HOME » NEWS » Entertainment » ALLU ARJUN STARRER PUSHPA MOVIE TEAM IS SPENDING 6 CRORE FOR 6 MINUTE ACTION SEQUENCE AE

Pushpa: ಅಲ್ಲು ಅರ್ಜುನ್​ ಮಾಡಲಿರುವ 6 ನಿಮಿಷದ ಫೈಟ್​ಗೆ 6 ಕೋಟಿಯಂತೆ..!

Allu Arjun: ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಲಾರಿ ಡ್ರೈವರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ. ಅಲ್ಲು ಅರ್ಜುನ್​ ಹುಟ್ಟುಹಬ್ಬದಂದು ಈ ಚಿತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಾಕ್​ಡೌನ್​ನಲ್ಲಿ ಈ ಸಿನಿಮಾ ಕುರಿತಾದ ಬಿಸಿ ಬಿಸಿ ಸುದ್ದಿಯೊಂದು ಹೊರಬಿದ್ದಿದೆ.  

Anitha E | news18-kannada
Updated:May 9, 2020, 5:53 PM IST
Pushpa: ಅಲ್ಲು ಅರ್ಜುನ್​ ಮಾಡಲಿರುವ 6 ನಿಮಿಷದ ಫೈಟ್​ಗೆ 6 ಕೋಟಿಯಂತೆ..!
ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್
  • Share this:
'ಅಲಾ ವೈಕುಂಠಪುರಂಲೋ' ಸಿನಿಮಾದ ನಂತರ ಅಲ್ಲು ಅರ್ಜುನ್​ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಪುಷ್ಪ'. ನಿರ್ದೇಶಕ ಸುಕುಮಾರ್​ ಜೊತೆ ನಟಿಸುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಸಾಕಷ್ಟು ಕಾರಣಗಳಿಂದ ಈ ಚಿತ್ರ ವಿಶೇಷವೆನಿಸಿಕೊಂಡಿದೆ.

ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಲಾರಿ ಡ್ರೈವರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ. ಅಲ್ಲು ಅರ್ಜುನ್​ ಹುಟ್ಟುಹಬ್ಬದಂದು ಈ ಚಿತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Allu Arjun sukumar pushpa movie released pan India with five languages including Kannada 
'ಪುಷ್ಪ' ಸಿನಿಮಾದ ಕನ್ನಡದ ಪೋಸ್ಟರ್​


ಇನ್ನು ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ತೆರೆ ಕಾಣಲಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರದಲ್ಲಿ 6 ನಿಮಿಷಗಳ ಫೈಟಿಂಗ್​ ಸೀಕ್ವೆನ್ಸ್​ಗೆ 6 ಕೋಟಿ ವೆಚ್ಚವಾಗಲಿದೆಯಂತೆ.

ಇದನ್ನೂ ಓದಿ: Laxmmi Bomb OTT Release: ನೂರು ಕೋಟಿಗೆ ಲಕ್ಷ್ಮಿ ಬಾಂಬ್, 30 ಕೋಟಿಗೆ ನಿಶ್ಯಬ್ಧಂ ಸೇಲ್​...!

ಅಲ್ಲು ಅರ್ಜುನ್​ ಆ್ಯಕ್ಷನ್​ ಹೇಗಿರುತ್ತದೆ ಎಂದು ವರ್ಣಿಸುವ ಅಗತ್ಯವಿಲ್ಲ. ಇದೇ ಕಾರಣದಿಂದಾಗಿ ನಿರ್ದೇಶಕ ಸುಕುಮಾರ್​ 6 ನಿಮಿಷದ ಆ್ಯಕ್ಷನ್​ ದೃಶ್ಯಕ್ಕಾಗಿ 6 ಕೋಟಿ ವೆಚ್ಚ ಮಾಡಿಸುತ್ತಿದ್ದಾರಂತೆ. ಹೀಗೊಂದು ಸುದ್ದಿ ಸದ್ಯ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ. ಈ ಸಿನಿಮಾದ ಹಾಡೊಂದರಲ್ಲಿ ದಿಶಾ ಪಟಾಣಿ ಹೆಜ್ಜೆ ಹಾಕಲಿದ್ದಾರಂತೆ.

Arjun Kapoor: ಲಾಕ್​ಡೌನ್​ನಲ್ಲಿ ಅಮ್ಮನನ್ನು ನೆನೆದ ಅರ್ಜುನ್​ ಕಪೂರ್​: ಇಲ್ಲಿವೆ ಬಾಲ್ಯದ ಚಿತ್ರಗಳು..!

 
First published: May 9, 2020, 5:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories