Thriller Shows: ಥ್ರಿಲ್ಲರ್ ಶೋ ಪ್ರಿಯರೇ? ಹಾಗಾದ್ರೆ ನಿಮಗಾಗಿ ಓಟಿಟಿಯಲ್ಲಿವೆ ಈ 10 ಶೋಗಳು

ಇಲ್ಲಿ ಕೇವಲ 2022ರ ಹಿಂದಿ ಭಾಷೆಯ ಅತ್ಯುತ್ತಮ ಥ್ರಿಲ್ಲರ್ ಕಥಾ ಹಂದರವನ್ನು ಒಳಗೊಂಡಿರುವ ವೆಬ್ ಸರಣಿಗಳ ಪಟ್ಟಿಯನ್ನು ನಿಮಗಾಗಿ ತಂದಿದ್ದೇವೆ. ನೆಟ್‍ಫ್ಲಿಕ್ಸ್, ಜೀ5, ಅಮೇಜಾನ್ ಪ್ರೈಮ್ ವಿಡಿಯೋ, ವೂಟ್, ಡಿಸ್ನಿ ಪ್ಲಸ್ ಹಾಟ್‍ಸ್ಟಾರ್ ಮುಂತಾದ ಓಟಿಟಿ ವೇದಿಕೆಗಳಲ್ಲಿರುವ ಅತ್ಯುತ್ತಮ ಹಿಂದಿ ಥ್ರಿಲ್ಲರ್‍ಗಳ ಮಾಹಿತಿ ಇಲ್ಲಿದೆ

ಥ್ರಿಲ್ಲರ್ ಶೋ

ಥ್ರಿಲ್ಲರ್ ಶೋ

  • Share this:
ಥ್ರಿಲ್ಲರ್ ಕಾರ್ಯಕ್ರಮಗಳಿಗೆ (Thriller shows) ಪ್ರಪಂಚದಾದ್ಯಂತ ಅಸಂಖ್ಯ ಅಭಿಮಾನಿಗಳಿರುತ್ತಾರೆ. ಓಟಿಟಿಯಲ್ಲಂತೂ (OTT Platform) ಪ್ರತಿನಿತ್ಯ, ಪ್ರತಿವಾರ ಒಂದಲ್ಲ ಒಂದು ಥ್ರಿಲ್ಲರ್ ಕಾರ್ಯಕ್ರಮಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಆ ಎಲ್ಲಾ ಕಾರ್ಯಕ್ರಮಗಳಲ್ಲಿ (Program) ಅತ್ಯುತ್ತಮವಾದದ್ದು ಯಾವುದೆಂದು ಪಟ್ಟಿ ಮಾಡುವುದು ಕಷ್ಟ ಸಾಧ್ಯ. ಆದ್ದರಿಂದ ಇಲ್ಲಿ ಕೇವಲ 2022ರ ಹಿಂದಿ ಭಾಷೆಯ (Hindi language) ಅತ್ಯುತ್ತಮ ಥ್ರಿಲ್ಲರ್ ಕಥಾ ಹಂದರವನ್ನು ಒಳಗೊಂಡಿರುವ ವೆಬ್ ಸರಣಿಗಳ (Web Series) ಪಟ್ಟಿಯನ್ನು ನಿಮಗಾಗಿ ತಂದಿದ್ದೇವೆ. ನೆಟ್‍ಫ್ಲಿಕ್ಸ್ (Netflix), ಜೀ5 (Zee5), ಅಮೇಜಾನ್ ಪ್ರೈಮ್ ವಿಡಿಯೋ (Amazon Prime Video), ವೂಟ್ (Voot), ಡಿಸ್ನಿ ಪ್ಲಸ್ ಹಾಟ್‍ಸ್ಟಾರ್ (Disney Plus Hotstar) ಮುಂತಾದ ಓಟಿಟಿ ವೇದಿಕೆಗಳಲ್ಲಿರುವ ಅತ್ಯುತ್ತಮ ಹಿಂದಿ ಥ್ರಿಲ್ಲರ್‍ಗಳ ಮಾಹಿತಿ ಇಲ್ಲಿದೆ.

1) ದ ಫೇಮ್ ಗೇಮ್ -ನೆಟ್‍ಫ್ಲಿಕ್ಸ್
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು ಮುಖ್ಯ ಪಾತ್ರದಲ್ಲಿ ಇರುವ ಈ ವೆಬ್‍ಸರಣಿಯು ತುಂಬಾ ಜನಪ್ರಿಯವಾಯಿತು. ಈ ಸರಣಿಗೆ ಮೊದಲು ಫೈಂಡಿಂಗ್ ಅನಾಮಿಕ ಎಂದು ಹೆಸರಿಡಲಾಗಿತ್ತು. ಒಬ್ಬ ತಾಯಿ ಮತ್ತು ಹೆಂಡತಿ ಕೂಡ ಆಗಿರುವ ಬಾಲಿವುಡ್ ಸೂಪರ್‍ಸ್ಟಾರ್ ಒಬ್ಬಳ ಸುತ್ತ ಸುತ್ತವ ಕಥೆಯನ್ನು ಈ ಸರಣಿ ಹೊಂದಿದೆ. ಆಕೆ ಇದ್ದಕ್ಕಿದ್ದ ಹಾಗೆ ಕಣ್ಮರೆಯಾದಾಗ , ಅವಳ ಕುಟುಂಬದ ಸದಸ್ಯರು ಮತ್ತು ಪೊಲೀಸರು
ಆಕೆಯನ್ನು ಹುಡುಕುವ ಕಥೆಯಿದು.

2) ರುದ್ರ : ದ ಎಡ್ಜ್ ಆಫ್ ಡಾರ್ಕ್‍ನೆಸ್- ಡಿಸ್ನಿ ಪ್ಲಸ್ ಹಾಟ್‍ಸ್ಟಾರ್
ನೀವು ಲೂಥರ್ ನೋಡಿದ್ದರೆ, ಖಂಡಿತಾ ಅದರ ಹಿಂದಿ ರೀಮೇಕನ್ನು ಹುಡುಕಲು ಬಯಸಬಹುದು. ಅತ್ಯಂತ ಹೆಚ್ಚು ಚರ್ಚಿತ ಥ್ರಿಲ್ಲರ್ ಸರಣಿಗಳಲ್ಲಿ ಇದು ಕೂಡ ಒಂದಾಗಿದ್ದು, ಈ ಸರಣಿಯ ಮೂಲಕ ಅಜಯ್ ದೇವಗನ್ ಪ್ರಥಮ ಬಾರಿಗೆ ಓಟಿಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ರುದ್ರ : ದ ಎಡ್ಜ್ ಆಫ್ ಡಾರ್ಕ್‍ನೆಸ್ ನಲ್ಲಿ ಅಜಯ್ ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಡಿಸಿಪಿ ರುದ್ರವೀರ್ ಸಿಂಗ್ ಮತ್ತು ಅವರ ತಂಡ, ವಿಶಿಷ್ಟ ಮತ್ತು ವಿಚಿತ್ರ ಮಾನಸಿಕ ತೊಂದರೆಗಳೊಂದಿಗೆ ಬಳಲುತ್ತಿರುವ ಅಪರಾಧಿಗಳೊಂದಿಗೆ ವ್ಯವಹರಿಸುವ ಕಥೆ ಈ ವೆಬ್‍ಸರಣಿಯಲ್ಲಿದೆ.

ಇದನ್ನೂ ಓದಿ:  Viral Question Paper: ಆರ್‌ಆರ್‌ಆರ್‌ ಸಿನಿಮಾ ನೋಡಿದ್ದೀರಾ? ಹಾಗಿದ್ರೆ ಈ ಪ್ರಶ್ನೆಗಳಿಗೆ ಸರಿ ಉತ್ತರ ಬರೆಯಿರಿ!

3) ಯೇ ಕಾಲಿ ಕಾಲಿ ಆಂಖೇ - ನೆಟ್‍ಫ್ಲಿಕ್ಸ್

ಯೇ ಕಾಲಿ ಕಾಲಿ ಆಂಖೇ ನೆಟ್‍ಫ್ಲಿಕ್ಸ್‍ನ ಅತ್ಯುತ್ತಮ ಹಿಂದಿ ಥ್ರಿಲ್ಲರ್‍ಗಳಲ್ಲಿ ಒಂದಾಗಿದ್ದು, ರಾಜಕಾರಣಿಯೊಬ್ಬರ ಮಗಳ ಕುರಿತ ಕಥೆಯನ್ನು ಹೊಂದಿದೆ. ಆಕೆ ಹುಡುಗನೊಬ್ಬನನ್ನು ಬಯಸುತ್ತಾಳೆ ಮತ್ತು ಅವನನ್ನು ತನ್ನವನನ್ನಾಗಿಸಿಕೊಳ್ಳಲು ಏನನ್ನು ಬೇಕಾದರೂ ಮಾಡಲು ಸಿದ್ಧವಿರುತ್ತಾಳೆ. ಆದರೆ, ಆ ವ್ಯಕ್ತಿ ಮಾತ್ರ ಆಕೆಯೊಂದಿಗೆ ಏನನ್ನೂ ಮಾಡಲು ಬಯಸುವುದಿಲ್ಲ. ಅವರಿಬ್ಬರ ಕಥೆಯ ಮುಂದಿನ ದಾರಿ ಅಂಧಕಾರ ಮತ್ತು ಅಪಾಯಗಳಿಂದ ಕೂಡಿದೆ.ಅಧಿಕಾರದ ಶೋಪಣೆ ಯಾವ ಮಟ್ಟಕ್ಕೆ ತಲುಪಬಹುದು ಎಂಬುದನ್ನು ಇಲ್ಲಿ ನೋಡಬಹುದು.

4) ಮಾಯಿ- ನೆಟ್‍ಫ್ಲಿಕ್ಸ್
ಖ್ಯಾತ ನಟಿ ಸಾಕ್ಷಿ ತನ್ವರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಈ ವೆಬ್‍ಸರಣಿ, ಅದರ ನಟನಟಿಯರ ಅಭಿನಯ , ಚಿತ್ರಕಥೆ ಮತ್ತು ಅದರ ಥ್ರಿಲ್ಲರ್ ಕಥಾವಸ್ತುವಿನ ಕಾರಣದಿಂದ ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ಪ್ರಶಂಸೆಲಭಿಸಿದೆ. ಈ ವೆಬ್‍ಸರಣಿ ವೀಕ್ಷಕರನ್ನು ತೆರೆಯ ಮುಂದೆ ಹಿಡಿದಿಟ್ಟುಕೊಳ್ಳುವಸಾಮರ್ಥ್ಯಹೊಂದಿದೆ.

ಇದನ್ನೂ ಓದಿ:  Deepika Padukone: ಲೂಯಿ ವಿಟಾನ್​ಗೆ ಮೊದಲ ಭಾರತೀಯ ಬ್ರಾಂಡ್ ಅಂಬಾಸಿಡರ್, ದೀಪಿಕಾಗೆ ಬಂಪರ್

ಈ ವೆಬ್‍ಸರಣಿಯ ಕಥಾ ವಸ್ತು , ಮಧ್ಯ ವಯಸ್ಕ ಮಹಿಳೆಯೊಬ್ಬಳು ತನ್ನ ಮಗಳ ಕೊಲೆಯಾದಾಗ, ಆ ಕೊಲೆಯ ಹಿಂದಿನ ಸತ್ಯ ಮತ್ತು ಅಸಲಿ ಅಪರಾಧಿಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾಳೆ. ಈ ಪ್ರಯತ್ನದಲ್ಲಿ ಆಕೆ ನಾಟಕವೊಂದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾಳೆ ಮತ್ತು ಒಬ್ಬ ಮಾಫಿಯಾ ನಾಯಕನನ್ನು ಕೊಲೆ ಮಾಡುತ್ತಾಳೆ. ಗೊತ್ತಿಲ್ಲದೆಯೇ ಭೂಗತ ಲೋಕದಲ್ಲಿ ಮುಳುಗಿ, ಖ್ಯಾತಿ ಪಡೆಯುತ್ತಾಳೆ. ಅತುಲ್ ಮೋಂಗಿಯಾ ರಚನೆಯ ಈ ವೆಬ್‍ಸರಣಿಯಲ್ಲಿ, ಜಯಶಂಕರ್ ಪಾಂಡೆ, ಪ್ರಶಾಂತ್ ನಾರಾಯಣ್, ರವೀಶ್ ಶ್ರೀವಾಸ್ತವ, ವಿಶ್ವನಾಥ್ ಕುಲಕರ್ಣಿ ಅಭಿನಯಿಸಿದ್ದಾರೆ.

5) ಅಪಹರಣ್ 2 – ವೂಟ್ ಸೆಲೆಕ್ಟ್
ಅಪಹರಣ್ ವೆಬ್‍ಸರಣಿಯ ಮೊದಲ ಸೀಸನ್ ತುಂಬಾ ಯಶಸ್ಸು ಪಡೆದಿತ್ತು. ಇದೀಗ ಹೊಸ ರೋಮಾಂಚಕ ಕಥೆಯನ್ನು ಹೊಂದಿರುವ ಅಪಹರಣ್ -2 ವೀಕ್ಷಣೆಗೆ ಲಭ್ಯವಿದೆ. ಕಳೆದ ಸೀಸನ್‍ನಲ್ಲಿ , ಕಥೆಯ ಮುಖ್ಯ ಪಾತ್ರ ರುದ್ರ ಶ್ರೀವಾಸ್ತವ್ , ಮಹಿಳೆಯೊಬ್ಬಳನ್ನು ಅಪಹರಿಸುವ ಅಮೀಷಕ್ಕೆ ಒಳಗಾಗಿ , ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ತೋರಿಸಲಾಗಿತ್ತು. ಎರಡನೇ ಸೀಸನ್‍ನಲ್ಲಿ ರುದ್ರ ಶ್ರೀವಾಸ್ತವ್ ಮತ್ತೆ ಮರಳಿದ್ದಾರೆ. ಈ ಸೀಸನ್‍ನಲ್ಲಿ ಕೇವಲ ರಕ್ತಪಾತ ಮತ್ತು ಗೊಂದಲಮಯ ಘಟನೆಗಳನ್ನು ಕಥೆಯಲ್ಲಿ ಕಾಣಬಹುದು. ಈ ಸರಣಿಯಲ್ಲಿ ಅರುಣೋದಯ್ ಸಿಂಗ್, ನಿಧಿ ಸಿಂಗ್, ಸ್ನೇಹಲ್ ದೀಕ್ಷಿತ್ ಮೆಹ್ರಾ ಮತ್ತು ಸಾನಂದ್ ವರ್ಮಾ ಅಭಿನಯಿಸಿದ್ದಾರೆ.

6) ಅನ್‍ದೇಖಿ ಸೀಸನ್ 2 - ಸೋನಿ ಲಿವ್
ನೀವು ಒಂದು ವೇಳೆ ಈ ಹಿಂದಿ ವೆಬ್‍ಸರಣಿಯನ್ನು ವೀಕ್ಷಿಸಿಲ್ಲವಾದರೆ, ನೋಡಲು ಬಯಸುವ ವೆಬ್‍ಸರಣಿಗಳ ಪಟ್ಟಿಗೆ ಇದನ್ನು ಕಂಡಿತಾ ಸೇರಿಸಿಕೊಳ್ಳಬಹುದು. ಅನ್‍ದೇಖಿ ಸೀಸನ್ 2 ಕೂಡ ಹಿಂದಿನ ಸೀನಸ್‍ನಂತೆ ಅದೇ ರಕ್ತಪಾತ ಮತ್ತು ನಿಗೂಢ ಘಟನೆಗಳ ಕಥಾ ವಸ್ತುವನ್ನು ಹೊಂದಿದೆ.

ಆಶೀಶ್ ಆರ್ ಶುಕ್ಲಾ ನಿರ್ದೇಶಿಸಿರುವ ಈ ವೆಬ್‍ಸರಣಿಗಳು ನಮ್ಮ ಸಮಾಜದ ಎರಡು ಮುಖಗಳನ್ನು ತೋರಿಸುತ್ತದೆ. ಅಧಿಕಾರ ಮತ್ತು ಪ್ರಭಾವ ಉಳ್ಳ ವ್ಯಕ್ತಿಗಳು ವಿಷಯಗಳನ್ನು ಹೇಗೆ ತಿರುಚ ಬಲ್ಲರು ಮತ್ತು ಯಾವುದರಿಂದ ಬೇಕಾದರೂ ತಪ್ಪಿಸಿಕೊಳ್ಳಬಲ್ಲರು ಎಂಬುವುದು ಒಂದೆಡೆಯಾದರೆ, ಇನ್ನೊಂದೆಡೆ ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ ಮತ್ತು ತುಳಿಯಲಾಗುತ್ತದೆ ಎಂಬುವುದನ್ನು ಈ ಸರಣಿಗಳ ಕಥಾವಸ್ತುಗಳಲ್ಲಿ ಕಾಣಬಹುದು.

7) ದ ಗ್ರೇಟ್ ಇಂಡಿಯನ್ ಮಿಸ್ಟ್ರಿ – ಡಿಸ್ನಿ ಪ್ಲಸ್ ಹಾಟ್‍ಸ್ಟಾರ್
ನಿಮಗೆ ಅದ್ಭುತ ಅಭಿನಯವನ್ನು ಒಳಗೊಂಡ ವೆಬ್‍ಸರಣಿಗಳನ್ನು ನೋಡಲು ಇಷ್ಟವಾಗುತ್ತದೆ ಎಂದಾದಲ್ಲಿ, ನೀವು ರೀಚಾ ಚಡ್ಡಾ ಮತ್ತು ಪ್ಯಾಟ್ರಿಕ್ ಗಾಂಧಿ ಅಭಿನಯದ ದ ಗ್ರೇಟ್ ಇಂಡಿಯನ್ ಮಿಸ್ಟ್ರಿ ಯನ್ನು ಖಂಡಿತಾವಾಗಿ ನೋಡಬಹುದು. ವಿಕಾಸ್ ಸ್ವರೂಪ್ ಅವರ ಸಿಕ್ಸ್ ಸಸ್ಪೆಕ್ಟ್ಸ್ ಕಾದಂಬರಿಯನ್ನು ಆಧರಿಸಿದ ಈ ಹಿಂದಿ ಥ್ರೀಲ್ಲರ್ ಶೋ, ಕೊಲೆ ಮತ್ತು ನಿಗೂಢತೆಯ ಕಥೆಗಳನ್ನು ಇಷ್ಟಪಡುವವರಿಗೆ ಉತ್ತಮ ಮನರಂಜನೆ ನೀಡುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ:  Kangana Ranaut: ಜನರು ಹರಡೋ ವದಂತಿಗಳಿಂದ ಕಂಗನಾ ಮದ್ವೆಯಾಗ್ತಿಲ್ವಂತೆ! ನಟಿ ಹೇಳಿರೋದೇನು?

ಪಾರ್ಟಿ ಒಂದರಲ್ಲಿ, ಮಂತ್ರಿಯ ಮಗ ಮತ್ತು ಕೈಗಾರಿಕೋದ್ಯಮಿ ವಿಕ್ಕಿ ರೈಯ ಕೊಲೆ ಆದಾಗ, ತನಿಖೆ ಆರಂಭವಾಗುತ್ತದೆ. ಮಂತ್ರಿಯ ಮಗನ ಕೊಲೆಯ ತನಿಖೆ ನಡೆಸಬೇಕಿರುವ ಒಬ್ಬ ಡಿಸಿಪಿ ಮತ್ತು ಒಬ್ಬ ಸಿಬಿಐ ಅಧಿಕಾರಿಯ ಕಥೆಯನ್ನು ಇದು ಒಳಗೊಂಡಿದೆ. ಟಿಗ್ಮಾಂಶು ಧುಲಿಯಾ ದುಲಿಯಾ ನಿರ್ದೇಶನದ ಈ ಸರಣಿಯಲ್ಲಿ ಅಶುತೋಶ್ ರಾಣಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

8) ಮಿಥ್ಯಾ –ಜೀ5
ರೋಹನ್ ಸಿಪ್ಪಿ ಅವರ, ಸೈಕಲಾಜಿಕಲ್ ಥ್ರಿಲ್ಲರ್ ಸರಣಿ ಮಿಥ್ಯಾ , ಅತ್ಯುತ್ತಮ ಹಿಂದಿ ಥ್ರಿಲ್ಲರ್ ಕಾರ್ಯಕ್ರಮಗಳ ಪಟ್ಟಿಯಲ್ಲಿ ಒಂದು ಪರಿಗಣಿಸಲ್ಪಡಲು ಅರ್ಹವಾಗಿದೆ. ಇದು, ಕ್ಯಾಥರೀನ್ ಕೆಲ್ಲಿ ಮತ್ತು ಮೊಲ್ಲಿ ವಿಂಡ್ಸರ್ ನಟಿಸಿದ್ದ 2019ರ ಬ್ರಿಟೀಷ್ ಸರಣಿ ಚೀಟ್ನ ರೂಪಾಂತರವಾಗಿದ್ದು, ಹಿಂದಿ ಭಾಷೆಯ ರೀಮೇಕ್‍ನಲ್ಲಿ ಹುಮಾ ಖುರೇಶಿ ಮತ್ತು ಅವಂತಿಕಾ ದಸ್ಸಾನಿ ನಟಿಸಿದ್ದಾರೆ.

ಡಾರ್ಜಿಲಿಂಗ್‍ನಲ್ಲಿ ನಡೆಯುವ ಕಥೆಯುಳ್ಳ ಈ ಸರಣಿ 6 ಭಾಗಗಳನ್ನು ಒಳಗೊಂಡಿದ್ದು, ಹಿಂದಿ ಸಾಹಿತ್ಯದ ಪ್ರೊಫೆಸರ್ ಜೂಹಿ ಮತ್ತು ಆಕೆಯ ವಿದ್ಯಾರ್ಥಿನಿ ರಿಯಾ ನಡುವಿನ ಸಂಘರ್ಷದ ಸಂಬಂಧದ ಕುರಿತದ್ದಾಗಿದೆ. ಪ್ರೊಫೆಸರ್ ಜೂಹಿಯ ಪಾತ್ರದಲ್ಲಿ ಹುಮಾ ಖುರೇಶಿ ನಟಿಸಿದ್ದಾರೆ. ಪ್ರರಂಬ್ರತ ಚಟ್ಟೋಪಧ್ಯಾಯ, ರಜಿತ್ ಕಪೂರ್ ಮತ್ತು ಸಮೀರ್ ಸೋನಿ ಕೂಡ ಈ ಸರಣಿಯಲ್ಲಿ ಅಭಿನಯಿಸಿದ್ದಾರೆ.

9) ಬೆಸ್ಟ್ ಸೆಲ್ಲರ್ – ಅಮೆಜಾನ್ ಪ್ರೈಮ್ ವಿಡಿಯೋ

ಈ ವೆಬ್‍ಸರಣಿಯಲ್ಲಿ, ಮಿಥುನ್ ಚಕ್ರವರ್ತಿ, ಶ್ರುತಿ ಹಾಸನ್, ಅರ್ಜನ್ ಬಾಜ್ವಾ, ಗೌಹರ್ ಖಾನ್ , ಸತ್ಯಜೀತ್ ದುಬೆ ಮತ್ತು ಸೋನಾಲಿ ಕುಲಕರ್ಣಿಯಂತಹ ಪ್ರತಿಭಾವಂತರ ತಾರಾಗಣವಿದೆ. ತನ್ನ ಮುಂದಿನ ಪುಸ್ತಕಕ್ಕಾಗಿ ಕಥೆಯ ಹುಡುಕಾಟಕ್ಕೆ ಹೆಣಗಾಡುತ್ತಿರುವ ಪ್ರಸಿದ್ಧ ಬರಹಗಾರನೊಬ್ಬ, ತನ್ನ ಅಭಿಮಾನಿ ಮತ್ತು ಉದಯೋನ್ಮುಖ ಬರಹಗಾರ್ತಿ ಮೀತು ಮಾಥುರ್ ಅನ್ನು ಭೇಟಿಯಾಗುತ್ತಾನೆ ಮತ್ತು ಆಕೆಯ ಕಥೆಯನ್ನು ತನ್ನ ಕಥೆಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಇಷ್ಟೆಲ್ಲಾ ನಡೆಯುವಾಗ, ಸಿನಿಮಾ ಸಹಾಯಕ ಪಾರ್ಥ್ ತನ್ನನ್ನು ಮತ್ತು ತನ್ನ ಪ್ರೀತಿಪಾತ್ರರನ್ನು ನಾಶ ಮಾಡಲು ಸಂಚು ಮಾಡುತ್ತಿರುತ್ತಾನೆ ಎಂಬ ಸತ್ಯ ತಿಳಿದಿರುವುದಿಲ್ಲ.

10) ಬ್ಲಡ್ ಬ್ರದರ್ಸ್ – ಜೀ5

ಬ್ಲಡ್ ಬ್ರದರ್ಸ್ ವೆಬ್‍ಸರಣಿ ಆರು ಭಾಗಗಳನ್ನು ಹೊಂದಿದ್ದು, ಜಗ್ಗಿ ಮತ್ತು ದಲ್‍ಜೀತ್ ಎಂಬ ಇಬ್ಬರು ಸಹೋದರರ ಜೀವನದ ಸುತ್ತ ಸುತ್ತುವ ಕಥೆಯನ್ನು ಒಳಗೊಂಡಿದೆ. ಹಿರಿಯ ಸಹೋದರ ಜಗ್ಗಿ ಅತಿರಂಜಿತ ಮತ್ತು ಪರಿಪೂರ್ಣ ಜೀವನ ನಡೆಸುತ್ತಿರುವಂತೆ ಕಂಡರೆ, ಒಂದು ವಿಂಟೇಜ್ ಬುಕ್ ಶಾಪ್ ಮತ್ತು ಕಾಫಿ ಕೆಫೆಯನ್ನು ನಡೆಸುವ ಕಿರಿಯ ದಲ್ಜೀತ್ ಬದುಕು ನಡೆಸಲು ಹೆಣಗಾಡುತ್ತಿರುತ್ತಾನೆ.

ಇದನ್ನೂ ಓದಿ: Kannadathi: ವಿಘ್ನಗಳೆಲ್ಲಾ ಕಳೆದು ಸುಸೂತ್ರವಾಗಿ ನಡೆಯುತ್ತಾ ಹರ್ಷ ಭುವಿ ಮದುವೆ?

ಒಂದು ರಾತ್ರಿ ಮನೆಗೆ ಹಿಂದಿರುಗುವಾಗ ನಡೆಯುವ ಅಪಘಾತವು ಅವರ ಬದುಕಿನ ದಿಕ್ಕನ್ನು ಬದಲಾಯಿಸುತ್ತದೆ. ಈ ಸರಣಿಯಲ್ಲಿ, ಜೈದೀಪ್ ಅಹ್ಲಾವತ್, ಮೊಹಮ್ಮದ್ ಜಿಶಾನ್ ಆಯೂಬ್, ಟೀನಾ ದೇಸಾಯಿ, ಶ್ರುತಿ ಸೇತ್, ಮಾಯಾ ಅಲಘ್, ಮುಗ್ಧ ಗೋಡ್ಸೆ, ಸತೀಶ್ ಕೌಶಿಕ್ ಮತ್ತು ಜಿತೇಂದ್ರ ಜೋಶಿ ನಟಿಸಿದ್ದಾರೆ.
Published by:Ashwini Prabhu
First published: