ಟ್ರೈಲರ್​ನಲ್ಲೇ ಬೆಂಕಿ ಹಚ್ಚಿದ `ಪುಷ್ಪ‘: ಏಯ್​ ಬಿಡ್ಡಾ.. ಇದು ಅಲ್ಲು ಅಡ್ಡ.. ಅಂತಿದ್ದಾರೆ ಫ್ಯಾನ್ಸ್​​!

ಲರ್​ ನೋಡಿ ಫ್ಯಾನ್ಸ್​ಗಳು ಫುಲ್​ ಥ್ರಿಲ್​ ಆಗಿದ್ದಾರೆ. ಇನ್ನೂ ಸಿನಿಮಾ ರಿಲೀಸ್​ ಆದ ದಿನ ಚಿತ್ರಮಂದಿರಗಳಲ್ಲಿ ‘ಜನಪ್ರಳಯ’ ಆಗೋದು ಗ್ಯಾರಂಟಿ. ಟ್ರೈಲರ್​​ ಅನ್ನೇ ಜನ ಮತ್ತೆ ಮತ್ತೆ ನೋಡುತ್ತಿದ್ದಾರೆ. ಇನ್ನೂ ಸಿನಿಮಾ ರಿಲೀಸ್​ ಆದರೆ ಕೇಳಬೇಕಾ.

ಪುಷ್ಪ ಚಿತ್ರದ ಪೋಸ್ಟರ್​

ಪುಷ್ಪ ಚಿತ್ರದ ಪೋಸ್ಟರ್​

  • Share this:
ಅಬ್ಬಬ್ಬಾ.. ಅದೇನ್​ ಲುಕ್(Look)​, ಅದೇನ್​ ಕ್ಯಾಮರಾ ವರ್ಕ್(Camera Work) ಗುರೂ. ಆಹಾ.. ಅಲ್ಲು ಅರ್ಜುನ್(Allu Arjun) ಮಸ್ತ್​​ ಸ್ಟಂಟ್ಸ್(Stunts)​, ಅದೇನ್​ ಮ್ಯೂಸಿಕ್(Music)​, ರಶ್ಮಿಕಾ ಮಂದಣ್ಣ(Rashmika Mandanna) ಪರ್ಫಾಮೆನ್ಸ್​ ಎಲ್ಲವೂ ಅದ್ಭುತ. ಅರೇ ಇದೇನು ಪುಷ್ಪ ಸಿನಿಮಾ ವಿಮರ್ಶೆ ಹೇಳಿದ ಹಾಗೇ ಹೇಳುತ್ತಿದ್ದೇವೆ ಎಂದು ಶಾಕ್(Shock)​ ಆದ್ರಾ? ಆಗಲೇ ಬೇಕು ಅದು ಪುಷ್ಪಾ ಟ್ರೈಲರ್​​ ನೋಡಿದ ಮೇಲೆ ಶಾಕ್​ ಆಗಲೇಬೇಕು. ಟ್ರೈಲರ್​(Trailer)ನಲ್ಲೇ ಅಲ್ಲು ಅರ್ಜುನ್​ ಅಭಿನಯದ ಮೋಸ್ಟ್​ ಎಕ್ಸ್​ಪೆಕ್ಟೆಡ್​​ ಸಿನಿಮಾ ಪುಷ್ಪ(Pushpa) ಸಖತ್​ ಸೌಂಡ್ ಮಾಡುತ್ತಿದ್ದೆ. ಇಂದು ರಿಲೀಸ್ ಆಗಿರುವ ಟ್ರೈಲರ್​ನಲ್ಲೇ ಇಂಟರ್​ನೆಟ್​ ಅಲ್ಲಿ ಅಲ್ಲು ಅರ್ಜುನ್​ ಬೆಂಕಿ(Fir) ಹಚ್ಚಿದ್ದಾರೆ. ಏಯ್​ ಬಿಡ್ಡಾ.. ಇದು ಅಲ್ಲು ಅಡ್ಡ ಅಂತ ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ. ಟ್ರೈಲರ್​ ನೋಡಿದ ಪ್ರತಿಯೊಬ್ಬರಿಗೂ ಈ ಸಿನಿಮಾ ಮೇಲಿದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಬ್ಬಬ್ಬಾ ಟ್ರೈಲರ್​​​ನಲ್ಲೇ ಇಷ್ಟು ಕಿಕ್​ ಇದೆ. ಇನ್ನೂ ಸಿನಿಮಾದಲ್ಲಿ ಅದೆಷ್ಟು ಥ್ರಿಲ್(Thrill)​ ಇರಬೇಡ ಅಂತ ಫ್ಯಾನ್ಸ್​(Fans ಮಾತನಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್​ 17ರಂದು ಪುಷ್ಪ ವಿಶ್ವದಾದ್ಯಂತ ತೆರೆಕಾಣುತ್ತಿದೆ. ಯಾವಾಗ ಡಿಸೆಂಬರ್​​ 17 ಆಗುತ್ತೆ ಗುರೂ ಅಂತ ಅಲ್ಲು ಅಭಿಮಾನಿಗಳು ಜಪ ಮಾಡುತ್ತಿದ್ದಾರೆ.  ಡಿಸೆಂಬರ್​ 17 ಥಿಯೇಟರ್​ ಟಾಪ್​ ಕಿತ್ತೋಗೋದು ಗ್ಯಾರಂಟಿ!

ಟ್ರೈಲರ್​ ನೋಡಿ ಫ್ಯಾನ್ಸ್​ಗಳು ಫುಲ್​ ಥ್ರಿಲ್​ ಆಗಿದ್ದಾರೆ. ಇನ್ನೂ ಸಿನಿಮಾ ರಿಲೀಸ್​ ಆದ ದಿನ ಚಿತ್ರಮಂದಿರಗಳಲ್ಲಿ ‘ಜನಪ್ರಳಯ’ ಆಗೋದು ಗ್ಯಾರಂಟಿ. ಟ್ರೈಲರ್​​ ಅನ್ನೇ ಜನ ಮತ್ತೆ ಮತ್ತೆ ನೋಡುತ್ತಿದ್ದಾರೆ. ಇನ್ನೂ ಸಿನಿಮಾ ರಿಲೀಸ್​ ಆದರೆ ಕೇಳಬೇಕಾ. ಇನ್ನೂ ಟ್ರೈಲರ್​​ನಲ್ಲಿ ಅಲ್ಲು ಅವರ ಎಂಟ್ರಿನೇ ಫುಲ್ ಮಾಸ್​ ಆಗಿ ಇದೆ. ಸಿನಿಮಾದಲ್ಲಿ ಇದಕ್ಕೂ ಹೆಚ್ಚಿನದ್ದೇ ಇರಲಿದ್ಯಂತೆ. ಅದ್ಭುತ ಹಿನ್ನಲೆ ಸಂಗೀತ, ಮಾಸ್ ಫೈಟ್ಸ್​​, ಅಲ್ಲು ಧಮಾಕಾ, ಭರ್ಜರಿ ಡೈಲಾಗ್ಸ್​ ಅಬ್ಬಬ್ಬಾ..ಹೇಳುತ್ತಾ ಹೋದರೆ ಒಂದಾ.. ಎರಡಾ.. ಪುಷ್ಪ ಸಿನಿಮಾ ಬ್ಲಾಕ್​ ಬ್ಲಸ್ಟರ್​ ಹಿಟ್​ ಆಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಡಿಸೆಂಬರ್​​ 17ರವರೆಗೆ ಅಭಿಮಾನಿಗಳು ಕಾಯಬೇಕು ಅಷ್ಟೆ.

ಇದನ್ನು ಓದಿ : ಮತ್ತೊಂದು ಇಂಟರ್​ನ್ಯಾಷನಲ್​ ಸಿನಿಮಾದಲ್ಲಿ ಐಶ್ವರ್ಯಾ ರೈ: 10 ವರ್ಷದ ಬಳಿಕ ಹಾಲಿವುಡ್​ಗೆ ರೀ ಎಂಟ್ರಿ!

ಒಂದೇ ಸಿನಿಮಾದಲ್ಲಿ ಇಬ್ಬರು ನಟರಾಕ್ಷಸರು!

ಪುಷ್ಪ ಸಿನಿಮಾದಲ್ಲಿ ಇಬ್ಬರು ನಟರಾಕ್ಷಸರ ಕಾಳಗ ನಡೆಯಲಿದೆ. ಹಿಂದೆಂದೂ ಕಾಣಿಸಿದ ಪಾತ್ರದಲ್ಲಿ ಅಲ್ಲು ಅರ್ಜುನ್​ ಕಮಾಲ್​ ಮಾಡಲಿದ್ದಾರೆ. ರಕ್ತಚಂದನ ಕಳ್ಳನ ಪಾತ್ರದಲ್ಲಿ ಅಲ್ಲು ಅರ್ಜುನ್​ ಸಖತ್​ ಲೋಕಲ್​ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಇವರ ಎದುರು ಮಲಯಾಳಂನ ಅದ್ಭುತ ನಟ ಫಹಾದ್ ಫಾಜಿಲ್ ನಟಿಸಿದ್ದಾರೆ. ಇವರ ಪಾತ್ರದ ಬಗ್ಗೆ ಚಿತ್ರತಂಡ ಇಲ್ಲಿಯವರೆಗೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಇಬ್ಬರೂ ಮೈ ಚಳಿ ಬಿಟ್ಟು ನಟಿಸುವಂತಾ ಸಾಮರ್ಥ್ಯ ಹೊಂದಿದವರೇ. ಪುಷ್ಪ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಲು ಮತ್ತೊಂದು ಕಾರಣ ಅಂದರೆ ಅದು ಫಹಾದ್​ ಫಾಜಿಲ್​ ಎನ್ನಬಹುದು.

ಇದನ್ನು ಓದಿ: ಪವರ್ ಸ್ಟಾರ್ ಅಲ್ಲ, ನಾನು ಬರೀ ಪುನೀತ್: ಅಪ್ಪು ಸರಳತೆಗೆ ಮತ್ತೊಂದು ನಿದರ್ಶನ

ಸೂಪರ್​ ಹಿಟ್​ ಜೋಡಿ ಅಲ್ಲು, ಸುಕುಮಾರ್​

ಆರ್ಯ', 'ಆರ್ಯ 2' ಬಳಿಕ ಅಲ್ಲು ಅರ್ಜುನ್ ಮತ್ತು ಸುಕುಮಾರ್​ ಒಂದಾಗಿರುವುದು 'ಪುಷ್ಪ' ಚಿತ್ರಕ್ಕಾಗಿ. ಹೀಗಾಗಿ, 'ಪುಷ್ಪ' ಚಿತ್ರದ ಬಗ್ಗೆ ಸಿನಿ ಪ್ರಿಯರಿಗೆ ನಿರೀಕ್ಷೆ ತುಸು ಹೆಚ್ಚಿದೆ. 'ಪುಷ್ಪ' ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದು, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಧನಂಜಯ, ಪ್ರಕಾಶ್ ರಾಜ್ ಮುಂತಾದವರ ತಾರಾಬಳಗವಿದೆ. ಒಟ್ನಲ್ಲಿ ಟ್ರೈಲರ್​ನಲ್ಲೇ ಬೆಂಕಿ ಹಚ್ಚಿರುವ ಪುಷ್ಪ ಇನ್ನೂ ಸಿನಿಮಾ ರಿಲೀಸ್​ ದಿನ ಅವರ ಫ್ಯಾನ್ಸ್​ಗೆ ಹಬ್ಬ ಎನ್ನಬಹುದು.
Published by:Vasudeva M
First published: