`100 ಕೋಟಿ ಕಲೆಕ್ಷನ್ ಮಾಡುವ ಸಿನಿಮಾಗಳು ಎಂದರೆ ಅದು ಬಾಲಿವುಡ್ ಭಾಷೆಯ ಚಿತ್ರಗಳಿಗೆ ಮಾತ್ರ ಸೀಮಿತ ಅಂತ ಹೇಳಲಾಗುತ್ತಿತ್ತು. ಆದರೆ, ನಮ್ಮ ದಕ್ಷಿಣ ಭಾರತದ ನಾಯಕರು ಪುಡಿ ಪುಡಿ ಮಾಡಿದ್ದರು. ಬಾಲಿವುಡ್ ಸಿನಿಮಾಗಳಿಂತ ಹೆಚ್ಚು ಕಲೆಕ್ಷನ್ ನಾವು ಮಾಡುತ್ತೇವೆ ಎಂದು ತೋರಿಸಿಕೊಟ್ಟಿದ್ದಾರೆ. ಅದರಲ್ಲೂ ತಲೈವಾ ರಜನಿಕಾಂತ್ ಬಾಕ್ಸ್ ಆಫೀಸ್ ರೂಲರ್ ಎಂಬುದನ್ನು ಹಲವಾರು ಬಾರಿ ನಿರೂಪಿಸಿದ್ದಾರೆ. ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳಿಗೆ ನೂರು ಕೋಟಿ ಎಂಬುದು ಚಿಲ್ಲರೆ ಲೆಕ್ಕವಾಗಿಬಿಟ್ಟಿದೆ. ಅಷ್ಟರ ಮಟ್ಟಿಗೆ ನಮ್ಮ ಸಿನಿಮಾಗಳ ಮಾರುಕಟ್ಟೆ ವಿಸ್ತಿರ್ಣವಾಗಿದೆ. ಆದರೆ ಹೊಸ ವಿಷಯ ಏನೆಂದರೆ, ಸಿನಿಮಾ ಬಿಡುಗಡೆಗೂ ಮುನ್ನವೇ ದಕ್ಷಣ ಭಾರತದ ಸ್ಟಾರ್ ಸಿನಿಮಾಗಳು 100 ಕೋಟಿಗೂ ಹೆಚ್ಚು ಬ್ಯುಸಿನೆಸ್ ಮಾಡುತ್ತಿವೆ. ಹೌದು, ಸ್ಟೈಲಿಶ್ ಸ್ಟಾರ್, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ದೊಡ್ಡ ಬಜೆಟ್ನ ಈ ಸಿನಿಮಾ ಈಗಾಗಲೇ 100 ಕೋಟಿಗೂ ಹೆಚ್ಚು ಬ್ಯುಸಿನೆಸ್ ಮಾಡಿದೆಯಂತೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ದಿನ ಇರುವಾಗಲೇ ಮೊದಲ ದಿನದ ಮೊದಲ ಶೋನ ಬಹುತೇಕ ಟಿಕೆಟ್ಗಳು ಖಾಲಿಯಾಗಿವೆ. ಹಾಗಾಗಿ ಈ ಸಿನಿಮಾ ಮೊದಲ ದಿನದ ಕಲೆಕ್ಷನ್ನ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಿದೆ ಎಂದು ಹೇಳಲಾಗುತ್ತಿದೆ.
106 ಕೋಟಿಗೆ ಸ್ಟಾಟಿಲೈಟ್ ರೇಟ್ಸ್ ಸೇಲ್!
ಆಂಧ್ರ ಹಾಗೂ ತೆಲಂಗಾಣದಲ್ಲಿ 'ಪುಷ್ಪ' ಸಿನಿಮಾದ ಬಿಡುಗಡೆ ಹಕ್ಕು ಬರೋಬ್ಬರಿ 106 ಕೋಟಿ ರುಪಾಯಿಗೆ ಮಾರಾಟವಾಗಿದೆ. ನಿಜಾಮ್ ಏರಿಯಾದಲ್ಲಿ ಅತಿ ಹೆಚ್ಚು ಅಂದರೆ 40 ಕೋಟಿ, ಸೀಡೆಡ್ ಪ್ರಾಂತ್ಯದಲ್ಲಿ 18 ಕೋಟಿ, ಉತ್ತರ ಆಂಧ್ರಕ್ಕೆ 12.50 ಕೋಟಿ, ಗುಂಟೂರು ಪ್ರಾಂತ್ಯದಲ್ಲಿ 9 ಕೋಟಿ, ಈಸ್ಟ್ ಗೋದಾವರಿ ಜಿಲ್ಲೆಯಲ್ಲಿ 8 ಹಾಗೂ ವೆಸ್ಟ್ ಗೋದಾವರಿ ಜಿಲ್ಲೆಯಲ್ಲಿ 7 ಕೋಟಿ, ಕೃಷ್ಣ ಪ್ರಾಂತ್ಯದಲ್ಲಿ 7.50 ಕೋಟಿ, ನೆಲ್ಲೂರು ಭಾಗದಲ್ಲಿ 4 ಕೋಟಿಗೆ ಸಿನಿಮಾ ಮಾರಾಟವಾಗಿದೆ. ಅಲ್ಲು ಅರ್ಜುನ್ ಮೊದಲ ಬಾರಿಗೆ ರಕ್ತಚಂದನ ಕಳ್ಳನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾ ಮೇಲಿರುವ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇದನ್ನು ಓದಿ : ಹೊಸ ದಾಖಲೆಗಳಿಗೆ ಮುನ್ನುಡಿ ಬರೆದ `ಅಖಂಡ’: ಬಾಲಯ್ಯನ ಆರ್ಭಟಕ್ಕೆ ರೆಕಾರ್ಡ್ಗಳೇ ಚಿಂದಿ ಚಿಂದಿ!
ರಿಲೀಸ್ಗೂ ಮುನ್ನವೇ 200 ಕೋಟಿ ಗಳಿಸಿದ ಪುಷ್ಪ!
ಭಾರತದ ಉಳಿದ ಭಾಗಗಳಿಗೆ 12 ಕೋಟಿ ಹಣಕ್ಕೆ ಸಿನಿಮಾ ಮಾರಾಟವಾಗಿದೆ. ಇದರ ಜೊತೆಗೆ ವಿವಿಧ ಭಾಷೆಗಳ ಡಬ್ಬಿಂಗ್ ಸಿನಿಮಾಗಳ ಬಿಡುಗಡೆ ಹಕ್ಕು 20 ಕೋಟಿಗೆ ಮಾರಾಟವಾಗಿದೆ. ಭಾರತ ಬಿಟ್ಟು ವಿದೇಶದಲ್ಲಿ ಸಿನಿಮಾ ಮಾರಾಟದ ಹಕ್ಕು 13 ಕೋಟಿಗೆ ವ್ಯಾಪಾರವಾಗಿದೆ. ವಿಶ್ವದಾದ್ಯಂತ ಕೇವಲ ಚಿತ್ರಮಂದಿರ ಬಿಡುಗಡೆ ಹಕ್ಕು ಮಾರಾಟದಿಂದ 'ಪುಷ್ಪ' ಸಿನಿಮಾ ಈವರೆಗೆ 130 ಕೋಟಿ ರುಪಾಯಿ ಹಣ ಗಳಿಸಿ ಆಗಿದೆ. ಸಿನಿಮಾದ ಡಿಜಿಟಲ್, ಸ್ಯಾಟಲೈಟ್ ಹಕ್ಕು, ಆಡಿಯೋ ಹಕ್ಕುಗಳ ಮಾರಾಟದಿಂದ ಬಂದ ಮೊತ್ತ ಸೇರಿದರೆ ಸಿನಿಮಾ ಈಗಾಗಲೇ 200 ಕೋಟಿ ಗಳಿಕೆಯನ್ನು ದಾಟಿ ಆಗಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : ಮಾಡರ್ನ್ ಲುಕ್ನಲ್ಲಿ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ನಟಿ ರಶ್ಮಿಕಾ ಮಂದಣ್ಣ
'ಪುಷ್ಪ' ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಇದೀಗ ಡಿಸೆಂಬರ್ 17 ರಂದು ಸಿನಿಮಾದ ಮೊದಲ ಭಾಗವಷ್ಟೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಏಪ್ರಿಲ್ ತಿಂಗಳ ವೇಳೆಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಕನ್ನಡಿಗ ಡಾಲಿ ಧನಂಜಯ್, ವಿಲನ್ ಆಗಿ ಫಹಾದ್ ಫಾಸಿಲ್, ಹಾಸ್ಯನಟ ಸುನಿಲ್, ಅನುಸೂಯ ಇನ್ನಿತರರು ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ