ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಇಂದು ರಾಕೆಟ್ರಿ: ದಿ ನಂಬಿ ಎಫೆಕ್ಟ್ (Rocketry: The Nambi Effect) ಸಿನಿಮಾದ ವಿಶೇಷ ಸ್ಟ್ರೀಮಿಂಗ್ ಪ್ರೀಮಿಯರ್ ಅನ್ನು ಆಯೋಜಿಸಿರುವ ಬಗ್ಗೆ ಅನೌನ್ಸ್ ಮಾಡಿದೆ. ಟ್ರೈಕಲರ್ ಫಿಲ್ಮ್ಸ್, ವರ್ಗೀಸ್ ಮೂಲನ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಆರ್. ಮಾಧವನ್ (R. Madhavan ) ನಾಯಕನಾಗಿ ನಟಿಸಿರುವ ಜೊತೆಗೆ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ.ಈ ಸಿನಿಮಾದಲ್ಲಿ ನಟರಾದ ಸಿಮ್ರಾನ್, ರಂಜಿತ್ ಕಪೂರ್ ಮತ್ತು ಸೂರ್ಯ ಅವರ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜುಲೈ 26 ರಂದು ಸ್ಟ್ರೀಮಿಂಗ್
ಭಾರತದಲ್ಲಿ ಮತ್ತು 240 ಬೇರೆ ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಸದಸ್ಯರು ಜುಲೈ 26, 2022 ರಿಂದ ತಮಿಳು ಭಾಷೆಯಲ್ಲಿ ಸಿನಿಮಾವನ್ನು ನೋಡಬಹುದು. ಜೊತೆಗೆ ತೆಲುಗು, ಮಲಯಾಳಂ, ಕನ್ನಡ ಭಾಷೆಯಲ್ಲಿ ಸಹ ನೀವು ಸಿನಿಮಾ ನೋಡಬಹುದು.
ಈ ಕಥೆಗೆ ಜೀವ ತುಂಬಿರುವುದು ನನ್ನ ಪಾಲಿಗೆ ಗೌರವ’ ಎಂದಿರುವ ಆರ್.ಮಾಧವನ್. ಈ ಸಿನಿಮಾಗೆ ಜನರು ನೀಡಿದ ಪ್ರೀತಿಯಿಂದ ನಾನು ನಿಜಕ್ಕೂ ಆಶ್ಚರ್ಯಗೊಂಡಿದ್ದೇನೆ. ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಬರುತ್ತಿರುವುದು ಬಹಳ ಸಂತಸ ತಂದಿದೆ. ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಸ್ಫೂರ್ತಿ, ಜ್ಞಾನೋದಯ ಮತ್ತು ಮನರಂಜನೆಗಾಗಿ ನಾವು ಇನ್ನೂ ಹೆಚ್ಚಿನ ಮನೆಗಳನ್ನು ತಲುಪಲು ಸಾಧ್ಯವಾಗುತ್ತದೆ ಎಂದಿದ್ದಾರೆ.
hop on for a space adventure 🚀#RocketryOnPrime, July 26 pic.twitter.com/W3JDZEz2eD
— amazon prime video IN (@PrimeVideoIN) July 20, 2022
ನಂಬಿ ನಾರಾಯಣನ್ ಅವರ ಜೀವನd ಕಥೆ ಆಧರಿತ ಸಿನಿಮಾ
ರಾಕೆಟ್ರಿ: ದಿ ನಂಬಿ ಎಫೆಕ್ಟ್' ಗೂಢಚಾರಿಕೆ ಹಗರಣದ ಸುಳಿಯಲ್ಲಿ ಸಿಕ್ಕಿಬಿದ್ದ ಮತ್ತು ಬೇಹುಗಾರಿಕೆಯ ಸುಳ್ಳು ಆರೋಪಕ್ಕೆ ಗುರಿಯಾದ ಮಾಜಿ ಇಸ್ರೋ ವಿಜ್ಞಾನಿ ಮತ್ತು ಏರೋಸ್ಪೇಸ್ ಇಂಜಿನಿಯರ್ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ. ಚಿತ್ರವು ಜುಲೈ 1, 2022 ರಂದು ಚಿತ್ರಮಂದಿರಗಳಿಗೆ ಬರಲಿದೆ. ನೈಜ್ಯ ಕಥೆಯಾಧಾರಿತ 'ರಾಕೆಟ್ರಿ: ದಿ ನಂಬಿ ಎಫೆಕ್ಟ್'ನಲ್ಲಿ ಫಿಲ್ಲಿಸ್ ಲೋಗನ್, ವಿನ್ಸೆಂಟ್ ರಿಯೊಟ್ಟಾ, ರಾನ್ ಡೊನೈಚೆ, ಸಿಮ್ರಾನ್, ರಜತ್ ಕಪೂರ್, ರವಿ ರಾಘವೇಂದ್ರ, ಮಿಶಾ ಘೋಷಾಲ್, ಗುಲ್ಶನ್ ಗ್ರೋವರ್, ಕಾರ್ತಿಕ್ ಕುಮಾರ್ ಮತ್ತು ದಿನೇಶ್ ಪ್ರಭಾಕರ್ ಸಹ ಅಭಿನಯಿಸಿದ್ದಾರೆ.
ಇದನ್ನೂ ಓದಿ: ರಣಬೀರ್ ಸಿನಿಮಾದಲ್ಲಿ ದೀಪಿಕಾ! ಮತ್ತೆ ಒಂದಾಗ್ತಾರಾ ಮಾಜಿ ಪ್ರೇಮಿಗಳು?
View this post on Instagram
ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿ ಮತ್ತು ಬರೆದಿರುವ ಮಾಧವನ್ ಅವರ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮತ್ತು ಸೂರ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಅನ್ನು ಹಿಂದಿ, ತಮಿಳು ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿಯೂ ಬಿಡುಗಡೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ