ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ತಮ್ಮ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಶಿಸ್ತುಬದ್ಧವಾಗಿರುತ್ತಾರೆ. ಅವರಿಗೆ ಅವರ ಸಿನಿಮಾ ಮಗುವಿದ್ದಂತೆ. ಹೀಗಿದ್ದ ಕಾರಣದಿಂದಲೇ ಅವರು 'ಬಾಹುಬಲಿ'ಯಂತಹ ಚಿತ್ರವನ್ನು ಸಿನಿ ರಂಗಕ್ಕೆ ಕೊಡೆಯಾಗಿ ಕೊಡಲು ಸಾಧ್ಯವಾಗಿದ್ದು.
ಇಂತಹ ನಿರ್ದೇಶಕ ಈಗ ರಾಮ್ ಚರಣ್ ಮೇಲೆ ಬೇಸರಗೊಂಡಿದ್ದಾರಂತೆ. ಅದಕ್ಕೆ ಕಾರಣ ರಾಮ್ ಚರಣ್ ಅವರ ಅಶಿಸ್ತು ಎನ್ನಲಾಗುತ್ತಿದೆ. ಹೌದು, ಈ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
![NTR and Ramcharan Teja in RRR Movie sets]()
ಜೂನಿಯರ್ ಎನ್ಟಿಆರ್ ಜತೆ ರಾಮ್ ಚರಣ್
ಎಸ್.ಎಸ್. ರಾಜಮೌಳಿ ನಿರ್ದೇಶನದ ಸಿನಿಮಾ 'ಆರ್ಆರ್ಆರ್'. ಜೂನಿಯರ್ ಎನ್ಟಿಆರ್ ಹಾಗೂ ನಟ ರಾಮ್‍ಚರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ಬಾಲಿವಡ್ ನಟರಾದ ಸಂಜಯ್ ದತ್, ವರುಣ್ ಧವನ್, ಅಜಯ್ ದೇವಗನ್, ಅಲಿಯಾಭಟ್ ಸಹ ಅಭಿನಯಿಸುತ್ತಿದ್ದಾರೆ.
![Ajay Devagan and AliaBhat in RRR Movie]()
RRR ಸಿನಿಮಾದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಅಲಿಯಾ ಭಟ್
ಸುಮಾರು 200 ಕೋಟಿ ಬಜೆಟ್ನ ಈ ಸಿನಿಮಾವನ್ನು 11 ಭಾಷೆಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಎಲ್ಲ ಭಾಷೆಗಳಲ್ಲೂ ಈ ಸಿನಿಮಾದ ಟೈಟಲ್ 'ಆರ್ಆರ್ಆರ್' ಎಂದೇ ಇರುತ್ತದೆಯಂತೆ. ಅಲ್ಲದೆ ಅಕ್ಟೋಬರ್ 2ರಂದು ತೆರೆಗೆ ಬರಲು ಸಿದ್ಧತೆ ನಡೆಯುತ್ತಿರುವ ಈ ಸಿನಿಮಾದಲ್ಲಿ ರಾಮ್‍ಚರಣ್ ಅಲ್ಲುರಿ ಸೀತಾರಾಮರಾಜು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
#RamCharan & #KiaraAdvani after the Birthday treat 😋😋 pic.twitter.com/1yW2IwxF5J
ಈ ಸಿನಿಮಾದಲ್ಲಿ ರಾಮ್‍ಚರಣ್ ಲುಕ್ ಹೇಗಿದೆ ಎಂದು ಎಲ್ಲೂ ಹೊರಗಡೆ ಬಾರದಂತೆ ನೋಡಿಕೊಳ್ಳಲಾಗಿತ್ತು. ಆದರೆ ಈಗ ರಾಮ್‍ಚರಣ್ ಅವರ ನಿರ್ಲಕ್ಷ್ಯದಿಂದ ಈ ಲುಕ್ ಲೀಕಾಗಿದ್ದು, ಎಲ್ಲ ಕಡೆ ವೈರಲ್ ಆಗಿದೆ. ಇದರಿಂದ ರಾಜಮೌಳಿ ಅವರು ಬೇಸರಗೊಂಡಿದ್ದಾರಂತೆ.
![Kiara and Ramcharan]()
ಕಿಯಾರಾ ಜತೆ ರಾಮ್ ಚರಣ್
ಇದನ್ನೂ ಓದಿ: Roberrt: ಜೂಜಾಟದಿಂದ ಹಣ-ಆಸ್ತಿ ಕಳೆದುಕೊಂಡ್ರಾ 'ರಾಬರ್ಟ್' ಚಿತ್ರದ ಈ ಸ್ಟಾರ್ ನಟ..!
ಇತ್ತೀಚೆಗೆ `ಕಿಯಾರಾ ಅಡ್ವಾಣಿ' ಹುಟ್ಟುಹಬ್ಬದ ಪಾರ್ಟಿಯಲ್ಲಿ ರಾಮ್‍ಚರಣ್ ಪಾಲ್ಗೊಂಡಿದ್ದರು. ಪಾರ್ಟಿ ಮುಗಿಸಿ ಹೊರ ಬರುವಾಗ ಕಿಯಾರಾ ಜೊತೆಗಿರೋ ಫೋಟೋವನ್ನ ಯಾರೋ ಕ್ಲಿಕ್ಕಿಸಿಬಿಟ್ಟಿದ್ದಾರೆ. ಈಗ ಅದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಮೂಲಕ ಅಲ್ಲುರಿ ಸೀತಾರಾಮರಾಜು ಪಾತ್ರದ ಗೆಟಪ್ಪು, ಲುಕ್ ಬಗ್ಗೆ ಸಸ್ಪೆನ್ಸ್ ಕಾಯ್ದುಕೊಳ್ಳಲು ಯೋಜಿಸಿದ್ದ ರಾಜಮೌಳಿಗೆ ಅವರಿಗೆ ಇದು ಬೇಸರ ತರಿಸಿದೆಯಂತೆ.
Deepika Padukone: ಮೇಕಪ್ ಇಲ್ಲದೆ ವೋಗ್ ನಿಯತಕಾಲಿಕೆಗೆ ಪೋಸ್ ಕೊಟ್ಟ ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ..!