'ಉರಿ, ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಮಾಡಿ ಬಾಲಿವುಡ್‌ನಲ್ಲಿ(Bollywood) ಟಾಪ್ ನಿರ್ದೇಶಕರ ಪಟ್ಟಿಗೆ ಸೇರಿದ್ದ ಆದಿತ್ಯಧರ್ 'ದಿ ಇಮ್ಮಾರ್ಟಲ್ ಅಶ್ವತ್ಥಾಮʼ ಎಂಬ ಸಿನಿಮಾವನ್ನು (Cinema) ಮಾಡಲು ಮುಂದಾಗಿದ್ದಾರೆ. ಆದರೆ ವಿಪರ್ಯಾಸ ಎಂದರೆ ಕಳೆದ ಐದು ವರ್ಷಗಳಿಂದ ಚರ್ಚೆಯಲ್ಲಿರುವ ಈ ಸಿನಿಮಾಕ್ಕೆ ಮುಹೂರ್ತನೆ ಕೂಡಿ ಬರುತ್ತಿಲ್ಲ. ಆದಿತ್ಯಧರ್ ಅವರ 'ಇಮ್ಮಾರ್ಟಲ್ ಅಶ್ವತ್ಥಾಮʼ ಚಿತ್ರಕ್ಕೆ ಮೊದಲಿಗೆ ತಮ್ಮ ಉರಿ ಚಿತ್ರದ ನಾಯಕ ವಿಕ್ಕಿ ಕೌಶಾಲ್ ಅವರನ್ನೇ ಕೇಳಲಾಗಿತ್ತು. ಆದರೆ ಇತ್ತೀಚೆಗೆ ವಿಕ್ಕಿ ಕೌಶಾಲ್ ಕೂಡ ಈ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಹಾಗೆಯೇ ಕೆಜಿಎಫ್ ಖ್ಯಾತಿಯ ಯಶ್ ಅವರಿಗೂ ಆಫರ್ (Offer) ನೀಡಲಾಗಿತ್ತು. ಆದರೆ ಈ ಎಲ್ಲಾ ಮಾತುಕಥೆ ವಿಫಲವಾಗಿದ್ದು, ಸಿನಿಮಾಗೆ ಹೀರೋ ಸಿಗದೆ ನಿರ್ದೇಶಕರು ಪರದಾಡುತ್ತಿದ್ದಾರೆ.
ʻದಿ ಇಮ್ಮಾರ್ಟಲ್ ಅಶ್ವತ್ಥಾಮʼ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡ್ತಾರಾ ಅಲ್ಲು?
ಆದರೆ ಹೊಸ ಅಪ್‌ಡೇಟ್ ಪ್ರಕಾರ ಪುಷ್ಪ ಮೂಲಕ ತಮ್ಮ ನಟನೆ, ಖ್ಯಾತಿಯ ತೂಕವನ್ನು ಹೆಚ್ಚಿಸಿಕೊಂಡ ಅಲ್ಲು ಅರ್ಜುನ್ ಅವರಿಗೆ ಸಿನಿಮಾವನ್ನು ಆಫರ್ ಮಾಡಲಾಗಿದ್ದು, ಮಾತುಕತೆಗಳು ನಡೆಯುತ್ತಿವೆ ಎನ್ನಲಾಗಿದೆ.
ಇನ್ನೇನೂ ಸಿನಿಮಾದ ಕಥೆ ಮುಗಿಯಿತು ಎನ್ನುವ ಸಂದರ್ಭದಲ್ಲಿ ಮತ್ತೆ ಆದಿತ್ಯ ಧರ್ ತಮ್ಮ ಕನಸಿನ ಪ್ರಾಜೆಕ್ಟ್ ಅನ್ನು ಅಲ್ಲು ಅರ್ಜುನ್ ಜೊತೆ ಮಾತನಾಡುವ ಮೂಲಕ ಮತ್ತೆ ಟ್ರ್ಯಾಕ್‌ಗೆ ತಂದಿರುವ ಸೂಚನೆಗಳು ಲಭ್ಯವಾಗುತ್ತಿವೆ.
ಇದನ್ನೂ ಓದಿ: The Kerala Story: 100 ಕೋಟಿ ಕ್ಲಬ್ ಸೇರಿತು ದಿ ಕೇರಳ ಸ್ಟೋರಿ, ರಿಲೀಸ್ ಆದ ಒಂದೇ ವಾರದಲ್ಲಿ ಕಮಾಲ್!
ಸಿನಿಮಾ ನಿರ್ಮಾಣಕ್ಕೆ ಬಂದ ಜಿಯೋ ಸ್ಟುಡಿಯೋ
ಬಲ್ಲ ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಜಿಯೋ ಸ್ಟುಡಿಯೋಸ್ ಜೊತೆ ಅಶ್ವತ್ಥಾಮನ ನಾಮಕರಣದ ಪಾತ್ರವನ್ನು ನಿರ್ವಹಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಹಂಚಿಕೊಂಡಿದ್ದಾರೆ. ನಿರ್ದೇಶಕ ಆದಿತ್ಯಧರ್ ಡ್ರೀಮ್ ಪ್ರಾಜೆಕ್ಟ್ 'ಇಮ್ಮಾರ್ಟಲ್ ಆಶ್ವತ್ಥಾಮ'. ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಜಿಯೋ ಸ್ಟುಡಿಯೋ ಮುಂದೆ ಬಂದಿದೆ. ಇಲ್ಲಿ ಅಶ್ವತ್ಥಾಮನ ಪಾತ್ರ ಮಾಡುವುದಕ್ಕೆ ಅಲ್ಲು ಅರ್ಜನ್ ಜೊತೆ ಜಿಯೋ ಸ್ಟುಡಿಯೋ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ದೊಡ್ಡ ಬಜೆಟ್ ಸಿನಿಮಾ
ಅಲ್ಲು ಅರ್ಜುನ್ ಜೊತೆಗೆ ಮಾತುಕತೆ ಇನ್ನೂ ಆರಂಭಿಕ ಹಂತದಲ್ಲಿದೆ. ಚಿತ್ರದ ಕಥೆ ಬಗ್ಗೆ ಅಲ್ಲು ಅರ್ಜುನ್ ಭರವಸೆ ವ್ಯಕ್ತಪಡಿಸಿದ್ದಾರೆ. ಇದೊಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ಅಲ್ಲು ಅರ್ಜುನ್ ಅವರು ನಾಯಕನಾದರೆ ಚಿತ್ರ ಮತ್ತಷ್ಟು ಗೆಲುವು ಸಾಧಿಸುತ್ತದೆ. ಆದರೆ ಮಾತುಕತೆ ಯಾವ ಹಂತಕ್ಕೆ ತಲುಪಿತ್ತದೆಯೋ ತಿಳಿದಿಲ್ಲ. ಅಂದುಕೊಂಡಂತೆ ಎಲ್ಲವೂ ಕೈ ಹಿಡಿದರೆ, ಭಾರತೀಯ ಚಿತ್ರರಂಗ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಸಾಕ್ಷಿಯಾಗಲಿದೆ. ಹೀಗಾಗಿ ಜಿಯೋ ಸ್ಟುಡಿಯೋ 'ಪುಷ್ಪ' ಸ್ಟಾರ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದರಿಂದ ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಸಂಚಲನ ಸೃಷ್ಟಿಸಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
2019 ರಲ್ಲಿ, ಉರಿಯ ಯಶಸ್ಸಿನ ನಂತರ, ಆದಿತ್ಯ ಧರ್ ತಮ್ಮ ಮಹತ್ವಾಕಾಂಕ್ಷೆಯ ಸೂಪರ್ ಹೀರೋ ಚಿತ್ರದಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ಚಿತ್ರವನ್ನು ಆರಂಭದಲ್ಲಿ ಘೋಷಿಸಲಾಯಿತು. ಕೋವಿಡ್ ಕಾರಣ ಚಿತ್ರ ವಿಳಂಬವಾಯಿತು. ನಂತರ ಸಾರಾ ಅಲಿ ಖಾನ್‌ಗೆ ಕೋಕ್ ನೀಡಿ ಸಮಂತಾ ರುತ್ ಪ್ರಭುವನ್ನು ಚಿತ್ರ ನಿರ್ಮಾಪಕರು ಆಯ್ಕೆ ಮಾಡಲು ಸೂಚಿಸಿದ್ದರು.
ಇಮ್ಮಾರ್ಟಲ್ ಅಶ್ವತ್ಥಾಮ' ಸಿನಿಮಾವನ್ನು ಎರಡು ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗುತ್ತೆ. ಇದಕ್ಕಾಗಿಯೇ ಜಿಯೋ ಸ್ಟುಡಿಯೋ ದೊಡ್ಡ ಮೊತ್ತವನ್ನು ತೆಗೆದಿಟ್ಟಿದೆ ಎನ್ನಲಾಗಿದೆ. ಆದರೆ, 'ಪುಷ್ಪ 2' ಬಳಿಕ ಅಲ್ಲು ಅರ್ಜುನ್ ಕೆಲವು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಅಲ್ಲು ಚಿತ್ರ ಒಪ್ಪಿಕೊಳ್ತಾರಾ ಎಂಬುವುದೇ ಸದ್ಯದ ಕುತೂಹಲಕಾರಿ ಪ್ರಶ್ನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ