಅಂಬಿಯನ್ನು ಸ್ಮರಿಸಿದ್ದಾರೆ. ಅಂಬಿ ಬುದಕಿದ್ದಾಗ ದರ್ಶನ್ ಅವರನ್ನು ಹಿರಿಯ ಮಗನಂತೆಯೇ ನೋಡಿಕೊಳ್ಳುತ್ತಿದ್ದರು. ಅದಕ್ಕೆ ದರ್ಶನ್ ಅವರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದರು. ಅಂಬರೀಷ್ ಅವರು ಅಗಲಿದಾಗಲೂ ದರ್ಶನ್ ಹಿರಿಯ ಮಗನಂತೆ ನಿಂತು ತಮ್ಮ ಜವಾಬ್ದಾರಿ ನಿರ್ವಹಿಸಿದರು. ಅಪ್ಪ ಇಲ್ಲದ ಅಭಿಷೇಕ್ಗೆ ಹಿರಿಯಣ್ಣನಾಗಿ ಬೆನ್ನ ಹಿಂದೆ ನಿಂತು ಬೆಂಬಲ ನೀಡುತ್ತಿದ್ದಾರೆ ಡಿಬಾಸ್.
ಅಂಬರೀಷ್ ಅವರ 2ನೇ ಪುಣ್ಯ ಸ್ಮರಣೆಯ ಅಂಗವಾಗಿ ಸುಮಲತಾ ಹಾಗೂ ಅಭಿಷೇಕ್ ಸಮಾಧಿಯ ಬಳಿ ಹೋಗಿ ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೆ ಬೈಕ್ ಟ್ರಿಪ್ ಮುಗಿಸಿಕೊಂಡು ಬೆಂಗಳೂರಿಗೆ ಮರಳಿರುವ ದರ್ಶನ್, ಸಹ ಇಂದು ಅಂಬರೀಷ್ ಅವರ ಸಮಾಧಿಯ ಬಳಿ ಹೋಗಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಅಂಬಿ ಅಮರ Exclusive pic 😍🤗@dasadarshan @sumalathaA pic.twitter.com/ezwz85dbnW
— Darshan News 24×7 (R) Official (@darshan_news_) November 24, 2020
ನನ್ನ ಪ್ರೀತಿಯ ಸೀನಿಯರ್ ಅಂಬಿ ಅಪ್ಪಾಜಿ ಇಂದಿಗೆ ದೈಹಿಕವಾಗಿ ಅಗಲಿ ೨ ಸಂವತ್ಸರಗಳು ಕಳೆದಿವೆ. ಆದರೆ ನಮ್ಮೆಲರ ಮನಗಳಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ನೇರನುಡಿಯ ವ್ಯಕ್ತಿತ್ವ, ಮಾಡಿರುವ ಸಹೃದಯಿ ಕಾರ್ಯಗಳು ಸದಾ ಕನ್ನಡಿಗರ ಮನಸ್ಸಲ್ಲಿ ಜೀವಂತವಾಗಿರುತ್ತವೆ. pic.twitter.com/GWQxYep3qY
— Darshan Thoogudeepa (@dasadarshan) November 24, 2020
ಕಲಿಯುಗದ ಕರ್ಣ, ಮಂಡ್ಯದ ಗಂಡು, ವರ್ಣರಂಜಿತ ವ್ಯಕ್ತಿತ್ವದ ರೆಬಲ್ ಸ್ಟಾರ್ ಅಂಬರೀಶ್ ಅವರ ಪುಣ್ಯತಿಥಿಯಂದು ಗೌರವಪೂರ್ವಕ ಸ್ಮರಣೆಗಳು. ಅಂಬರೀಶ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅಭಿಮಾನಿಗಳ ಹೃದಯದಲ್ಲಿ ತಮ್ಮ ಚಿತ್ರಗಳ ಮೂಲಕ ಎಂದೆಂದಿಗೂ ಅಮರ. @sumalathaA pic.twitter.com/pQOkuNCYoS
— P C Mohan (@PCMohanMP) November 24, 2020
ಎಲ್ಲರಿಂದಲೂ ಪ್ರೀತಿಸಲ್ಪಡುವುದಕ್ಕೂ, ಎಲ್ಲರೂ ಭಯಪಡುವುದಕ್ಕೂ ಬಹಳ ವ್ಯತ್ಯಾಸವಿದೆ. ಎಲ್ಲರ ಪ್ರೀತಿ, ಅಭಿಮಾನ ಗಳಿಸುವಂಥದ್ದಾಗಿತ್ತು ಅಂಬರೀಶಣ್ಣನ ವ್ಯಕ್ತಿತ್ವ. Miss you Anna. pic.twitter.com/Qyw1ez597T
— Pratap Simha (@mepratap) November 24, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ