Pushpa Movie: ಸುವರ್ಣ ಪಾಲಾದ `ಪುಷ್ಪ’ ಕನ್ನಡ ಟಿವಿ ರೈಟ್ಸ್​: ದಾಖಲೆ ಮೊತ್ತ ಕೊಟ್ಟು ಖರೀದಿ!

Pushpa Movie: ಭಾರತೀಯ ಚಿತ್ರರಂಗದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ  ಪುಷ್ಪ ಕನ್ನಡ ಟಿವಿ  ರೈಟ್ಸ್​ ಅನ್ನು ಸುವರ್ಣ ಚಾನೆಲ್​ ಖರೀದಿಸಿದೆ. ದಾಖಲೆ ಮೊತ್ತವನ್ನು ನೀಡಿ ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲುಕ್

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲುಕ್

  • Share this:
ಅಲ್ಲು ಅರ್ಜುನ್​(Allu Arjun) ನಟಿಸಿರುವ ಪುಷ್ಪ(Pushpa) ಸಿನಿಮಾ(Movie) ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಡಿಸೆಂಬರ್​ 17 ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಕಾಣುತ್ತಿದೆ. ಅಭಿಮಾನಿ(Fans)ಗಳು ಯಾವಗ ಸಮಯ ಆಗುತ್ತೆ, ಯಾವಗ ಡಿಸೆಂಬರ್ 17 ಬರುತ್ತೆ, ಯಾವಾಗ ತಮ್ಮ ನೆಚ್ಚಿನ ನಟನ ಸಿನಿಮಾ ನೋಡುತ್ತೇವೆ ಎಂದು ಕಾದು ಕುಳಿತಿದ್ದಾರೆ. ಪುಷ್ಪ ಸಿನಿಮಾ ಅನೌನ್ಸ್(Announce)​ ಆದಾಗಿನಿಂದಲೂ ಸಖತ್​ ಸೌಂಡ್(Sound)​ ಮಾಡಿಕೊಂಡೇ ಬಂದಿದೆ. ಟೀಸರ್(Teaser)​, ಸಾಂಗ್ಸ್(Songs)​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಐದು ಭಾಷೆಗಳಲ್ಲೂ ಈ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಗ ಹೊಸ ವಿಷಯ ಏನಪ್ಪಾ ಅಂದರೆ. ಪುಷ್ಪ ಕನ್ನಡ ಸಿನಿಮಾದ ಹಕ್ಕ(Movie Rights)ನ್ನು ಸುವರ್ಣ(Suvarna) ಪಡೆದುಕೊಂಡಿದೆ. ಅದು ಈ ಹಿಂದೆ ಎಂದೂ ಕೊಡದ ದಾಖಲೆ ಮೊತ್ತವನ್ನು ನೀಡಿ ಪುಷ್ಪ ಕನ್ನಡ ಸಿನಿಮಾದ ಹಕ್ಕನ್ನು ಪಡೆದುಕೊಂಡಿದೆ.ಇದೆ ಮೊದಲ ಬಾರಿಗೆ ಬೇರೆ ಭಾಷೆ(Language)ಯ ಚಲನಚಿತ್ರದ ಹಕ್ಕನ್ನು ಕನ್ನಡ ಚಾನೆಲ್​ವೊಂದು ಇಷ್ಟು ಮೊತ್ತದ ಹಣ(Money) ನೀಡಿ ಖರೀದಿ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಅಲ್ಲು ಅರ್ಜುನ್​ ಹಾಗೂ ಸೌತ್​ ಇಂಡಿಯಾ(South Indian) ಕ್ರಶ್​ ರಶ್ಮಿಕಾ ಮಂದಣ್ಣ(Rashmika Mandanna) ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. 

ದಾಖಲೆ ಮೊತ್ತ ನೀಡಿ ಟಿವಿ ರೈಟ್ಸ್​ ಖರೀದಿಸಿದ ಸುವರ್ಣ

ಭಾರತೀಯ ಚಿತ್ರರಂಗದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ  ಪುಷ್ಪ ಕನ್ನಡ ಟಿವಿ  ರೈಟ್ಸ್​ ಅನ್ನು ಸುವರ್ಣ ಚಾನೆಲ್​ ಖರೀದಿಸಿದೆ. ದಾಖಲೆ ಮೊತ್ತವನ್ನು ನೀಡಿ ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬೇರೆ ಚಾನೆಲ್​ಗಳ ಪೈಪೋಟಿ ನಡುವೆಯೂ ಸಿನಿಮಾ ಈ ರೈಟ್ಸ್​ ಪಡೆಯಲು ಯಶಸ್ವಿಯಾಗಿದೆ.ಈ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರ ಮರಗಳ್ಳನ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್​ ಬಿಡುಗಡೆಯಾದಗಿನಿಂದಲೂ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾದ ಹಾಡು ಕೂಡ ಹಿಟ್​ ಆಗಿದೆ.

ಇದನ್ನು ಓದಿ : ಮತ್ತೆ ಜೊತೆಯಾಗುತ್ತಿದ್ದಾರೆ ರಾಧಾ-ರಮಣ: ಕಿರುತೆರೆಗೆ `ರಾಧಾ ಮಿಸ್’​ ಕಮ್​ಬ್ಯಾಕ್​!?

ಟಿವಿಗೂ ಮುನ್ನ ಅಮೇಜಾನ್​ ಪ್ರೈಮ್​ನಿಂದ ರೈಟ್ಸ್ ಖರೀದಿ

ಇನ್ನೂ ಈ ಸಿನಿಮಾ ಟಿವಿಯಲ್ಲಿ ಪ್ರಸಾರಗೊಳ್ಳುವ ಮೊದಲು ಒಟಿಟಿಯಲ್ಲಿ ತೆರೆಕಾಣಲಿದೆ. ಈಗಾಗಲೇ ಅಮೇಜಾನ್​ ಪ್ರೈಮ್​ ವಿಡಿಯೋ ಈ ಸಿನಿಮಾದ ಸ್ಯಾಟ್​ಲೈಟ್​ ಹಕ್ಕನ್ನು ಖರೀದಿಸಿದ್ದಾರೆ. ಸಿನಿಮಾ ಡಿಸೆಂಬರ್​ 17ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇದಾದ ಕೆಲವು ದಿನಗಳ ನಂತರ ಮೊದಲು ಅಮೇಜಾನ್​ ಪ್ರೈಮ್​ನಲ್ಲಿ ಪ್ರಸಾರವಾಗಲಿದೆ. ಇದಾದ ಬಳಿಕ ಸುವರ್ಣ ಟಿವಿ ರೈಟ್ಸ್ ಖರೀದಿಸಿದ್ದು, ಅದರಲ್ಲಿ ಪ್ರಸಾರವಾಗಲಿದೆ. ಅದರಲ್ಲೂ ಈ ಪುಷ್ಪ ಸಿನಿಮಾ ಎರಡು ಪಾರ್ಟ್​ಗಳಲ್ಲಿ ತೆರೆಕಾಣಲಿದ್ಯಂತೆ. ಈ ಬಗ್ಗೆ ಚಿತ್ರತಂಡ ಇಲ್ಲಿಯವರೆಗೂ ಸ್ಪಷ್ಟನೆ ನೀಡಿಲ್ಲ.

ಇದನ್ನುಓದಿ : ಒಟಿಟಿ ಪ್ರಿಯರಿಗೆ ಈ ವಾರ ಸಿನಿ ರಸದೌತಣ: 5 ಸಿನಿಮಾ, 3ಕ್ಕೂ ಹೆಚ್ಚು ಸೀರಿಸ್​ ರಿಲೀಸ್​!

ಹಿಂದಿ ಡಬ್ಬಿಂಗ್​ ಹಕ್ಕನ್ನು ಹೊಂದಿರುವ ವ್ಯಕ್ತಿ ಜೊತೆ ಕಿರಿಕ್​

ಪುಷ್ಪ ಸಿನಿಮಾ ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಡಬ್​ ಆಗಿ ತೆರೆಕಾಣುತ್ತಿದೆ. ಸಿನಿಮಾ ರಿಲೀಸ್​ ಆಗೋಕೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಇದೆ. ಮೂಲಗಳ ಪ್ರಕಾರ ಮೈತ್ರಿ ಮೂವಿ ಮೇಕರ್ಸ್​ ಹಾಗೂ ಈ ಚಿತ್ರದ ಹಿಂದಿ ಡಬ್ಬಿಂಗ್​ ಹಕ್ಕನ್ನು ಹೊಂದಿರುವ ವ್ಯಕ್ತಿ ಜತೆ ಮನಸ್ತಾಪ ಮೂಡಿದೆ. ಇದನ್ನು ಪರಿಹಾರ ಮಾಡಬೇಕು ಎಂದು ಅಲ್ಲು ಅರ್ಜುನ್​ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಪರಿಹಾರ ಸಿಕ್ಕಿಲ್ಲ.ಈ ಕಾರಣಕ್ಕೆ ಹಿಂದಿ ಅವತರಣಿಕೆ ತೆರೆಕಾಣೋದು ವಿಳಂಬ ಆಗಬಹುದು ಎನ್ನುವ ಅಭಿಪ್ರಾಯ ಮೂಡುತ್ತಿದೆ.
Published by:Vasudeva M
First published: