Pushpa Movie: ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ದೃಶ್ಯಗಳು ಲೀಕ್..!

'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳ ಸಾಗಣೆದಾರನ ಕತೆ ಹೊಂದಿದ್ದು, ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್

ಅಲ್ಲು ಅರ್ಜುನ್

  • Share this:
    ಸೌತ್ ಸಿನಿರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಪುಷ್ಪ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಈ ಚಿತ್ರದಲ್ಲಿ ಲಾರಿ ಡ್ರೈವರ್ ಪಾತ್ರದಲ್ಲಿ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅಲ್ಲು ಅರ್ಜುನ್​ಗೆ ಸ್ಟೈಲಿಷ್ ಇಮೇಜ್​ ತಂದುಕೊಟ್ಟ ಆರ್ಯ, ಆರ್ಯ-2 ಚಿತ್ರದ ನಿರ್ದೇಶಕ ಸುಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ.

    ಪೋಸ್ಟರ್ ಬಳಿಕ ಯಾವುದೇ ಅಪ್​ಡೇಟ್ ನೀಡದೆ ಕುತೂಹಲಕ್ಕೆ ಕಿಚ್ಚು ಹಚ್ಚಿದ್ದ ಚಿತ್ರತಂಡಕ್ಕೆ ಈಗ ಆಘಾತ ಎದುರಾಗಿದೆ. ಹೌದು, ಪುಷ್ಪ ಚಿತ್ರದ ಕೆಲ ವಿಡಿಯೋಗಳು ಮತ್ತು ಹಾಡುಗಳ ತುಣುಕು ಲೀಕ್ ಆಗಿದೆ. ಚಿತ್ರತಂಡದಲ್ಲಿರುವ ಕೆಲವರೇ ಈ ದೃಶ್ಯಗಳನ್ನು ಸೋರಿಕೆ ಮಾಡಿದ್ದಾರೆ ಎನ್ನಲಾಗಿದೆ.

    ಹಾಡಿನ ಚಿತ್ರೀಕರಣ ನಿರತರಾಗಿದ್ದ ವೇಳೆ ವಿಡಿಯೋ ಮಾಡಲಾಗಿದ್ದು, ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋದಲ್ಲಿ ಅಲ್ಲು ಅರ್ಜುನ್ ಡ್ಯಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇದರ ಜೊತೆಗೆ ಮೊತ್ತೊಂದು ವಿಡಿಯೋ ಕೂಡ ಲೀಕ್ ಆಗಿದೆ. ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣದ ಸನ್ನಿವೇಶಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಕನ್ನಡ ಸೇರಿದಂತೆ ಪಂಚಭಾಷೆಯಲ್ಲಿ ಪುಷ್ಪ ಚಿತ್ರವು ಆಗಸ್ಟ್ 13 ರಂದು ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ವಿಡಿಯೋಗಳು ಲೀಕ್ ಆಗಿರುವುದು ಚಿತ್ರತಂಡದ ಪೈರಸಿ ಭೀತಿ ಹೆಚ್ಚಿಸಿದೆ.

    'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳ ಸಾಗಣೆದಾರನ ಕತೆ ಹೊಂದಿದ್ದು, ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚಿತ್ರದ ಪ್ರಮುಖ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಒಟ್ಟಿನಲ್ಲಿ ಸ್ಟಾರ್ ನಟರಿಂದ, ವಿಭಿನ್ನ ಕಥಾಹಂದರದ ಮೂಲಕ ಸಾಕಷ್ಟು ಸದ್ದು ಮಾಡುತ್ತಿರುವ ಪುಷ್ಪ ಚಿತ್ರತಂಡಕ್ಕೆ ದೃಶ್ಯಗಳು ಲೀಕ್ ಆಗುತ್ತಿರುವುದೇ ಹೊಸ ತಲೆನೋವಾಗಿ ಪರಿಣಮಿಸಿದೆ.
    Published by:zahir
    First published: