ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ಪುಷ್ಪ: ದಿ ರೈಸ್' ಚಿತ್ರ (Pushpa The Rise Movie) 2021 ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದೆ. ಇದೀಗ ಪುಷ್ಪ 2 ಸಿನಿಮಾ ಸಿದ್ಧವಾಗ್ತಿದ್ದು, ಪುಷ್ಪ 2 ಸಿನಿಮಾಗಾಗಿ ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಇದೀಗ ಪುಷ್ಪ 2 ಟೀಸರ್ ರಿಲೀಸ್ ಮಾಡಿದೆ. ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಟೀಸರ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ತಿರುಪತಿ ಜೈಲಿನಿಂದ 'ಪುಷ್ಪ' ಪರಾರಿಯಾಗಿದ್ದು, ಇದೀಗ ಪುಷ್ಪ ಟೀಸರ್ನಲ್ಲಿ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಪುಟ್ಟ ಡೈಲಾಗ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಪುಷ್ಪ ಟೀಸರ್ನಲ್ಲಿ ಏನಿದೆ?
ತಿರುಪತಿ ಜೈಲಿನಿಂದ ಪುಷ್ಪ (Pushpa) ತಪ್ಪಿಸಿಕೊಂಡಿದ್ದಾನೆ. ತಪ್ಪಿಸಿಕೊಳ್ಳುವಾಗ ಪೊಲೀಸರು ಪುಷ್ಪ ಮೇಲೆ ಹತ್ತು ಸುತ್ತು ಗುಂಡು ಹಾರಿಸಿದ್ದು, ಪುಷ್ಪ ಶವವನ್ನು ಹುಡುಕಲು ದೊಡ್ಡ ಪೊಲೀಸ್ ಪಡೆ ತಮ್ಮ ನಾಯಿಗಳೊಟ್ಟಿಗೆ ಶೇಷಾಚಲಂ ಕಾಡಿಗೆ ಹೋಗಿದ್ದಾರೆ. ಪುಷ್ಪ ಅನೇಕರಿಗೆ ಸಹಾಯ ಮಾಡಿದ್ದಾನೆ. ಪುಷ್ಪ ಪರ ನಿಂತ ಜನರು ಪುಷ್ಪನ ವಿರುದ್ಧ ಫೈರಿಂಗ್ ಮಾಡಿದ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಪುಷ್ಪ ಬದುಕಿದ್ದಾನಾ? ಅಥವಾ ಸತ್ತಿದ್ದಾನಾ?
ಇನ್ನೊಂದೆಡೆ ಪುಷ್ಪ ಬದುಕಿದ್ದಾನೋ ಅಥವಾ ಸತ್ತಿದ್ದಾನೋ ಎಂಬ ಸುದ್ದಿ ಟಿವಿಯಲ್ಲಿ ಪ್ರಸಾರವಾಗುತ್ತೆ. ಜನರು ಕೂಡ ಗಾಬರಿಯಿಂದ ನೋಡುತ್ತಾರೆ. ಎಲ್ಲರಲ್ಲೂ ಒಂದೇ ಪ್ರಶ್ನೆ ಕಾಡುತ್ತೆ. ಪುಷ್ಪ ಬದುಕಿದ್ದಾನಾ? ಪುಷ್ಪ ಎಲ್ಲಿದ್ದಾನೆ? ಎಂದು ಬಳಿಕ ಟಿವಿಯಲ್ಲಿ ಸುದ್ದಿ ನೋಡಿ ಜನರು ಅಚ್ಚರಿಪಡುತ್ತಾರೆ.
ಟೀಸರ್ನಲ್ಲಿ ಪುಷ್ಪ ಎಂಟ್ರಿ ಸೂಪರ್
ಟಿವಿಯಲ್ಲಿ ವಿಡಿಯೋ ಪ್ಲೇ ಮಾಡುತ್ತಾರೆ. ಪೊಲೀಸರ ಹುಡುಕಾಟ ನಡುವೆ ಕಾಡಲ್ಲಿ ಹುಲಿಯ ಎಂಟ್ರಿ ಆಗುತ್ತೆ. ಹುಲಿ ಓರ್ವನನ್ನು ನೋಡಿ ಹೆದರಿ ನಿಲ್ಲುತ್ತದೆ. ಅದು ಯಾರು ಎಂದು ನೋಡುವಾಗಲೇ ಕಾಡಲ್ಲಿ ಇತರ ಪ್ರಾಣಿಗಳು ಹೆದರುತ್ತೆ ಅಂದ್ರೆ ಅಲ್ಲಿ ಹುಲಿ ಬಂದಿದೆ ಎಂದು ಅರ್ಥ ಆದ್ರೆ ಹುಲಿ ಹೆದರಿ ಹಿಂದೆ ಹೋಗ್ತಿದೆ ಅಂದ್ರೆ ಅಲ್ಲಿ ಪುಷ್ಪ ಬಂದಿದ್ದಾನೆ ಎನ್ನುತ್ತಾ ಅಲ್ಲು ಅರ್ಜುನ್ ಎಂಟ್ರಿ ಆಗ್ತಾರೆ.
ಟೀಸರ್ನಲ್ಲಿ ಸಿನಿಮಾ ಝಲಕ್
ಟೀಸರ್ನಲ್ಲಿ ಪುಷ್ಪ ಸಿನಿಮಾದ ಕತೆಯ ಬಗ್ಗೆ ಕೆಲವು ಸುಳಿವುಗಳನ್ನು ಬಿಟ್ಟುಕೊಡಲಾಗಿದೆ. ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ಅಲ್ಲು ಅರ್ಜುನ್ರ ಪುಷ್ಪ ಪಾತ್ರದ ಹೊರತಾಗಿ ಇನ್ನಾವ ಪಾತ್ರದ ಪರಿಚಯವೂ ಇಲ್ಲ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಅವರುಗಳು ಟೀಸರ್ನಲ್ಲಿ ಕಾಣಿಸಿಕೊಂಡಿಲ್ಲ.
ವಿಶ್ವ ಮಟ್ಟದಲ್ಲಿ ರಿಲೀಸ್ಗೆ ಪ್ಲಾನ್
ಪುಷ್ಪ ದಿ ರೂಲ್ ಸಿನಿಮಾ ಬಜೆಟ್ ಕೂಡ ಹೆಚ್ಚಾಗಿದ್ದು, ಪ್ಯಾನ್ ವಲ್ಡ್ ಮೂವಿ ಆಗಿ ಸಿನಿಮಾ ತೆರೆಮೇಲೆ ಬರಲು ಸಿದ್ಧವಾಗ್ತಿದೆ. ನಿರ್ದೇಶಕ ಸುಕುಮಾರ್ ಪುಷ್ಪ 2 ಸಿನಿಮಾವನ್ನು ವಿಶ್ವ ಮಟ್ಟದಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ.
ಬ್ಯಾಂಕಾಕ್ನಲ್ಲಿ ಭರ್ಜರಿ ಶೂಟಿಂಗ್
ಜನವರಿ 2ನೇ ವಾರದಿಂದ ಪುಷ್ಪ 2 ಚಿತ್ರೀಕರಣ ಆರಂಭವಾಗಲಿದೆ. ಬ್ಯಾಂಕಾಕ್ ಬೃಹತ್ ಸೆಟ್ಗಳಲ್ಲಿ ಶೂಟಿಂಗ್ ನಡೆದಿತ್ತು. ಅಲ್ಲೇ ಸುಮಾರು 30 ದಿನಗಳ ಕಾಲ ಶೂಟಿಂಗ್ ನಡೆದಿದೆ. ಈ 30 ದಿನಗಳಲ್ಲಿ ಶೇ.40 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಫಹದ್ ಫಾಸಿಲ್ ವಿಲನ್ ಆಗಿ ನಟಿಸುತ್ತಿದ್ದರೆ. ಸಿನಿಮಾಗೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಅದ್ಧೂರಿ ತಾರಾಗಣದೊಂದಿಗೆ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಥ್ರಿಲ್ ಮಾಡಲು ಸುಕುಮಾರ್ ಈ ಚಿತ್ರವನ್ನು ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಬಹುತಾರಾಗಣವಿದೆ ಹಿರಿಯ ನಾಯಕ ಜಗಪತಿ ಬಾಬು ಅವರು ಕೂಡ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ