ಸ್ಯಾಂಡಲ್​ವುಡ್ #MeToo ಅಭಿಯಾನಕ್ಕೆ ರಾಜಕೀಯ ಟ್ವಿಸ್ಟ್; ಶ್ರುತಿ ಆರೋಪಕ್ಕೆ ಎಡ-ಬಲ ಬೆಂಕಿ

ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ ಮಾಡಿರುವುದು, ನಟ ಚೇತನ್ ಬೆಂಬಲ ಕೊಟ್ಟಿರುವುದು ಈ ಬೆಳವಣಿಗೆಯ ಹಿಂದೆ ಎಡಪಂಥೀಯರ ಪಿತೂರಿ ಇದೆ ಎಂದು ಅರ್ಜುನ್ ಸ್ನೇಹಿತ ಪ್ರಶಾಂತ್ ಸಂಬರ್ಗಿ ಪ್ರತ್ಯಾರೋಪ ಮಾಡಿದ್ದಾರೆ.

Anitha E | news18
Updated:October 23, 2018, 2:15 PM IST
ಸ್ಯಾಂಡಲ್​ವುಡ್ #MeToo ಅಭಿಯಾನಕ್ಕೆ ರಾಜಕೀಯ ಟ್ವಿಸ್ಟ್; ಶ್ರುತಿ ಆರೋಪಕ್ಕೆ ಎಡ-ಬಲ ಬೆಂಕಿ
ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ ಮಾಡಿರುವುದು, ನಟ ಚೇತನ್ ಬೆಂಬಲ ಕೊಟ್ಟಿರುವುದು ಈ ಬೆಳವಣಿಗೆಯ ಹಿಂದೆ ಎಡಪಂಥೀಯರ ಪಿತೂರಿ ಇದೆ ಎಂದು ಅರ್ಜುನ್ ಸ್ನೇಹಿತ ಪ್ರಶಾಂತ್ ಸಂಬರ್ಗಿ ಪ್ರತ್ಯಾರೋಪ ಮಾಡಿದ್ದಾರೆ.
  • News18
  • Last Updated: October 23, 2018, 2:15 PM IST
  • Share this:
ನ್ಯೂಸ್​ 18 ಕನ್ನಡ 

ಕೆಲವು ದಿನಗಳ ಹಿಂದೆ ಹೊತ್ತಿಕೊಂಡ #MeToo ಬೆಂಕಿ ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇವತ್ತೂ ಕೂಡ ದಿನವಿಡೀ ಹೊತ್ತಿ ಉರಿದ ವಿವಾದದ ಬೆಂಕಿಯಲ್ಲಿ ಮೂಗಿಗೆ ಬಡಿದಿದ್ದು ರಾಜಕೀಯದ ಘಾಟು. ಇವತ್ತೂ ಮುಂದುವರೆದ ಹಗ್ಗ ಜಗ್ಗಾಟದಲ್ಲಿ #MeToo ಅಭಿಯಾನಕ್ಕೆ ಮೆತ್ತಿಕೊಂಡಿದ್ದು ಮಾತ್ರ ಎಡ-ಬಲ ಪಂಥಗಳ ಬಣ್ಣ. ಹೌದು ತಮಗಾದ ಕಿರುಕುಳವನ್ನು ಬಹಿರಂಗವಾಗಿ ಹೇಳಿಕೊಳ್ಳುವ ವೇದಿಕೆಗೆ ಈಗ ಪ್ರಧಾನಿ ಮೋದಿ ಅವರನ್ನೂ ಎಳೆದು ತರಲಾಗುತ್ತಿದೆ. ಏನಿದು ಎಡ-ಬಲ ಪಂಥೀಯರ ನಡುವೆ ಮೋದಿ ಎಂಟ್ರಿ ಎಂದು ತಿಳಿಯೋಕೆ ಈ ವರದಿ ಓದಿ.

ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಯಾವಾಗ ಆರೋಪ ಮಾಡಿದರೋ ಆ ಕ್ಷಣದಿಂದ ಹೊತ್ತಿಕೊಂಡ ವಿವಾದದ ಬೆಂಕಿ ಆರಿಸುವ ಪ್ರಯತ್ನ ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಇದೇ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಸಿಕೊಳ್ಳುವ ಕಾರ್ಯವೂ ನಡೆದಂತಿದೆ.

ವಿವಾದದ ಬಿಸಿ ಏರುತ್ತಿದ್ದಂತೆಯೇ ಪತ್ರಿಕಾಗೋಷ್ಠಿ ಮಾಡಿದ ನಟಿ ಶ್ರುತಿ, ಎಲ್ಲ ಪ್ರಶ್ನೆಗಳಿಗೂ ಉತ್ತರ ಹಾಗೂ ದಾಖಲೆಗಳನ್ನು ಕೋರ್ಟ್‍ನಲ್ಲಿ ಕೊಡುವುದಾಗಿ ಹೇಳಿ ಜಾರಿಕೊಂಡರು. ಆದರೆ, ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ತೋರಿಸಿದ್ದರೆ ವಿವಾದದ ಅಸಲಿಯತ್ತು ಅರ್ಥವಾಗುತ್ತಿತ್ತು ಅನ್ನೋ ವಿಶ್ಲೇಷಣೆಯೂ ಶುರುವಾಯ್ತು. ಇನ್ನೂ ಶ್ರುತಿಗೆ ಬೆಂಬಲಿಸಿದ ಹಲವರು ಎಲ್ಲದಕ್ಕೂ ದಾಖಲೆ ಕೊಡಲು ಆಗುವುದಿಲ್ಲ ಅಂದರು.

ಹಲವರಿಂದ ಕಿರುಕುಳ ಆಗಿದೆ ಅಂತ ಹೇಳಿಕೊಂಡಿದ್ದ ಶ್ರುತಿ ಈಗ ಕೇವಲ ಅರ್ಜುನ್ ಸರ್ಜಾ ಒಬ್ಬರ ಹೆಸರನ್ನು ಹೇಳುತ್ತಿದ್ದಾರೆ ಅನ್ನೂ ಮತ್ತೊಂದು ಪ್ರಶ್ನೆ ಹುಟ್ಟಿಕೊಂಡಿದೆ.  ಅದೂ ಒಂದು ವರ್ಷದ ನಂತರ ಇದ್ದಕ್ಕಿದ್ದಂತೇ ಈ ವಿವಾದ ಯಾಕೆ ಅನ್ನೋ ವಿಚಾರದಿಂದ ಇದೊಂದು ರಾಜಕೀಯ ಪ್ರೇರಿತ ವಿವಾದ ಅನ್ನೋ ಮತ್ತೊಂದು ಲೆಕ್ಕಾಚಾರವೂ ಆರಂಭವಾಗಿದೆ.

ಈ ಅನುಮಾನ ಬಲವಾಗೋಕೆ ಮತ್ತೊಂದಷ್ಟು ಕಾರಣಗಳೂ ಇವೆ. ಇಲ್ಲಿ ಶ್ರುತಿ ಹರಿಹರನ್ "ಫಯರ್' ಅನ್ನೋ ಕಮಿಟಿಯ ಮೂಲಕ ಹೋರಾಟಕ್ಕೆ ವೇದಿಕೆ ಮಾಡಿಕೊಂಡಿದ್ದಾರೆ. ಈ ಕಮಿಟಿಯಲ್ಲಿ ಕಾರ್ಯದರ್ಶಿಯಾಗಿರೋದು ನಟ-ಹೋರಾಟಗಾರ ಚೇತನ್, ಕವಿತಾ ಲಂಕೇಶ್ ಮುಂತಾದವರು. ಇಲ್ಲಿರುವ ಬಹುತೇಕರು ಎಡಪಂಥೀಯ ವಿಚಾರಧಾರೆಗಳಲ್ಲಿ ಒಲವಿರುವವರು ಅನ್ನೋ ಕಾರಣಕ್ಕೆ ಅನುಮಾನ ಬಲವಾಗುತ್ತಾ ಹೋಗುತ್ತಿದೆ.  ಜತೆಗೆ ಶ್ರುತಿ ಹರಿಹರನ್ ತಂದೆ ಮತ್ತು ಕುಟುಂಬಸ್ಥರು ಕೂಡ ಕಮ್ಯುನಿಷ್ಟ್ ವಿಚಾರಧಾರೆಗಳಲ್ಲಿ ಒಲವಿರುವವರು ಅನ್ನೋ ವಿಚಾರವೂ ಹುಟ್ಟಿಕೊಂಡಿದ್ದು, ಸಾಕಷ್ಟು ಅನುಮಾನಕ್ಕೆ ಪುಷ್ಠಿ ನೀಡಿದೆ.

ಇವರೊಂದಿಗೆ ನಟ ಪ್ರಕಾಶ್​ ರೈ ಹಾಗೂ ನಟಿ ಶ್ರದ್ಧಾ ಶ್ರೀನಾಥ್ ಸಹ ಎಡ ಪಂಥೀಯರೇ ಆಗಿದ್ದಾರೆ. ಇದರಿಂದಲೇ ಇವರು ಅರ್ಜುನ್​ ಅವರ ಹೆಸರನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಅನ್ನೋದು ಅರ್ಜುನ್​ ಸರ್ಜಾ ಅವರ ಸ್ನೇಹಿತ ಪ್ರಶಾಂತ್ ಸಂಬರ್ಗಿ ಅವರ ಆರೋಪ.ಇಲ್ಲಿರುವ ಎಡಪಂಥೀಯ ವಿಚಾರಧಾರೆಯವರು ಶ್ರುತಿ ಅವರನ್ನು ಬಳಸಿಕೊಂಡು ಅರ್ಜುನ್ ಸರ್ಜಾರನ್ನೇ ಹಣಿಯೋಕೆ ಹೊರಟಿರೋದು ಏಕೆ ಅನ್ನೋ ಅನುಮಾನಕ್ಕೆ ಸ್ಪಷ್ಟ ಉತ್ತರವೂ ಸಿಗುತ್ತದೆ. ಅದೇನು ಅಂದರೆ, ಅರ್ಜುನ್ ಸರ್ಜಾ ಆಂಜನೇಯ ಹಾಗೂ ರಾಮನ ಭಕ್ತ.  ಅವರ ಸಿನಿಮಾ ಪ್ರೊಡಕ್ಷನ್ ಹೌಸ್ ಕೂಡ ರಾಮನ ಹೆಸರಿನಲ್ಲೇ ಇದೆ.

ಪ್ರಕಾಶ್ ರೈ, ಕವಿತಾ ಲಂಕೇಶ್​ ಸೇರದಂತೆ ಎಡಪಂಥೀಯರೇ ಅರ್ಜುನ್ ಸರ್ಜಾ ಮೇಲೆ ಮುಗಿಬಿದ್ದಿರೋದರ ಹಿಂದಿರೋದು ಮೋದಿಯನ್ನು ಕಟ್ಟಿಹಾಕೋಕೆ ಎಂದು ಹೇಳಲಾಗುತ್ತಿದೆ.  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ದಕ್ಷಿಣಭಾರತದತ್ತ ಕಣ್ಣಿಟ್ಟಿದ್ದಾರೆ. ಇಲ್ಲಿನ ಸಿನಿಮಾ ನಟರು,ಸೆಲೆಬ್ರಿಟಿಗಳನ್ನು ಕಣಕ್ಕಿಳಿಸೋ ಲೆಕ್ಕಚಾರ ಹಾಕಿದ್ದಾರಂತೆ. ಇದರಿಂದಾಗಿ ಅರ್ಜುನ್ ಸರ್ಜಾರನ್ನು ತುಳಿಯುವ ಮೂಲಕ, ಮೋದಿ ಪರ ನಿಲ್ಲುವವರನ್ನು ಮಟ್ಟಹಾಕೋಕೆ ಯೋಜನೆ ರೂಪಿಸಲಾಗಿದೆ ಅನ್ನೋ ಅನುಮಾನ ಬಲವಾಗಿ ಕೇಳಿ ಬರುತ್ತಿವೆ.

ಈ ಘಟನೆ ನೆಡಯೋಕೂ ಒಂದು ತಿಂಗಳ ಹಿಂದೆ ಅರ್ಜುನ್ ಸರ್ಜಾಗೆ, ಮಗಳು ಐಶ್ವರ್ಯಾ ಸರ್ಜಾ ಗುಜರಾತ್‍ನಿಂದ ಗಿರ್ ತಳಿಯ ಹಸುವನ್ನು ಉಡುಗೊರೆಯಾಗಿ ನೀಡಿದ್ದರು. ಆ ಹಸುವನ್ನು ಸೋಮನಾಥಪುರದಿಂದ ತರಿಸಿ ಅಪ್ಪನಿಗೆ ಸರ್ಪ್ರೈಸ್​  ನೀಡಿದ್ದರು. ಅರ್ಜುನ್ ಸರ್ಜಾ ತಂದೆಗೆ ಆರೆಸ್ಸೆಸ್‍ನಲ್ಲಿ ಒಲವಿದ್ದಿದ್ದರಿಂದ ಅರ್ಜುನ್ ಸರ್ಜಾ ಕೂಡ ಗೋ ಶಾಲೆ, ಶ್ರೀರಾಮ ಆಂಜನೇಯ ಅಂತ ಕೆಲಸ ಮಾಡಿದ್ದು ಎಡಪಂಥೀಯರ ಕಣ್ಣು ಕೆಂಪಾಗಿಸಿದೆ. ಈ ಮೂಲಕ ಚಿತ್ರರಂಗದಿಂದ ರಾಜಕೀಯಕ್ಕೆ ಬರುವ ಸಾಧ್ಯತೆಯಿರುವ ಅರ್ಜುನ್ ಸರ್ಜಾರನ್ನು ಆರಂಭದಲ್ಲೇ ಹಣಿಯುವ ಲೆಕ್ಕಾಚಾರ ಹಾಕಿರೋದು ಮೇಲ್ನೋಟಕ್ಕೆ ಸಾಭೀತಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕವಿತಾ ಲಂಕೇಶ್​ ಪ್ರತಿಕ್ರಿಯೆ

ಇನ್ನು ಈ ಅಭಿಯಾನಕ್ಕೆ ಎಡ-ಬಲ ಪಂಥೀಯ ಬಣ್ಣ ಹಚ್ಚಿರುವ ಕುರಿತಾಗಿ ಕವಿತಾ ಲಂಕೇಶ್​ ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿದ್ದು,  'ನಾನು ಶೋಷಣೆಗೊಳಗಾದ ನಟಿಯ ಪರ ಇದ್ದೇನೆ.  ಇಲ್ಲಿ ಎಡ-ಬಲ ಅನ್ನೋ ವಿಚಾರವೇ ತಮಾಷೆ ಅನ್ನಿಸುತ್ತದೆ. ಇದು ದಿಕ್ಕು ತಪ್ಪಿಸಲು ಸೃಷ್ಟಿಸಿರುವ ಅಂಶ. ಪ್ರಕಾಶ್ ರೈ ಕ್ಷಮೆ ಕೇಳಿ ಎಂದು ಹೇಳಿದ್ದರಲ್ಲಿ ತಪ್ಪೇನಿಲ್ಲ. ಅವರಿಗೆ ಶ್ರುತಿ ಏನಂತ ಗೊತ್ತಿರಬಹದು. ಅರ್ಜುನ್ ಏನಂತಲೂ ಗೊತ್ತಿರಬಹುದು. ಒಂದೇ ರಂಗದಲ್ಲಿ ಕೆಲಸ ಮಾಡುತ್ತಿರುವುದರಿಂದ ಯಾರು ಏನು ಅಂತ ಗೊತ್ತಿರುತ್ತದೆ. ಹಾಗೆ #MeToo ಅಭಿಯಾನಕ್ಕೆ ರಾಜಕೀಯದ ರೂಪ ಕೊಡುತ್ತಿರುವುದು ತಪ್ಪು. ನಮಗೆ ಎಡ-ಬಲ ಅನ್ನೋದು ಗೊತ್ತಿಲ್ಲ. ಅನ್ಯಾಯದ ವಿರುದ್ಧ ಹೋರಾಡುತ್ತೀದ್ದೇವೆ' ಎಂದಿದ್ದಾರೆ.

 

 
First published: October 22, 2018, 6:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading