'ಪುಷ್ಪ' ಚಿತ್ರದಲ್ಲಿ Allu Arjun​​ಗೆ ಇಷ್ಟೆಲ್ಲಾ Health Problem ಇದ್ಯಾ; ಈ ಡಾಕ್ಟರ್​ ಮಾತು ಕೇಳಿದ್ರೆ ಬಿದ್ದು ಬಿದ್ದು ನಗ್ತೀರಾ!

ಶ್ರೀವಲ್ಲಿ ಹಾಡಿನ ವಾಕಿಂಗ್ ಸ್ಟೈಲ್ ಬಗ್ಗೆ ಡಾಕ್ಟರ್ ಎಕ್ಸ್ ಟ್ರಾ ಚಟತ್ನಿ ವಿವರಿಸಿದ್ದಾರೆ. ನಾಯಕನ ವಿಚಿತ್ರವಾದ ನಡಿಗೆ, ಅವರಿಗಿರುವ ಸಾಮಾನ್ಯ ಪೆರೋನಿಯಲ್ ನರದ ಗಾಯದ ಸಂಕೇತವಾಗಿದೆ ಎಂದಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬ್ಲಾಕ್ ಬಸ್ಟರ್ (Blockbuster) ಸಿನಿಮಾಗಳ ಸಾಲಿನಲ್ಲಿ ಈಗಾಗಲೇ ತೆಲುಗಿನ ಪುಷ್ಪ ಸೇಪರ್ಡೆಯಾಗಿದೆ. ಬಾಕ್ಸ್ ಆಫೀಸ್ ಅನ್ನು ಪುಡಿ ಪುಡಿ ಮಾಡಿ ಸಿನಿರಸಿಕರ ಮನಗೆದ್ದಿದೆ. ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರಕ್ಕೆ ಎಲ್ಲ ಕಡೆಯಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೆಲೆಬ್ರಿಟಿಗಳು(Celebrities) , ವಿಮರ್ಶಕರು, ಅಭಿಮಾನಿಗಳು, ಎಲ್ಲರೂ ಪುಷ್ಪ ಸಿನಿಮಾಗೆ ಜೈ ಎಂದಿದ್ದಾರೆ. ಪುಷ್ಪ ಚಿತ್ರದ ಹಾಡು, ಡಾನ್ಸ್, ಡೈಲಾಗ್ ಎಲ್ಲವೂ ಸಖತ್ ಸುದ್ದಿ ಮಾಡುತ್ತಿವೆ. ಹಲವಾರು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಕೆಲವು ಡೈಲಾಗ್ ಮತ್ತು ಹಾಡುಗಳನ್ನು ಮರುಸೃಷ್ಟಿಸುತ್ತಿದ್ದಾರೆ. ‘ಪುಷ್ಪ ತಗ್ಗೋದೆ ಇಲ್ಲಾ’ ಎಂಬ ಸಾಲುಗಳು ಪ್ರತಿಯೊಬ್ಬರ ಬಾಯಲ್ಲೂ ಇದೆ. ‘ಶ್ರೀವಲ್ಲಿ ಮತ್ತು (Srivalli and Sami Sami) ಸಾಮಿ ಸಾಮಿ’ ಹಾಡುಗಳು ಇನ್ಸ್ಟಾಗ್ರಾಮ್ ರೀಲ್‌ಗಳ ಟ್ರೆಂಡಿಂಗ್ (Trending Tracks) ಹಾಡುಗಳು.

ಡಾನ್ಸ್ ಸ್ಟೆಪ್ ಫುಲ್ ಟ್ರೆಂಡ್
ಇತ್ತೀಚೆಗೆ, ಕ್ರಿಕೆಟಿಗ ಡಿಜೆ ಬ್ರಾವೋ, ಸುರೇಶ್ ರೈನಾ ಅವರು ಅಲ್ಲು ಅರ್ಜುನ್ ಅವರ ಸಖತ್ ಜನಪ್ರಿಯವಾದ ಶ್ರೀವಲ್ಲಿ ಹಾಡಿನ ಸ್ಟೆಪ್ ಒಂದನ್ನು ಮಾಡಿದ್ದಾರೆ. ಗೋಯಿಂಗ್ ಟ್ರೆಂಡ್ ಅಂತ ಎಲ್ಲಾ ಕಡೆ ಅಲ್ಲು ಶ್ರೀವಲ್ಲಿ ಹಾಡಿನ ಮತ್ತು ಸಾಮಿ ಹಾಡಿನ ಡಾನ್ಸ್ ಸ್ಟೆಪ್ ಫುಲ್ ಟ್ರೆಂಡ್ ಆಗಿದೆ.

ಇವೆಲ್ಲಾ ಟ್ರೆಂಡ್, ಮೆಮೆ, ಟ್ರೋಲ್ ನಡುವೆ ಇನ್ಸ್ಟಾಗ್ರಾಮ್ ಕ್ರಿಯೇಟರ್ ಒಬ್ಬರು ವೈದ್ಯಕೀಯ ಭಾಷೆಯಲ್ಲಿ ಸಕತ್ ಹಾಸ್ಯಮಯವಾಗಿ ಪುಷ್ಪ ಚಿತ್ರದಲ್ಲಿನ ನಾಯಕ ಅಲ್ಲು ಅರ್ಜುನ್ ಅವರನ್ನು ಕಾಲೆಳೆದಿದ್ದಾರೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗ್ತಿದ್ದು, ವಿಡಿಯೋ ನೋಡಿದವರು ಹೀಗೂ ಉಂಟಾ..? ಅಂತಾ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Pushpa: ಈ ಐವರು `ಪುಷ್ಪ’ ಸಿನಿಮಾದಲ್ಲಿ ನಟಿಸೋಲ್ಲ ಅಂದಿದ್ರಂತೆ.. ಯಾರು, ಯಾವ ಪಾತ್ರ ಮಿಸ್​ ಮಾಡ್ಕೊಂಡ್ರು ಅಂತ ಇಲ್ಲಿದೆ ನೋಡಿ..

ಹಾಸ್ಯಮಯ ಟ್ರೋಲ್
ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ನಟನೆ ಎಲ್ಲರನ್ನು ಹುಬ್ಬೇರಿಸಿದೆ. ಈ ಚಿತ್ರದ ಮೂಲಕ ಉತ್ತಮ ಕಲಾವಿದ ಎಂಬುದನ್ನು ಈ ನಟ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಚಿತ್ರದಲ್ಲಿನ ಡೈಲಾಗ್‌ಗಳು, ವಾಕಿಂಗ್ ಸ್ಟೈಲ್, ಅಲ್ಲು ಆಕಾರ, ಡಾನ್ಸ್ ಸ್ಟೆಪ್ ಎಲ್ಲಾ ವಿಭಿನ್ನವಾಗಿವೆ.

ಇದನ್ನೇ ಇನ್ಸ್ಟಾಗ್ರಾಮ್ನಲ್ಲಿ ಡಾಕ್ಟರ್ ಎಕ್ಸಾಟ್ರಾ ಚಟ್ನಿ ಎಂಬ ಪೇಜಿನ ಕ್ರಿಯೇಟರ್, ಮೇಕಿಂಕ್ ಮೆಡಿಕಲ್ ಫನ್ ಎಂಬ ಕಟೆಂಟ್ ಅಡಿ ಡಾಕ್ಟರ್ ಭಾಷೆಯಲ್ಲಿ ಪುಷ್ಪ ಚಿತ್ರದಲ್ಲಿನ ಅಲ್ಲು ಅವರ ನ್ಯೂನತೆಗಳನ್ನು ಹೇಳುತ್ತಾ ಹಾಸ್ಯಮಯವಾಗಿ ಟ್ರೋಲ್ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರ 'ಪುಷ್ಪಾ' ಸಿನಿಮಾ ಹಲವಾರು ವೈದ್ಯಕೀಯ ಸಮಸ್ಯೆಗಳನ್ನು ಹೊಂದಿದೆ. ಚಿತ್ರ ವೀಕ್ಷಿಸಿದ ನೇತ್ರಶಾಸ್ತ್ರಜ್ಞರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ ಎಂದು ಹೇಳುವ ಮೂಲಕ ವಿಡಿಯೋ ಶುರು ಮಾಡಿದ್ದಾರೆ.

ವಿಡಿಯೋ ನೋಡಿ:




ಡಯಾಬಿಟಿಕ್ ನ್ಯೂರೋಪತಿಯ ಲಕ್ಷಣ
ಚಿತ್ರದಲ್ಲಿ ನಾಯಕನ ಕೆಲವು ಆ್ಯಕ್ಷನ್‌ಗಳು ವೈದ್ಯಕೀಯ ಸಮಸ್ಯೆಗಳನ್ನು ತೋರಿಸುತ್ತವೆ ಎಂದಿದ್ದಾರೆ. ಹೆಚ್ಚು ಟ್ರೆಂಡಿಂಗ್ ನಲ್ಲಿರುವ ಶ್ರೀವಲ್ಲಿ ಹಾಡಿನ ವಾಕಿಂಗ್ ಸ್ಟೈಲ್ ಬಗ್ಗೆ ಡಾಕ್ಟರ್ ಎಕ್ಸ್ ಟ್ರಾ ಚಟತ್ನಿ ವಿವರಿಸಿದ್ದಾರೆ. ನಾಯಕನ ವಿಚಿತ್ರವಾದ ನಡಿಗೆ, ಅವರಿಗಿರುವ ಸಾಮಾನ್ಯ ಪೆರೋನಿಯಲ್ ನರದ ಗಾಯದ ಸಂಕೇತವಾಗಿದೆ ಎಂದಿದ್ದಾರೆ. ಅಲ್ಲದೇ ಚಪ್ಪಲಿ ಬಿಡುವ ಸೀನ್ ಡಯಾಬಿಟಿಕ್ ನ್ಯೂರೋಪತಿಯ ಲಕ್ಷಣ ಎಂದಿದ್ದಾರೆ.

ಇದನ್ನೂ ಓದಿ: Crime News: ಪುಷ್ಪ ಸಿನಿಮಾ ನೋಡಿ 24 ವರ್ಷದ ಯುವಕನನ್ನ ಕೊಂದ ಅಪ್ರಾಪ್ತರು

ಅಷ್ಟೇ ಅಲ್ಲ ಚಿತ್ರದಲ್ಲಿ ನಾಯಕನ ಭುಜಗಳು ಮೇಲೊಂದು ಕೆಳಗೊಂದು ಇರುತ್ತದೆ. ಅದೂ ಕೂಡ ಸ್ಪೈನಲ್ ಸಮಸ್ಯೆಯಿದೆ. ಈ ಸಹಾಯಕ ನರದ ಗಾಯವು ನಾಯಕನ ಭುಜಗಳಲ್ಲಿ ಒಂದನ್ನು ಇಳಿಮುಖವಾಗುವಂತೆ ಮಾಡಿದೆ ಎಂದಿದ್ದಾರೆ. ತಗ್ಗದೇ ಇಲ್ಲಾ ಡೈಲಾಗ್ ಹೇಳುವಾಗ ಅಲ್ಲು ಮಾಡುವ ಕಚ್ಚುವಂತ ಆ್ಯಕ್ಷನ್ ಫಂಗಸ್ ಇನ್ಫೆಕ್ಶನ್ ಎಂದು ಕಾಲೆಳೆದಿದ್ದಾರೆ.

ಪುಷ್ಪ ಸಿನಿಮಾವು ಹಲವು ತೀವ್ರ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿದ್ದು, ಹೆಲ್ತ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಉತ್ತಮ ಎಂದು ಮೆಮೆ ವಿಡಿಯೋ ಮಾಡಿದ್ದಾರೆ.ವಿಡಿಯೋ ಸಕತ್ ವೈರಲ್ ಆಗ್ತಿದ್ದು ಸಾವಿರಾರು ಲೆಕ್ಸ್, ಕಾಮೆಂಟ್, ಶೇರ್ ಆಗುತ್ತಿದೆ. ಡಾಕ್ಟರ್ ಎಕ್ಸ್ ಟ್ರಾ ಚಟ್ನಿ ಫೇಜ್ ನಲ್ಲಿ ಈಗಾಗ್ಲೆ ಇಂತ ಹಲವಾರು ಮೆಡಿಕಲ್ ಫನ್ ವಿಡಿಯೋಗಳು, ರೀಲ್ಸ್‌ಗಳು ಸದ್ದು ಮಾಡಿವೆ.
Published by:vanithasanjevani vanithasanjevani
First published: