• Home
 • »
 • News
 • »
 • entertainment
 • »
 • Allu Arjun: ಪ್ರಕೃತಿ ಬಗ್ಗೆ ಪುಷ್ಪ ನಟನ ಮಾತು! ಅಲ್ಲು ಅರ್ಜುನ್ ಹೇಳಿದ್ದಿಷ್ಟು

Allu Arjun: ಪ್ರಕೃತಿ ಬಗ್ಗೆ ಪುಷ್ಪ ನಟನ ಮಾತು! ಅಲ್ಲು ಅರ್ಜುನ್ ಹೇಳಿದ್ದಿಷ್ಟು

ಅಲ್ಲು ಅರ್ಜುನ್

ಅಲ್ಲು ಅರ್ಜುನ್

ಅಲ್ಲು ಅರ್ಜುನ್ ತಮ್ಮ ಪ್ರಕೃತಿ ಪ್ರೇಮದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡಿದ್ದು ನಿಸರ್ಗವನ್ನು ಏಕೆ ಪ್ರೀತಿಸಬೇಕು ಹಾಗೂ ಕಾಳಜಿವಹಿಸಬೇಕು ಎಂದು ತಿಳಿಸಿದ್ದಾರೆ.

 • Trending Desk
 • 5-MIN READ
 • Last Updated :
 • Bangalore, India
 • Share this:

ಅಲ್ಲು ಅರ್ಜುನ್ (Allu Arjun) ಪುಷ್ಪ (Pushpa) ಚಿತ್ರವು ಭಾರತೀಯ ಚಲನಚಿತ್ರೋತ್ಸವಲ್ಲಿ ಪ್ರದರ್ಶನಗೊಳ್ಳಲಿದ್ದು ಡಿಸೆಂಬರ್ 8 ರಂದು ರಷ್ಯಾದ  (Russia) ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ. ಚಿತ್ರತಂಡವು ರಷ್ಯಾದಲ್ಲಿ ಪ್ರಚಾರ ನಡೆಸಿದ ವೇಳೆ ಅಲ್ಲು ಅರ್ಜುನ್ ತಮ್ಮ ಪ್ರಕೃತಿ ಪ್ರೇಮದ ಬಗ್ಗೆ ಮಾತನಾಡಿದ್ದಾರೆ. 2021 ರ ಬ್ಲಾಕ್‌ಬಸ್ಟರ್ ಚಿತ್ರ ಪುಷ್ಪದ ಪ್ರಚಾರವನ್ನು ರಷ್ಯಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಅಲ್ಲು ಅರ್ಜುನ್ ಭರ್ಜರಿಯಾಗಿಯೇ ನಡೆಸುತ್ತಿದ್ದಾರೆ. ಸಂಪೂರ್ಣ ಪುಷ್ಪಾ ಚಿತ್ರತಂಡ ರಷ್ಯಾಗೆ ಪ್ರಯಾಣಿಸಿದ್ದು, ಚಿತ್ರದ ಪ್ರಚಾರವನ್ನು ಕೈಗೊಂಡಿದೆ.


ರಷ್ಯಾದ ಥಿಯೇಟರ್‌ಗಳಲ್ಲಿ ಚಿತ್ರವು ಡಿಸೆಂಬರ್ 8 ರಂದು ತೆರೆಕಾಣಲಿದೆ. ಚಿತ್ರತಂಡವು ಚಿತ್ರದ ಪ್ರಚಾರಕ್ಕಾಗಿ ರಷ್ಯಾಗೆ ತೆರಳಿದ್ದು ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಹಾಗೂ ರಷ್ಯಾದಲ್ಲೂ ಪುಷ್ಪಾ ಕ್ರೇಜ್ ಹುಟ್ಟುಹಾಕುವ ಭರವಸೆಯಲ್ಲಿ ಕಾರ್ಯನಿರತವಾಗಿದೆ.


ನಿಸರ್ಗ ಪ್ರೇಮಿ ಅಲ್ಲು ಅರ್ಜುನ್


ಇದೇ ಸಮಯದಲ್ಲಿ ಅಲ್ಲು ಅರ್ಜುನ್ ತಮ್ಮ ಪ್ರಕೃತಿ ಪ್ರೇಮದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡಿದ್ದು ನಿಸರ್ಗವನ್ನು ಏಕೆ ಪ್ರೀತಿಸಬೇಕು ಹಾಗೂ ಕಾಳಜಿವಹಿಸಬೇಕು ಎಂದು ತಿಳಿಸಿದ್ದಾರೆ.


ಪುಷ್ಪಾ ಚಿತ್ರದ ಪ್ರಚಾರದ ಸಮಯದಲ್ಲಿಯೇ ಅಲ್ಲು ಅರ್ಜುನ್ ತಾವೊಬ್ಬ ಪ್ರಕೃತಿ ಪ್ರೇಮಿ ಎಂಬ ಸಂದೇಶವನ್ನು ಸಾರಿದ್ದು, ನಿಸರ್ಗದ ಕಾಳಜಿ ನಮ್ಮೆಲ್ಲರ ಹೊಣೆ ಎಂದು ತಿಳಿಸಿದ್ದಾರೆ.


ಪ್ರಕೃತಿಯ ಕಾಳಜಿ ಪ್ರತಿಯೊಬ್ಬರ ಹೊಣೆ


ಪ್ರಕೃತಿಯ ಬಗ್ಗೆ ಕಾಳಜಿವಹಿಸುವುದು ವಿಶ್ವದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದ ಅಲ್ಲು, ಇದು ಯಾವುದೇ ದೇಶ, ಒಬ್ಬ ವ್ಯಕ್ತಿ ಅಥವಾ ಒಬ್ಬ ಮನುಷ್ಯನ ಸಮಸ್ಯೆಯಲ್ಲ ಇದು ಪ್ರತಿಯೊಬ್ಬರ ಸಮಸ್ಯೆಯಾಗಿದೆ.


ಪ್ರಕೃತಿಯ ಕಾಳಜಿ ಎಲ್ಲರೂ ನಿರ್ವಹಿಸಬೇಕಾದ ಸಾಮೂಹಿಕ ಪ್ರಜ್ಞೆಯಾಗಿದೆ. ನಿಸರ್ಗ ನಮ್ಮೆಲ್ಲರನ್ನೂ ಅಂದರೆ ಕೇವಲ ಮನುಷ್ಯರನ್ನು ಮಾತ್ರ ಬಂಧಿಸದೇ ಸಕಲ ಚರಾಚರ ಜೀವಿಗಳನ್ನು ಒಗ್ಗೂಡಿಸುತ್ತದೆ ಎಂದು ತಿಳಿಸಿದ್ದಾರೆ.


ರಷ್ಯಾದಲ್ಲಿ ಪುಷ್ಪಾ ಝಲಕ್; ಪ್ರಚಾರ ಕಾರ್ಯದಲ್ಲಿ ಚಿತ್ರತಂಡ


ಡಿಸೆಂಬರ್ 1 ರಂದು ಪುಷ್ಪಾ ಭಾರತೀಯ ಚಲನಚಿತ್ರೋತ್ಸವಲ್ಲಿ ಪ್ರದರ್ಶನಗೊಳ್ಳಲಿದೆ. ತದನಂತರ ದೇಶದಲ್ಲಿರುವ ಥಿಯೇಟರ್‌ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ರಷ್ಯಾದಲ್ಲಿ ಚಿತ್ರದ ಪ್ರಚಾರವನ್ನು ಭರ್ಜರಿಯಾಗಿ ನಡೆಸುತ್ತಿದ್ದಾರೆ.ಪುಷ್ಪಾ ಚಿತ್ರದ ಕೆಲವೊಂದು ಖ್ಯಾತ ಡಯಲಾಗ್‌ಗಳನ್ನು ಚಿತ್ರತಂಡ ಜೊತೆಯಾಗಿ ಅನುಕರಿಸುವ ಮೂಲಕ ಕ್ಯಾಮೆರಾಗೆ ಫೋಸ್ ಕೂಡ ನೀಡಿದೆ.


ಪುಷ್ಪಾ ಚಿತ್ರದ ಕುರಿತು


ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ವಿಭಿನ್ನವಾದ ಕಥಾ ಪಾತ್ರದಲ್ಲಿ ಮಿಂಚಿದ್ದು, ನಾಯಕನ ಎದುರಾಳಿಯಾದ ಎಸ್‌ಪಿ ಭನ್ವರ್ ಸಿಂಗ್ ಶೇಖಾವತ್ (ಮಲಯಾಳಂ ನಟ ಫಹಾದ್ ಫಾಸಿಲ್) ನಡುವಿನ ಘರ್ಷಣೆಯ ಸುತ್ತ ಸುತ್ತುತ್ತದೆ.
ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ. ರಶ್ಮಿಕಾರ ಶ್ರೀವಲ್ಲಿ ಪಾತ್ರ ಕೂಡ ಸಿನಿಮಾದಲ್ಲಿ ಸೊಗಸಾಗಿ ಮೂಡಿಬಂದಿದ್ದು ಅದ್ಭುತ ನಟಿಯಾಗಿ ಆಕೆ ಮಿಂಚಿದ್ದಾರೆ.


ಐಟಂ ಸಾಂಗ್‌ನಲ್ಲಿ ಮಿಂಚಿದ ಸಮಂತಾ


ಇನ್ನು ಊ ಅಂಟಾವಾ ಹಾಡಿನ ಮೂಲಕ ವಿಶೇಷ ಐಟಂ ಹಾಡಿನಲ್ಲಿ ಸಮಂತಾ ಕೂಡ ಹೆಜ್ಜೆಹಾಕಿದ್ದು, ತಮ್ಮ ಹಾವಭಾವಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸಮಂತಾ ಐಟಂ ಸಾಂಗ್ ಕೂಡ ಪುಷ್ಪಾ ಚಿತ್ರದಲ್ಲಿ ಭರ್ಜರಿಯಾಗಿಯೇ ಹೆಸರುವಾಸಿಯಾಗಿದೆ.


ಇದನ್ನೂ ಓದಿ: Rashmika Mandanna: ರಷ್ಯಾದಲ್ಲಿ ಪುಷ್ಪಾ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ ಕನ್ನಡದ ಚೆಲುವೆ


ಪುಷ್ಪಾ ಚಿತ್ರದ ಮುಂದುವರಿದ ಭಾಗ ಪುಷ್ಪಾ 2 ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು ಪುಷ್ಪಾ 2, ಪುಷ್ಪಾ ಭಾಗ 1 ಕ್ಕಿಂತ ದೀರ್ಘವಾಗಿದ್ದು ಇನ್ನಷ್ಟು ಉತ್ತಮವಾಗಿದೆ ಎಂದು ತಿಳಿದುಬಂದಿದೆ.


ಪುಷ್ಪಾ 2, 2024 ರಲ್ಲಿ ತೆರೆಗೆ ಬರಲಿದೆ ಎಂಬ ನಿರೀಕ್ಷೆ ಇದೆ. ಸಿನಿ ಅಭಿಮಾನಿಗಳನ್ನು ಇನ್ನಷ್ಟು ರಂಜಿಸುವ ಉದ್ದೇಶವನ್ನಿಟ್ಟುಕೊಂಡಿರುವ ಚಿತ್ರತಂಡವು ಪುಷ್ಪಾ ಭಾಗ 2 ಅನ್ನು ಬಿಡುಗಡೆ ಮಾಡುವಲ್ಲಿ ಕೊಂಚ ವಿಳಂಬ ಮಾಡಿದರೂ ಆಶ್ವರ್ಯವೇನಿಲ್ಲ ಎಂದು ವರದಿ ತಿಳಿಸಿದೆ. ಒಟ್ಟಿನಲ್ಲಿ ಪುಷ್ಪಾ 2 ಕೂಡ ಅತ್ಯಂತ ದೊಡ್ಡ ಹಿಟ್ ಆಗುವ ಎಲ್ಲಾ ಲಕ್ಷಣಗಳು ಗೋಚರವಾಗಿದೆ.

Published by:Divya D
First published: