All OK Allok: ಸಿಂಗಾಪುರ ಸಮುದ್ರದ ಮೇಲೆ ಕನ್ನಡದ ಮಲ್ಲಿಗೆ ಹೂವಿನ ಕಂಪು!

ಆಲ್ ಓಕೆ ಅಲೋಕ್ ಮಲ್ಲಿಗೆ ಹೂವಾ ಹಾಡು

ಆಲ್ ಓಕೆ ಅಲೋಕ್ ಮಲ್ಲಿಗೆ ಹೂವಾ ಹಾಡು

ಕನ್ನಡದ ಆಲ್ ಓಕೆ ರಾಪರ್ ಅಲೋಕ್ All Ok ಸದಾ ಹೊಸ ಪ್ರಯೋಗ ಮಾಡ್ತಾನೇ ಇರ್ತಾರೆ. ತಮ್ಮ RAP ಶೈಲಿಯಲ್ಲಿಯೇ ಕನ್ನಡದ Kannada Song ಕಂಪನ್ನ ಹರಿಸೋ ಅಲೋಕ್ ಈ ಸಲ ಮಲ್ಲಿಗೆ ಹೂವಿನ ಮೇಲೆ ಹಾಡು ಮಾಡಿದ್ದಾರೆ.

  • Share this:
  • published by :

ಕನ್ನಡದ ಆಲ್ ಓಕೆ ರ್ಯಾಪರ್ ಅಲೋಕ್ (All Ok)ಸದಾ ಹೊಸ ಪ್ರಯೋಗ ಮಾಡ್ತಾನೇ ಇರ್ತಾರೆ. ತಮ್ಮ RAP ಶೈಲಿಯಲ್ಲಿಯೇ ಕನ್ನಡದ (Kannada Song) ಕಂಪನ್ನ ಹರಿಸೋ ಅಲೋಕ್ ಈ ಸಲ ಮಲ್ಲಿಗೆ ಹೂವಿನ ಮೇಲೆ ಹಾಡು ಮಾಡಿದ್ದಾರೆ. ಈ ಮಲ್ಲಿಗೆ ಹೂವಾ ತುಂಬಾ ಸುಂದರವಾಗಿಯೇ ಇದೆ. ಇದನ್ನ ಚಿತ್ರೀಕರಿಸಲು ದೂರದ ಸಿಂಗಪುರಕ್ಕೂ ಹೋಗಿ ಬಂದಿದ್ದಾರೆ ಅಲೋಕ್. ವಿಶೇಷವಾಗಿ ಈ ಸಲ ಅಲೋಕ್ ಹಾಡಿನಲ್ಲಿ ಕನ್ನಡದ ಬ್ಯೂಟಿಫುಲ್ ನಟಿ ಆಶಿಕಾ ರಂಗನಾಥ್ (Actress Ashika ) ಇದ್ದಾರೆ. ಹುಚ್ಚು ಹಿಡಿಸೋ ಇವರ ನಗು ಇಲ್ಲಿ ಕೇಳುಗರಿಗೆ ಬೇರೆ ಕಿಕ್ ಕೊಡುತ್ತದೆ. ಇವರ ನೋಟ, ರೂಪ ಎಲ್ಲವೂ ಇಲ್ಲಿ ಬೇರೆ ಸೆಳೆತವನ್ನೆ ಕಟ್ಟಿಕೊಟ್ಟಿದೆ.




ದೂರದ ಸಿಂಗಾಪುರ ಸಮುದ್ರದ ಮೇಲೆ ಕನ್ನಡದ ಮಲ್ಲಿಗೆ ಕಂಪು 
ಆಲ್ ಓಕೆ ಅಲೋಕ್ ಗಾಯನ ನಿಜಕ್ಕೂ ಟ್ರೆಂಡಿ ಆಗಿಯೇ ಇರುತ್ತವೆ. ವಿಶೇಷವೆಂದ್ರೆ ಕನ್ನಡದ ಕಂಪು ಪ್ರತಿ ಹಾಡಲ್ಲೂ ಇರುತ್ತವೆ. ಒಂದು ರೀತಿ RAP ಚೌಕಟ್ಟಿನಲ್ಲಿ ಕನ್ನಡದ ಕಂಪನ್ನ ಸೂಸುತ್ತಲೇ ಇರೋ ಈ ಗಾಯಕ,ಈ ಸಲ ಸಿಂಗಪುರಕ್ಕೆ ಹೋಗಿದ್ದಾರೆ. ಅಲ್ಲಿಯ ಸಮುದ್ರದ ಮೇಲೆ ತೇಲೋ ಬೃಹತ್ ಕ್ರೂಸ್ ಮೇಲೆ ಮಲ್ಲಿಗೆ ಹೂವಿನ ಅಂದ-ಚಂದವನ್ನ ಸೆರೆ ಹಿಡಿದು ಚಂದದ ಹಾಡೊಂದನ್ನ ಮಾಡಿಕೊಂಡು ಬಂದಿದ್ದಾರೆ.


ಅಂತರಾಷ್ಟ್ರೀಯ ಸಮುದ್ರದ ಮೇಲೆ ತೇಲೋ ಕ್ರೂಸ್ ಮೇಲೆ ಆಲ್ಬಂ ಸಾಂಗ್ ಶೂಟ್
ಮಲ್ಲಿಗೆ ಹೂವಾ ಹಾಡು ವಿಶೇಷವಾಗಿಯೇ ಇದೆ. ಮಲ್ಲಿಗೆಯ ಕಂಪನ್ನ ಸೂಸೋ ಈ ಗೀತೆಯನ್ನ ಅದ್ಭುತವಾಗಿಯೇ ಕ್ಯಾಮೆರಾಮನ್ ಅರ್ಜುನ್ ಶೆಟ್ಟಿ ಚಿತ್ರೀಕರಿಸಿಕೊಂಡಿದ್ದಾರೆ. ತುಂಬಾ ವಿಶೇಷ ಅನಿಸೋ ಈ ಹಾಡು ಯುವಕರ ಹೃದಯವನ್ನ ಕದ್ದು ಹೊಸ ಅಲೆಯನ್ನೆ ಎಬ್ಬಿಸೋ ಹಾಗೇನೆ ಇದೆ.


ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಸೌಂದರ್ಯ ಸಮರ
ಅಪ್ಪಟ್ಟ ಕನ್ನಡದ ಹುಡುಗಿ ಆಶಿಕಾ ರಂಗನಾಥ್ ನಗುವಿನಲ್ಲೂ ಒಂದು ಸೆಳೆತ ಇದೆ.ಈ ನಗುವನ್ನೇ ಈಗಾಗಲೇ ಬಿಟ್ಟಿರೋ ಮಲ್ಲಿಗೆ ಹೂವಾ ಹಾಡಿನಲ್ಲಿ ಟೀಸರ್ ನಲ್ಲೂ ತೋರಲಾಗಿದೆ.ಇಂತಹ ವಿಶೇಷ ನಗು..ಹೂವು..ಮತ್ತು ಹಾಡು ಇಲ್ಲಿ ವಿಶೇಷವಾಗಿಯೇ ಇವೆ. ಆದರೆ, ಈ ಒಂದು ಮಲ್ಲಿಗೆ ಹೂವಾ ಹಾಡಿನಲ್ಲಿ ಒಂದು ಕಥೆ ಕೂಡ ಇದೆ.


ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಮಲ್ಲಿಗೆ ಹೂವಾ ನಿರ್ಮಾಣ
ಕನ್ನಡದ ಸಂಗೀತವನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಗೆಯೋ ಕೆಲಸ ಸಿನಿಮಾದಲ್ಲಿ ಆಗಿಯೇ ಇದೆ. ಆದರೆ, ಆಲ್ ಓಕೆ ಅಲೋಕ್ ಅವರ ಈ ಒಂದು ಮಲ್ಲಿಗೆ ಹೂವಾ ಹಾಡನ್ನ ದೊಡ್ಡ ಮಟ್ಟದಲ್ಲಿಯೇ ತೆಗೆಯಲಾಗಿದೆ. ಸಿಂಗಪೂರ್ ಮತ್ತು ಮಲೆಷಿಯಾದ ಸಮುದ್ರದ ಮೇಲೆ ಟ್ರಾವೆಲ್ ಆದ ಬೃಹತ್ ಕ್ರೂಸ್ ಮೇಲೆ ಹೆಚ್ಚು ಕಡಿಮೆ ನಾಲ್ಕು ದಿನ ಚಿತ್ರೀಕರಿಸಿಕೊಂಡು ಬರಲಾಗಿದೆ.


ಮಲ್ಲಿಗೆ ಹೂವಾ ಹಾಡಿನಲ್ಲಿ ಇಬ್ಬರು ವಿಶೇಷ ಸ್ಟಾರ್ ಗಳ ಸರ್ಪ್ರೈಸ್
ಮಲ್ಲಿಗೆ ಹೂವಾ ಹಾಡಿನಲ್ಲಿ ಇನ್ನೂ ಹಲವು ವಿಶೇಷತೆಗಳಿದ್ದು, ಆಲೋಕ್ ಮತ್ತು ಆಶಿಕಾ ರಂಗನಾಥ್ ಅವರ ಈ ಗೀತೆಯಲ್ಲಿ ಯುವ ಜನ ಮೆಚ್ಚೋ ಇಬ್ಬರು ವಿಶೇಷ ಗೆಸ್ಟ್​ಗಳ ಆಗಮನವೂ ಇದೆ. ಈ ವಿಶೇಷ ವ್ಯಕ್ತಿಗಳು ನಿಜಕ್ಕೂ ಸರ್ಪ್ರೈಸ್ ಕೊಡ್ತಾರೆ.


ಮಲ್ಲಿಗೆ ಹೂವಾ ಹಾಡಿಗಾಗಿ ಇವರೆಲ್ಲ ಕೆಲಸ ಮಾಡಿದ್ದಾರೆ ನೋಡಿ
ಮಲ್ಲಿಗೆ ಹೂವಾ ಅನ್ನೋ ಈ ಒಂದೇ ಒಂದು ಆಲ್ಬಂ ಸಾಂಗ್ ಗಾಗಿಯೇ ಒಂದು ಅದ್ಭುತ ಟೀಮ್ ಕೆಲಸ ಮಾಡಿದೆ. ಶಶಾಂಕ್ ಇಡೀ ಹಾಡನ್ನ ಸುಂದರವಾಗಿಯೇ ಎಡಿಟ್ ಮಾಡಿಕೊಟ್ಟಿದ್ದಾರೆ. ಕಲಾವಿದರು ತೊಟ್ಟ ಡ್ರೆಸ್​ ಗಳನ್ನ ಲಕ್ಷ್ಮಿ ಡಿಸೈನ್ ಮಾಡಿದ್ದಾರೆ.
ಕನ್ನಡ ಮತ್ತು ಹಿಂದಿಯಲ್ಲೂ ಈ ಒಂದು ಗೀತೆ ಬಿಡುಗಡೆ ಆಗುತ್ತಿದ್ದು, ಫುಲ್ ಹಾಡು ಫುಲ್ ಮೀಲ್ಸ್ ಕೊಡಲಿದೆ. ವೇಟ್ ಮಾಡಿ.

top videos
    First published: