• Home
 • »
 • News
 • »
 • entertainment
 • »
 • Pushpa: 2022ರಲ್ಲಿ ಜನ ಹೆಚ್ಚು ನೋಡಿದ್ದೇ ಸಮಂತಾರ ಊ ಅಂಟಾವಾ ಸಾಂಗ್! ಪುಷ್ಪ ಹಾಡುಗಳೇ ಫೇವರಿಟ್ ಅಂತೆ

Pushpa: 2022ರಲ್ಲಿ ಜನ ಹೆಚ್ಚು ನೋಡಿದ್ದೇ ಸಮಂತಾರ ಊ ಅಂಟಾವಾ ಸಾಂಗ್! ಪುಷ್ಪ ಹಾಡುಗಳೇ ಫೇವರಿಟ್ ಅಂತೆ

ಸಮಂತಾ

ಸಮಂತಾ

ಯೂಟ್ಯೂಬ್ ತನ್ನ ವರ್ಷಾಂತ್ಯದ ಪಟ್ಟಿ ಬಿಡುಗಡೆ ಮಾಡಿದೆ. ಪುಷ್ಪಾ ಹಾಡುಗಳ ಮ್ಯೂಸಿಕ್ ವೀಡಿಯೋಗಳು ಈ ಚಾರ್ಟ್ ನಲ್ಲಿ ಸಂಪೂರ್ಣವಾಗಿ ತನ್ನ ಪ್ರಾಬಲ್ಯವನ್ನು ಸಾಧಿಸಿವೆ ಅಂತ ಹೇಳಲಾಗುತ್ತಿದೆ.

 • Trending Desk
 • 3-MIN READ
 • Last Updated :
 • Bangalore, India
 • Share this:

ಡಿಸೆಂಬರ್ 2021 ರಲ್ಲಿ ಬಿಡುಗಡೆಯಾದ ತೆಲುಗು ನಟ ಅಲ್ಲು ಅರ್ಜುನ್ (Allu Arjun) ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಪುಷ್ಪಾ: ದಿ ರೈಸ್ (Pushpa The Rise) ಸಿನಿಮಾ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂದರೂ ಸಹ ಇನ್ನೂ ಆ ಚಿತ್ರದ ಹಾಡುಗಳು (Songs) ಅನೇಕರ ಬಾಯಲ್ಲಿ ಹರಿದಾಡುತ್ತಿರುತ್ತವೆ. ಇವುಗಳ ವೀಡಿಯೋಗಳನ್ನು ( Videos) ಸಿನಿ ರಸಿಕರು ಇವತ್ತಿಗೂ ನೋಡುತ್ತಾರೆ. ಆ ಹಿಟ್ ಹಾಡುಗಳಿಗೆ ಡ್ಯಾನ್ಸ್ (Dance) ಮಾಡಿ ತಮ್ಮ ವೀಡಿಯೋಗಳನ್ನು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ ಅಂತ ಹೇಳಬಹುದು.


ತನ್ನ ಅದ್ಭುತ ಸಂಗೀತದೊಂದಿಗೆ ವರ್ಷವಾಗುತ್ತಾ ಬಂದರೂ ಸಹ ತನ್ನ ಪ್ರಾಬಲ್ಯವನ್ನು ಹಾಗೆಯೇ ಮುಂದುವರಿಸಿದೆ ಈ ಚಿತ್ರದ ಹಾಡುಗಳು ಅಂತ ಹೇಳಬಹುದು.


ಈ ಚಿತ್ರವು ಕಳೆದ ವರ್ಷ ಪ್ಯಾನ್-ಇಂಡಿಯಾ ಗಲ್ಲಾ ಪೆಟ್ಟಿಗೆಯಲ್ಲಿ ತುಂಬಾನೇ ಯಶಸ್ವಿಯಾಯಿತು ಮತ್ತು ಚಾರ್ಟ್ ಬಸ್ಟರ್ ಹಿಟ್ ಆದವು ಈ ಚಿತ್ರದ ಸಂಗೀತ ಅಂತ ಹೇಳಿದರೆ ಸುಳ್ಳಲ್ಲ.
ಈಗ, ಯೂಟ್ಯೂಬ್ ತನ್ನ ವರ್ಷಾಂತ್ಯದ ಪಟ್ಟಿ ಬಿಡುಗಡೆ ಮಾಡಿದೆ. ಪುಷ್ಪಾ ಹಾಡುಗಳ ಮ್ಯೂಸಿಕ್ ವೀಡಿಯೋಗಳು ಈ ಚಾರ್ಟ್ ನಲ್ಲಿ ಸಂಪೂರ್ಣವಾಗಿ ತನ್ನ ಪ್ರಾಬಲ್ಯವನ್ನು ಸಾಧಿಸಿವೆ ಅಂತ ಹೇಳಲಾಗುತ್ತಿದೆ.


ಯೂಟ್ಯೂಬ್ ಬಿಡುಗಡೆ ಮಾಡಿದ ಮ್ಯೂಸಿಕ್ ವೀಡಿಯೋ ಪಟ್ಟಿಯಲ್ಲಿವೆ ಪುಷ್ಪಾ ಚಿತ್ರದ ಹಾಡುಗಳು


2023 ಬರುವ ಮುಂಚೆಯೇ ಯೂಟ್ಯೂಬ್ ಪ್ರತಿ ದೇಶದ ಮ್ಯೂಸಿಕ್ ವೀಡಿಯೋ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಪ್ಲಾಟ್‌ಫಾರ್ಮ್ ನಲ್ಲಿ ಯಾವ ಮ್ಯೂಸಿಕ್ ವೀಡಿಯೋಗಳು ಹೆಚ್ಚು ಪ್ರಾಬಲ್ಯ ಸಾಧಿಸಿವೆ ಎಂಬುದು ಇದರಲ್ಲಿದೆ.


ಪುಷ್ಪಾ ಚಿತ್ರದಲ್ಲಿರುವ 'ಶ್ರೀವಲ್ಲಿ', 'ಸಾಮಿ ಸಾಮಿ', 'ಊ ಅಂಟಾವಾ ಮಾವಾ', ವಿಜಯ್ ಅವರ 'ಅರೇಬಿಕ್ ಕುತು – ಹಲಾಮಿಥಿ ಹಬಿಬೊ' ಹಾಡು ಈ ವರ್ಷ ಅಭಿಮಾನಿಗಳ ಅಚ್ಚುಮೆಚ್ಚಿನ ಹಾಡುಗಳಾಗಿವೆ.


ಜನವರಿ 1 ರಿಂದ ಅಕ್ಟೋಬರ್ 30 ರವರೆಗೆ ಸಂಗ್ರಹಿಸಲಾದ ಪಟ್ಟಿಯನ್ನು ನೀವು ಒಮ್ಮೆ ನೋಡಿ.


1. ಶ್ರೀವಲ್ಲಿ– ಪುಷ್ಪಾ


2. ಅರೇಬಿಕ್ ಕುತು- ಹಲಾಮಿಥಿ ಹಬಿಬೊ - ಬೀಸ್ಟ್ (ಲಿರಿಕಲ್ ವೀಡಿಯೋ)


3. ಸಾಮಿ ಸಾಮಿ- ಪುಷ್ಪಾ (ಹಿಂದಿ ಆವೃತ್ತಿ)


4. ಕಚ್ಛಾ ಬಾದಮ್ ಹಾಡು- ಭುಬನ್ ಬಡ್ಯಾಕರ್


5. ಲೇ ಲೇ ಆಯಿ ಕೋಕಾ ಕೋಲಾ- ಖೇಸರಿ ಲಾಲ್ ಯಾದವ್


6. ಊ ಬೊಲೆಗಾ ಯಾ ಊ ಊ ಬೊಲೆಗಾ– ಪುಷ್ಪಾ


7. ಊ ಅಂಟಾವ ಮಾವಾ ಊ ಊ ಅಂಟಾವ– ಪುಷ್ಪಾ


8. ಪಸೂರಿ- ಅಲಿ ಸೇಥಿ ಎಕ್ಸ್ ಶೇ ಗಿಲ್


9. ಅರೇಬಿಕ್ ಕುತು - ಹಲಾಮಿಥಿ ಹಬಿಬೊ - ಬೀಸ್ಟ್ (ಮ್ಯೂಸಿಕ್ ವೀಡಿಯೊ)


10. ನಾಥುನಿಯಾ - ಖೇಸರಿ ಲಾಲ್ ಯಾದವ್


ಪುಷ್ಪಾ: ದಿ ರೈಸ್ ರಷ್ಯಾದಲ್ಲಿ ಬಿಡುಗಡೆಯಾಗಲಿದೆಯಂತೆ!


ಪುಷ್ಪಾ: ದಿ ರೈಸ್ ಇತ್ತೀಚೆಗೆ ರಷ್ಯಾದಲ್ಲಿ ಬಿಡುಗಡೆಯಾಗಿದ್ದು, ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮೋಷನ್ ಗಾಗಿ ಹಾಜರಿದ್ದರು. ಈ ಚಿತ್ರವು ಡಿಸೆಂಬರ್ 1 ರಂದು ಮಾಸ್ಕೋದಲ್ಲಿ ಮತ್ತು ಡಿಸೆಂಬರ್ 3 ರಂದು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಬಿಡುಗಡೆಯಾಯಿತು.


ಇದನ್ನೂ ಓದಿ: Rocking Star Yash: ಯಶ್ ಶಿವಾಜಿ ಪಾತ್ರ ಮಾಡ್ತಾರಾ? ಆ ಫೋಟೋ ಗುಟ್ಟೇನು?


ರಷ್ಯಾದ 24 ನಗರಗಳಲ್ಲಿ ನಡೆಯಲಿರುವ 5ನೇ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನ ಉದ್ಘಾಟನಾ ಸಮಾರಂಭದಲ್ಲಿ ಈ ಚಿತ್ರವು ಪ್ರಥಮ ಪ್ರದರ್ಶನ ಕಾಣಲಿದೆ.


ಇತರೆಡೆ ಈ ಚಿತ್ರವು ಡಿಸೆಂಬರ್ 8 ರಂದು ರಷ್ಯಾದಲ್ಲಿ ಬಿಡುಗಡೆಯಾಗಲಿದೆ. ಇಬ್ಬರೂ ನಟರು ಶೀಘ್ರದಲ್ಲಿಯೇ ಭಾಗ 1 ರ ಮುಂದುವರಿದ ಭಾಗವಾದ ಪುಷ್ಪಾ: ದಿ ರೂಲ್ ಚಿತ್ರದ ಶೂಟಿಂಗ್ ಅನ್ನು ಪುನರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Published by:Divya D
First published: