Dubaiನಲ್ಲಿ ಅಲ್ಲು ಅರ್ಜುನ್ ಸಖತ್ ರಾಯಲ್ ಲುಕ್, Stylish Star ಫೋಟೋಗೆ ಫ್ಯಾನ್ಸ್ ಫುಲ್ ಫಿದಾ!

ಪುಷ್ಪ ಚಿತ್ರದ ಹಾಡು, ಡಾನ್ಸ್, ಡೈಲಾಗ್ ಕೂಡ ಸಖತ್ ಸುದ್ದಿ ಮಾಡುತ್ತಿವೆ. ಹಲವಾರು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಕೆಲವು ಡೈಲಾಗ್ ಮತ್ತು ಹಾಡುಗಳನ್ನು ಮರುಸೃಷ್ಟಿಸುತ್ತಿದ್ದಾರೆ.

ಅಲ್ಲು ಅರ್ಜುನ್

ಅಲ್ಲು ಅರ್ಜುನ್

  • Share this:
ತೆಲುಗು ಚಿತ್ರರಂಗದ (Telugu cinema) ಬಹು ಬೇಡಿಕೆ ನಟ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಒಬ್ಬರು. ಇಲ್ಲಿವರೆಗೆ ಅನೇಕ ಬ್ಲಾಕ್ ಬಸ್ಟರ್ (Blockbuster Movies) ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ‘ಪುಷ್ಪ’ ಸಿನಿಮಾದ ದೊಡ್ಡ ಗೆಲುವಿನ ಬಳಿಕ ಚಿತ್ರರಂಗದಲ್ಲಿ ನಟ ಅಲ್ಲು ಅರ್ಜುನ್ ತೂಕ ಹೆಚ್ಚಾಗಿದೆ. ‘ಪುಷ್ಪ’ ತೆರೆಕಂಡ ನಂತರ ಬಾಕ್ಸ್ ಆಫೀಸ್‌ನಲ್ಲಿ ಅಲ್ಲು ಅರ್ಜುನ್ ಬೇರೆ ಹವಾವನ್ನೇ ಸೃಷ್ಠಿ ಮಾಡಿಬಿಟ್ಟಿದ್ದಾರೆ. ಅಲ್ಲು ಅರ್ಜುನ್ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮದಲ್ಲೂ ಆ್ಯಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಅಲ್ಲು ಸಾವಿರಾರು ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ಸ್ಟೈಲಿಶ್ ಸ್ಟಾರ್ (Stylish star) ಒಂದು ಫೋಟೋ ಹಾಕಿದ್ರೆ ಸಾಕು ಅಭಿಮಾನಿಗಳು ಲೈಕ್ಸ್, ಕಾಮೆಂಟ್‌ಗಳ ಮಳೆ ಸುರಿಸಿ ಬಿಡುತ್ತಾರೆ.

ಸಖತ್ ರಾಯಲ್ ಆಗಿ ಫೋಸ್
ಪುಷ್ಪ ಸಿನಿಮಾದ ಅಭೂತಪೂರ್ವ ಗೆಲುವಿನ ಬಳಿಕ ಅಲ್ಲು ದುಬೈಗೆ ಹಾರಿದ್ದಾರೆ. ದುಬೈನಲ್ಲಿ ತೆಗೆದಿರುವ ಕೆಲವು ಫೋಟೋಗಳನ್ನು ಇತ್ತೀಚೆಗೆ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ದುಬೈ ನಗರದ ಅತಿ ಎತ್ತರದ ಪೂಲ್‌ನಿಂದ ನೋಡುತ್ತಾ ನಿಂತಿರುವ ಫೋಟೋ ಹಂಚಿಕೊಂಡಿದ್ದು ಕಪ್ಪು-ಹೃದಯದ ಎಮೋಜಿಯೊಂದಿಗೆ ಪೋಸ್ಟ್ ಮಾಡಿದ್ದಾರೆ.

ಫೋಟೋದಲ್ಲಿ ಅಲ್ಲು ನಿಜಕ್ಕೂ ರಾಜನಂತೆ ಸಖತ್ ರಾಯಲ್ ಆಗಿ ಫೋಸ್ ನೀಡಿದ್ದಾರೆ. ಅಲ್ಲದೆ ಸುಂದರ ವ್ಯೂವ್ ಅನ್ನು ಅಲ್ಲು ಆನಂದಿಸುತ್ತಿದ್ದಾರೆ.ಅಲ್ಲು ಅರ್ಜುನ್ ಹಂಚಿಕೊಂಡಿರುವ ಫೋಟೋಗೆ ಅಭಿಮಾನಿಗಳು ಭರ್ಜರಿ ಲೈಕ್ಸ್, ಕಾಮೆಂಟ್ ಮಾಡಿದ್ದಾರೆ. ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರಕ್ಕೆ ಎಲ್ಲ ಕಡೆಯಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೆಲೆಬ್ರಿಟಿಗಳು, ವಿಮರ್ಶಕರು, ಅಭಿಮಾನಿಗಳು, ಎಲ್ಲರೂ ಪುಷ್ಪ ಸಿನಿಮಾಗೆ ಜೈ ಎಂದಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲೂ ಲೂಟಿ ಮಾಡಿದೆ.

ಇದನ್ನೂ ಓದಿ: Pushpa Nude scenes: `ಪುಷ್ಪ’ ಚಿತ್ರದಲ್ಲಿರಬೇಕಿತ್ತಂತೆ ಅಲ್ಲು ಅರ್ಜುನ್​ ಬೆತ್ತಲೆ ದೃಶ್ಯಗಳು.. ನಿರ್ದೇಶಕ ಸುಕುಮಾರ್​ ಹೀಗೆ ಹೇಳಿದ್ಯಾಕೆ?

ಗೋಯಿಂಗ್ ಟ್ರೆಂಡ್
ಪುಷ್ಪ ಚಿತ್ರದ ಹಾಡು, ಡಾನ್ಸ್, ಡೈಲಾಗ್ ಕೂಡ ಸಖತ್ ಸುದ್ದಿ ಮಾಡುತ್ತಿವೆ. ಹಲವಾರು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಕೆಲವು ಡೈಲಾಗ್ ಮತ್ತು ಹಾಡುಗಳನ್ನು ಮರುಸೃಷ್ಟಿಸುತ್ತಿದ್ದಾರೆ. ಇತ್ತೀಚೆಗೆ, ಕ್ರಿಕೆಟಿಗ ಡಿಜೆ ಬ್ರಾವೋ, ಸುರೇಶ್ ರೈನಾ ಅವರು ಅಲ್ಲು ಅರ್ಜುನ್ ಅವರ ಸಖತ್ ಜನಪ್ರಿಯವಾದ ಶ್ರೀವಲ್ಲಿ ಹಾಡಿನ ಸ್ಟೆಪ್ ಒಂದನ್ನು ಮಾಡಿದ್ದಾರೆ. ಗೋಯಿಂಗ್ ಟ್ರೆಂಡ್ ಅಂತ ಎಲ್ಲಾ ಕಡೆ ಅಲ್ಲು ಶ್ರೀವಲ್ಲಿ ಹಾಡಿನ ಮತ್ತು ಸಾಮಿ ಹಾಡಿನ ಡಾನ್ಸ್ ಸ್ಟೆಪ್ ಫುಲ್ ಟ್ರೆಂಡ್ ಆಗಿದೆ.


ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರವು 17 ಡಿಸೆಂಬರ್ 2021 ರಂದು ತೆಲುಗಿನಲ್ಲಿ ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿ ಡಬ್ಬಿಂಗ್ ಆಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ನಂತರ ಅಮೆಜಾನ್ ಪ್ರೈಮ್ ವೀಡಿಯೋದಲ್ಲೂ ಕಿಚ್ಚು ಹೊತ್ತಿಸಿತ್ತು. ಸದ್ಯ ಪುಷ್ಪ ಭಾಗ ಒಂದರ ಗೆಲುವಿನ ಬಳಿಕ ನಿರ್ಮಾಪಕರು ಈಗಾಗಲೇ ಚಿತ್ರದ ಎರಡನೇ ಭಾಗದ ಕೆಲಸವನ್ನು ಪ್ರಾರಂಭಿಸಿದ್ದಾರೆ. ಚಿತ್ರದ ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಮತ್ತು ಫಹದ್ ಫಾಸಿಲ್ ಸೇರಿ ಪ್ರಮುಖ ತಾರಾಗಣವನ್ನು ಇರಲಿದೆ.

ಇದನ್ನೂ ಓದಿ: `ಪುಷ್ಪ’ ನಿರ್ಮಾಪಕರಿಗೆ ವಾರ್ನಿಂಗ್​ ಕೊಟ್ಟ ಕಿರುಕುಳಕ್ಕೊಳಗಾದ ಪತಿಗಳ ಸಂಘ: ಸಿನಿಮಾ ಪ್ರದರ್ಶನ ನಿಲ್ಲಿಸುವುದಾಗಿ ಎಚ್ಚರಿಕೆ!

ಪುಷ್ಪ ಎರಡನೇ ಭಾಗದ ಮೇಲೆ ನಿರೀಕ್ಷೆ
ಪುಷ್ಪ ಸಿನಿಮಾದ ಗೆಲುವಿನ ಬಳಿಕ ಅಲ್ಲು ಅರ್ಜುನ್ ಅಟ್ಲಿ ಜೊತೆಗೆ ಮುಂದಿನ ಚಿತ್ರಕ್ಕೆ ಒಪ್ಪಿಕೊಳ್ಳಲ್ಲಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಅಲ್ಲು ಅರ್ಜುನ್ ‘ಪುಷ್ಪ’ ಸಿನಿಮಾದ ಎರಡನೇ ಪಾರ್ಟ್‌ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದ ಕೆಲಸಗಳು ಮುಗಿದ ಬಳಿಕವಷ್ಟೇ ಅಲ್ಲು ಅರ್ಜುನ್ ಅವರು ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಹೊಸ ಸಿನಿಮಾ ಕುರಿತಂತೆ ಮಾತನಾಡಲು ಈಗಾಗಲೇ ಅಟ್ಲಿ ಮತ್ತು ಅಲ್ಲು ಅರ್ಜುನ್ ಅವರು ಭೇಟಿ ಆಗಿದ್ದಾರೆ ಎನ್ನಲಾಗಿದೆ.

ಅಟ್ಲಿ ಹೇಳಿರುವ ಕಥೆ ಅಲ್ಲು ಅರ್ಜುನ್‌ಗೆ ಸಖತ್ ಇಷ್ಟ ಆಗಿದೆ. ಶೀಘ್ರದಲ್ಲೇ ಅವರು ಈ ಸಿನಿಮಾಗೆ ಸಹಿ ಮಾಡಲಿದ್ದಾರೆ ಎಂಬ ಗುಸುಗುಸು ಹರಡಿದೆ. ಪುಷ್ಪ ಮೊದಲ ಭಾಗಕ್ಕೆ ಭರ್ಜರಿ ಗೆಲುವು ಸಿಕ್ಕಿರುವುದರಿಂದ ಎರಡನೇ ಪಾರ್ಟ್ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಅಭಿಮಾನಿಗಳು ಪುಷ್ಪ 2 ಸಿನಿಮಾಕ್ಕೆ ಕಾತುರದಿಂದ ಕಾಯ್ತಾ ಇದ್ದಾರೆ.
Published by:vanithasanjevani vanithasanjevani
First published: