HOME » NEWS » Entertainment » AMALA PAUL SPENDS SOME QUALITY TIME ON THE BEACH SAYS MY FREEDOM IS EVERYTHING TO ME VIDEO VIRAL HG

Video: ಬಿಕಿನಿ ತೊಟ್ಟು ಸಮುದ್ರ ಕಿನಾರೆಯಲ್ಲಿ ಎಂಜಾಯ್ ಮಾಡುತ್ತಿರುವ ಸ್ಯಾಂಡಲ್​​​ವುಡ್​​​ ನಟಿ!

Amala Paul: ಗೆಳೆಯನೊಂದಿಗೆ ಕೇರಳದ ಕೊಚ್ಚಿಯ ಸಮುದ್ರ ಕಿನಾರೆಯಲ್ಲಿ ಬಿಕಿನಿ ತೊಟ್ಟು ಎಂಜಾಯ್​ ಮಾಡುತ್ತಿರುವ ವಿಡಿಯೋವನ್ನು ಅಡೈ ನಟಿ ಅಮಲಾ ಪೌಲ್ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ​ ಹಂಚಿಕೊಂಡಿದ್ದಾರೆ.

news18-kannada
Updated:August 17, 2020, 2:56 PM IST
Video: ಬಿಕಿನಿ ತೊಟ್ಟು ಸಮುದ್ರ ಕಿನಾರೆಯಲ್ಲಿ ಎಂಜಾಯ್ ಮಾಡುತ್ತಿರುವ ಸ್ಯಾಂಡಲ್​​​ವುಡ್​​​ ನಟಿ!
ಅಮಲಾ ಪೌಲ್​​
  • Share this:
ಹೆಬ್ಬುಲಿ ನಟಿ ಅಮಲಾ ಪೌಲ್​ ಸಿನಿಮಾದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ನಟಿ. ಫೋಟೋ, ವಿಡಿಯೋವನ್ನು ಆಗಾಗ ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಸರ್​ಪ್ರೈಸ್​​ ನೀಡುತ್ತಿರುತ್ತಾರೆ. ಇದೀಗ ಸಮುದ್ರ ಕಿನಾರೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿರುವ ವಿಡಿಯೋವನ್ನು ಅಮಲಾ ಪೌಲ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಗೆಳೆಯನೊಂದಿಗೆ ಕೇರಳದ ಕೊಚ್ಚಿಯ ಸಮುದ್ರ ಕಿನಾರೆಯಲ್ಲಿ ಬಿಕಿನಿ ತೊಟ್ಟು ಎಂಜಾಯ್​ ಮಾಡುತ್ತಿರುವ ವಿಡಿಯೋವನ್ನು ಅಡೈ ನಟಿ ಅಮಲಾ ಪೌಲ್ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ​ ಹಂಚಿಕೊಂಡಿದ್ದಾರೆ. ವಿಡಿಯೋದ ಕೆಳಗೆ ಲಾಕ್​ಡೌನ್​ ನಂತರ ನಾನು ಮಾಡಿದ ಮೊದಲ ಕೆಲಸ ಇದು. ಈ ಸಮಯದಲ್ಲಿ ನಾನು ಮೊದಲು ಕಲಿತದ್ದು ಸ್ವಾತಂತ್ರ್ಯ ಮತ್ತು ಚಲನಶೀಲತೆಯ ಮೌಲ್ಯ. ನನ್ನ ಸ್ವಾತಂತ್ರ್ಯ ನನಗೆ ಸರ್ವಸ್ವ. ನಾನು ನನ್ನ ಪ್ರೀತಿ ಮತ್ತು ಪ್ರೀತಿ ಪಾತ್ರರೊಡನೆ ಇರುವುದು ಸಂತೋಷವನ್ನುಂಟು ಮಾಡಿದೆ. ನೀನು ಮತ್ತು ನಾನು ಹೃದಯಗಳಿಗೆ ಹತ್ತಿರವಾಗುವ ಮೂಲಕ ಸ್ವಾತಂತ್ರ್ಯರಾಗಿದ್ದೇವೆ.....ನಿಮ್ಮ ಸ್ವಾತಂತ್ರ್ಯವನ್ನು ತಿಳಿದುಕೊಳ್ಳಿ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಅಮಲಾ ಪೌಲ್​​ 2014ರಲ್ಲಿ ನಿರ್ಮಾಪಕ ಎಎಲ್ ವಿಜಯ್ ಜೊತೆಗೆ ವಿವಾಹವಾಗಿದ್ದರು. ಆನಂತರ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಯಿತು. 2016ರಲ್ಲಿ ವಿಚ್ಠೇದನ ಅರ್ಜಿ ಹಾಕಿದರು. 2017ರಲ್ಲಿ ಇವರಿಬ್ಬರು ವಿಚ್ಛೇದನ ಅರ್ಜಿ ಒಪ್ಪಿಗೆ ಪಡೆದು ದೂರವಾದರು. ವಿಜಯ್​ನಿಂದ ದೂರವಾದ ಬಳಿಕ ಅಮಲಾ ಪೌಲ್ ಮುಂಬೈ ಮೂಲದ ಹಾಡುಗಾರ ಭವಿಂದರ್ ಸಿಂಗ್ ಜೊತೆಗೆ ಡೇಟಿಂಗ್​ ನಡೆಸುತ್ತಿದ್ದಾರೆ.

ಇತ್ತೀಚೆಗೆ ಭವಿಂದರ್​ ಜೊತೆಗೆ ಅಮಲಾ ಪೌಲ್​ ವಿವಾಹವಾಗಿದ್ದಾರೆ ಎಂಬ ಮಾತುಗಳು ಹರಿದಾಡಿತ್ತು.ಅದಕ್ಕೆ ಸಾಕ್ಷಿ ಎಂಬಂತೆ ಫೋಟೋಗಳು ಹರಿದಾಡಿದ್ದವು. ಈ ಬಗ್ಗೆ ಉತ್ತರಿಸಿದ್ದ ಅಮಲಾ ಪೌಲ್​​ ನನಗೆ ಮದುವೆಯಾಗಿಲ್ಲ. ಮದುವೆಯಾದರೆ ನಾನೇ ಹೇಳುತ್ತೇನೆ ಎಂದು ಹೇಳಿದ್ದರು.


ಸಿನಿಮಾ ವಿಚಾರಕ್ಕೆ ಬಂದಾಗ ಕಿಚ್ಚ ಸುದೀಪ್​ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದ್ದರು. ಇನ್ನು ಇವರ ನಟನೆಯ ‘ಅಡೈ’ ಸಿನಿಮಾ ಕಾಲಿವುಡ್​ನ ಪ್ರೇಕ್ಷಕರ ಮನಗೆದ್ದಿತ್ತು. ಈ ಸಿನಿಮಾದಲ್ಲಿ ಕಮಿನಿ ಅಲಿಯಾಸ್​​ ಸುಧಾನ್ಂದಿರಕೋಡಿ ಪಾತ್ರದಲ್ಲಿ ಮಿಂಚಿದ್ದರು.

ಸದ್ಯ ಅಮಲಾ ‘ಅಧೋ ಅಂದ ಪರವೈ ಪೋಲಾ’ದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅದರ ಜೊತೆಗೆ ‘ಕೇದಾವರ್’​​ ಹಿಂದಿ ವೆಬ್​ ಸರಣಿಯಲ್ಲಿ ನಟಿಸುತ್ತಿದ್ದಾರೆ. ಇದು ಬಾಲಿವುಡ್​​ ನಟಿ ಪರ್ವಿನ್​​ ಬಾಬಿ ಅವರ ಜೀವನ ಆಧಾರಿತ ವೆಬ್​ಸರಣಿಯಾಗಿದೆ.
Published by: Harshith AS
First published: August 17, 2020, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories