ಓಟಿಟಿಗೆ ಬಂದ ಜೇಮ್ಸ್ ಬಾಂಡ್ ಸರಣಿಯ 24 ಸಿನಿಮಾಗಳು: ಅಮೇಜಾನ್​ ಪ್ರೈಮ್​ನಲ್ಲಿ ಮಾತ್ರ ಲಭ್ಯ..!

ಅಮೇಜಾನ್​ ಪ್ರೈಮ್​ ವಿಡಿಯೋ ಓಟಿಟಿ(OTT) ಸಂಸ್ಥೆ ಈ ಜೇಮ್ಸ್​ ಬಾಂಡ್​ಗಳ ಓಟಿಟಿ ಪ್ರಸಾರದ ಹಕ್ಕನ್ನು ಖರೀದಿಸಿದೆ.  ಜೇಮ್ಸ್ ಬಾಂಡ್ ಸರಣಿಯ ಸುಮಾರು 24 ಸಿನಿಮಾಗಳು ಅಮೇಜಾನ್ ಪ್ರೈಮ್ ವಿಡಿಯೋದ ಪಾಲಾಗಿವೆ.

ಬಾಂಡ್​ ಸಿನಿಮಾಗಳಲ್ಲಿ ನಟಿಸಿದ್ದ ನಟರು

ಬಾಂಡ್​ ಸಿನಿಮಾಗಳಲ್ಲಿ ನಟಿಸಿದ್ದ ನಟರು

  • Share this:
ಚಿತ್ರರಂಗದಲ್ಲಿ ಬಾಂಡ್(Bond) ಚಿತ್ರಗಳಿಗೆ ಪ್ರತ್ಯೇಕ ಸ್ಥಾನವಿದೆ. ಇಲ್ಲಿಯವರೆಗೂ ಹಾಲಿವುಡ್(Hollywood) ನಲ್ಲಿ ಬಾಂಡ್ ಹೆಸರಿನಲ್ಲಿ 25 ಸಿನಿಮಾಗಳು ಬಂದಿವೆ. ಬಾಂಡ್​ ಸಿನಿಮಾಗಳು ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಕೇವಲ ಹೊರ ದೇಶಗಳಲ್ಲಿ ಅಷ್ಟೇ ಅಲ್ಲದೇ ಭಾರತದಲ್ಲೂ ಬಾಂಡ್​ ಸಿನಿಮಾಗಳಿಗೆ ಫ್ಯಾನ್ಸ್(Fans)​ಗಳಿದ್ದಾರೆ. ಬಾಂಡ್​ ಸಿನಿಮಾದಲ್ಲಿರುವ ಆ್ಯಕ್ಷನ್(Action)​, ಸ್ಟೋರಿ(Story) ಎಲ್ಲವೂ ಬೇರೆ ಲೆವೆಲ್​. ಎಲ್ಲ ಸಿನಿಮಾಗಳಂತೆ ಅಲ್ಲ ಈ ಜೇಮ್ಸ್​ ಬಾಂಡ್(James Bond)​ ಸಿನಿಮಾಗಳು. ಅದೆಷ್ಟೋ ಹೀರೋಗಳು ಈಗಲೂ ಬಾಂಡ್ ಪಾತ್ರದಲ್ಲಲಿ ನಟಿಸಲು ಕಾಯುತ್ತಿದ್ದಾರೆ. ಆದರೆ, ಎಲ್ಲರಿಗೂ ಈ ಅದೃಷ್ಟ ಬರುವುದಿಲ್ಲ. ಇಲ್ಲಿಯವರೆಗೂ ಒಟ್ಟು 25 ಬಾಂಡ್​ ಸಿನಿಮಾಗಳ ಸರಣಿ ಬಂದಿವೆ. ಆದರೆ, ಈ ಎಲ್ಲ ಸಿನಿಮಾಗಳನ್ನು ಎಲ್ಲರೂ ನೋಡಿರಲು ಸಾಧ್ಯವಿಲ್ಲ. ಯಾಕೆಂದರೆ ಮೊದ ಮೊದಲು ತೆರೆಕಂಡ ಬಾಂಡ್​ ಸಿನಿಮಾಗಳು ಸಿಗುವುದು ಸುಲಭದ ಮಾತಲ್ಲ. ಇವೆಲ್ಲ ಸಿನಿಮಾಗಳು ಈಗ ಒಂದೇ ಕಡೆ ಸುಗುತ್ತಿದೆ. ಹೌದು, ಅಂಥದ್ದೊಂದು ಸಾಧ್ಯತೆಯನ್ನು ಸೃಷ್ಟಿ ಮಾಡಿದೆ ಅಮೇಜಾನ್ ಪ್ರೈಮ್ ವಿಡಿಯೋ(Amazon Prime Video). ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಅಮೇಜಾನ್​ ಪ್ರೈಮ್​ ವಿಡಿಯೋ ಓಟಿಟಿ(OTT) ಸಂಸ್ಥೆ ಈ ಜೇಮ್ಸ್​ ಬಾಂಡ್​ಗಳ ಓಟಿಟಿ ಪ್ರಸಾರದ ಹಕ್ಕನ್ನು ಖರೀದಿಸಿದೆ.  ಜೇಮ್ಸ್ ಬಾಂಡ್ ಸರಣಿಯ ಸುಮಾರು 24 ಸಿನಿಮಾಗಳು ಅಮೇಜಾನ್ ಪ್ರೈಮ್ ವಿಡಿಯೋದ ಪಾಲಾಗಿವೆ. ಎಲ್ಲ ಜೇಮ್ಸ್​ ಬಾಂಡ್​ ಸಿನಿಮಾಗಳನ್ನು ನೀವು ಒಂದೇ ಕಡೆ ನೋಡಿ ಖುಷಿ ಪಡಬಹುದಾಗಿದೆ. 

1962 ಟು 2015 ಜೇಮ್ಸ್​ ಬಾಂಡ್​ ಸಿನಿಮಾಗಳು ಲಭ್ಯ

1962ರಲ್ಲಿ ತೆರೆಕಂಡ 'ಡಾ. ನೋ' ಸಿನಿಮಾದಿಂದ 2015ರಲ್ಲಿ ತೆರೆಕಂಡ 'ಸ್ಪೆಕ್ಟರ್' ಸಿನಿಮಾದವರೆಗೂ ಒಟ್ಟು 24 ಜೇಮ್ಸ್ ಬಾಂಡ್ ಸರಣಿಯ ಸಿನಿಮಾಗಳು ಈಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸಿಗಲಿವೆ. ಸ್ಪೈ ಥ್ರಿಲ್ಲರ್ ಮಾದರಿಯ ಈ ಸಿನಿಮಾಗಳ ಮೇಲಿನ ಬೇಡಿಕೆ 59 ವರ್ಷಗಳಾದರೂ ಕಡಿಮೆಯಾಗಿಲ್ಲ.ಕಳೆದ ಸೆಪ್ಟೆಂಬರ್‌ನಲ್ಲಿ ಈ ಸರಣಿಯ 25ನೇ ಸಿನಿಮಾ ‘ನೋ ಟೈಮ್​ ಟು ಡೈ’ ತೆರೆಕಂಡಿತ್ತು. ಇದರಲ್ಲೂ ಡೇನಿಯಲ್ ಕ್ರೇಗ್ ಹೀರೋ ಆಗಿದ್ದರು. ಸುಮಾರು 1900 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಅಂದಾಜು 5800 ಕೋಟಿ ರೂ.ಗಳವರೆಗೂ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇದೆ. ಆದರೂ, ನಿರೀಕ್ಷೆಗೆ ತಕ್ಕಂತೆ ಈ ಸಿನಿಮಾ ಇರಲಿಲ್ಲ ಎಂದು ವಿಮರ್ಶಕರು ಹೇಳಿದ್ದರು.

ಇದನ್ನು ಓದಿ : ಇದೊಂದು ಫೋಟೋಗಾಗಿ 36 ವರ್ಷ ಕಾದಿದ್ರಂತೆ ಸುದೀಪ್​​: ಕೊನೆಗೂ ನನಸಾಯ್ತು ಕಿಚ್ಚನ ಕನಸು!

1962ರಲ್ಲಿ ಮೊದಲ ಬಾಂಡ್​ ಸಿನಿಮಾ ರಿಲೀಸ್​

1962ರಲ್ಲಿ 'ಜೇಮ್ಸ್ ಬಾಂಡ್' ಸರಣಿಯ ಮೊದಲ ಸಿನಿಮಾ 'ಡಾ. ನೋ' ತೆರೆಕಂಡಿತ್ತು.  ಅದರಲ್ಲಿ ಹೀರೋ ಆಗಿ ಕಾಣಿಸಿಕೊಂಡವರು ಶಾನ್ ಕಾನರಿ. ಆನಂತರ ಒಟ್ಟು 7 ಜೇಮ್ಸ್ ಬಾಂಡ್ ಸರಣಿಯ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡರು. ಬಾಂಡ್ ಶೈಲಿಯ ಸಿನಿಮಾಗಳು ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರಿಂದ ಶಾನ್ ಕಾನರಿ ಅವರಿಗೂ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. 2006ರಲ್ಲಿ ತೆರೆಕಂಡ ಬಾಂಡ್ ಸರಣಿಯ 'ಕ್ಯಾಸಿನೋ ರಾಯಲ್‌' ಸಿನಿಮಾದಿಂದ ಡೇನಿಯಲ್ ಕ್ರೇಗ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಸೆಂಬರ್​ 18ರಿಂದ ಈ ಬಾಂಡ್​ ಸಿನಿಮಾಗಳು ಅಮೆಜಾನ್​ ಪ್ರೈಮ್​ನಲ್ಲಿ ಲಭ್ಯವಿದೆ

ಇದನ್ನು ಓದಿ : ಹೆಂಡ್ತಿಗಾಗಿ ರಾಕಿಂಗ್​ ಸ್ಟಾರ್​ ಯಶ್​ ಏನ್​ ಮಾಡಿದ್ದಾರೆ ನೋಡಿ.. ನೀವು ಇದೀರಾ...!

ಹಿಂದಿ ಸಿನಿಮಾಗೆ ಆಡಿಷನ್​ ಕೊಟ್ಟಿದ್ದ ಡೇನಿಯಲ್​!

2006ರಲ್ಲಿ ತೆರೆಗೆ ಬಂದಿದ್ದ ಹಿಂದಿಯ 'ರಂಗ್ ದೇ ಬಸಂತಿ' ಸಿನಿಮಾ ಎವರ್‌ಗ್ರೀನ್‌ ಸಿನಿಮಾಗಳ ಪಟ್ಟಿಗೆ ಸೇರಿಯಾಗಿದೆ. ಅಮೀರ್ ಖಾನ್, ಮಾಧವನ್, ಸಿದ್ಧಾರ್ಥ್, ಸೊಹಾ ಅಲಿ ಖಾನ್ ಮತ್ತಿತರರು ನಟಿಸಿದ್ದ ಈ ಸಿನಿಮಾಕ್ಕೆ ಡ್ಯಾನಿಯಲ್ ಕ್ರೇಗ್ ಸಹ ಆಡಿಷನ್ ನೀಡಿದ್ದರು. ಆದರೆ ಆಯ್ಕೆ ಆಗಿರಲಿಲ್ಲ. 'ರಂಗ್ ದೇ ಬಸಂತಿ' ಸಿನಿಮಾದಲ್ಲಿ ಬ್ರಿಟೀಷ್ ಜೈಲರ್‌ ಜೇಮ್ಸ್ ಮೆಕೆನ್ಲೆಯ  ಮುಖ್ಯ ಪಾತ್ರವೊಂದಿದೆ. ಆ ಪಾತ್ರಕ್ಕಾಗಿ ಡ್ಯಾನಿಯಲ್ ಕ್ರೇಗ್ ಆಡಿಷನ್ ನೀಡಿದ್ದರು.
Published by:Vasudeva M
First published: