1983 ಕಥೆಯೊಂದಿಗೆ ಬಾಲಿವುಡ್​ಗೆ ಅಲ್ಲು ಅರ್ಜುನ್ ಎಂಟ್ರಿ

news18
Updated:September 8, 2018, 6:25 PM IST
1983 ಕಥೆಯೊಂದಿಗೆ ಬಾಲಿವುಡ್​ಗೆ ಅಲ್ಲು ಅರ್ಜುನ್ ಎಂಟ್ರಿ
allu arjun twitter/S I H
news18
Updated: September 8, 2018, 6:25 PM IST
-ನ್ಯೂಸ್ 18 ಕನ್ನಡ

ಸೌತ್ ಸಿನಿಮಾದ ಸ್ಟೈಲ್ ಐಕಾನ್ ಅಲ್ಲು ಅರ್ಜುನ್ ಟಾಲಿವುಡ್​ನಿಂದ ಬಾಲಿವುಡ್​ಗೆ ಹಾರಲು ಮುಂದಾಗಿದ್ದಾರೆ. ದಕ್ಷಿಣ ಭಾರತದ ಚಿತ್ರಗಳು ಇತ್ತೀಚೆಗೆ ಬಾಲಿವುಡ್​ನಲ್ಲಿ ರಿಮೇಕಾಗುತ್ತಿರುವುದು ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೇ ನಟರುಗಳು ಕೂಡ ಅತ್ತ ಮುಖ ಮಾಡುತ್ತಿದ್ದಾರೆ. ಈ ಹಿಂದೆ ಟಾಲಿವುಡ್​ನಿಂದ ರಾಮ್ ಚರಣ್ ತೇಜಾ 'ನಾಯಕ್' ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು. ಹಾಗೆಯೇ ರಾಣಾ ದಗ್ಗುಬಟ್ಟಿ ಆಗೊಮ್ಮೆ ಈಗೊಮ್ಮೆ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಅಲ್ಲು ಅರ್ಜುನ್ 'ಭಜರಂಗಿ ಭಾಯಿಜಾನ್' ಚಿತ್ರದ ನಿರ್ದೇಶಕ ಕಬೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ.

allu arjun twitter


ತಮ್ಮ ಡಬ್ಬಿಂಗ್ ಸಿನಿಮಾಗಳ ಮೂಲಕವೇ ಹಿಂದಿಯಲ್ಲಿ ಮನೆ ಮಾತಾಗಿರುವ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅಭಿನಯಿಸಲಿರುವುದು ಕ್ರೀಡಾ ಪ್ರಧಾನ ಸಿನಿಮಾದಲ್ಲಿ ಎಂಬುದೇ ವಿಶೇಷ. 1983ರ ಕ್ರಿಕೆಟ್ ವರ್ಲ್ಡ್​ಕಪ್​ನ ಕಹಾನಿಯನ್ನು ತೆರೆಗೆ ತರುತ್ತಿದ್ದು, ಇಲ್ಲಿ ತಂಡದ ನಾಯಕ ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ಮಾಡಲಿದ್ದಾರೆ. ವಿಶ್ವಕಪ್ ವಿಜೇತ ತಂಡದ ಬೆನ್ನಲುಬಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್​ ಅವರ ಪಾತ್ರದಲ್ಲಿ ಅಲ್ಲು ಅರ್ಜುನ್​ಗೆ ಅಭಿನಯಿಸುವಂತೆ ಆಫರ್ ನೀಡಲಾಗಿದೆ. ಇದಕ್ಕೆ ಡ್ಯಾನ್ಸಿಂಗ್ ಸ್ಟಾರ್ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಬಾಲಿವುಡ್​ಗೆ ಪದಾರ್ಪಣೆಗೈಯಲಿದ್ದಾರೆ.

ನಿರ್ದೇಶಕ ಕಬೀರ್ ಖಾನ್ ಚಿತ್ರದ ಕಥೆಯ ಎಳೆಯನ್ನು ಅಲ್ಲು ಅರ್ಜುನ್​ಗೆ ವಿವರಿಸಿದ್ದು, ಇದು ಕೇವಲ ಕ್ರಿಕೆಟ್ ಕುರಿತಾದ ಕಥೆಯಲ್ಲ ಬದಲಾಗಿ ಒಂದು ಮಾನವೀಯತೆ ಸಂದೇಶ ಸಾರುವ ಚಿತ್ರವಾಗಲಿದೆ ಎಂದು ಈ ಸಿನಿಮಾವನ್ನು ಒಪ್ಪಿರುವುದಾಗಿ ಅಲ್ಲು ಅರ್ಜುನ್ ತಿಳಿಸಿದ್ದಾರೆ.

ಈ ಕ್ರಿಕೆಟ್ ಕಹಾನಿಗೆ 83 ಎಂದು ಶೀರ್ಷಿಕೆ ಫಿಕ್ಸ್ ಮಾಡಲಾಗಿದ್ದು, ಇತರೆ ಆಟಗಾರರ ಪಾತ್ರಗಳಿಗಾಗಿ ಆಯ್ಕೆಗಳು ನಡೆಯುತ್ತಿದೆ . ಅಲ್ಲು ಅಭಿನಯದ ಕೊನೆಯ ಚಿತ್ರ ನಾ ಪೇರು ಸೂರ್ಯ ಬಾಕ್ಸಾಫೀಸ್​ನಲ್ಲಿ ಭರ್ಜರಿ ಯಶಸ್ಸುಗಳಿಸಿತ್ತು. ಇದರ ನಂತರ  ಪಯ್ಯ ಚಿತ್ರ ಖ್ಯಾತಿಯ ನಿರ್ದೇಶಕ ಲಿಂಗಸ್ವಾಮಿ ಚಿತ್ರದಲ್ಲಿ ನಾಯಕನಾಗುವ ಮೂಲಕ ತಮಿಳಿಗೆ ಎಂಟ್ರಿ ಕೊಡುತ್ತಿದ್ದಾರೆ. ಹಾಗೆಯೇ ಇದೇ ವರ್ಷ 83 ಸಿನಿಮಾ ಮೂಲಕ ಬಿಟೌನ್​ಗೂ ಅಲ್ಲು ಅರ್ಜುನ್ ಹಾರುತ್ತಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ