• Home
  • »
  • News
  • »
  • entertainment
  • »
  • Allu Arjun: 100 ಕೋಟಿ ಮೌಲ್ಯದ ಬಂಗ್ಲೆ, 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್! ಇದು 'ಪುಷ್ಪರಾಜ್' ಲೈಫ್‌ಸ್ಟೈಲ್

Allu Arjun: 100 ಕೋಟಿ ಮೌಲ್ಯದ ಬಂಗ್ಲೆ, 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್! ಇದು 'ಪುಷ್ಪರಾಜ್' ಲೈಫ್‌ಸ್ಟೈಲ್

ಅಲ್ಲು ಅರ್ಜುನ್ ನಿವಾಸ

ಅಲ್ಲು ಅರ್ಜುನ್ ನಿವಾಸ

ಅಲ್ಲು ಅರ್ಜುನ್ ಹೈದರಾಬಾದಿನ ಜೂಬ್ಲಿಹಿಲ್ಸ್ ನಲ್ಲಿ ಬರೋಬ್ಬರಿ ನೂರು ಕೋಟಿ ಮೌಲ್ಯದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಬ್ಲೆಸ್ಸಿಂಗ್ ಎಂದು ಕರೆಯಲಾಗುವ ಅಲ್ಲು ಅರ್ಜುನ್ ಮನೆಯು ಈಜುಕೊಳ, ಜಿಮ್, ಹೋಮ್ ಥಿಯೇಟರ್ ಮತ್ತು ಮಕ್ಕಳಿಗಾಗಿ ಆಟದ ಪ್ರದೇಶವನ್ನು ಹೊಂದಿದೆ. ಅವರ ಲೈಫ್‌ಸ್ಟೈಲ್ ಹೇಗಿದೆ ಅಂತ ನೀವೇ ಓದಿ...

ಮುಂದೆ ಓದಿ ...
  • Share this:

    ತೆಲುಗು ಚಿತ್ರರಂಗದ (Telugu cinema) ಬಹು ಬೇಡಿಕೆ ನಟ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸ್ಟೈಲಿಶ್ ಸ್ಟಾರ್ (Stylish Star) ಅಲ್ಲು ಅರ್ಜುನ್ (Allu Arjun) ಒಬ್ಬರು. ಇಲ್ಲಿವರೆಗೆ ಅನೇಕ ಬ್ಲಾಕ್ ಬಸ್ಟರ್ (Blockbuster Movies) ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಪುಷ್ಪ (Pushpa)’ ಸಿನಿಮಾದ ದೊಡ್ಡ ಗೆಲುವಿನ ಬಳಿಕ ಚಿತ್ರರಂಗದಲ್ಲಿ ನಟ ಅಲ್ಲು ಅರ್ಜುನ್ ತೂಕ ಹೆಚ್ಚಾಗಿದೆ. ‘ಪುಷ್ಪ’ ತೆರೆಕಂಡ ನಂತರ ಬಾಕ್ಸ್ ಆಫೀಸ್‌ನಲ್ಲಿ ಅಲ್ಲು ಅರ್ಜುನ್ ಬೇರೆ ಹವಾವನ್ನೇ ಸೃಷ್ಠಿ ಮಾಡಿಬಿಟ್ಟಿದ್ದಾರೆ. ಅಲ್ಲು ಅರ್ಜುನ್ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮದಲ್ಲೂ ಆ್ಯಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಅಲ್ಲು ಸಾವಿರಾರು ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ಸ್ಟೈಲಿಶ್ ಸ್ಟಾರ್ (Stylish star) ಒಂದು ಫೋಟೋ ಹಾಕಿದ್ರೆ ಸಾಕು ಅಭಿಮಾನಿಗಳು ಲೈಕ್ಸ್, ಕಾಮೆಂಟ್‌ಗಳ ಮಳೆ ಸುರಿಸಿ ಬಿಡುತ್ತಾರೆ. ಇಂತಹ ಅಲ್ಲು ಅರ್ಜುನ್ ತಮ್ಮ ಸ್ಟೈಲಿಶ್ ಲುಕ್ ನಿಂದ ಮಾತ್ರವಲ್ಲ ದುಬಾರಿ ಜೀವನ ಶೈಲಿಯಿಂದಲೇ ಸಹಾ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.


    ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ದೇಶದಾದ್ಯಂತ ಅಭಿಮಾನಿಗಳು ಇದ್ದಾರೆ.. ಹೀಗಾಗಿಯೇ ಅಲ್ಲು ಅರ್ಜುನ್ ಅವರ ಬಗೆಗಿನ ಹಲವು ಕುತೂಹಲಕಾರಿ ಮಾಹಿತಿಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಾರೆ.. ಹೀಗಾಗಿಯೇ ಅಲ್ಲು ಅರ್ಜುನ್ ಅವರ ದುಬಾರಿ ಜೀವನ ಶೈಲಿ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.


    ಇದನ್ನೂ ಓದಿ:  ರಶ್ಮಿಕಾಳ ಹಿಂದಿನ 5 ಸಿನಿಮಾಗಳ ಕಲೆಕ್ಷನ್ ಎಷ್ಟು ಗೊತ್ತಾ? ಕೋಟಿಗಳಿಗೆ ಬೆಲೆನೇ ಇಲ್ವಾ ಗುರೂ..!


    7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್: ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿರುವ ಅಲ್ಲು ಅರ್ಜುನ್ ಅವರು ವ್ಯಾನಿಟಿ ವ್ಯಾನ್, ಫಾಲ್ಕನ್ ಅನ್ನು ಭಾರತದಲ್ಲಿ 7 ಕೋಟಿ ರೂ. ಖರೀದಿಸಿದ ಮೊದಲಿಗರು. ಸಂಪೂರ್ಣ ಕಸ್ಟಮೈಸ್ ಮಾಡಿದ ವ್ಯಾನಿಟಿ ವ್ಯಾನ್ ಅನ್ನು ಭಾರತ್ ಬೆಂಜ್ ಚಾಸಿಸ್ ನಲ್ಲಿ ತಯಾರಿಸಲಾಗಿದೆ. ವಿಶೇಷ ಅಂದ್ರೆ ಈ ವ್ಯಾನಿಟಿ ವ್ಯಾನ್ ನಲ್ಲಿ ಸಂಪೂರ್ಣ ಐಷಾರಾಮಿ ಸೌಕರ್ಯಗಳು ಇದ್ದು ಅಲ್ಲು ಅರ್ಜುನ್ ಯಾವುದೇ ಕಾರ್ಯಕ್ರಮಕ್ಕೆ ಹೋದರು ಇದು ಅವರ ಜೊತೆಯೆ ಇದ್ದೇ ಇರುತ್ತದೆ.


    ದುಬಾರಿ ಕಾರುಗಳು: ಸಿನಿಮಾನಟರು ಗಳು ತಮ್ಮ ಸಿನಿಮಾದಿಂದ ಮಾತ್ರವಲ್ಲ ಅವರ ಬಳಿ ಇರುವ ಐಷಾರಾಮಿ ವಸ್ತುಗಳಿಂದಲೂ ಸಾಕಷ್ಟು ಸದ್ದು ಮಾಡುತ್ತಾರೆ.. ಅದರಲ್ಲೂ ಪ್ರತಿಯೊಬ್ಬ ಸಿನಿಮಾ ನಟರ ಬಳಿ ಇರುವ ಕಾರುಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇರುತ್ತದೆ. ಅದೇ ರೀತಿ ಅಲ್ಲು ಅರ್ಜುನ್ ಅವರ ಬಳಿಯೂ ಸಹ ಹಲವಾರು ದುಬಾರಿ ಐಷಾರಾಮಿ ಕಾರುಗಳು ಇವೆ. ರೇಂಜ್ ರೋವರ್ ವೋಗ್ - 2.5 ಕೋಟಿ, ರೇಂಜ್ ರೋವರ್ ಎಸ್‌ಯುವಿ - 65 ಲಕ್ಷ, ಬಿಎಂಡಬ್ಲ್ಯು ಎಕ್ಸ್ 5 - 80 ಲಕ್ಷ, ಆಡಿ ಎ 7 - 85 ಲಕ್ಷ, ಜಾಗ್ವರ್ ಎಕ್ಸ್‌ಜೆಎಲ್ ಸೇರಿದಂತೆ ಹಲವು ಉನ್ನತ ಕಾರುಗಳನ್ನು ಹೊಂದಿದ್ದಾರೆ.


    100 ಕೋಟಿ ಮೌಲ್ಯದ ಮನೆ: ಸಿನಿಮಾದಲ್ಲಿ ಸ್ಟೈಲಿಶ್ ಲುಕ್ ನಿಂದ ಕಾಣಿಸಿಕೊಳ್ಳುವ ಅರ್ಜುನ್ ನಿಜಜೀವನದಲ್ಲಿಯೂ ಸ್ಟೈಲಿಸ್ಟ್ ಸ್ಟಾರ್.. ಯಾವುದೇ ಟಾಲಿವುಡ್ ನಟರ ಜೀವನಕ್ಕೆ ಹೋಲಿಸಿಕೊಂಡರೆ ಅಲ್ಲು ಅರ್ಜುನ್ ಅವರ ಜೀವನಶೈಲಿ ಅತ್ಯಂತ ದುಬಾರಿಯಾಗಿದೆ.. ಹೀಗಾಗಿಯೇ ಅಲ್ಲು ಅರ್ಜುನ್ ಹೈದರಾಬಾದಿನ ಜೂಬ್ಲಿಹಿಲ್ಸ್ ನಲ್ಲಿ ಬರೋಬ್ಬರಿ ನೂರು ಕೋಟಿ ಮೌಲ್ಯದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಬ್ಲೆಸ್ಸಿಂಗ್ ಎಂದು ಕರೆಯಲಾಗುವ ಅಲ್ಲು ಅರ್ಜುನ್ ಮನೆಯು ಈಜುಕೊಳ, ಜಿಮ್, ಹೋಮ್ ಥಿಯೇಟರ್ ಮತ್ತು ಮಕ್ಕಳಿಗಾಗಿ ಆಟದ ಪ್ರದೇಶವನ್ನು ಹೊಂದಿದೆ.


    ಇದನ್ನೂ ಓದಿ: `ಭೂಮಿ’.. ತೂಕ ಕಳೆದುಕೊಂಡು ಸೆಕ್ಸಿಯಾದ ನಟಿ.. ಪಡ್ಡೆ ಹೈಕ್ಳ ನಿದ್ದೆ ಕದಿತಿದ್ದಾಳೆ ಪೆಡ್ನೆಕರ್!


    ಇನ್ನು ಹಲವು ವರದಿಗಳ ಪ್ರಕಾರ ಅಲ್ಲು ಅರ್ಜುನ್ ಅವರ ನಿವ್ವಳ ಆದಾಯ 360 ಕೋಟಿಗೂ ಅಧಿಕ. ಹಲವು ಐಷಾರಾಮಿ ಕಾರು ಹಾಗೂ ದುಬಾರಿ ವ್ಯಾನಿಟಿ ವ್ಯಾನ್ ಜೊತೆಗೆ ಅಲ್ಲು ಅರ್ಜುನ್ ಹಬ್ಲೋಟ್ ಮತ್ತು ಅರ್ಮಾನಿ ಕೈಗಡಿಯಾರಗಳನ್ನು ಹೊಂದಿದ್ದಾರೆ.

    Published by:ranjumbkgowda1 ranjumbkgowda1
    First published: