Pushpa: ಕ್ರಿಕೆಟರ್ಸ್​ಗೆ ದುಡ್ಡು ಕೊಟ್ಟು `ಶ್ರೀವಲ್ಲಿ’ ಡಾನ್ಸ್​ ಮಾಡ್ಸಿದ್ರಾ ಪುಷ್ಪ ಟೀಂ? ಎಲ್ಲಾ ಪ್ರಚಾರದ ಗಿಮಿಕ್ಕು ಗುರೂ!

ಫೇಸ್​ಬುಕ್(Facebook)​, ಇನ್​ಸ್ಟಾಗ್ರಾಂ(Instagram), ವಾಟ್ಸ್​ಆ್ಯಪ್​(WhatsApp) ಎಲ್ಲಿ ನೋಡಿದರೂ.. ಪುಷ್ಪ ಸಿನಿಮಾದ ರೀಲ್ಸ್(Reels)​ದೆ ಅಬ್ಬರ. ಯಾವ ಸೆಲೆಬ್ರಿಟಿ ಅಕೌಂಟ್​ ನೋಡಿದರೂ, ಪುಷ್ಪ ರೀಲ್ಸ್​ಗಳದ್ದೇ ಸದ್ದು.

ಪುಷ್ಪ ಸಿನಿಮಾದ ಪೋಸ್ಟರ್​

ಪುಷ್ಪ ಸಿನಿಮಾದ ಪೋಸ್ಟರ್​

  • Share this:
‘ಪುಷ್ಪ’(Pushpa) ಅಲ್ಲು ಅರ್ಜುನ್ ​(Allu Arjun) ಅಭಿನಯದ ಡಿಫ್ರೆಂಟ್​ ಸಿನಿಮಾ. ಈ ಚಿತ್ರ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದೆ. ಅದರಲ್ಲೂ ಹಿಂದಿ ಅವತರಣಿಕೆಯಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ (Collection)​ ಮಾಡಿದೆ. ಈ ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗಿದ್ದು ಪುಷ್ಪ ಅಲಿಯಾಸ್​ ಪುಷ್ಪ ರಾಜ್​ ಮ್ಯಾನರಿಸಂ (Mannerism). ಹೌದು, ಅಲ್ಲು ಅರ್ಜುನ್​ ನಟನೆಗೆ ಇಲ್ಲಿ ಎಲ್ಲಾ ಫಿದಾ ಆಗಿದ್ದಾರೆ. ಸುಕುಮಾರ್​​ (Sukumar) ನಿರ್ದೇಶನದ ಈ ಚಿತ್ರ ಬಾಹುಬಲಿ ದಾಖಲೆಯನ್ನು ಮುರಿದಿದೆ. ಸಿನಿಮಾ ರಿಲೀಸ್ ಆದಾಗ ನೆಗೆಟಿವ್​ ಟಾಕ್ಸ್​ನಿಂದ ಸಿನಿಮಾ ಕಲೆಕ್ಷನ್​ ಮೇಲೆ ಪರಿಣಾಮ ಬೀಳುತ್ತೆ ಅಂತ ಸಿನಿ ಪಂಡಿತರು ಅಂದುಕೊಂಡಿದ್ದರು. ಆದರೆ, ‘ಪುಷ್ಪ’ ಸಿನಿಮಾ ಮಾತ್ರ ಭರ್ಜರಿ ಕಲೆಕ್ಷನ್​ ಮಾಡಿದೆ. ಸುಮಾರ್​ 300 ಕ್ಕೂ ಹೆಚ್ಚು ಕೋಟಿ ಗಳಿಸಿದೆ ಅಂತ ಟಾಕ್​ ಇದೆ. ಈ ಸಿನಿಮಾದ ಡೈಲಾಗ್ಸ್ (Dialogues)​, ಸಾಂಗ್ಸ್ (Songs)​ಗಳು ಸಿಕ್ಕಾಪಟ್ಟೆ ಫೇಮಸ್​ ಆಗಿವೆ. ಒಟಿಟಿಯಲ್ಲಿ ಈ ಸಿನಿಮಾ ರಿಲೀಸ್​ ಆದ ಬಳಿಕವಂತೂ ಇನ್ನೂ ಇದರ ಕ್ರೇಜ್​ ಹೆಚ್ಚಾಗಿದೆ. ಫೇಸ್​ಬುಕ್ (Facebook)​, ಇನ್​ಸ್ಟಾಗ್ರಾಂ (Instagram) , ವಾಟ್ಸ್​ಆ್ಯಪ್​(WhatsApp) ಎಲ್ಲಿ ನೋಡಿದರೂ.. ಪುಷ್ಪ ಸಿನಿಮಾದ ರೀಲ್ಸ್(Reels)​ದೆ ಅಬ್ಬರ. ಯಾವ ಸೆಲೆಬ್ರಿಟಿ ಅಕೌಂಟ್​ ನೋಡಿದರೂ, ಪುಷ್ಪ ರೀಲ್ಸ್​ಗಳದ್ದೇ ಸದ್ದು.

‘ಪುಷ್ಪ’ ಡೈಲಾಗ್​, ಸಾಂಗ್​ಗೆ ಕ್ರಿಕೆಟ್​ ಆಟಗಾರರು ಫಿದಾ!

ಅದರಲ್ಲೂ ಕ್ರಿಕೆಟ್​ ಆಟಗಾರರಂತೂ ಸಿನಿಮಾ ಡೈಲಾಗ್​, ಸಾಂಗ್​ಗೆ ರೀಲ್ಸ್ ಮಾಡಿ ಪೋಸ್ಟ್​ ಮಾಡಿದ್ದರು. ಇದನ್ನು ಕಂಡು ಅವರ ಅಭಿಮಾನಿಗಳು ಥ್ರಿಲ್​ ಆಗಿದ್ದರು. ಆದರೆ, ಅಸಲಿ ವಿಷಯ ಬೇರೆನೆ ಇದೆ. ಬೇರೆ ದೇಶದ ಕ್ರಿಕೆಟ್​ ಆಟಗಾರರೆಲ್ಲ ಈ ಸಿನಿಮಾದ ರೀಲ್ಸ್​ ಮಾಡಿದ್ದರು. ಈ ಸಿನಿಮಾ ಅಷ್ಟರ ಮಟ್ಟಿಗೆ ನಿಜಕ್ಕೂ ಸೌಂಡ್ ಮಾಡಿದ್ಯ? ಇಲ್ಲ, ಮ್ಯಾಟರ್​ ಬೇರೇನೆ ಇದೆ ಅಂತಿದ್ದಾರೆ ಸಿನಿ ಪಂಡಿತರು. ಅದೇನಪ್ಪಾ ಅಂದರೆ, ಚಿತ್ರತಂಡದವರು ಕ್ರಿಕೆಟ್​ ಆಟಗಾರರಿಗೆ ದುಡ್ಡು ಕೊಟ್ಟು ಈ ರೀತಿಯ ವಿಡಿಯೋ ಮಾಡಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಅಮೇಜಾನ್​ ಪ್ರೈಮ್​ನಲ್ಲಿ ಈ ಸಿನಿಮಾ ಲಭ್ಯವಿದೆ.

ಇದನ್ನು ಓದಿ: `ಪುಷ್ಪ’ ಅವತಾರದಲ್ಲಿ ಮಿಂಚಿದ ರವೀಂದ್ರ ಜಡೇಜಾ.. ಕಿಲ್ಲರ್​ ಲುಕ್​ ಕಂಡು `ತಗ್ಗೆದೆ ಲೇ’ ಎಂದ ಅಲ್ಲು ಅರ್ಜುನ್​!

ಇದೆಲ್ಲಾ ಪ್ರಚಾರದ ಗಿಮಿಕ್ಕು!

‘ಪುಷ್ಪ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಗ ನೆಗೆಟಿವ್​ ಕಮೆಂಟ್ಸ್​ ಹೆಚ್ಚಾಗಿತ್ತು. ಇದಾದ ನಂತರ, ಸದ್ಯಕ್ಕೆ ಅಮೇಜಾನ್​ ಪ್ರೈಮ್​ನಲ್ಲಿನ ‘ ಪುಷ್ಪ’ ರಿಲೀಸ್ ಆಗಿದೆ. ಹೀಗಾಗಿ ಅಮೇಜಾನ್​ ಪ್ರೈಮ್​ ಸಿನಿಮಾದ ಪ್ರಚಾರವನ್ನು ಈ ರೀತಿ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಇಂಟರ್​ನ್ಯಾಷನಲ್​​ ಕ್ರಿಕಟರ್ಸ್​ಗೆ ದುಡ್ಡು ಕೊಟ್ಟ ಪ್ರಚಾರ ಮಾಡಿಸುತ್ತಿದ್ದಾರಂತೆ ಅಮೇಜಾನ್​ ಪ್ರೈಮ್​. ಮತ್ತೊಂದು ವರ್ಗ ಇದೆಲ್ಲ ಸಿನಿಮಾ ತಂಡ ಮಾಡುತ್ತಿರುವ ಪ್ರಚಾರ ಎಂದು ಹೇಳಿದ್ದಾರೆ.

ಇದನ್ನು ಓದಿ: ಓ ಮೈ ಗಾಡ್​.. ಪುಷ್ಪ ಚಿತ್ರದ ಹಾಡಿಗೆ ಸ್ಪೈಡರ್​ ಮ್ಯಾನ್​ ಮಸ್ತ್​ ಡ್ಯಾನ್ಸ್​: ವಿಡಿಯೋ ಸಿಕ್ಕಾಪಟ್ಟೆ ವೈರಲ್​!

300 ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿರುವ ‘ಪುಷ್ಪ’

ಅಂದಾಜಿನ ಪ್ರಕಾರ  ಆರಂಭದಲ್ಲಿ 175 ಕೋಟಿ ರೂ ಕಲೆಕ್ಷನ್ ಗಳಿಸಿದ್ದ ಪುಷ್ಪ, ನಂತರ ಉತ್ತುಂಗಕ್ಕೇರಿತು. ಏಕೆಂದರೆ ಆರಂಭದಲ್ಲಿ ಸ್ವಲ್ಪ ಕಳಪೆ ಪ್ರತಿಕ್ರಿಯೆ ಸಿಕ್ಕರೂ ಸುಮಾರು ರೂ 300 ಕೋಟಿ ಕಲೆಕ್ಷನ್ ಮಾಡಿದೆ. ಇದು ದೇಶಾದ್ಯಂತ ಹೆಚ್ಚು ಕಲೆಕ್ಷನ್ ಗಳಿಸಿದ  ಚಿತ್ರಗಳ ಕ್ಲಬ್‌ಗೆ ಸೇರಿತು. ಬೇರೆ ಭಾಷೆಯಲ್ಲಿ ಕಲೆಕ್ಷನ್​ ಕೊಂಚ ಕಡಿಮೆಯಿದ್ದರು, ಹಿಂದಿಯಲ್ಲಿ ಸಖತ್​ ಕಮಾಲ್​ ಮಾಡಿತ್ತು. ಜೊತೆಗೆ ತಮಿಳು ಮತ್ತು ಮಲಯಾಳಂ ಆವೃತ್ತಿಗಳಲ್ಲಿ ಚಿತ್ರವು ದೊಡ್ಡ ಹಿಟ್ ಆಗಿತ್ತು. ಹೀಗಾಗಿ ದುಡ್ಡು ಕೊಟ್ಟು ಈ ರೀತಿಯ ಪ್ರಚಾರ ಮಾಡಿಸಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.
Published by:Vasudeva M
First published: