Allu Arjun: ಸಮಂತಾಗಾಗಿ ತನ್ನ ಉದ್ದ ಕೂದಲು ಕಟ್ ಮಾಡಿದ ಅಲ್ಲು ಅರ್ಜುನ್ ಮಗಳು!

Allu Arjun: ಅಲ್ಲು ಅರ್ಜುನ್​(Allu Arjun) ಇಷ್ಟು ವರ್ಷಗಳ ಕಾಲ ಸಿನಿರಸಿಕರನ್ನು ರಂಜಿಸಿಕೊಂಡು ಬಂದಿದ್ದಾರೆ. ಇದೀಗ ಅವರ ಕುಟುಂಬದ ಮತ್ತೊಂದು ಕುಡಿ ಟಾಲಿವುಡ್​ಗೆ ಎಂಟ್ರಿಯಾಗುತ್ತಿದ್ದಾರೆ. ಅದು ಬೇರೆ ಯಾರು ಅಲ್ಲ ಅಲ್ಲು ಅರ್ಜುನ್​ ಪುತ್ರಿ ಅರ್ಹಾ ಅರ್ಜುನ್(Arha Arjun)​.

ಅಲ್ಲು ಅರ್ಜುನ್​ ಹಾಗೂ ಅವರ ಪುತ್ರಿ

ಅಲ್ಲು ಅರ್ಜುನ್​ ಹಾಗೂ ಅವರ ಪುತ್ರಿ

  • Share this:

ಚಲನಚಿತ್ರೋದ್ಯಮದ ಅನೇಕ ನಟ ನಟಿಯರು ತಮ್ಮ ಚಿತ್ರದಲ್ಲಿನ ಪಾತ್ರಕ್ಕೆ(Character in the Movie) ಸರಿ ಹೊಂದುವಂತೆ ತಮ್ಮ ದೇಹದ ತೂಕ(Body weight) ಕಡಿಮೆ ಮಾಡಿಕೊಳ್ಳುವುದು, ಹೆಚ್ಚು ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಜೊತೆಗೆ ತಮ್ಮ ಕೂದಲ(Hairs)ನ್ನು ಕತ್ತರಿಸಿಕೊಳ್ಳುವುದು ಎಲ್ಲವನ್ನೂ ನಾವು ನೋಡಿದ್ದೇವೆ. ಆದರೆ ನಾವು ಹಿಂದಿನಿಂದಲೂ ಈ ಸ್ಟಾರ್ ನಟ ನಟಿಯರ ಮಕ್ಕಳು(Children of Star Actor, Actresses) ಚಲನಚಿತ್ರದಲ್ಲಿ ಪುಟ್ಟ ಮಕ್ಕಳ ಪಾತ್ರದಲ್ಲಿ ಅಭಿನಯಿಸಿದಾಗ ಅವರು ಸಾಮಾನ್ಯವಾಗಿ ಹೇಗಿರುತ್ತಿದ್ದರೋ ಹಾಗೆಯೇ ಅಭಿನಯ ಮಾಡುತ್ತಿದ್ದರು. ಆದರೆ ಇತ್ತೀಚಿನ ಸ್ಟಾರ್ ಮಕ್ಕಳು ಸಹ ಅಭಿನಯಕ್ಕಾಗಿ ತಮ್ಮ ಕೂದಲನ್ನು ಕತ್ತರಿಸಿಕೊಳ್ಳುತ್ತಿದ್ದಾರೆ. ಪಾತ್ರಕ್ಕೆ ಸರಿ ಹೊಂದುವಂತೆ ತಮ್ಮನ್ನು ತಾವು ತಯಾರು ಮಾಡಿಕೊಳ್ಳುವುದನ್ನು ಇತ್ತೀಚಿನ ಟ್ರೆಂಡ್(Trend) ಆಗಿದೆ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಟಾಲಿವುಡ್(Tollywood)​ನ ಸ್ಟಾರ್​ ನಟ ಅಲ್ಲು ಅರ್ಜುನ್​(Allu Arjun) ಇಷ್ಟು ವರ್ಷಗಳ ಕಾಲ ಸಿನಿರಸಿಕರನ್ನು ರಂಜಿಸಿಕೊಂಡು ಬಂದಿದ್ದಾರೆ. ಇದೀಗ ಅವರ ಕುಟುಂಬದ ಮತ್ತೊಂದು ಕುಡಿ ಟಾಲಿವುಡ್​ಗೆ ಎಂಟ್ರಿಯಾಗುತ್ತಿದ್ದಾರೆ. ಅದು ಬೇರೆ ಯಾರು ಅಲ್ಲ ಅಲ್ಲು ಅರ್ಜುನ್​ ಪುತ್ರಿ ಅರ್ಹಾ ಅರ್ಜುನ್(Arha Arjun)​. 


ಟಾಲಿವುಡ್​ಗೆ ಎಂಟ್ರಿಯಾಗುತ್ತಿದ್ದಾರೆ ಅರ್ಹಾ ಅರ್ಜುನ್​!

ಟಾಲಿವುಡ್ ಜನಪ್ರಿಯ ನಟರಾದ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದು, ಮೊದಲ ಚಿತ್ರದಲ್ಲಿಯೇ ಸ್ಟಾರ್ ನಟಿ ಸಮಂತಾ ಅವರೊಡನೆ ನಟಿಸಲಿದ್ದಾರೆ. ಇವರ ಮುಂಬರುವ ಚಿತ್ರ ‘ಶಕುಂತಲಂ’ ಮೂಲಕ ದೊಡ್ಡ ಪರದೆಯ ನಟನೆಗೆ ಅಲ್ಲು ಅರ್ಜುನ್ ಪುಟ್ಟ ಮಗಳು ಪದಾರ್ಪಣೆ ಮಾಡುತ್ತಿದ್ದಾರೆ. ನಿನ್ನೆ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ, ಗುಣಶೇಖರ್ ನಿರ್ದೇಶನದ ಚಿತ್ರದಲ್ಲಿ ರಾಜಕುಮಾರ ಭರತನ ಪಾತ್ರದಲ್ಲಿ ನಟಿಸಲು ತಮ್ಮ ಮಗಳು ತನ್ನ ಉದ್ದನೆಯ ಕೂದಲನ್ನು ಕತ್ತರಿಸಿಕೊಂಡ ಒಂದು ವಿಡಿಯೋವನ್ನು ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ನೀವು ನೋಡಿರದ ಸೌತ್​ ಇಂಡಿಯನ್ ನಟಿಯರ ಬ್ಯಾಲದ ಫೋಟೋಗಳು ಇಲ್ಲಿವೆ..

ಪಾತ್ರಕ್ಕಾಗಿ ಕೂದಲು ಕತ್ತರಿಸಿದ ಅಲ್ಲು ಅರ್ಜುನ್​ ಮಗಳು!

ಈ 12 ಸೆಕೆಂಡಿನ ಒಂದು ಚಿಕ್ಕ ವಿಡಿಯೋ ತುಣುಕಿನಲ್ಲಿ ಪುಟ್ಟ ಮಗಳು ತನ್ನ ನಟನೆಯ ಚೊಚ್ಚಲ ಚಿತ್ರಕ್ಕಾಗಿ ಚೆನ್ನಾಗಿ ಸಿದ್ಧಳಾಗಿದ್ದಾಳೆ. ಅರ್ಹಾ ಚೊಚ್ಚಲ ಚಿತ್ರವು ಅಲ್ಲು ಕುಟುಂಬದಿಂದ ನಾಲ್ಕನೇ ತಲೆಮಾರಿನವರು ಭಾರತೀಯ ಚಿತ್ರರಂಗಕ್ಕೆ ಪ್ರವೇಶ ಮಾಡಿದಂತಾಗುತ್ತದೆ. ಇದಕ್ಕೂ ಮುನ್ನ, ಸಮಂತಾರೊಂದಿಗೆ ತಮ್ಮ ಮಗಳ ಮುಂಬರುವ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಲ್ಲು ಅರ್ಜುನ್​ ಬರೆದುಕೊಂಡಿದ್ದರು. ‘ನಮ್ಮ ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಶಕುಂತಲಂ ಚಲನಚಿತ್ರದೊಂದಿಗೆ ಪದಾರ್ಪಣೆ ಮಾಡಲಿದ್ದಾರೆ ಎಂದು ಘೋಷಿಸಲು ಅಲ್ಲು ಕುಟುಂಬಕ್ಕೆ ಹೆಮ್ಮೆಯ ವಿಷಯವಾಗಿದೆ’ ಎಂದು ಹಂಚಿಕೊಂಡಿದ್ದರು.


ಇದನ್ನು ಓದಿ : ನೀವು ಧಾರಾವಾಹಿಗಳಲ್ಲಿ ಆಕ್ಟ್​ ಮಾಡಬೇಕಾ? ಕಲಾವಿದರಿಗೆ ಇಲ್ಲಿದೆ ಸುವರ್ಣ ಅವಕಾಶ!

ಚಿತ್ರತಂಡಕ್ಕೆ ಶುಭ ಕೋರಿದ ಅಲ್ಲು ಅರ್ಜುನ್​

‘ನಾನು ಸಮಂತಾ ಅವರೊಂದಿಗೆ ಸಂಪೂರ್ಣವಾಗಿ ವಿಭಿನ್ನವಾದ ಸಿನಿ ಪ್ರಯಾಣ ಹೊಂದಿದ್ದೆ ಮತ್ತು ಈಗ ಅರ್ಹಾ ಅವರ ಚಲನಚಿತ್ರದೊಂದಿಗೆ ಪದಾರ್ಪಣೆ ಮಾಡುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ. ಈ ಚಿತ್ರದ ಇಡೀ ಪಾತ್ರವರ್ಗ ಮತ್ತು ತಂಡಕ್ಕೆ ನನ್ನ ಶುಭಾಶಯಗಳು" ಎಂದು ಹೇಳಿದ್ದಾರೆ. 4 ವರ್ಷದ ಮಗು ಪ್ರಮುಖ ನಟರಾದ ಸಮಂತಾ ಹಾಗೂ ದೇವ್ ಮೋಹನ್‌ರೊಂದಿಗೆ ಪರದೆ ಹಂಚಿಕೊಳ್ಳಲಿದ್ದು, ಸಮಂತಾ ಶಕುಂತಲೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ದೇವ್‌ ಮೋಹನ್ ದುಷ್ಯಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Published by:Vasudeva M
First published: