ಹಿಂದಿಯಲ್ಲಿ ಡಬ್ ಆಗುವ ದಕ್ಷಿಣ ಭಾರತದ ಚಲನಚಿತ್ರಗಳು(South Indian Films) ಇದೀಗ ಎಲ್ಲರ ಹುಬ್ಬೇರಿಸುತ್ತಿವೆ. ಆದರೆ ಈ ಬೃಹತ್ ಯಶಸ್ಸಿನ ಹಿಂದಿನ ಧ್ವನಿಗಳು ಯಾರುದ್ದು?.. ಇತ್ತೀಚಿನ ದಿನಗಳಲ್ಲಿ ಕೆಲವು ದೊಡ್ಡ ಸೌತ್ ಬ್ಲಾಕ್ಬಸ್ಟರ್ಗಳಿಗೆ ಹಿಂದಿಯಲ್ಲಿ ಡಬ್ ಮಾಡಿದ ಕಲಾವಿದರು ಯಾರು ಅಂತಾ ಗೊತ್ತಾ..? ಇಲ್ಲಿದೆ ಮಾಹಿತಿ. ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ: ದಿ ರೈಸ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದು, ಗಲ್ಲಾ ಪೆಟ್ಟಿಗೆಯನ್ನು ಪೀಸ್ ಪೀಸ್ ಮಾಡಿದೆ. ಈ ಮೂಲಕ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡಿದೆ. ಒಟ್ಟು ತೆಲುಗು, ತಮಿಳು, ಮಲೆಯಾಳಂ, ಕನ್ನಡ ಮತ್ತು ಹಿಂದಿ 5 ಭಾಷೆಗಳಲ್ಲಿ OTT ಪರದೆ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ಭಾರಿ ಸದ್ದು ಮಾಡ್ತಿದೆ. ಅದರಲ್ಲೂ ಹಿಂದಿ ಮಾರುಕಟ್ಟೆಯಲ್ಲಿ ಪುಷ್ಪಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿಯಲ್ಲಿ (Hindi languages) ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡ್ತಿದ್ದು, ಈ ಯಶಸ್ಸನ್ನು ಮುಂದುವರೆಸಲು ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಮತ್ತು ಟಬು ಅಭಿನಯದ ಅಲಾ ವೈಕುಂಠಪುರಮುಲು(Ala Vaikunthapuramulu) ಸಿನಿಮಾವನ್ನು ನಿರ್ಮಾಪಕರು ಹಿಂದಿಗೆ ಡಬ್ ಮಾಡಿ ಜನವರಿ 26 ರಂದು ಚಿತ್ರಮಂದಿರಗಳಲ್ಲಿ ರಿರೀಲಿಸ್ ಮಾಡಲಿದ್ದಾರೆ. (ಅಲಾ ವೈಕುಂಠಪುರಮುಲೂ ಈಗಾಗ್ಲೇ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ, ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೋನ್ ಜೊತೆ ಶೆಹಜಾದಾ ಎಂಬ ಶೀರ್ಷಿಕೆಯಲ್ಲಿ ಚಿತ್ರ ಮೂಡಿ ಬರುತ್ತಿದೆ.)
ಹೀಗೆ ಸಾಲು ಸಾಲು ದಕ್ಷಿಣ ಭಾರತದ ಚಿತ್ರಗಳು ಹಿಂದಿಗೆ ಡಬ್ ಆಗುತ್ತಿವೆ. ಹಾಗಾದರೆ ಬಿಗ್ ಬಿಗ್ ಸ್ಟಾರ್ ಗಳಿಗೆ ಯಾರು ಧ್ವನಿಯಾಗಿದ್ದಾರೆ, ಬಾಲಿವುಡ್ ನ ಆ ಮ್ಯಾಜಿಕಲ್ ವಾಯ್ಸ್ ಓವರ್ ಯಾರದ್ದು ಎಂಬುದರ ಡಿಟೇಲ್ಸ್ ಇಲ್ಲಿದೆ.
ಪುಷ್ಪ ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆ ಧ್ವನಿ
ಪುಷ್ಪದ ಹಿಂದಿ ಆವೃತ್ತಿಗೆ ನಟ ಶ್ರೇಯಸ್ ತಲ್ಪಾಡೆ ಅಲ್ಲು ಅರ್ಜುನ್ಗೆ ಧ್ವನಿ ನೀಡಿದ್ದಾರೆ. ಇತ್ತೀಚೆಗೆ, ಶ್ರೇಯಸ್ ತಲ್ಪಾಡೆ ಟ್ವಿಟ್ಟರ್ನಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಹಿಂದಿ ಭಾಷೆಯಲ್ಲಿ ಪುಷ್ಪ ಚಿತ್ರವನ್ನು ಪ್ರೀತಿಸಿದ್ದಕ್ಕಾಗಿ, ಮತ್ತು #ಪುಷ್ಪಹಿಂದಿಯಲ್ಲಿ ನನ್ನ ಧ್ವನಿಗೆ ಸಿಕ್ಕಿರುವ ಪ್ರತಿಕ್ರಿಯೆಗೆ ನಿಮಗೆ ಧನ್ಯವಾದ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. @alluarjun ಕ್ಯಾ ರೆಕಾರ್ಡ್ ಧಮಾಕಾ ಹೈ! #ಪುಷ್ಪ...ಝುಕ್ಕೆಗಾ ನಹಿ ಮತ್ತು ಬ್ಲಾಕ್ಬಸ್ಟರ್ ನಂಬರ್.. ರುಕ್ಕೆಗಾ ನಹಿ ಅಂತಾ ಪುಷ್ಪ ಚಿತ್ರವನ್ನು ಹೊಗಳಿದ್ದಾರೆ.
ಇದನ್ನೂ ಓದಿ: `ಪುಷ್ಪ’ ನಿರ್ಮಾಪಕರಿಗೆ ವಾರ್ನಿಂಗ್ ಕೊಟ್ಟ ಕಿರುಕುಳಕ್ಕೊಳಗಾದ ಪತಿಗಳ ಸಂಘ: ಸಿನಿಮಾ ಪ್ರದರ್ಶನ ನಿಲ್ಲಿಸುವುದಾಗಿ ಎಚ್ಚರಿಕೆ!
ಅಲ್ಲು ಅರ್ಜುನ್, ಮಹೇಶ್ ಬಾಬು , ಜೂನಿಯರ್ ಎನ್ಟಿಆರ್ಗೆ ಸಂಕೇತ್ ಮ್ಹಾತ್ರೆ
ಅಲ್ಲು ಅರ್ಜುನ್, ಮಹೇಶ್ ಬಾಬು ಮತ್ತು ಜೂನಿಯರ್ ಎನ್ಟಿಆರ್ ಅವರಿಗೆ ಸಂಕೇತ್ ಮ್ಹಾತ್ರೆ ಧ್ವನಿಯಾಗಿದ್ದಾರೆ. ಸಂಕೇತ್ ಸೂರ್ಯ ಅಭಿನಯದ ಸೂರರೈ ಪೊಟ್ರು, ಕಾಪ್ಪಾನ್, ಜೈ ಭೀಮ್ ಸೇರಿದಂತೆ ಮತ್ತು ಇನ್ನೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಯೋಜನೆಗಳಿಗೆ ತಮ್ಮ ಧ್ವನಿ ನೀಡಿದ್ದಾರೆ. ಹಿಂದಿಗೆ ಡಬ್ ಆಗುವ ಅಲ್ಲು ಅರ್ಜುನ್, ಮಹೇಶ್ ಬಾಬು, ರಾಮ್ ಪೋತಿನೇನಿ ಮತ್ತು ಜೂನಿಯರ್ ಎನ್ಟಿಆರ್ಗೆ ಸಂಕೇತ್ ವಾಯ್ಸ್ ಓವರ್ ಕೊಡುತ್ತಾರೆ. ಡಿಜೆ, ಸರ್ರೈನೋಡು, S/O ಸತ್ಯಮೂರ್ತಿ ಮುಂತಾದ ಚಿತ್ರಗಳಲ್ಲಿ ಅಲ್ಲು ಅರ್ಜುನ್ಗೆ ಧ್ವನಿ ನೀಡಿದ್ದಾರೆ. ಮಹೇಶ್ ಬಾಬು ಅವರ ದಿ ರಿಯಲ್ ತೇವರ್, ದಿ ರಿಯಲ್ ಟೈಗರ್ ಮತ್ತು ಎನ್ಕೌಂಟರ್ ಶಂಕರ್ ಚಿತ್ರಗಳನ್ನು ಸಹ ಇವರೇ ಡಬ್ ಮಾಡಿದ್ದಾರೆ.
ಬಾಹುಬಲಿ ಚಿತ್ರದಲ್ಲಿ ಶರದ್ ಕೇಳ್ಕರ್ ಮ್ಯಾಜಿಕಲ್ ವಾಯ್ಸ್
ಶರದ್ ಕೇಳ್ಕರ್ ಬಾಲಿವುಡ್ನ ಬೇಡಿಕೆಯ ಡಬ್ಬಿಂಗ್ ಕಲಾವಿದ.ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಠಿಸಿದ್ದ ಬಾಹುಬಲಿ ಚಿತ್ರದ ಹಿಂದಿ ಅವತರಣಿಕೆಗೆ ಪ್ರಭಾಸ್ಗೆ ಶರದ್ ಕೇಳ್ಕರ್ ಧ್ವನಿ ನೀಡಿದ್ದರು. ಅಲ್ಲದೇ ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್, ಎಕ್ಸೋಡಸ್: ಗಾಡ್ಸ್ ಮತ್ತು ಕಿಂಗ್ಸ್, ದಿ ರಿಟರ್ನ್ ಆಫ್ ಕ್ಸಾಂಡರ್ ಕೇಜ್, ಎಕ್ಸ್-ಮೆನ್ ಅಪೋಕ್ಯಾಲಿಪ್ಸ್, ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ ಮತ್ತು ಇತರ ದೊಡ್ಡ ಚಲನಚಿತ್ರಗಳಿಗೆ ವಾಯ್ಸ್ ನೀಡಿದ್ದಾರೆ.
ವಿಜಯ್ ಮತ್ತು ಧನುಷ್ ಗೆ ರಾಜೇಶ್ ಕಾವಾ ವಾಯ್ಸ್
ರಾಜೇಶ್ ಕಾವಾ ಅವರು ನಟ ವಿಜಯ್ಗೆ ಸೂಪರ್ ಹೀರೋ ಶೆಹನ್ಶಾರಿಂದ ಹಿಡಿದು ತಿರುಮಲೈವರೆಗೆ ಅನೇಕ ಚಿತ್ರಗಳಲ್ಲಿ ಧ್ವನಿ ನೀಡಿದ್ದಾರೆ. ಇದಲ್ಲದೆ, ಧನುಷ್ ಅಭಿನಯದ ತಂಗ ಮಗನ್ನ ಹಿಂದಿ ಡಬ್ಬಿಂಗ್ ಆವೃತ್ತಿಗೆ ಧ್ವನಿ ನೀಡಿದರು. ಸಿಂಗಂ 2, ಲಿಂಗ 1, ಮತ್ತು ಬ್ರಹ್ಮೋತ್ಸವಂಗೆ ಧ್ವನಿ ನೀಡಿದ್ದಾರೆ.
ಇದನ್ನೂ ಓದಿ: Rashmika Mandanna : ಅಲ್ಲು ಅರ್ಜುನ್ಗೆ ಪ್ರೀತಿಯಿಂದ ಸ್ಪೆಷಲ್ ಗಿಫ್ಟ್ ಕೊಟ್ಟ ರಶ್ಮಿಕಾ ಮಂದಣ್ಣ!
ರಾಣಾ ದಗ್ಗುಬಾಟಿಗಾಗಿ ಮನೋಜ್ ಪಾಂಡೆ ಧ್ವನಿ
ನಟ ರಾಣಾ ದಗ್ಗುಬಾಟಿಗೆ ಮನೋಜ್ ಪಾಂಡೆ ಅಧಿಕೃತ ಡಬ್ಬಿಂಗ್ ಧ್ವನಿಯಾಗಿದ್ದಾರೆ. ಅವರು ಬಾಹುಬಲಿ, ಕೃಷ್ಣ ಕಾ ಬದ್ಲಾ ಮುಂತಾದ ಚಿತ್ರಗಳಲ್ಲಿ ನಟನಿಗೆ ತಮ್ಮ ಧ್ವನಿಯನ್ನು ನೀಡಿದರು.
ಹಿರಿಯ ನಟ ಬ್ರಹ್ಮಾನಂದಂಗೆ ವಿನೋದ್ ಕುಲಕರ್ಣಿ ಕಂಠದಾನ
ವಿನೋದ್ ಕುಲಕರ್ಣಿ ಅವರು ರೆಬೆಲ್, ಕಂಡಿರೀಗ, ದೂಸುಕೆಳತಾ, ಆರ್ಯ 2, ಪವರ್ ಮುಂತಾದ ಅನೇಕ ಚಿತ್ರಗಳಲ್ಲಿ ಬ್ರಹ್ಮಾನಂದಂ ಅವರಿಗೆ ಡಬ್ಬಿಂಗ್ ಮಾಡಿದ್ದಾರೆ. ಈ ಕಲಾವಿದರಲ್ಲಿ ಯಾರು ಅಲಾ ವೈಕುಂಠಪುರಮುಲು ಹಿಂದಿ ಆವೃತ್ತಿಗೆ ಡಬ್ ಮಾಡುತ್ತಾರೆ ಎಂಬುದು ಈಗ ಕುತೂಹಲಕಾರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ