ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದ ಅಲಾ ವೈಕುಂಠಪುರಂಲೋ ಸಿನಿಮಾ ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸಿತ್ತು. ಈ ಸಿನಿಮಾದ ಹಾಡುಗಳು ಸಹ ಪ್ರೇಕ್ಷಕರ ಮನ ಗೆದಿದ್ದವು. ಕಲೆಕ್ಷನ್ ವಿಷಯದಲ್ಲಿ ಈಗಾಗಲೇ ದಾಖಲೆ ಮಾಡಿರುವ ಈ ಸಿನಿಮಾ, ಈಗ ಹಾಡಿನ ವಿಷಯದಲ್ಲೂ ಹೊಸ ರೆಕಾರ್ಡ್ ನಿರ್ಮಿಸಿದೆ.
ಅಲಾ ವೈಕುಂಠಪುರಂಲೋ ಸಿನಿಮಾದ ಹಾಡುಗಳಲ್ಲಿ ರಾಮುಲೊ ರಾಮುಲಾ ಹಾಗೂ ಬುಟ್ಟ ಬೊಮ್ಮ ಹೆಚ್ಚು ಖ್ಯಾತಿ ಪಡೆದವು. ಅದರಲ್ಲೂ ಅಲ್ಲು ಅರ್ಜುನ್ ಸಖತ್ ಸ್ಟೆಪ್ ಹಾಕಿರುವ ಬುಟ್ಟ ಬೊಮ್ಮ ಸಿನಿಮಾ ಬಿಡುಗೆಯಾದಾಗಲೇ ಯೂಟ್ಯೂಬ್ನಲ್ಲಿ ಕೋಟಿ ಕೋಟಿ ವೀಕ್ಷಣೆ ಪಡೆದುಕೊಂಡಿತ್ತು.ಈಗ ಇದೇ ಹಾಡಿಗೆ ಯೂಟ್ಯೂಬ್ನಲ್ಲಿ 19 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿದೆ. 200 ಮಿಲಿಯನ್ಗೆ ಅಂದರೆ 20 ಕೋಟಿಗೆ ಬಹಳ ಹತ್ತಿರದಲ್ಲಿದೆ. ಥಮನ್ ಸಂಗೀತ ನಿರ್ದೇಶನದ ಈ ಹಾಡನ್ನು ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ.
ತೆಲುಗಿನಲ್ಲಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ವೀಕ್ಷಣೆ ಪಡೆದ ಹಾಡು ಇದಾಗಿದೆ. ಈ ಹಾಡಿಗೆ ಲೋಕಲ್ನಿಂದ ಜಾಗತಿಕ ಮಟ್ಟದವರೆಗೆ ಅಭಿಮಾನಿಗಳಿದ್ದಾರೆ.ಇತ್ತೀಚೆಗಷ್ಟೆ ಕ್ರಿಕೆಟಿಗ ಡೇವಿಡ್ ವಾರ್ನರ್ ತಮ್ಮ ಹೆಂಡತಿ ಹಾಗೂ ಮಗುವಿನೊಂದಿಗೆ ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು. ನಟಿ ಶಿಲ್ಪಾ ಹಾಗೂ ತಂಗಿ ಶಮಿತಾ ಶೆಟ್ಟಿ ಸಹ ಈ ಇದೇ ಹಾಡಿಗೆ ಟಿಕ್ಟಾಕ್ನಲ್ಲಿ ಸ್ಟೆಪ್ ಹಾಕಿದ್ದರು.
View this post on Instagram
It’s tiktok time #buttabomma get out of your comfort zone people lol @candywarner1
WE made it again !! ♥️#ButtaBomma enters into no #15 in #topglobalvideos #sensationalbuttabomma 🎧🎬✍️
It’s all the #supergrace of our hero 🦸♂️ @alluarjun gaaru and our director 🎬#trivikram gaaru’s beyond life’s imagination & energy made this happen for US 🤩🥳 pic.twitter.com/AXUG6RiGIh
— thaman S (@MusicThaman) May 27, 2020
Nikhil-Revathi: ಬಿಡದಿಯ ತೋಟದಲ್ಲಿ ನಿಖಿಲ್-ರೇವತಿ: ಮತ್ತೆ ಕವಿಯಾದ ಯುವರಾಜ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ