Allu Arjun-Mahesh Babu: ಅಲ್ಲು ಸ್ಟೇಜ್ ಹತ್ತಿದಾಗ ಇಳಿದು ಹೋದ ಮಹೇಜ್ ಬಾಬು! ಇದೇನಾಯ್ತು?

ಅಲ್ಲು ಅರ್ಜುನ್ ಅವರು ಮಹೇಶ್ ಅವರಿದ್ದ ವೇದಿಕೆಯಲ್ಲೇ ತಾವು ಬಂದು ಅವರೊಂದಿಗೆ ಕೈಕುಲುಕುವಾಗ ಸ್ವಲ್ಪ ಮುಜುಗರಕ್ಕೊಳಗಾಗಿದ್ದನ್ನು ಗಮನಿಸಬಹುದಾಗಿತ್ತು.

ಅಲ್ಲು ಅರ್ಜುನ್ ಅವರು ಮಹೇಶ್ ಅವರಿದ್ದ ವೇದಿಕೆಯಲ್ಲೇ ತಾವು ಬಂದು ಅವರೊಂದಿಗೆ ಕೈಕುಲುಕುವಾಗ ಸ್ವಲ್ಪ ಮುಜುಗರಕ್ಕೊಳಗಾಗಿದ್ದನ್ನು ಗಮನಿಸಬಹುದಾಗಿತ್ತು.

ಅಲ್ಲು ಅರ್ಜುನ್ ಅವರು ಮಹೇಶ್ ಅವರಿದ್ದ ವೇದಿಕೆಯಲ್ಲೇ ತಾವು ಬಂದು ಅವರೊಂದಿಗೆ ಕೈಕುಲುಕುವಾಗ ಸ್ವಲ್ಪ ಮುಜುಗರಕ್ಕೊಳಗಾಗಿದ್ದನ್ನು ಗಮನಿಸಬಹುದಾಗಿತ್ತು.

  • Trending Desk
  • 4-MIN READ
  • Last Updated :
  • Bangalore, India
  • Share this:

ಈಗ ತೆಲುಗು ಚಿತ್ರರಂಗ (Tollywood) ದೇಶಾದ್ಯಂತ ಹೆಚ್ಚು ಸದ್ದು ಮಾಡುತ್ತಿದೆ ಎಂದರೆ ತಪ್ಪಿಲ್ಲ. ಕಳೆದ ಕೆಲ ವರ್ಷಗಳಿಂದ ಅತಿರಥ ಮಹಾರಥರ ದಿಗ್ಗಜ ಚಿತ್ರಗಳು ಇಡೀ ದೇಶವನ್ನೇ ತೆಲುಗು ಚಿತ್ರರಂಗದತ್ತ ನೋಡುವಂತೆ ಮಾಡಿದೆ. ಅಷ್ಟೇ ಅಲ್ಲದೆ, ಈ ಚಿತ್ರರಂಗದ ಹಲವು ಖ್ಯಾತನಾಮ ನಟರು ಈಗ ಕೇವಲ ತೆಲುಗು ಪ್ರದೇಶಗಳಿಗೆ ಮಾತ್ರವೇ ಸೀಮಿತವಾಗಿರದೆ ದೇಶಾದ್ಯಂತ ಪ್ರಸಿದ್ಧರಾಗಿದ್ದಾರೆ ಎಂದರೆ ತಪ್ಪಾಗಲಾರದು. ಅಂತಹ ನಟರ ಪಟ್ಟಿಯಲ್ಲಿ ಮಹೇಶ್ ಬಾಬು (Mahesh Babu) ಹಾಗೂ ಅಲ್ಲು ಅರ್ಜುನ್ (Allu Arjun) ಇಬ್ಬರೂ ಸೇರುತ್ತಾರೆ. ಸುದ್ದಿ ಏನಪ್ಪಾ ಅಂದರೆ ಮದುವೆ ಆರತಕ್ಷತೆಯ ಸಮಾರಂಭವೊಂದರಲ್ಲಿ ಈ ಇಬ್ಬರೂ ತಾರಾ ನಟರು ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದು ಅದರಲ್ಲಿ ಅಲ್ಲು ಅರ್ಜುನ್ ಸ್ವಲ್ಪ ಮುಜುಗರ ಅನುಭವಿಸಿದ್ದಂತಹ ದೃಶ್ಯಗಳು ಬೆಳಕಿಗೆ ಬಂದಿವೆ.


ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಗುಣಶೇಖರ ಅವರ ಮಗಳ ಮದುವೆಯ ಆರತಕ್ಷತೆಯ ಸಮಾರಂಭವು ಎನ್.ಕನ್ವೆನ್ಷನ್ ಹಾಲ್ ನಲ್ಲಿ ನಡೆದಿತ್ತು.




ನೂತನ ವಧು-ವರರನ್ನು ಹಾರೈಸಿ ಆಶೀರ್ವದಿಸಲು ಸಾಕಷ್ಟು ಗಣ್ಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ಪ್ರಿನ್ಸ್ ಎಂದೇ ಖ್ಯಾತರಾದ ಮಹೇಶ್ ಬಾಬು ಅವರು ಮೆಹೆರ್ ರಮೇಶ್ ಹಾಗೂ ಇತರೆ ಕೆಲ ವ್ಯಕ್ತಿಗಳೊಡಗೂಡಿ ಸಮಾರಂಭಕ್ಕೆ ಆಗಮಿಸಿ ವಧು-ವರರರೊಂದಿಗೆ ಸಂಭಾಷಣೆ ನಡೆಸುತ್ತಿದ್ದರು.


ಇದೇ ಸಂದರ್ಭದಲ್ಲಿ ಚಿತ್ರರಂಗದ ಇನ್ನೊಬ್ಬ ಖ್ಯಾತ ತಾರೆಯಾದ ಅಲ್ಲು ಅರ್ಜುನ್ ಅವರೂ ಸಹ ಪ್ರವೇಶಿಸುತ್ತಾರೆ. ಬನ್ನಿ ಎಂತಲೇ ಪ್ರೀತಿಯಿಂದ ಕರೆಯಲ್ಪಡುವ ಅಲ್ಲು ಅರ್ಜುನ್ ಜೊತೆ ಅವರ ವೈಯಕ್ತಿಕ ತಂಡವೊಂದು ಬಂದಿತ್ತು. ಹೀಗೆ ಸಮಾರಂಭಕ್ಕೆ ಆಗಮಿಸಿದ ನಟ ಅವರು ಸ್ವಲ್ಪ ಕಾಲ ಕುಳಿತು ತದನಂತರ ಎದ್ದು ವಧು-ವರರಿದ್ದೆಡೆ ಅವರಿಗೆ ಶುಭ ಹಾರೈಸಲು ತೆರಳಿದರು.


ವೇದಿಕೆಯಲ್ಲಿ ಮುಖಾಮುಖಿ


ಈ ಮಧ್ಯೆ ಅಲ್ಲು ಅವರಿಗೆ ಅದೇ ವೇದಿಕೆಯ ಮೇಲೆ ಮಹೇಶ್ ಬಾಬು ಸಹ ನಿಂತಿರುವ ಬಗ್ಗೆ ಗೊತ್ತಾಗಿರಲಿಲ್ಲ. ಆದರೆ ಕೊನೆ ಘಳಿಗೆಯಲ್ಲಿ ಇಬ್ಬರು ಘಟಾನುಘಟಿ ನಟರು ಒಬ್ಬರಿಗೊಬ್ಬರು ಎದುರಾಗುವ ಪ್ರಸಂಗ ಬಂದಿತು. ಆದರೆ, ಇಬ್ಬರೂ ಒಬ್ಬರಿಗೊಬ್ಬರು ನೋಡುತ್ತ ಮುಗುಳ್ನಗೆಯೊಂದಿಗೆ ಹ್ಯಾಂಡ್​ಶೇಖ್ ಮಾಡಿಕೊಂಡರು.


ಈ ಒಟ್ಟಾರೆ ಘಟನೆಯಲ್ಲಿ ಅಲ್ಲು ಅರ್ಜುನ್ ಅವರು ಮಹೇಶ್ ಅವರಿದ್ದ ವೇದಿಕೆಯಲ್ಲೇ ತಾವು ಬಂದು ಅವರೊಂದಿಗೆ ಕೈಕುಲುಕುವಾಗ ಸ್ವಲ್ಪ ಮುಜುಗರಕ್ಕೊಳಗಾಗಿದ್ದನ್ನು ಗಮನಿಸಬಹುದಾಗಿತ್ತು.


ಇದನ್ನೂ ಓದಿ: Celebrity Bridal Look: 2022ರಲ್ಲಿ ನಟಿಯರ ಬೆಸ್ಟ್ ಬ್ರೈಡಲ್ ಲುಕ್!


ತದನಂತರ ಅಲ್ಲು ಅರ್ಜುನ್ ವಧು-ವರರಿಗೆ ಶುಭ ಹಾರೈಸಿ ವೇದಿಕೆಯಿಂದ ನಿರ್ಗಮಿಸಿದರು. ಇತ್ತ ವಧು-ವರರೊಂದಿಗೆ ಸ್ವಲ್ಪ ಕಾಲ ಮಾತುಕತೆ ಮುಂದುವರೆಸಿದ ಮಹೇಶ್ ಬಾಬು ಸ್ವಲ್ಪ ಸಮಯದ ನಂತರ ವೇದಿಕೆಯಿಂದ ನಿರ್ಗಮಿಸಿದರು.


ಸಾಮಾನ್ಯವಾಗಿ ದಿಗ್ಗಜ ನಟರು ಸಂಧಿಸುವಾಗ ಅಥವಾ ಯಾವುದೇ ಸಮಾರಂಭಕ್ಕೆ ತೆರಳುವಾಗ ಅವರ ಭೇಟಿಯನ್ನು ಪ್ಲಾನ್ ಮಾಡಲಾಗುತ್ತದೆ.




ಹಾಗೂ ಯಾವುದೇ ಯೋಜನೆಯಿಲ್ಲದೆ ದಿಗ್ಗಜ ನಟರಿಬ್ಬರು ಒಂದೇ ವೇದಿಕೆ ಮೇಲೆ ಬರುವುದು ಬಲು ಅಪರೂಪ. ಆದರೆ, ಈ ಸಂದರ್ಭದಲ್ಲಿ ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ಯಾವುದೇ ಪೂರ್ವನಿಯೋಜಿತ ಪ್ಲ್ಯಾನ್ ಇಲ್ಲದೆ ಅನಿರೀಕ್ಷಿತವಾಗಿ ಭೇಟಿಯಾಗಿದ್ದು ಇಬ್ಬರ ಅಭಿಮಾನಿಗಳಿಗೂ ಅಪರೂಪದ ಕ್ಷಣ ಎಂದೇ ಹೇಳಬಹುದು.


ಈ ಇಬ್ಬರೂ ನಟರಿಗೂ ಅಪಾರ ಅಭಿಮಾನಿ ಬಳಗವಿದೆ. ಈ ಅನಿರೀಕ್ಷಿತವಾಗಿ ಒದಗಿಬಂದ ಘಳಿಗೆಯನ್ನು ಅವರಿಬ್ಬರು ನಿಭಾಯಿಸಿದ ರೀತಿ ನಿಜಕ್ಕೂ ಪ್ರಶಂಸನೀಯ ಎಂದೆ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಇಬ್ಬರು ದಿಗ್ಗಜ ನಟರು ಒಂದೇ ವೇದಿಕೆ ಮೇಲೆ ಉಪಸ್ಥಿತವಿರುವುದಲ್ಲದೆ ಅಭಿಮಾನಿಗಳಿಗೆ, ಮಾಧ್ಯಮದವರಿಗೆ ಫೋಟೊ ಕ್ಲಿಕ್ಕಿಸಲು ಪೋಸ್ ನೀಡಿದ್ದು ಅಭಿಮಾನಿ ಬಳಗಕ್ಕೆ ತುಂಬು ಉತ್ಸಾಹ ತುಂಬಿದಂತಾಗಿದೆ.

Published by:Divya D
First published: