Amar Trailer: ಅಭಿಷೇಕ್ ಜತೆ ದರ್ಶನ್​ ತೆರೆ ಹಂಚಿಕೊಂಡಿರುವ 'ಅಮರ್​' ಸಿನಿಮಾದ ಟ್ರೈಲರ್​ ಬಿಡುಗಡೆಗೆ ಕ್ಷಣ ಗಣನೆ ಆರಂಭ

ದರ್ಶನ್​, ಅಭಿಷೇಕ್​ ಹಾಗೂ ಸುಮಲತಾ ಅಂಬರೀಷ್​

ದರ್ಶನ್​, ಅಭಿಷೇಕ್​ ಹಾಗೂ ಸುಮಲತಾ ಅಂಬರೀಷ್​

  • News18
  • Last Updated :
  • Share this:
- ಅನಿತಾ ಈ, 

ಬೆಳ್ಳಿತೆರೆ ಮೇಲೆ ಮಗ ಅಭಿಷೆಕ್​ರನ್ನು ನೋಡಬೇಕೆಂಬ ಕನಸ್ಸು ಹೊಂದಿದ್ದ ರೆಬೆಲ್​ ಸ್ಟಾರ್​ ಅಂಬಿ, ಅದು ನನಸಅಗುವ ಮೊದಲೇ ಇಹಲೋಕ ತ್ಯಜಿಸಿದ್ದರು. ಆದರೆ ಅಪ್ಪನ ಕನಸನ್ನು ನಿಜ ಮಾಡಬೇಕೆಂಬ ಒಂದೇ ಕಾರಣಕ್ಕೆ ಮನಸ್ಸಿನಲ್ಲಿ ತಂದೆಯ ಅಗಲಿಯ ನೋವಿದ್ದರೂ ಸಹ ಚಿತ್ರೀಕರಣಕ್ಕೆ ಹಾಜರಾಗಿದ್ದರು.

ಇದನ್ನೂ ಓದಿ: Yajamana Movie: ಡಿಬಾಸ್​ ಅಭಿನಯದ 'ಯಜಮಾನ'ನ ಮೊದಲ ಶೋ ಟಿಕೆಟ್​ ಸೋಲ್ಡ್​ಔಟ್​..!

ಇದಕ್ಕೆ ಧೈರ್ಯ ತುಂಬಿದ್ದು ಅಮ್ಮ ಸುಮಲತಾ ಹಾಗೂ ದೊಡ್ಡಣ್ಣನಂತಿರುವ ದರ್ಶನ್​. ಹೌದು, ಸದಾ ನೆರಳಿನಂತೆ ಮಗನ ಬೆನ್ನ ಹಿಂದೆ ನಿಂತು ಬೆಂಗಾವಲಾಗಿ ನಿಂತಿದ್ದ ಸುಮಲತಾ ಒಂದು ಕಡೆಯಾದರೆ, ಅಣ್ಣನಂತೆ ಅಭಿಗೆ ಹೆಜ್ಜೆ ಹೆಜ್ಜೆಗೂ ಸಲಹೆ-ಸೂಚನೆ ನೀಡುತ್ತಿರುವ ದರ್ಶನ್​ ಮತ್ತೊಂದು ಕಡೆ.

ಅಷ್ಟೇ ಅಲ್ಲದೆ ಅಂಬಿಯ ಅಗಲಿಕೆಯಿಂದ ನೊಂದಿದ್ದ ತನ್ನ ಕುಟುಂಬದ ಜೊತೆ ನಾನಿದ್ದೇನೆ ಎಂದು ಧೈರ್ಯ ತುಂಬುತ್ತಾ, ಅಭಿ ಜತೆಗೆ 'ಅಮರ್​' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದಾರೆ.

'ಅಮರ್'​ ಸಿನಿಮಾದ ಟ್ರೈಲರ್​ ನಾಳೆ 'ಯಜಮಾನ' ಸಿನಿಮಾದ ಜತೆಗೆ ಬಿಡುಗಡೆಯಾಗಲಿದೆ. ಮಾರ್ಚ್​ 1ರಂದು ಅಂಬಿ ಮನಗ ಚೊಚ್ಚಲ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಲಿದೆ.




 

ದರ್ಶನ್​ ಸಹ 'ಅಮರ್​' ಸಿನಿಮಾದ ಟ್ರೈಲರ್​ ಬಿಡುಗಡೆಗೆ ಶುಭಕೋರಿ ಬೆಂಬಲಿಸಿ, ಹರಸಿ ಎಂದು ಟ್ವೀಟ್​ ಮಾಡಿದ್ದಾರೆ. ಅದರಲ್ಲೂ ಬೆಳಿಗ್ಗೆ 10:08ಕ್ಕೆ ಟ್ರೈಲರ್​ ಬಿಡುಗಡೆಯಾಗಲಿದೆ ಎಂದು ಅವರು ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮೋಸ್ಟ್​ ಹ್ಯಾಪನಿಂಗ್​ ಕಪಲ್​ ಪ್ರಭಾಸ್​-ಅನುಷ್ಕಾ ಜೋಡಿಯಾಗಿ ಜಪಾನ್​ಗೆ ಹಾರಲಿದ್ದಾರೆ..!



ಸಂದೇಶ್​ ನಾಗರಾಜ್​ ನಿರ್ಮಾಣದ ಈ ಸಿನಿಮಾಗೆ ನಾಗಶೇಖರ್ ನಿರ್ದೇಶನವಿದೆ. ಅಭಿಷೇಕ್​ಗೆ ನಾಯಕಿಯಾಗಿ ತಾನ್ಯ ಹೋಪ್​ ಅಭಿನಯಿಸಿದ್ದಾರೆ.

ಗಿಡ ನೆಟ್ಟು ವರ್ಷಕ್ಕೊಂದು ಸೆಲ್ಫಿ ಕಳಿಸಿ ಎಂದ ಡಿಬಾಸ್​ ದರ್ಶನ್

First published: