• Home
  • »
  • News
  • »
  • entertainment
  • »
  • Allu Arjun-Sneha Reddy: ಅಲ್ಲು ಅರ್ಜುನ್ ಹೆಂಡತಿಯನ್ನು ಪ್ರೀತಿಯಿಂದ ಕರೆಯೋದು ಹೀಗಂತೆ!

Allu Arjun-Sneha Reddy: ಅಲ್ಲು ಅರ್ಜುನ್ ಹೆಂಡತಿಯನ್ನು ಪ್ರೀತಿಯಿಂದ ಕರೆಯೋದು ಹೀಗಂತೆ!

ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ದಂಪತಿ

ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ದಂಪತಿ

ಅಷ್ಟಕ್ಕೂ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ಟಾಲಿವುಡ್‌ನ ಅತ್ಯಂತ ಜನಪ್ರಿಯ ಸ್ಟಾರ್ ಪತ್ನಿಯರಲ್ಲಿ ಒಬ್ಬರು.

  • Share this:

ಸಾಮಾನ್ಯವಾಗಿ ನಮಗೆ ಪ್ರೀತಿ ಪಾತ್ರರಾದವರನ್ನು ಅಡ್ಡ ಹೆಸರಿನಿಂದ ಕರೆಯುವುದು ರೂಢಿ. ಎಲ್ಲರೂ ಅವರಿಗೆ ಇಷ್ಟವಾದ ವ್ಯಕ್ತಿಗಳಿಗೊಂದು ಮುದ್ದಾದ ನಿಕ್‌ ನೇಮ್‌ ಇಟ್ಟಿರುತ್ತಾರೆ. ಅದರಲ್ಲೂ ಮಕ್ಕಳಿಗೆ, ಪತಿ-ಪತ್ನಿ ಅಥವಾ ಗರ್ಲ್‌ ಫ್ರೆಂಡ್‌ ಬಾಯ್‌ ಫ್ರೆಂಡ್‌ ಗೆ ಹೀಗೆ ಹೆಸರಿಡೋದು ಕಾಮನ್‌. ಇದು ಸೆಲೆಬ್ರಿಟಿಗಳಿಗೇನೂ (Celebrity) ಹೊರತಾಗಿಲ್ಲ. ಅವರೂ ಕೂಡ ತಮ್ಮ ವೈಯಕ್ತಿಯ ಬದುಕಿನಲ್ಲಿ ಇಂಥದ್ದೆಲ್ಲ ಮಾಡ್ತಾರೆ. ಇತ್ತೀಚಿಗೆ ನಟ ಅಲ್ಲು ಅರ್ಜುನ್‌ (Allu Arjun) ತನಗೆ ಏನಂತ ಕರೀತಾರೆ ಅನ್ನೋದನ್ನು ಅವರ ಪತ್ನಿ ಸ್ನೇಹಾ ರೆಡ್ಡಿ (Sneha Reddy) ಬಹಿರಂಪಡಿಸಿದ್ದಾರೆ.


ಅಲ್ಲು ಅರ್ಜುನ್ ಮತ್ತು ಅವರ ಪತ್ನಿ ಸ್ನೇಹಾ ದಕ್ಷಿಣದ ಅತ್ಯಂತ ಜನಪ್ರಿಯ ಸೆಲೆಬ್ರಿಟಿ ಕಪಲ್‌ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅನೇಕ ಅಭಿಮಾನಿಗಳಿಗೆ ಇವರು ರೋಲ್‌ ಮಾಡೆಲ್‌ ಕೂಡ ಹೌದು.


ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್
ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡೋ ಪೋಸ್ಟ್​ಗಳು ಅವರ ಪ್ರೀತಿಯನ್ನು ಸಾರುತ್ತವೆ. ಅವರ ಓಡಾಟ, ಪ್ರವಾಸ, ಪಾರ್ಟಿ, ಮಕ್ಕಳ ಜೊತೆ, ಕುಟುಂಬದವರ ಜೊತೆಗಿನ ಒಡನಾಟ ಇವೆಲ್ಲ ಅವರ ಬಾಂಧವ್ಯವನ್ನು ಹೇಳುತ್ತವೆ.


ಅಷ್ಟಕ್ಕೂ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ಟಾಲಿವುಡ್‌ನ ಅತ್ಯಂತ ಜನಪ್ರಿಯ ಸ್ಟಾರ್ ಪತ್ನಿಯರಲ್ಲಿ ಒಬ್ಬರು. ಅವರು ಇನ್‌ಸ್ಟಾಗ್ರಾಂ ನಲ್ಲಿ ಸಾಕಷ್ಟು ಆಕ್ಟಿವ್‌ ಆಗಿರುವುದರ ಜೊತೆಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಹಾಗೂ ಕುಟುಂಬದ ಫೋಟೋಗಳನ್ನು ಆಗಾಗ ಅವರು ಪೋಸ್ಟ್‌ ಮಾಡುತ್ತಿರುತ್ತಾರೆ. ಕೆಲವು ಬಾರಿ ಅವರು ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಾರೆ.


ಅಲ್ಲು ಅರ್ಜುನ್‌ ತನ್ನ ಪತ್ನಿಯನ್ನು “ಕ್ಯೂಟಿ” ಅಂತ ಕರೀತಾರಂತೆ!
ಇತ್ತೀಚಿಗೆ ಸ್ಟಾರ್ ಪತ್ನಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಸಂಕ್ಷಿಪ್ತವಾಗಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಅನ್ನು ಹೊಂದಿದ್ದರು. ಅಲ್ಲು ಅರ್ಜುನ್ ನಿಮಗೆ ಯಾವುದಾದರೂ ಅಡ್ಡ ಹೆಸರು ಇಟ್ಟಿದ್ದಾರೆಯೇ? ಎಂದು ಅಭಿಮಾನಿಯೊಬ್ಬರು ಕೇಳಿದರು.


ಇನ್ನೊಬ್ಬ ಬಳಕೆದಾರರು, "ಬನ್ನಿ ಗಾರು ನಿಮಗೆ ಯಾವುದಾದರೂ ನಿಕ್‌ ನೇಮ್​ನಿಂದ ಕರೆಯುತ್ತಾರೆಯೇ” ಎಂಬುದಾಗಿ ಕೇಳಿದ್ದಾರೆ. ಅದಕ್ಕೆ ಸ್ನೇಹಾ ಅವರು, “ ಕ್ಯೂಟಿ “ ಎಂದು ಉತ್ತರಿಸಿದ್ದಾರೆ.


ಇದನ್ನೂ ಓದಿ: Anushree-Dhananjay: ಆ್ಯಂಕರ್ ಅನುಶ್ರೀ ಮದುವೆ ಆದ್ಮೇಲೆ ನನ್ನ ಮದುವೆ; ಡಾಲಿ ಧನಂಜಯ್ ಘೋಷಣೆ


ಇನ್ನು ಅಲ್ಲು ಅರ್ಜುನ್ ಸ್ನೇಹಾರನ್ನು 'ನನ್ನ ಕ್ಯೂಟಿ ' ಎಂದು ಕರೆಯುವುದು ಅನೇಕ ಸಂದರ್ಭದಲ್ಲಿ ರಿವೀಲ್ ಆಗಿದೆ. ಹುಟ್ಟುಹಬ್ಬದ ಶುಭಾಶಯಗಳಾಗಲಿ ಅಥವಾ ವಾರ್ಷಿಕೋತ್ಸವಗಳಾಗಲಿ, ಅವರು ಸ್ನೇಹಾರನ್ನು ಉಲ್ಲೇಖಿಸುವಾಗ ಯಾವಾಗಲೂ ತಮ್ಮ ನೋಟ್‌ ನಲ್ಲಿ “ಕ್ಯೂಟಿ” ಎಂದೇ ಹಾಕುತ್ತಾರೆ.


ಅಲ್ಲು ಅರ್ಜುನ್ ಮತ್ತು ಸ್ನೇಹಾ ಲವ್ ಸ್ಟೋರಿ
ಅಂದಹಾಗೆ ಇವರಿಬ್ಬರೂ ಭೇಟಿಯಾಗಿದ್ದು ಅಲ್ಲು ಅರ್ಜುನ್‌ ಅವರ ಸ್ನೇಹಿತನ ಮದುವೆಯೊಂದರಲ್ಲಿ. ನಂತರ ಅಲ್ಲು ಅರ್ಜುನ್‌ ಹಾಗೂ ಸ್ನೇಹಾ ರೆಡ್ಡಿ ಪರಸ್ಪರ ಸಂಪರ್ಕದಲ್ಲೇ ಇದ್ದರಂತೆ.


ಇಬ್ಬರು ಮಕ್ಕಳ ಮುದ್ದಿನ ಅಪ್ಪ ಅಮ್ಮ
ನಂತರ ದಿನಕಳೆದರೆ ಪ್ರೀತಿ ಚಿಗುರಲಾರಂಭಿಸಿ ಸ್ವಲ್ಪ ಸಮಯದ ವರೆಗೂ ಡೇಟಿಂಗ್‌ ನಲ್ಲೇ ಇದ್ದರು. ನಂತರದಲ್ಲಿ 2011, ಮಾರ್ಚ್‌ 6 ರಂದು ಮದುವೆಯಾದರು. ಸದ್ಯ ಅಲ್ಲು ಅರ್ಜುನ್ ಹಾಗೂ ಸ್ನೇಹಾ ದಂಪತಿಗೆ ಅರ್ಹ ಮತ್ತು ಅಯಾನ್‌ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.


ಈ ಮಧ್ಯೆ ಅಲ್ಲು ಅರ್ಜುನ್‌ ಅಭಿನಯದ ಪುಷ್ಪಾ 1 ಚಿತ್ರ ಸೂಪರ್‌ ಹಿಟ್‌ ಆಗಿದ್ದು ರಾಷ್ಟ್ರಮಟ್ಟದಲ್ಲಿ ಸಿನಿಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈಗ ಪುಷ್ಪಾ 2 ಶೂಟಿಂಗ್‌ ನಡೆಯುತ್ತಿದ್ದು, ನಟ ಅಲ್ಲು ಅರ್ಜುನ್‌ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.


ಇದನ್ನೂ ಓದಿ: Bhagya Lakshmi: ವೈಷ್ಣವ್ ಜೊತೆ ಕೀರ್ತಿ ಮದುವೆ ಸಾಧ್ಯವಿಲ್ಲ ಎಂದ ಕುಸುಮಾ!


ಹಿಟ್ ಮೇಕರ್ ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತೊಮ್ಮೆ ಪುಷ್ಪ ರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರೇ ಮುಂದುವರೆಯಲಿದ್ದಾರೆ. ಬಹುನಿರೀಕ್ಷಿತ ಪುಷ್ಪ 2 ಚಿತ್ರ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: