ಅಲಾ ವೈಕುಂಠಪುರಂಲೋ' ಸಿನಿಮಾದ ನಂತರ ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಪುಷ್ಪ'. ನಿರ್ದೇಶಕ ಸುಕುಮಾರ್ ಜೊತೆ ನಟಿಸುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಸಾಕಷ್ಟು ಕಾರಣಗಳಿಂದ ಈ ಚಿತ್ರ ವಿಶೇಷವೆನಿಸಿಕೊಂಡಿದೆ. ಇದೇ ಮೊದಲ ಸಲ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗ ನೆಚ್ಚಿನ ನಟನ ಸಿನಿಮಾದ ರಿಲೀಸ್ ದಿನಾಂಕ ಪ್ರಕಟವಾಗಿದೆ. ಇನ್ನು ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕೊರೋನಾ ಲಾಕ್ಡೌನ್ನಿಂದಾಗಿ ಇದರ ಚಿತ್ರೀಕರಣ ತಡವಾಗಿ ಆರಂಭವಾಗಿತ್ತು. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಸಿನಿಮಾಗೆ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸಿನಿಮಾದ ಮುಹೂರ್ತವಾದಾಗ ಚಿತ್ರೀಕರಣವನ್ನು ಕೇರಳದ ಕಾಡುಗಳಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ನಂತರ ಶೂಟಿಂಗ್ ಅನ್ನು ವಿಶಾಕಪಟ್ಟಣ ಹಾಗೂ ಪೂರ್ವ ಗೋದಾವರಿ ಕಾಡುಗಳಲ್ಲಿ ನಡೆಸಲಾರಂಭಿಸಿತು. ಸದ್ಯ ಚಿತ್ರತಂಡ ಪುಷ್ಪ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟಿಸಿದೆ.
#PushpaRaj will begin his hunt on Aug 13th 2021 🔥#PushpaOnAug13 #Pushpa @alluarjun @iamRashmika @aryasukku @ThisIsDSP @PushpaMovie
పుష్ప പുഷ്പ புஷ்பா ಪುಷ್ಪ पुष्पा pic.twitter.com/45lAfSpWyt
— Mythri Movie Makers (@MythriOfficial) January 28, 2021
#PUSHPA loading in theatres from 13th August 2021. Excited to meet you all in cinemas this year.Hoping to create the same magic one more time with dearest @aryasukku & @ThisIsDSP .@iamRashmika @MythriOfficial #PushpaOnAug13 pic.twitter.com/tH3E6OpVeo
— Allu Arjun (@alluarjun) January 28, 2021
ಇದನ್ನೂ ಓದಿ: ಸಲಾರ್ ಚಿತ್ರದಲ್ಲಿ ಪ್ರಭಾಸ್ಗೆ ಜೊತೆಯಾದ ಶ್ರುತಿ ಹಾಸನ್: ರಿಲೀಸ್ ಆಯ್ತು ಹೊಸ ಪೋಸ್ಟರ್
ಇನ್ನು ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಇತ್ತೀಚೆಗಷ್ಟೆ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಚಿತ್ರದಿಂದ ಬ್ರೇಕ್ ಪಡೆದು ಹೈದರಾಬಾದಿಗೆ ಮರಳಿದ್ದಾರೆ. ಅಲ್ಲದೆ ಬಾದ್ ಷಾ ಅವರ ಟಾಪ್ ಟಕ್ಕರ್ ಮ್ಯೂಸಿಕ್ ವಿಡಿಯೋದಲ್ಲೂ ಹೆಜ್ಜೆ ಹಾಕಿದ್ದಾರೆ ಲಿಲ್ಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ