Krrish 4: 17 ವರ್ಷಗಳ ಬಳಿಕ ಭೂಮಿಗೆ ಬರಲಿದೆ ಜಾದೂ: ಸುಳಿವು ಕೊಟ್ಟ ಹೃತಿಕ್​..!

Krishna And Jaadu: ರಾಕೇಶ್ ರೋಷನ್​ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು ತಿಳಿದಿತ್ತು. ಇದರಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಸದ್ಯ ಹೃತಿಕ್​ ಅಪ್ಪನೊಂದಿಗೆ ಸೇರಿಕೊಂಡು 'ಕ್ರಿಶ್​ 4' ಸಿನಿಮಾದ ಕತೆ ಮೇಲೆ ಕೆಲಸ ಮಾಡುತ್ತಿದ್ದಾರಂತೆ.

ಕೋಯಿ ಮಿಲ್ ​ಗಯಾ  ಸಿನಿಮಾದ ಚಿತ್ರದಲ್ಲಿ ಜಾದೂ ಹಾಗೂ ಹೃತಿಕ್​ ರೋಷನ್​

ಕೋಯಿ ಮಿಲ್ ​ಗಯಾ ಸಿನಿಮಾದ ಚಿತ್ರದಲ್ಲಿ ಜಾದೂ ಹಾಗೂ ಹೃತಿಕ್​ ರೋಷನ್​

  • Share this:
ಹೃತಿಕ್​ ರೋಷನ್​ ಅವರ ಸಿನಿ ಜೀವನದ ಹಿಟ್​ ಸಿನಿಮಾವಾದ ಕ್ರಿಶ್​ ಸರಣಿಯ ಹೊಸ ಸಿನಿಮಾದ ಕುರಿತು ಬಹಳ ಸಮಯದಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. 'ಕ್ರಿಶ್​ 4' ಸಿನಿಮಾ ಮಾಡುವುದಾಗಿ 2018ರ ಜನವರಿಯಲ್ಲೇ ರಾಕೇಶ್ ರೋಷನ್​ ಪ್ರಕಟಿಸಿದ್ದರು. 

ಅಷ್ಟೊತ್ತಿಗೆ ರಾಕೇಶ್ ರೋಷನ್​ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು ತಿಳಿದಿತ್ತು. ಇದರಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಸದ್ಯ ಹೃತಿಕ್​ ಅಪ್ಪನೊಂದಿಗೆ ಸೇರಿಕೊಂಡು 'ಕ್ರಿಶ್​ 4' ಸಿನಿಮಾದ ಕತೆ ಮೇಲೆ ಕೆಲಸ ಮಾಡುತ್ತಿದ್ದಾರಂತೆ.

alien jadoo to back in hrithik roshans krrish 4 after 17 years
ಕ್ರಿಶ್​ ಪಾತ್ರದಲ್ಲಿ ಹೃತಿಕ್​ ರೋಷನ್​


'ಕ್ರಿಶ್​ 4' ಸಿನಿಮಾದ ಕತೆ ಮೇಲೆ ರಾಕೇಶ್​ ರೋಷನ್​, ಹೃತಿಕ್​ ಹಾಗೂ ಅವರ ಬರಹಗಾರರ ತಂಡ ಕೆಲಸ ಮಾಡುತ್ತಿದ್ದು, ಈಗ ಕೃಷ್ಣ ಪಾತ್ರವನ್ನು ಹೇಗೆ ಮುಂದುವರೆಸುವುದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ. ಅದರ ಜೊತೆಗೆ 'ಕ್ರಿಶ್​ 3' ಸಿನಿಮಾದಲ್ಲಿ ರೋಹಿತ್ ಮೆಹ್ರಾ ಸಾವನ್ನಪ್ಪಿದ್ದು, ಈಗ ಕ್ರಿಶ್​ ಅಂದರೆ ಕೃಷ್ಣನ ಪಾತ್ರಕ್ಕೆ ಜಾದೂವಿನ ಪರಿಚಯಿಸಲು ಸೂಕ್ತ ಕಾಲ ಬಂದಿದೆ ಎನ್ನುತ್ತಿದ್ದಾರಂತೆ.

ಇದನ್ನೂ ಓದಿ: ಆಗಸ್ಟ್​ನಲ್ಲಿ ತೆರೆಯಲಿವೆಯಾ ಚಿತ್ರಮಂದಿರಗಳು?: ಷರತ್ತುಗಳು ಅನ್ವಯ..!

ಮುಂಬೈ ಮಿರರ್​ ವರದಿ ಪ್ರಕಾರ 'ಕ್ರಿಶ್​ 4' ಸಿನಿಮಾದಲ್ಲಿ 'ಕೋಯಿ ಮಿಲ್​ ಗಯಾ' ಸಿನಿಮಾದ ಜಾದೂ ಮತ್ತೆ ಕಾಣಿಸಿಕೊಳ್ಳಲಿದೆಯಂತೆ. ಬರೋಬ್ಬರಿ 17 ವರ್ಷಗಳ ನಂತರ 'ಕ್ರಿಶ್​ 4'ನಲ್ಲಿ ಜಾದೂ ಮತ್ತೆ ಭೂಮಿಗೆ ಬರಲಿದ್ದು, ಕೃಷ್ಣಾಗೆ ಪರಿಚಯವಾಗಲಿದೆಯಂತೆ.

ಅಪ್ಪ ರಾಕೇಶ್​ ರೋಷನ್​ ಜೊತೆ ಹೃತಿಕ್​


2018ರಲ್ಲೇ 'ಕ್ರಿಶ್​ 4' ನಿರ್ಮಾಣಕ್ಕಾಗಿ ಪ್ಲಾನ್​ ಮಾಡಲಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಇದೇ ವರ್ಷ ಈ ಸಿನಿಮಾ ತೆರೆ ಕಾಣಬೇಕಿತ್ತು. ಅಲ್ಲದೆ ಕ್ರಿಶ್​ 5 ಮಾಡುವ ಆಲೋಚನೆಯಲ್ಲಿದ್ದಾರಂತೆ ರಾಕೇಶ್ ರೋಷನ್​ ಹಾಗೂ ಹೃತಿಕ್​ ರೋಷನ್​. ಸದ್ಯ ಲಾಕ್​ಡೌನ್​ನಲ್ಲಿ ಕತೆ ಫೈನಲ್​ ಮಾಡುತ್ತಿರುವ ಅಪ್ಪ-ಮಗ, ಆದಷ್ಟು ಬೇಗೆ ಸಿನಿಮಾ ಕೆಲಸ ಆರಂಭಿಸಲಿದ್ದಾರಂತೆ.

Adah Sharma: ಹೊಸ ಚಾಲೆಂಜ್​ ಕೊಟ್ಟ ಅದಾ ಶರ್ಮಾ: ಹಾಟ್​ ಫೋಟೋಗಳು ವೈರಲ್​..!

First published: