Allu Arjun: `ಪುಷ್ಪ’ಗಿಂತ ದೊಡ್ಡ ಪ್ರಾಜೆಕ್ಟ್​ನಲ್ಲಿ ಅಲ್ಲು ಅರ್ಜುನ್​! ಮುಂಬೈನಲ್ಲಿ ಆ ನಿರ್ದೇಶಕನ ಭೇಟಿಯ ಉದ್ದೇಶವೇನು?

ಸ್ಟೈಲಿಶ್ ಸ್ಟಾರ್  ಅಲ್ಲು ಅರ್ಜುನ್​ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ‘ಪುಷ್ಪ: ದಿ ರೈಸ್’ ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ.‘ಪುಷ್ಪ: ದಿ ರೂಲ್’ ಸಿನಿಮಾದ ಚಿತ್ರೀಕರಣದಲ್ಲಿ ನಟ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ.ಹೀಗಿರುವಾಗಲೇ, ನಟ ಅಲ್ಲು ಅರ್ಜುನ್ ಮುಂಬೈಗೆ ಭೇಟಿ ನೀಡಿದ್ದಾರೆ.

ಅಲ್ಲು ಅರ್ಜುನ್​, ಸಂಜಯ್​ ಲೀಲಾ ಭನ್ಸಾಲಿ

ಅಲ್ಲು ಅರ್ಜುನ್​, ಸಂಜಯ್​ ಲೀಲಾ ಭನ್ಸಾಲಿ

  • Share this:
ಸಂಜಯ್‌ ಲೀಲಾ ಬನ್ಸಾಲಿ (Sanjay Leela Bhansali) ಅವರ ʼಗಂಗೂಬಾಯಿ ಕಾಠಿಯಾವಾಡಿʼ (Gangubai Kathiawadi) ಚಿತ್ರ ಬಿಡುಗಡೆಗೂ ಮೊದಲೇ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಇತ್ತೀಚಿಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆಲ್ಲುವ ಮೂಲಕ ಭರ್ಜರಿ ಪ್ರದರ್ಶನ ಕಾಣುತ್ತಿರುವ ʼಗಂಗೂಬಾಯಿ ಕಾಠಿಯಾವಾಡಿʼ ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ (Box Office) ಸದ್ದು ಮಾಡಿದೆ. ಬಾಲಿವುಡ್‌ನಲ್ಲಿ (Bollywood) ಧೂಳೆಬ್ಬಿಸುತ್ತಿರುವ ಈ ಚಿತ್ರ 102.68 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಬಾಲಿವುಡ್​​ನಲ್ಲಿ ಮೊದಲಿನಿಂದಲೂ ತನ್ನದೇ ಟ್ರೇಡ್​ ಮಾರ್ಕ್ ಕ್ರಿಯೇಟ್​ ಮಾಡಿರುವ ಸಂಜಯ್​ ಲೀಲಾ ಭನ್ಸಾಲಿ(Sanjay Leeela Bhansali) ಸಿನಿಮಾಗಳು ಸಖತ್​ ಸುದ್ದಿಯಾಗುತ್ತವೆ. ಇದೀಗ ಗಂಗೂಬಾಯಿ ಬಳಿಕ ಅವರ ಮುಂದಿನ ಸಿನಿಮಾ ಯಾವುದು? ಯಾವ ಸ್ಟಾರ್​ ನಟನ ಜೊತೆ ಅಂತ ಚರ್ಚೆಯಾಗುತ್ತಿದೆ. ಯಾಕೆಂದರೆ ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗಳು ಅಂದರೆ ಅಲ್ಲಿ ಸ್ಟಾರ್​ ಕ್ಯಾಸ್ಟ್​​(Star Cast)ಗೇನು ಕಡಿಮೆ ಇರಲ್ಲ. ‘

ಮುಂಬೈನಲ್ಲಿ ಸಂಜಯ್​ ಭೇಟಿಯಾದ ಅಲ್ಲು ಅರ್ಜುನ್​!

ಸ್ಟೈಲಿಶ್ ಸ್ಟಾರ್  ಅಲ್ಲು ಅರ್ಜುನ್​ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ‘ಪುಷ್ಪ: ದಿ ರೈಸ್’ ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ.‘ಪುಷ್ಪ: ದಿ ರೂಲ್’ ಸಿನಿಮಾದ ಚಿತ್ರೀಕರಣದಲ್ಲಿ ನಟ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ.ಹೀಗಿರುವಾಗಲೇ, ನಟ ಅಲ್ಲು ಅರ್ಜುನ್ ಮುಂಬೈಗೆ ಭೇಟಿ ನೀಡಿದ್ದಾರೆ. ಮುಂಬೈನಲ್ಲಿರುವ ಬಾಲಿವುಡ್‌ನ ಖ್ಯಾತ ಫಿಲ್ಮ್‌ ಮೇಕರ್ ಸಂಜಯ್​ ಲೀಲಾ ಭನ್ಸಾಲಿ ಅವರ ಕಛೇರಿಗೆ ನಟ ಅಲ್ಲು ಅರ್ಜುನ್ ಭೇಟಿ ನೀಡಿದ್ದಾರೆ. ಇದು ಅಲ್ಲು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.

ಬಿಗ್​ ಬಜೆಟ್​ ಸಿನಿಮಾದಲ್ಲಿ ಅಲ್ಲು ಅರ್ಜುನ್​?

ಫಿಲ್ಮ್ ಮೇಕರ್ ಸಂಜಯ್ ಲೀಲಾ ಭನ್ಸಾಲಿ ಅವರ ಕಛೇರಿಗೆ ಅಲ್ಲು ಅರ್ಜುನ್ ಭೇಟಿ ನೀಡುತ್ತಿದ್ದಂತೆಯೇ, ಬಾಲಿವುಡ್​ ಅಂಗಳದಲ್ಲಿ ಗುಲ್ಲೆಬ್ಬಿದೆ. ಹೊಸ ಪ್ರಾಜೆಕ್ಟ್‌ವೊಂದಕ್ಕೆ ಅಲ್ಲು ಅರ್ಜುನ್ ಹಾಗೂ ಸಂಜಯ್ ಲೀಲಾ ಭನ್ಸಾಲಿ ಒಂದಾಗುತ್ತಿದ್ದಾರೆ. ಹೀಗಾಗಿ, ಹೊಸ ಪ್ರಾಜೆಕ್ಟ್‌ ಬಗ್ಗೆ ಮಾತುಕತೆ ನಡೆಸಲು ಸಂಜಯ್ ಲೋಲಾ ಭನ್ಸಾಲಿ ಅವರ ಆಫೀಸ್‌ಗೆ ಅಲ್ಲು ಅರ್ಜುನ್ ಬಂದಿದ್ದರು ಅಂತೆಲ್ಲಾ ಗುಸುಗುಸು ಕೇಳಿಬರುತ್ತಿದೆ. ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ‘ಪ್ರಿಯಾಂಕಾ ಚೋಪ್ರಾ, ರಣ್‌ವೀರ್ ಸಿಂಗ್, ಅಜಯ್ ದೇವ್ಗನ್, ಸಲ್ಮಾನ್ ಖಾನ್ ರಂತಹ ದೊಡ್ಡ ಸ್ಟಾರ್‌ಗಳಿಗೆ ಆಕ್ಷನ್ ಕಟ್ ಹೇಳಿರುವ ಸಂಜಯ್ ಲೀಲಾ ಭನ್ಸಾಲಿ ಇದೀಗ ಅಲ್ಲು ಅರ್ಜುನ್ ಜೊತೆಗೆ ಕೈ ಜೋಡಿಸುತ್ತಾರಾ ಎಂದು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೊನೆಗೂ ದುನಿಯಾ ವಿಜಯ್​ ತೆಲುಗು ಸಿನಿಮಾದ ಲುಕ್​ ರಿವೀಲ್​.. ಅಬ್ಬರಿಸೋಕೆ ರೆಡಿಯಾದ ರೆಡ್ಡಿಗಾರು!

ಮತ್ತೆ ಒಂದಾಗುತ್ತಿದ್ದಾರೆ ರಣ್​ವೀರ್​ ಸಿಂಗ್​ ಹಾಗೂ ಸಂಜಯ್!

ಸದ್ಯಕ್ಕೆ ‘ಗಂಗೂಬಾಯಿ ಕಥಿಯಾವಾಡಿ’ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ತಮ್ಮ ಮುಂದಿನ ಪ್ರಾಜೆಕ್ಟ್‌ ‘ಬೈಜು ಬಾವ್ರಾ’ ಚಿತ್ರಕ್ಕಾಗಿ ರಣ್‌ವೀರ್ ಸಿಂಗ್ ಜೊತೆಗೆ ಕೈ ಜೋಡಿಸಿದ್ದಾರೆ. ‘ಗೋಲಿಯೋಂಕಿ ರಾಸ್‌ಲೀಲಾ ರಾಮ್ ಲೀಲಾ’, ‘ಭಾಜಿರಾವ್ ಮಸ್ತಾನಿ’, ‘ಪದ್ಮಾವತ್’ ನಂತರ ‘ಬೈಜು ಬಾವ್ರಾ’ ಮೂಲಕ ನಾಲ್ಕನೇ ಬಾರಿಗೆ ರಣ್‌ವೀರ್ ಸಿಂಗ್ ಹಾಗೂ ಸಂಜಯ್ ಲೀಲಾ ಭನ್ಸಾಲಿ ಒಂದಾಗುತ್ತಿದ್ದಾರೆ.

ಇದನ್ನೂ ಓದಿ: 100 ಕೋಟಿ ಕ್ಲಬ್ ಸೇರಿದ 'ಗಂಗೂಬಾಯಿ'! ಇದುವರೆಗೂ ಸಿನಿಮಾ ಗಳಿಸಿದ್ದೆಷ್ಟು?

ಈ ಹಿಂದೆ ಸಂಜಯ್​ ಲೀಲಾ ಭನ್ಸಾಲಿ  ‘ಖಾಮೋಷಿ: ದಿ ಮ್ಯೂಸಿಕಲ್’, ‘ಹಮ್ ದಿಲ್ ದೇ ಚುಕೇ ಸನಂ’, ‘ದೇವ್‌ದಾಸ್’, ‘ಬ್ಲಾಕ್’, ‘ಸಾವರಿಯಾ’, ‘ಗುಜಾರಿಷ್’ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು.
Published by:Vasudeva M
First published: