Ambareesh Birthday: ಮಂಡ್ಯದ ಗಂಡಿನ ಜನ್ಮದಿನಕ್ಕೆ ಹುಟ್ಟೂರಲ್ಲಿ ವಿಶೇಷ ಕಾರ್ಯಕ್ರಮ, ಅಭಿಮಾನಿಗಳಿಂದ ಆರೋಗ್ಯ ಶಿಬಿರ

Special Program: ಅಲ್ಲದೇ, ಅಂಬರೀಶ್​ ಸಿನಿ ಪಯಣ ಆರಂಭಿಸಿ 50 ವರ್ಷ  ಸಹ ತುಂಬುವ ವಿಶೇಷ ಹಿನ್ನೆಲೆ ಅಭಿಮಾನಿಗಳು ಕೆಂಗೇರಿಯಲ್ಲಿ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

ನಟ ಅಂಬರೀಷ್​

ನಟ ಅಂಬರೀಷ್​

  • Share this:
ಸ್ಯಾಂಡಲ್ ವುಡ್ (Sandalwood) ಕರ್ಣ ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರಿಗೆ ಇಂದು 70 ವರ್ಷ ಜನ್ಮದಿನ (Birthday). ಅವರು ಇಂದು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪುಗಳು ಮಾತ್ರ ಕನ್ನಡಿಗರ ಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ಸ್ಯಾಂಡಲ್​ವುಡ್ ನ ಕರ್ಣನಾಗಿ, ಅಭಿಮಾನಿಗಳ ಪಾಲಿನ ರೆಬಲ್ ಸ್ಟಾರ್ ಆಗಿ ಅಂಬರೀಶ್ ಜನಮಾನಸದಲ್ಲಿ ಉಳಿದಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೇ ರಾಜಕಾರಿಣಿಯಾಗೂ (Politician) ಅನೇಕ ಜನಪರ ಕೆಲಸ ಮಾಡುವ ಮೂಲಕ ಜನಪ್ರಿಯರಾದವರು ಅಂಬಿ. ಇಂದು ಅವರ ಜನ್ಮ ದಿನದ ಪ್ರಯುಕ್ತ, ಅಭಿಮಾನಿಗಳು ಸಹ ಕುಟುಂಬಸ್ಥರು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಬಾರಿ ಸಹ ಮಂಡ್ಯದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಅಂಬರೀಶ್​ ಸಮಾಧಿಗೆ ಸುಮಲತಾ ಅಂಬರೇಷ್ ಮತ್ತು ಮಗ ಅಭಿಷೇಕ ಅಂಬರೇಷ್ ಆಗಮಿಸಿ ಪೂಜೆ ಸಲ್ಲಿಸಲಿದ್ದಾರೆ.

ಅಲ್ಲದೇ, ಅಂಬರೀಶ್​ ಸಿನಿ ಪಯಣ ಆರಂಭಿಸಿ 50 ವರ್ಷ  ಸಹ ತುಂಬುವ ವಿಶೇಷ ಹಿನ್ನೆಲೆ ಅಭಿಮಾನಿಗಳು ಕೆಂಗೇರಿಯಲ್ಲಿ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.  ಹಾಗೆಯೇ, ಮಂಡ್ಯದಲ್ಲಿ ಸಸಿ ನೆಡುವ ಹಾಗೂ ರಕ್ತದಾನ ಶಿಬಿರವನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್  ಸಹ ಭಾಗಿಯಾಗಲಿದ್ದಾರೆ.

ಮಂಡ್ಯದಲ್ಲಿ ವಿವಿಧ ಕಾರ್ಯಕ್ರಮಗಳು

ಇನ್ನು ಮಧ್ಯಾಹ್ನ 2.30ಕ್ಕೆ ಡಾ. ಅಂಬರೀಶ್ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿಕರೆ ಗ್ರಾಮದಲ್ಲಿ ಸಹ ಅಭಿಮಾನಿಗಳು ಭರ್ಜರಿ ಸಾಲು ಸಾಲು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಮಧ್ಯಾಹ್ನ 3.15ಕ್ಕೆ ಮದ್ದೂರು ತಾಲೂಕು ಅಂಬರೀಶ್ ಅಭಿಮಾನಿಗಳ ಒಕ್ಕೂಟದ ಪ್ರಧಾನ ಕಛೇರಿ ಉದ್ಘಾಟನೆ ಕಾರ್ಯಕ್ರಮವನ್ನು ಈ ವಿಶೇಷ ದಿನದಂದು ಹಮ್ಮಿಕೊಳ್ಳಲಾಗಿದೆ. ಸಂಜೆ 4 ಗಂಟೆಗೆ ಮಂಡ್ಯದಲ್ಲಿ ಅಭಿಮಾನಿಗಳ ಸಂಘ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಶ್ರವಣದೋಷವುಳ್ಳವರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಅಂಬರೀಶ್​ ಅವರ ನೆನಪಿನಲ್ಲಿ ಮಾಡಲಾಗುತ್ತಿದೆ.

ಇದನ್ನೂ ಓದಿ: ಕಿಯಾರಾ ಅಡ್ವಾಣಿ ಸೂಪರ್ ಲುಕ್ - ಬೇಸಿಗೆಯಲ್ಲಿ ನೀವೂ ಈ ಸ್ಟೈಲ್​ ಟ್ರೈ ಮಾಡಿ

ಇನ್ನು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಹಾಗೆಯೇ ಅಲ್ಲಿಯೇ ಅಭಿಮಾನಿಗಳು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದ್ದಾರೆ.  ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನೂ ಸಹ ಅಭಿಮಾನಿಗಳು ಆಯೋಜಿಸಿದ್ದಾರೆ.

ಈ ಕಾರ್ಯಕ್ರಮಗಳಲ್ಲಿ ಅಂಬಿ ಕುಟುಂಬದವರ ಜೊತೆ ಮಾತ್ರವಲ್ಲದೇ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಅಂಬರೀಶ್​ ಅವರು ಕನ್ನಡ ಚಲನಚಿತ್ರ ರಂಗಕ್ಕೆ

ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷ

1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಜಲೀಲನ ಪಾತ್ರ ಮೂಲಕ ಪರಿಚಿತರಾದರು. ಇದರಲ್ಲಿನ ಹೆ ಬುಲ್ ಬುಲ್ ಮಾತಾಡಕಿಲ್ವಾ ಡೈಲಾಗ್ ಇಂದಿಗೂ ಜನಪ್ರೀಯ ಡೈಲಾಗ್ ಎಂದರೆ ತಪ್ಪಲ್ಲ. ಇನ್ನು ಈ ವರ್ಷ ಅವರ ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷಗಳಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಭಾ ಮಾ ಹರೀಶ್​ ಆಯ್ಕೆ - ಸಾ ರಾ ಗೋವಿಂದುಗೆ ಸೋಲು

ಕೇವಲ ಚಿತ್ರರಂಗ ಮಾತ್ರವಲ್ಲದೇ ರಾಜಕೀಯದಲ್ಲಿ ಸಹ ಅಂಬಿ ಫೇಮಸ್​. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮತ್ತು ಜನತಾದಳ ಪಕ್ಷದಿಂದ ಸ್ಪರ್ದಿಸಿ ಲೋಕಸಭೆ ಸದಸ್ಯ ಮತ್ತು ಶಾಸಕರಾಗಿದ್ದರು, ಅವರು ಮೇ 2013 ರಿಂದ ಜೂನ್ 2016 ರ ವರೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕರ್ನಾಟಕ ಸರಕಾರದ ವಸತಿ ಸಚಿವರಾಗಿ ಕಾರ್ಯನಿರ್ವಹಿಸಿದರು. ಆ ಸಮಯದಲ್ಲಿ ಸಹ ಅವರು ನೀಡುತ್ತಿದ್ದ ಹೇಳಿಕೆಗಳು ಜನರಿಗೆ ಮನರಂಜನೆ ನೀಡುತ್ತಿತ್ತು.

ಇನ್ನು  ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಭಿಮಾನಿಗಳ ಕಲರವ ಹೆಚ್ಚಾಗಿದ್ದು,
ಅಭಿಮಾನಿಗಳು ಅಂಬರೀಷ್ ಜೈಘೋಷ ಕೂಗುತ್ತಿದ್ದಾರೆ. ಅಲ್ಲದೇ,  70 ಕೆಜಿ ಕೇಕ್ ತಂದು ಅಂಬಿ ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ.  ಅಂಬರೀಷ್ ಸೇನಾ ಸಮಿತಿಯಿಂದ ಕೇಕ್ ತರಲಾಗಿದ್ದು,  ಹತ್ತಕ್ಕೂ ಹೆಚ್ಚು ಆಟೋಗಳನ್ನುಅಂಬರೀಷ್​ ಫೋಟೋ  ಹಾಕಿ,  ಡೆಕೋರೇಷನ್ ಮಾಡಲಾಗಿದೆ. ಅಂಬರೀಷ್​ ಗಾಗಿ ಪುರಿ (ಮಂಡಾಳು) ಹಾರವನ್ನು ಅಭಿಮಾನಿ‌ ಅಜ್ಜಿಯೊಬ್ಬರು ತಂದು ಹಾಕಿದ್ದು, ಗುಬ್ಬಿ ಇಂದ ಆಗಮಿಸಿದ ಅಜ್ಜಿ ಸುಮಿತ್ರಾ ಬಾಯಿ ಈ ಹಾರವನ್ನು ಹಾಕಿದ್ದಾರೆ.
Published by:Sandhya M
First published: