Bimbisara: ಬಿಂಬಿಸಾರ ಸಿನಿಮಾವನ್ನು ಮನಸಾರೆ ಹೊಗಳಿದ ಅಲ್ಲು ಅರ್ಜುನ್‌, ಸಿನೆಯಾ ಮಾತ್ರ ಸೂಪರ್ ಅಂತೆ

ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ತೆಲುಗು ಚಿತ್ರ ಬಿಂಬಿಸಾರ ಆಗಸ್ಟ್ 5 ರಂದು ಚಲನಚಿತ್ರ ಮಂದಿರಗಳಲ್ಲಿ ಅದ್ಭುತವಾಗಿ ತೆರೆ ಕಂಡಿದೆ. ಈ ಸಿನಿಮಾದ ಅದ್ಭುತ ಟ್ರೈಲರ್‌ ಮತ್ತು ಸಿನಿಮಾದ ಕಥೆಯು ನಂದಮೂರಿ ಕಲ್ಯಾಣ ರಾಮ್‌ ಅವರ ಅಭಿಮಾನಿಗಳಿಗೆ ಹೊಸ ಭರವಸೆ ಮೂಡಿಸಿದೆ. ಪುಷ್ಪ ಸಿನಿಮಾ ಖ್ಯಾತಿಯ ಅಲ್ಲು ಅರ್ಜುನ್‌ ಅವರು ಈ ಸಿನಿಮಾ ಮತ್ತು ಸಿನಿಮಾ ತಂಡವನ್ನು ʼನಿಮ್ಮ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿʼ ಎಂದು ಸಾಮಾಜಿಕ ಮಾಧ್ಯಮವಾದ ಟ್ವಿಟರ್‌ನಲ್ಲಿ ಮನ ತುಂಬಿ ಹಾರೈಸಿದ್ದಾರೆ.

ಬಿಂಬಿಸಾರ ಸಿನೆಮಾ

ಬಿಂಬಿಸಾರ ಸಿನೆಮಾ

  • Share this:
ನಂದಮೂರಿ ಕಲ್ಯಾಣ್ ರಾಮ್ (Nandamuri Kalyan Ram) ಅಭಿನಯದ ತೆಲುಗು ಚಿತ್ರ ಬಿಂಬಿಸಾರ (Bimbisara) ಆಗಸ್ಟ್ 5 ರಂದು ಚಲನಚಿತ್ರ ಮಂದಿರಗಳಲ್ಲಿ (Movie Theater) ಅದ್ಭುತವಾಗಿ ತೆರೆ ಕಂಡಿದೆ. ಈ ಸಿನಿಮಾದ ಅದ್ಭುತ ಟ್ರೈಲರ್‌ ಮತ್ತು ಸಿನಿಮಾದ ಕಥೆಯು ನಂದಮೂರಿ ಕಲ್ಯಾಣ ರಾಮ್‌ ಅವರ ಅಭಿಮಾನಿಗಳಿಗೆ ಹೊಸ ಭರವಸೆ ಮೂಡಿಸಿದೆ. ಪುಷ್ಪ ಸಿನಿಮಾ ಖ್ಯಾತಿಯ ಅಲ್ಲು ಅರ್ಜುನ್‌ (Allu Arjun) ಅವರು ಈ ಸಿನಿಮಾ ಮತ್ತು ಸಿನಿಮಾ ತಂಡವನ್ನು ʼನಿಮ್ಮ ಸಿನಿಮಾ ಉತ್ತಮ ಪ್ರದರ್ಶನ ಕಾಣಲಿʼ ಎಂದು ಸಾಮಾಜಿಕ ಮಾಧ್ಯಮವಾದ (Social Media) ಟ್ವಿಟರ್‌ನಲ್ಲಿ (Twitter) ಮನ ತುಂಬಿ ಹಾರೈಸಿದ್ದಾರೆ.

ಸಿನೆಮಾ ಹಾಗು ಸಿನಿಮಾ ತಂಡಕ್ಕೆ ಏನಂದ್ರು ಅಲ್ಲು ಅರ್ಜುನ್ 
ಅಲ್ಲು ಅರ್ಜುನ್‌ ಈ ಸಿನಿಮಾಗೆ “ನಿಮಗೆ ದೊಡ್ಡ ಅಭಿನಂದನೆಗಳು, #ಬಿಂಬಿಸಾರ ತಂಡ. ನಿಮ್ಮ ಸಿನಿಮಾ ಎಷ್ಟು ಅದ್ಭುತ ಆಗಿದೆ ಎಂದರೆ ಆ ಸಿನಿಮಾವನ್ನು ವೀಕ್ಷಿಸಿದರೆ ಯಾವುದೋ ಫ್ಯಾಂಟಸಿ ಮತ್ತು ಇಂಟ್ರೆಸ್ಟಿಂಗ್‌ ಕಥೆ ನೋಡಿದ ಅನುಭವ ಆಗುತ್ತದೆ, ನಂದಮೂರಿ ಕಲ್ಯಾಣ ಅವರೇ, ಒಟ್ಟಾರೆ ನಿಮ್ಮ ಬಿಂಬಿಸಾರ ಸಿನಿಮಾ ನಿಜಕ್ಕೂ ಅದ್ಭುತ ಆಗಿದೆ. ನೀವು ಸಿನಿಮಾ ಇಂಡಸ್ಟ್ರೀಗೆ ಹೊಸ-ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವುದು ನನಗೆ ನಿಮ್ಮ ಮೇಲೆ ಮತ್ತಷ್ಟು ಗೌರವವನ್ನು ಹೆಚ್ಚಿಸುತ್ತದೆ” ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬಿಂಬಿಸಾರ ಸಿನಿಮಾವನ್ನು ಹೊಗಳಿ ಟ್ವಿಟ್‌ ಬರೆದಿದ್ಧಾರೆ.

ಇದನ್ನೂ ಓದಿ: Vijay Deverakonda: ವಿಜಯ್ ದೇವರಕೊಂಡ ಅವರ ‘ಲೈಗರ್’ ಸಿನಿಮಾ ನೋಡುವುದಕ್ಕೂ ಮುನ್ನ ಈ ಚಿತ್ರಗಳನ್ನು ನೋಡಿಆ ನಂತರ ಮತ್ತೆ ಅಲ್ಲು ಅರ್ಜುನ್‌, “ಬಿಂಬಿಸಾರ ಸಿನಿಮಾದ ನಿರ್ದೇಶಕರಾದ ಮಲ್ಲಿಡಿ ವಸಿಷ್ಠ ಮತ್ತು ಸಿನಿಮಾದ ತಾಂತ್ರಿಕ ತಂಡವು ನಿಜಕ್ಕೂ ಶ್ಲಾಘನೀಯ ಕೆಲಸ ಮಾಡಿದೆ. ನಾನು ನಿಮ್ಮ ಕೆಲಸವನ್ನು ನಿಜಕ್ಕೂ ಮನ ತುಂಬಿ ಹಾರೈಸುತ್ತೇನೆ. ಹಾಗೆಯೇ ಈ ಸಿನಿಮಾದ ನಟ-ನಟಿಯರೂ ನಿಮ್ಮ- ನಿಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದೀರಿ. ಅದಕ್ಕೆ ಎಲ್ಲರಿಗೂ ಕಂಗ್ರಾಜುಲೇಟ್ಸ್‌” ಎಂದು ಟ್ವೀಟ್‌ ಬರೆದಿದ್ದಾರೆ.

ಬಿಂಬಿಸಾರ ಸಿನಿಮಾದ ಕುರಿತು ಪುಟ್ಟ ಮಾಹಿತಿ ಇಲ್ಲಿದೆ
ಬಿಂಬಿಸಾರ ಒಂದು ಫ್ಯಾಂಟಸಿ ಆಕ್ಷನ್ ಕಟ್‌ ಸಿನಿಮಾ ಆಗಿದ್ದು, ಇದರಲ್ಲಿ ತನ್ನ ರಾಜ್ಯವನ್ನು ವಿಸ್ತರಿಸಲು ನಿರ್ಧರಿಸಿರುವ ನಿರ್ದಯ ರಾಜನ ಪಾತ್ರದಲ್ಲಿ ನಂದಮೂರಿ ಕಲ್ಯಾಣ್ ರಾಮ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಇದು ಸಮಯ ಹೇಗೆಲ್ಲ ಬೇರೆ ಬೇರೆ ಪರಿಸ್ಥಿತಿಗಳನ್ನು ತರುತ್ತದೆ ಎಂಬ ಪ್ರಯಾಣದ ಪರಿಕಲ್ಪನೆಯನ್ನು ಸ್ಪರ್ಶಿಸುವ ಸಾಧ್ಯತೆಯನ್ನು ಹೊಂದಿರುವ ಸಿನಿಮಾ ಆಗಿದೆ. ಬಿಂಬಿಸಾರ ಸಿನಿಮಾದಲ್ಲಿ ಕ್ಯಾಥರೀನ್ ತ್ರೇಸಾ ಮತ್ತು ಸಂಯುಕ್ತಾ ಮೆನನ್ ನಾಯಕಿಯರಾಗಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ತಾರಾಗಣದಲ್ಲಿ ವಾರಿನಾ ಹುಸೇನ್, ವೆನಿಲ್ಲಾ ಕಿಶೋರ್, ಶ್ರೀನಿವಾಸ್ ರೆಡ್ಡಿ, ಬ್ರಹ್ಮಾಜಿ ಮತ್ತು ಪ್ರಕಾಶ್ ರಾಜ್ ಮುಂತಾದವರು ಇದ್ದಾರೆ. ಬಿಂಬಿಸಾರ ಸಿನಿಮಾವನ್ನು ಎನ್‌ಟಿಆರ್ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ಹರಿಕೃಷ್ಣ.ಕೆ ನಿರ್ಮಾಣ ಮಾಡಿದ್ಧಾರೆ.

ಅಲ್ಲು ಅರ್ಜುನ್ ಬಗ್ಗೆ ಒಂದಿಷ್ಟು ಮಾತು
ಅಲ್ಲು ಅರ್ಜುನ್ - 1983 ರ ಏಪ್ರಿಲ್ 8 ರಂದು ಜನಿಸಿರುವ ಇವರು ಭಾರತೀಯ ಸಿನಿಮಾ ನಟರಾಗಿದ್ದು, ಇವರು ತೆಲುಗು ಸಿನೆಮಾಗಳಲ್ಲಿ ಅಭಿನಯಿಸುತ್ತಾರೆ. ಅಲ್ಲು ಅರ್ಜುನ್ ಅವರು ನಿರ್ಮಾಪಕರಾದ ಅಲ್ಲು ಅರವಿಂದ್ ಅವರ ಪುತ್ರರಾಗಿದ್ಧಾರೆ. ಅಲ್ಲು ಅರ್ಜುನ್ ಅವರು ಕೆ. ರಾಘವೇಂದ್ರ ರಾವ್ಅವರ ಗಂಗೋತ್ರಿ (2003) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲು ಅರ್ಜುನ್ ಅವರನ್ನು ಸ್ಟೈಲಿಶ್ ಸ್ಟಾರ್ ಅಂತಲೂ ಕರೆಯುತ್ತಾರೆ. ಪುಷ್ಪ: ದಿ ರೈಸ್ ಚಿತ್ರದ ಮೂಲಕ ಪ್ಯಾನ್-ಇಂಡಿಯಾ ತಾರೆಯಾಗಿ ತನ್ನನ್ನು ತಾನು ಗುರುತಿಸಿಕೊಂಡ ಅದ್ಭುತ ನಟ ಆಗಿದ್ದಾರೆ. ಪ್ರತಿ ಸಿನಿಮಾಗೂ ತಮ್ಮ ಸ್ಟೈಲ್‌ ಅನ್ನು ಬದಲಾಯಿಸಲು ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: Bimbisara Movie ನೋಡಿ ವಿಮರ್ಶಕರು ಏನಂದ್ರು? ಇವರ ಪ್ರಕಾರ ಸಿನೆಮಾ ಹೇಗಿದ್ಯಂತೆ?

ಅವರು ಆರ್ಯ 2 (2009), S/O ಸತ್ಯಮೂರ್ತಿ ಮತ್ತು ರುದ್ರಮಾದೇವಿ (2015), ಸರ್ರೈನೋಡು (2016), ಡಿಜೆ: ದುವ್ವಾಡ ಜಗನ್ನಾಥಂ (2017) ಮತ್ತು ಅಲಾ ವೈಕುಂಠಪುರಮುಲೂ (2020) ನಂತಹ ಅನೇಕ ಹಿಟ್‌ಗಳನ್ನು ನೀಡಿದ್ದಾರೆ. ಇತ್ತಿಚೀಗೆ ಬಿಡುಗಡೆಯಾದ ಪುಷ್ಪ ಸಿನಿಮಾ ಇವರನ್ನು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಾಡಿದೆ. ಅಲ್ಲು ಅರ್ಜುನ್ ಅವರು ತಮ್ಮ ಅಭಿನಯಕ್ಕಾಗಿ ಫಿಲ್ಮ್‌ಫೇರ್‌ ಮತ್ತು ನಂದಿ ಪ್ರಶಸ್ತಿಯನ್ನು ಒಳಗೊಂಡು ಪ್ರಮುಖ ಮನ್ನಣೆಗಳನ್ನು ಗಳಿಸಿದ್ದಾರೆ.
Published by:Ashwini Prabhu
First published: