Ranbir and Alia: ರಣಬೀರ್ ಕಪೂರ್ ಸೆಟ್‌ನಲ್ಲಿ ಹೇಗಿರ್ತಾರೆ? ಈ ಬಗ್ಗೆ ಖುದ್ದು ಆಲಿಯಾ ಏನು ಹೇಳಿದ್ದಾರೆ ಗೊತ್ತಾ?

ಬಾಲಿವುಡ್ ನಟಿ ಆಲಿಯಾ ಭಟ್ ಅವರು ತಮ್ಮ ಪತಿರಾಯ ರಣಬೀರ್ ಕಪೂರ್ ಅವರು ಸೆಟ್‌ಗಳಲ್ಲಿ ಹೇಗೆ ಇರುತ್ತಾರೆ ಅನ್ನೋದನ್ನು ಹೇಳಿದ್ದಾರೆ. ರಣಬೀರ್ ಕಪೂರ್ ಎಂತಹ ಸಹನಟ ಅಂತ ಗುಟ್ಟೊಂದನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ!

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್

  • Share this:
ಯಾವುದೇ ಚಲನಚಿತ್ರೋದ್ಯಮದ ನಟ (Actor) ಮತ್ತು ನಟಿಯರು (Actress) ತಮ್ಮ ಪಾತ್ರಗಳನ್ನು ಅಭಿನಯಿಸಿದ ನಂತರ ಸಿನೆಮಾ ಚಿತ್ರೀಕರಣ ನಡೆಯುವ ಸೆಟ್ ಎಂದರೆ ಸ್ಥಳದಲ್ಲಿ ಬಿಡುವಿನ ಸಮಯದಲ್ಲಿ ಏನೆಲ್ಲಾ ಮಾಡುತ್ತಾರೆ ಅಂತ ತಿಳಿದುಕೊಳ್ಳಲು ಅಭಿಮಾನಿಗಳಿಗೆ (Fans) ತುಂಬಾನೇ ಕುತೂಹಲ ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಹಿಂದೆಯೂ ತೆಲುಗು ಚಿತ್ರ ‘ಆರ್‌ಆರ್‌ಆರ್’ ನ ಚಿತ್ರೀಕರಣದ ವೇಳೆ ಬಿಡುವಿನ ಸಮಯದಲ್ಲಿ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ಮೆಗಾಸ್ಟಾರ್ ಚಿರಂಜೀವಿ ಅವರ ಮಗ ಮತ್ತು ನಟ ರಾಮ್ ಚರಣ್ ಅವರು ಒಂದು ಹಸಿರು ಹುಲ್ಲು ಹಾಸಿನ ಮೇಲೆ ಮಲಗಿಕೊಂಡು ವಿಶ್ರಮಿಸುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅಭಿಮಾನಿಗಳಿಗೆ ನೋಡಲು ಸಿಕ್ಕಿತ್ತು.

ಇದೇ ರೀತಿ ಒಬ್ಬಬ್ಬ ನಟ ಮತ್ತು ನಟಿಯರು ಸಹ ತಮಗೆ ಬೇಕಾದ ರೀತಿಯಲ್ಲಿ ಸೆಟ್ ನಲ್ಲಿ ಬಿಡುವಿನ ಸಮಯವನ್ನು ಕಳೆಯುತ್ತಾರೆ ಎಂದು ಹೇಳಬಹುದು. ಸಿನೆಮಾ ಸೆಟ್ ಗಳಲ್ಲಿ ಕೆಲವು ನಟರು ತಮ್ಮ ನೆಚ್ಚಿನ ಪುಸ್ತಕವನ್ನು ಓದುತ್ತಾರೆ ಮತ್ತು ಇನ್ನೂ ಕೆಲವರು ಕಾಮಿಡಿ ಕ್ಲಿಪ್ ಗಳನ್ನು ನೋಡುತ್ತಾರೆ. ಹೀಗೆ ಅನೇಕರು ಅನೇಕ ರೀತಿಯಲ್ಲಿ ತಮ್ಮ ಸಮಯ ಕಳೆಯುತ್ತಾರೆ.

ಸೆಟ್ ನಲ್ಲಿ ರಣಬೀರ್ ಕಪೂರ್ ಏನು ಮಾಡ್ತಾರೆ 
ಇದೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಬಾಲಿವುಡ್ ನ ಇತ್ತೀಚಿನ ಜೋಡಿ ಆಲಿಯಾ ಭಟ್ ಅವರು ತಮ್ಮ ಪತಿರಾಯ ರಣಬೀರ್ ಕಪೂರ್ ಅವರು ಸೆಟ್ ನಲ್ಲಿ ಹೇಗೆ ಇರುತ್ತಾರೆ ಮತ್ತು ಇವರು ಎಂತಹ ಸಹನಟ ಅಂತ ಗುಟ್ಟೊಂದನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ ನೋಡಿ.

ಪತಿಯ ಬಗ್ಗೆ ಆಲಿಯಾ ಏನು ಹೇಳಿದ್ರು 
ಇನ್ನೇನು ‘ಡಾರ್ಲಿಂಗ್ಸ್’ ಚಿತ್ರವು ಬಿಡುಗಡೆಗೆ ಸಜ್ಜಾಗುತ್ತಿರುವಾಗ ನಟಿ ಆಲಿಯಾ ಭಟ್ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಪ್ರಶ್ನೋತ್ತರ ಸೆಷನ್ ನಡೆಸಿದರು ಮತ್ತು ಸಹನಟರಾಗಿ ತಮ್ಮ ಪತಿ ರಣಬೀರ್ ಕಪೂರ್ ಅವರ ಅತ್ಯುತ್ತಮ ಗುಣವನ್ನು ಬಹಿರಂಗಪಡಿಸಿದರು.

ಇದನ್ನೂ ಓದಿ: Alia Bhatt Baby Bump: ಆಲಿಯಾ ಭಟ್ ಬೇಬಿ ಬಂಪ್ ಹೊಸ ಫೋಟೊ ರಿವೀಲ್!

ಪ್ರಶ್ನೋತ್ತರ ಅವಧಿಯಲ್ಲಿ, ಅಭಿಮಾನಿಯೊಬ್ಬರು ಆಲಿಯಾರನ್ನು ಒಬ್ಬ ಸಹನಟನಾಗಿ ರಣಬೀರ್ ಅವರ ಅತ್ಯುತ್ತಮ ಗುಣವೇನು ಎಂದು ಕೇಳಿದರು. ಅದಕ್ಕೆ ನಟಿಯು ಒಂದು ಮುದ್ದಾದ ಫೋಟೋವನ್ನು ಹಂಚಿಕೊಂಡು "ರಣಬೀರ್ ಅವರೊಂದಿಗೆ ಕೆಲಸ ಮಾಡುವುದು ತುಂಬಾನೇ ಸುಲಭದ ಮಾತು! ಅವನು ತುಂಬಾ ಸಮಯ ಪ್ರಜ್ಞೆಯುಳ್ಳವನು! ಒಬ್ಬ ನಟನಾಗಿ ಅವನು ಯಾವುದೇ ಪಾತ್ರಕ್ಕಾಗಿ ತನ್ನ ಕೈಲಾದಷ್ಟು ಪ್ರಯತ್ನವನ್ನು ನೀಡುತ್ತಾನೆ. ಅವರು ಸೆಟ್ ಅನ್ನು ಎಂದಿಗೂ ಕೋಪ ಮಾಡಿಕೊಂಡು ಮಧ್ಯೆದಲ್ಲಿಯೇ ಬಿಟ್ಟು ಹೋಗುವುದಿಲ್ಲ, ಅವರ ಶಿಸ್ತು ಅದ್ಭುತವಾಗಿದೆ" ಎಂದು ಹೇಳಿದರು.

ಶೀಘ್ರದಲ್ಲಿಯೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿರುವ ದಂಪತಿಗಳು
ಆಲಿಯಾ ಹಂಚಿಕೊಂಡಿರುವ ಮುದ್ದಾದ ಫೋಟೋದಲ್ಲಿ ನಟ ರಣಬೀರ್ ಒಂದು ಹುಲ್ಲು ಹಾಸಿನ ಮೇಲೆ ಮಲಗಿದ್ದು ತನ್ನ ಎರಡು ಕೈಗಳನ್ನು ಜೋಡಿಸಿ ಒಂದು ಪುಟ್ಟ ಹೃದಯದ ಸಂಕೇತ ತೋರಿಸುತ್ತಿದ್ದಾರೆ. ಅದರ ಬಗ್ಗೆ ವಿವರಿಸುತ್ತಾ "ದೃಶ್ಯಗಳ ಚಿತ್ರೀಕರಣದ ನಡುವೆ ಅವನು ನನಗಾಗಿ ಈ ಸಣ್ಣ ಹೃದಯಗಳನ್ನು ಸಹ ಮಾಡುತ್ತಾನೆ" ಎಂದು ಆಲಿಯಾ ಹೇಳಿದರು. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಶೀಘ್ರದಲ್ಲಿಯೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ.
ಕಳೆದ ತಿಂಗಳು, ಆಲಿಯಾ ಭಟ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತನ್ನ ಗರ್ಭಧಾರಣೆಯನ್ನು ಘೋಷಿಸಿದರು. ಆಸ್ಪತ್ರೆಯ ಒಂದು ಫೋಟೋವನ್ನು ಸಹ ಹಂಚಿಕೊಂಡ ಅವರು "ನಮ್ಮ ಮಗು ..... ಶೀಘ್ರದಲ್ಲಿಯೇ ಬರಲಿದೆ" ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದರು.

ಇದನ್ನೂ ಓದಿ: Virat-Anushka: ಒಂದೇ ಬಣ್ಣದ ಜಾಕೆಟ್‌ನಲ್ಲಿ ವಿರುಷ್ಕಾ ದಂಪತಿ! ಅವರ ಟೈಮ್‌ ಪಾಸ್ ಫೋಟೋಸ್ ಇಲ್ಲಿವೆ

ಈ ವರ್ಷದ ಏಪ್ರಿಲ್ ನಲ್ಲಿ ಮದುವೆಯಾದ ಈ ಜೋಡಿ, ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದಾರೆ. ಈಗಾಗಲೇ ಬ್ರಹ್ಮಾಸ್ತ್ರ ಚಿತ್ರದ ಎರಡನೇ ಹಾಡಿನ ಮೂಲಕ ತಮ್ಮ ಅಭಿಮಾನಿಗಳನ್ನು ಗೇಲಿ ಮಾಡಿದರು. 'ದೇವ ದೇವಾ' ಹಾಡಿನ ಟೀಸರ್ ಅನ್ನು ಹಂಚಿಕೊಂಡಿದ್ದರು.
Published by:Ashwini Prabhu
First published: