ವಿಶ್ವದಾದ್ಯಂತ ಕೆಜಿಎಫ್ ಚಾಪ್ಟರ್ 2 ಎಂಬ ಸಿನಿಮಾ ಸುನಾಮಿಯ ಅಬ್ಬರ ಇನ್ನೂ ಜೋರಾಗ್ತಿದೆ. ಬರೀ ಕರ್ನಾಟಕ (Karnataka) ಅಥವಾ ಭಾರತದ (India) ಬೇರೆ ಬೇರೆ ನಗರಗಳಲ್ಲಷ್ಟೇ (City) ಅಲ್ಲ, ಇಡೀ ವಿಶ್ವದಾದ್ಯಂತ (World) ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ (Cinema) ಅಬ್ಬರ ಮುಂದುವರೆದಿದೆ. ಭಾರತೀಯ ಚಿತ್ರರಂಗದ (Indian Film Industry) ಎಲ್ಲಾ ದಾಖಲೆಗಳನ್ನೂ (Records) ಕೆಜಿಎಫ್ ಚಾಪ್ಟರ್ 2 ಉಡೀಸ್ ಮಾಡುತ್ತಿದೆ. ಬಾಕ್ಸ್ ಆಫೀಸ್ (Box Office) ಅನ್ನೇ ಶೇಕ್ ಮಾಡಿರುವ ಕೆಜಿಎಫ್ ಚಾಪ್ಟರ್ 2, 1000 ಕೋಟಿ ಕ್ಲಬ್ (1000 Crore Club) ತಲುಪುವ ನಿರೀಕ್ಷೆ ಇದೆ. ಇನ್ನು ಭಾರತೀಯ ಚಿತ್ರರಂಗದ ಘಟಾನುಘಟಿಗಳು ಕೆಜಿಎಫ್ ಸಿನಿಮಾ ವೀಕ್ಷಿಸಿ, ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೀಗ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೆಜಿಎಫ್ ಸಿನಿಮಾ ಹಾಗೂ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ಟ್ವಿಟ್ಟರ್ನಲ್ಲಿ ಅಭಿನಂದನೆ ಸಲ್ಲಿಸಿದ ಅಲ್ಲು ಅರ್ಜುನ್
ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಿದ್ದಾರೆ. ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಅಲ್ಲು ಅರ್ಜುನ್, ಯಶ್ ಹಾಗೂ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
'ಕೆಜಿಎಫ್: ಚಾಪ್ಟರ್ 2 ಚಿತ್ರತಂಡಕ್ಕೆ ದೊಡ್ಡ ಶುಭಾಶಯಗಳು. ಯಶ್ ಅವರ ತೀವ್ರತೆಯುಳ್ಳ ನಟನೆ ಅದ್ಭುತವಾಗಿದೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಅತ್ಯುತ್ತಮವಾಗಿದೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಮತ್ತು ಭುವನ್ ಗೌಡ ಅವರ ಛಾಯಾಗ್ರಹಣ ಅದ್ಭುತವಾಗಿದೆ. ಎಲ್ಲಾ ತಂತ್ರಜ್ಞರಿಗೆ ನನ್ನ ಗೌರವಪೂರ್ವಕ ನಮನಗಳು ಎಂದಿದ್ದಾರೆ
ಯಶ್ ಬಗ್ಗೆ ಅಲ್ಲು ಹೊಗಳಿಕೆ ಮಾತು
ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಅಲ್ಲು ಅರ್ಜುನ್ 'ಸಲಾಂ' ಎಂದಿದ್ದಾರೆ. "ಒಂದು ಅದ್ಭುತ ಸಿನಿಮಾ ಅನುಭವ ನೀಡಿದ್ದಕ್ಕಾಗಿ ಮತ್ತು ಭಾರತದ ಚಿತ್ರರಂಗದ ಧ್ವಜವನ್ನು ಇನ್ನೂ ಎತ್ತರದಲ್ಲಿ ಹಾರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು" ಅಂತ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ಗಾರೆ.
ಇದನ್ನೂ ಓದಿ: KGF Chapter 2 ಸಿನಿಮಾಗೆ ಉಪ್ಪಿ ಬಹುಪರಾಕ್; 'ರಾಕಿಂಗ್ ಸ್ಟಾರ್' ಬಗ್ಗೆ 'ರಿಯಲ್ ಸ್ಟಾರ್' ಹೇಳಿದ್ದೇನು ಗೊತ್ತಾ?
ಪ್ರಶಾಂತ್ ನಿರ್ದೇಶನಕ್ಕೆ ಫಿದಾ
ಪ್ರಶಾಂತ್ ನೀಲ್ ಕಡೆಯಿಂದ ಒಂದು ಅದ್ಭುತ ಪ್ರದರ್ಶನ ಮೂಡಿಬಂದಿದೆ ಅಂತ ಅಲ್ಲು ಅರ್ಜುನ್ ಹೊಗಳಿದ್ದಾರೆ. ಅವರ ಆಲೋಚನೆಗೆ ನನ್ನ ಗೌರವಪೂರ್ವಕ ನಮನಗಳು ಅಂತ ನಿರ್ದೇಶಕ ಪ್ರಶಾಂತ್ ನೀಲ್ ಬಗ್ಗೆ ಅಲ್ಲು ಅರ್ಜುನ್ ಶ್ಲಾಘಿಸಿದ್ದಾರೆ.
ಅಲ್ಲುಗೆ ಥ್ಯಾಂಕ್ಸ್ ಎಂದ ಪ್ರಶಾಂತ್ ನೀಲ್
ಅಲ್ಲು ಅರ್ಜುನ್ ಟ್ವೀಟ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಪ್ರತಿಕ್ರಿಯಿಸಿದ್ದಾರೆ. 'ಧನ್ಯವಾದಗಳು ಅಲ್ಲು ಅರ್ಜುನ್ ಅವರೇ. ಇದು ನಮಗೆ ಬಹಳ ದೊಡ್ಡದು. ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು..' ಅಂತ ಪ್ರಶಾಂತ್ ನೀಲ್ ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: KGF, Salaar ಬಳಿಕ ಮತ್ತೊಂದು ದೊಡ್ಡ ಸಿನಿಮಾಗೆ ಕೈ ಹಾಕಿದ ಹೊಂಬಾಳೆ! ಆ ನಿರ್ದೇಶಕಿಯನ್ನೇ ಸೆಲೆಕ್ಟ್ ಮಾಡಿದ್ದು ಯಾಕೆ?
ಗಲ್ಲಾ ಪೆಟ್ಟಿಗೆಯಲ್ಲಿ ಕೆಜಿಎಫ್ 2 ಅಬ್ಬರ
ಚಲನಚಿತ್ರಗಳ ಇತಿಹಾಸದಲ್ಲಿ ಅತಿದೊಡ್ಡ ಓಪನರ್ ಆದ ನಂತರ, ಕೆಜಿಎಫ್ 2 (ಹಿಂದಿ) ಮೊದಲ ವಾರದಲ್ಲೇ ಸುಮಾರು 250.75 ಕೋಟಿ ನಿವ್ವಳವನ್ನು ಗಳಿಸುವ ಮೂಲಕ 250 ಕೋಟಿ ಕ್ಲಬ್ ಸೇರಿದ್ದು ಅಗ್ರಸ್ಥಾನದಲ್ಲಿದೆ. ಬಾಹುಬಲಿ: ದಿ ಕನ್ಕ್ಲೂಷನ್, ದಂಗಲ್, ಸುಲ್ತಾನ್, ಮತ್ತು ಟೈಗರ್ ಜಿಂದಾ ಹೈ ಮುಂತಾದ ಬಾಕ್ಸ್ ಆಫೀಸ್ ಸೂಪರ್ಹಿಟ್ಗಳನ್ನು ಹಿಂದಿಕ್ಕಿ ಹಿಂದಿಯಲ್ಲಿ ಬಾಕ್ಸ್ ಆಫೀಸ್ ಲೂಟಿ ಮಾಡುತ್ತಿದೆ. ಯಶಸ್ವಿ 8ನೇ ದಿನಕ್ಕೆ ಕಾಲಿಟ್ಟಿರುವ ಕೆಜಿಎಫ್ ಚಾಪ್ಟರ್ 2 ಇದುವರೆಗೂ 749.30 ರೂಪಾಯಿ ಆದಾಯ ಗಳಿಸಿ, ಮುನ್ನುಗ್ಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ