ಅಲ್ಲು ಅರ್ಜುನ್ (Allu Arjun) ಅವರು ಫ್ಯಾಮಿಲಿ ಪರ್ಸನ್ (Family Person)ಎನ್ನುವುದರಲ್ಲಿ ಸಂದೇಹವೇ ಇಲ್ಲ. ಸ್ಟಾರ್ ನಟ ಅಲ್ಲು ಅರ್ಜುನ್ ಅವರು ತಮ್ಮ ಫ್ಯಾಮಿಲಿಗೆ (Family) ಸಮಯ ಕೊಡುವುದನ್ನು ಎಂದಿಗೂ ಮರೆಯುವುದಿಲ್ಲ. ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಾರೆ ಪುಷ್ಪಾ ನಟ. ಇದೀಗ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ (Allu Arha) ಯೋಗಾಸನ ಮಾಡುವ ಫೋಟೋ ಒಂದು ವೈರಲ್ (Viral) ಆಗಿದೆ. ಇಲ್ಲಿ ಗಮನ ಸೆಳೆದಿದ್ದು ಪುಷ್ಪ ನಟ (Pushpa Star) ಅಲ್ಲು ಅರ್ಜುನ್. ಮಗಳು ಯೋಗ (Yoga) ಮಾಡುವುದನ್ನು ತನ್ಮಯತೆಯಿಂದ ನೋಡಿ ನಗುವುದನ್ನು ಕಂಡಾಗ ಅಲ್ಲು ಅರ್ಜುನ್ ಸೂಪರ್ ಡ್ಯಾಡ್ ಎನ್ನುವುದು ಮನದಟ್ಟಾಗುತ್ತದೆ.
ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹಾ ಫೇಮಸ್. ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಿನಿ ಪ್ರಿಯರ ಫೇವರಿಟ್ ಸ್ಟಾರ್ ಕಿಡ್. ಸ್ಟಾರ್ ನಟನ ಮಗಳಾಗಿರುವ ಅರ್ಹಾ ಅವರು ಏನು ಮಾಡಿದರೂ ಸುದ್ದಿಯಾಗುತ್ತದೆ. ಅಲ್ಲು ಅರ್ಜುನ್ ಮಗಳ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ.
ಅರ್ಹಾ ಫೋಟೋಗಳನ್ನು ಅಲ್ಲು ಆಗಾಗ ಶೇರ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರು ಮಗಳು ಅರ್ಹಾ ಯೋಗ ಮಾಡುತ್ತಿರುವ ಫೋಟೋ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗಳ ಯೋಗ ನೋಡಿ ಸ್ವತಃ ಅಲ್ಲು ಅರ್ಜುನ್ ಮಗಳ ಫ್ಯಾನ್ ಆಗಿದ್ದಾರೆ. ಫ್ಯಾನ್ ಪೇಜ್ಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.
ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅರ್ಹಾ ಯೋಗ ಮಾಡುತ್ತಿದ್ದರೆ, ಅಲ್ಲು ಅಲ್ಲೇ ಕುಳಿತು ಇದನ್ನು ನೋಡುತ್ತಿದ್ದಾರೆ. ಮಗಳ ಯೋಗ ನೋಡಿ ಅಲ್ಲು ಅರ್ಜುನ್ ಅಭಿಮಾನಿಗಳು ಸಹ ಖುಷಿಪಟ್ಟಿದ್ದಾರೆ.
ಸಮಂತಾ ಜೊತೆ ಶಾಕುಂತಲಂನಲ್ಲಿ ಅಲ್ಲು ಅರ್ಹಾ
ಸ್ಟಾರ್ ನಟರ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಬಾಲ್ಯ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಒಳ್ಳೊಳ್ಳೆ ಅವಕಾಶ ಪಡೆದುಕೊಳ್ಳುತ್ತಾರೆ. ಬಾಲ ಕಲಾವಿದರಾಗಿ ಗಮನ ಸೆಳೆದ ನಂತರ ಹೀರೋ/ಹೀರೋಯಿನ್ ಆಗಿ ಮಿಂಚುತ್ತಾರೆ. ಇದು ಎಲ್ಲ ಇಂಡಸ್ಟ್ರಿಯಲ್ಲಿಯೂ ಕಾಮನ್.
ಟಾಲಿವುಡ್ನ ಖ್ಯಾತ ನಟ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಕೂಡ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಏಪ್ರಿಲ್ 14ರಂದು ರಿಲೀಸ್ ಆಗುತ್ತಿರುವ ಸಮಂತಾ ನಟನೆಯ ‘ಶಾಕುಂತಲಂ’ ಚಿತ್ರದ ಮೂಲಕ ಅಲ್ಲು ಅರ್ಹಾ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ.
ಇದನ್ನೂ ಓದಿ: Vijay-Leo: ಭೂಕಂಪ ಪ್ರದೇಶದಲ್ಲಿ ವಿಜಯ್ ಅಭಿನಯದ ಲಿಯೋ ಶೂಟಿಂಗ್! ಅಭಿಮಾನಿಗಳಿಗೆ ಆತಂಕ
ಟಾಲಿವುಡ್ನಲ್ಲಿ ಸಮಂತಾ ರುಥ್ ಪ್ರಭು ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ನಟಿಸುತ್ತಿದ್ದಾರೆ. ಯಶೋದಾ ಸಿನಿಮಾ ನಂತರ ಶಾಕುಂತಲಂ ಸಿನಿಮಾದಲ್ಲಿ ಶಾಕುಂತಲೆ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಶಾಕುಂತಲೆ ಮಗಳ ಪಾತ್ರದಲ್ಲಿ ಅಲ್ಲು ಅರ್ಹಾ ನಟಿಸುತ್ತಿರುವುದು ಗಮನಾರ್ಹ. ಅಲ್ಲು ಅರ್ಹಾ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಟ್ರೈಲರ್ ನೋಡಿದ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ಅಲ್ಲು ಕುಟುಂಬದ ನಾಲ್ಕನೇ ತಲೆಮಾರು ಅಲ್ಲು ಅರ್ಹಾ
ಜುಲೈ 2021ರಲ್ಲಿ ಅಲ್ಲು ಅರ್ಹಾ ಸಿನಿಮಾದಲ್ಲಿ ನಟಿಸುವ ಬಗ್ಗೆ ಅಲ್ಲು ಅರ್ಜುನ್ ಘೋಷಣೆ ಮಾಡಿದರು. ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಕಲಾವಿದೆಯಾಗಿ ಅರ್ಹಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಎಂದು ನಟ ಹೆಮ್ಮೆಯಿಂದ ಹೇಳಿದ್ದರು. ಬಹುನಿರೀಕ್ಷಿತ ‘ಶಾಕುಂತಲಂ’ ಸಿನಿಮಾವನ್ನು ಗುಣಶೇಖರ್ ನಿರ್ದೇಶನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ