Allu Arjun: ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ನಟ ಅಲ್ಲು ಅರ್ಜುನ್ ಗೆ ಲೀಗಲ್ ನೋಟಿಸ್

Rapido Controversy of Allu Arjun: ಯೂಟ್ಯೂಬ್‌ನಲ್ಲಿ ಪ್ರಸಾರವಾಗಿರುವ ಜಾಹೀರಾತಿನಲ್ಲಿ, ಆರ್‌ಟಿಸಿ ಬಸ್ಸುಗಳು ಸಾಮಾನ್ಯ ದೋಸೆಗಳಂತೆ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಮತ್ತು ರ‍್ಯಾಪಿಡೋ ಎಷ್ಟು ವೇಗವಾಗಿ ಮತ್ತು ಸುರಕ್ಷಿತವಾಗಿರುತ್ತದೆ ಎಂದರೆ ಅದೇ ಸಮಯದಲ್ಲಿ ಮಸಾಲೆ ದೋಸೆಯನ್ನು ತಯಾರಿಸುತ್ತದೆ ಎಂದು ನಟ ಜನರಿಗೆ ಹೇಳುವುದನ್ನು ಇದರಲ್ಲಿ ಕಾಣಬಹುದು.

ನಟ ಅಲ್ಲು ಅರ್ಜುನ್

ನಟ ಅಲ್ಲು ಅರ್ಜುನ್

  • Share this:
Stylist Star Allu Arjun: ಈಗಾಗಲೇ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಂತರ, ತೆಲುಗು ಚಿತ್ರರಂಗದ ನಟ ಅಲ್ಲು ಅರ್ಜುನ್ ಅವರನ್ನು ರ‍್ಯಾಪಿಡೋದ ರಾಯಭಾರಿಯಾಗಿ (Brand Ambassador for Rapido) ಮಾಡಿದ್ದು, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಮತ್ತು ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರ ಕಂಪೆನಿ ಎಂದು ನಮ್ಮೆಲ್ಲರಿಗೂ ತಿಳಿದಂತಹ ವಿಷಯವಾಗಿದೆ. ಈ ಹೊಸದಾಗಿ ರ‍್ಯಾಪಿಡೋದ ರಾಯಭಾರಿಯಾಗಿ ಆದ ನಂತರ ಕಂಪೆನಿಯ ಜಾಹೀರಾತನ್ನು (Advertisement) ಇತ್ತೀಚೆಗೆ ಬಿಡುಗಡೆ ಮಾಡಲಾಯಿತು ಮತ್ತು ಇದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ (Trending) ಆಗಿದೆ.ಆದರೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) (TSRTC) ಜಾಹೀರಾತಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಮತ್ತು ಸಂಸ್ಥೆಗೆ ಹಾಗೂ ನಟ ಅಲ್ಲು ಅರ್ಜುನ್ ಗೆ ಕಾನೂನು ನೋಟಿಸ್ (Legal Notice) ಕಳುಹಿಸಲು ನಿರ್ಧರಿಸಿದೆ. ಏಕೆ ಅಂತಹದ್ದೇನು ಇದೆ ಆ ಜಾಹೀರಾತಿನಲ್ಲಿ, ರ‍್ಯಾಪಿಡೋ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೂ ಏನು ಸಂಬಂಧ ಅಂತೀರಾ. ಇದನ್ನು ಒಮ್ಮೆ ಪೂರ್ತಿಯಾಗಿ ಓದಿ ನಿಮಗೆ ಅರ್ಥವಾಗುತ್ತದೆ.

ಟಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಸಜ್ಜನರ್ ಮಾಹಿತಿ

"ಟಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಸಿ. ಸಜ್ಜನರ್, ಟಾಲಿವುಡ್ ನಟ ಅಲ್ಲು ಅರ್ಜುನ್ ಅವರನ್ನು ಒಳಗೊಂಡ ರ‍್ಯಾಪಿಡೋ ಜಾಹೀರಾತನ್ನು ಗಂಭೀರವಾಗಿ ಆಕ್ಷೇಪಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಪ್ರಸಾರವಾಗಿರುವ ಜಾಹೀರಾತಿನಲ್ಲಿ, ಆರ್‌ಟಿಸಿ ಬಸ್ಸುಗಳು ಸಾಮಾನ್ಯ ದೋಸೆಗಳಂತೆ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ ಮತ್ತು ರ‍್ಯಾಪಿಡೋ ಎಷ್ಟು ವೇಗವಾಗಿ ಮತ್ತು ಸುರಕ್ಷಿತವಾಗಿರುತ್ತದೆ ಎಂದರೆ ಅದೇ ಸಮಯದಲ್ಲಿ ಮಸಾಲೆ ದೋಸೆಯನ್ನು ತಯಾರಿಸುತ್ತದೆ ಎಂದು ನಟ ಜನರಿಗೆ ಹೇಳುವುದನ್ನು ಇದರಲ್ಲಿ ಕಾಣಬಹುದು.

ಜಾಹೀರಾತಿನಿಂದ ಟೀಕೆ

ಈ ಜಾಹೀರಾತು ಆರ್‌ಟಿಸಿ ಪ್ರಯಾಣಿಕರು, ಅಭಿಮಾನಿಗಳು ಮತ್ತು ನಮ್ಮ ಪ್ರಸ್ತುತ ಹಾಗೂ ನಿವೃತ್ತ ಉದ್ಯೋಗಿಗಳು ಸೇರಿದಂತೆ ಹಲವಾರು ಜನರಿಂದ ಟೀಕೆಗೆ ಗುರಿಯಾಗಿದೆ. ರ‍್ಯಾಪಿಡೋ ಸೇವೆಗೆ ಹೋಲಿಸಿದರೆ ಆರ್‌ಟಿಸಿ ಬಸ್ ಅನ್ನು ತೋರಿಸಿರುವ ನಕರಾತ್ಮಕ ವಿಧಾನವನ್ನು ಅವರು ಖಂಡಿಸುತ್ತಿದ್ದಾರೆ. ಟಿಎಸ್‌ಆರ್‌ಟಿಸಿಯನ್ನು ಅಪಮಾನಗೊಳಿಸುವವರನ್ನು ಆಡಳಿತ ಮಂಡಳಿಯಾಗಲಿ ಅಥವಾ ಪ್ರಯಾಣಿಕರು, ಅಭಿಮಾನಿಗಳು ಮತ್ತು ನಮ್ಮ ಪ್ರಸ್ತುತ ಹಾಗೂ ನಿವೃತ್ತ ಉದ್ಯೋಗಿಗಳು ಸಹಿಸುವುದಿಲ್ಲ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Pushpa Release: ಮತ್ತೆ 'ಪುಷ್ಪ' ರಿಲೀಸ್ ಡೇಟ್ ಚೇಂಜ್? ಮೆಗಾಸ್ಟಾರ್ ಗಾಗಿ ಮುಂದಕ್ಕೆ ಹೋಗ್ತಾರಾ Allu Arjun?

ಸಾಮಾನ್ಯ ಜನರ ಸೇವೆಯಲ್ಲಿದೆ ಟಿಎಸ್​ಆರ್​ಟಿಸಿ

ಟಿಎಸ್‌ಆರ್‌ಟಿಸಿ ಸಾಮಾನ್ಯ ಜನರ ಸೇವೆಯಲ್ಲಿದೆ ಮತ್ತು ಅದು ನಟನಿಗೆ ಹಾಗೂ ಜಾಹೀರಾತನ್ನು ಪ್ರಚಾರ ಮಾಡುತ್ತಿರುವ ಸಂಸ್ಥೆಗೆ ಕಾನೂನು ನೋಟಿಸ್ ಕಳುಹಿಸುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಅಂದ್ಹಾಗೆ ಇಷ್ಟೆಲ್ಲಾ ರಗಳೆ ಎಬ್ಬಿಸಿರುವ ಆ ಜಾಹೀರಾತಿನ ವಿಡಿಯೋ ನೋಡಿ:



ಇದಲ್ಲದೆ, ಸಾರ್ವಜನಿಕ ಸಾರಿಗೆ ಮತ್ತು ಸಾರ್ವಜನಿಕ ಒಳಿತಿಗೆ ಹಾನಿಕಾರಕವಾದ ವಿಷಯ ಉತ್ತೇಜಿಸುವುದನ್ನು ನಿಲ್ಲಿಸುವಂತೆ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಸ್ಥಿತಿಯಲ್ಲಿರುವ ಎಲ್ಲಾ ನಟರು, ಸೆಲೆಬ್ರಿಟಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ವ್ಯವಸ್ಥಾಪಕ ನಿರ್ದೇಶಕರು ವಿನಂತಿಸಿದ್ದಾರೆ.

ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಅಲ್ಲು ಅರ್ಜುನ್

ರ‍್ಯಾಪಿಡೋ ಕಂಪೆನಿ ಅಥವಾ ನಟ ಅಲ್ಲು ಅರ್ಜುನ್ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನಾವು ನೋಡಬೇಕಿದೆ. ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರ ಪುಷ್ಪಾ ಆಗಿದ್ದು, ಸದ್ಯ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
Published by:Soumya KN
First published: