Alia Bhatt: ತಾಯಿಯಾಗುತ್ತಿರುವ ಆಲಿಯಾಳದ್ದು ಧೈರ್ಯಶಾಲಿ ನಿರ್ಧಾರ! ಕರೀನಾ ಕಪೂರ್ ಮೆಚ್ಚುಗೆ ಮಾತು

ಆಲಿಯಾ ತಾಯಿಯಾಗುವ ನಿರ್ಧಾರದ ಬಗ್ಗೆ ಮೆಚ್ಚಿಕೊಂಡ ಕರೀನಾ ಕಪೂರ್ ನಟಿಯ ಧೈರ್ಯದ ಬಗ್ಗೆ ಹೊಗಳಿದ್ದಾರೆ. ಟಾಪ್ ನಟಿಯಾಗಿ 29ನೇ ವಯಸ್ಸಿನಲ್ಲಿಯೇ ಮಗುವನ್ನು ಹೊಂದುವ ಆಲಿಯಾ ನಿರ್ಧಾರ ಅತ್ಯಂತ ಧೈರ್ಯಶಾಲಿ ಮತ್ತು ಉತ್ತಮ ನಿರ್ಧಾರವಾಗಿದೆ ಎಂದಿದ್ದಾರೆ ಕರೀನಾ...

ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಖಾನ್

ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಖಾನ್

  • Share this:
ಆಲಿಯಾ ಭಟ್ (Alia Bhatt), ಬಾಲಿವುಡ್ಡಿನ ಟಾಪ್ ನಟಿಯರಲ್ಲಿ ಒಬ್ಬರು, ಇತ್ತಿಚೆಗಷ್ಟೇ ರಣಬೀರ್ ಕಪೂರ್ (Ranbir Kapoor) ಅವರನ್ನು ಮದುವೆಯಾಗಿರುವ ಈ ಕ್ಯೂಟ್ ಬೆಡಗಿ ಸದ್ಯ ತಾಯಿಯಾಗುವ ಖುಷಿಯಲ್ಲಿದ್ದಾರೆ. ನಟಿ ಆಲಿಯಾ ಭಟ್ ತಾಯಿಯಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಬಾಲಿವುಡ್ಡಿನ  ಹಲವರು ಸಂತಸ ವ್ಯಕ್ತಪಡಿಸಿ ದಂಪತಿಗೆ ಶುಭ ಕೋರಿದ್ದರು. ಆದರೆ, ಟೀಕಾಕಾರರು ಮಾತ್ರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಭಾರಿ ಟ್ರೋಲ್ (Troll) ಮಾಡಿದರು. ತಾಯಿಯಾಗುವುದು ಅವರ ವೈಯಕ್ತಿಕ ಹಕ್ಕು ಎಂಬುವ ವಿಷಯದ ಅರಿವು ಸ್ವಲ್ಪವೂ ಇಲ್ಲದಂತೆ ಅವರ ನಿರ್ಧಾರವನ್ನು(Decision) ಟೀಕೆ ಮಾಡಿದರು. ಈ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಆದರೆ ಇತ್ತಿಚಿನ ಸಂದರ್ಶನವೊಂದರಲ್ಲಿ ಆಲಿಯಾ “ಕೆಲವರ ಕಣ್ಣುಗಳು ಯಾವಾಗಲೂ ಮಹಿಳೆಯರ ಆಯ್ಕೆಗಳ ಮೇಲೆ ಏಕೆ ಇರುತ್ತವೆ" ಎಂದು ಪ್ರಶ್ನಿಸಿ ಟೀಕಿಸುವವರಿಗೆ ಬಿಸಿ ಮುಟ್ಟಿಸಿದರು.

ಆಲಿಯಾಳ ಬಗ್ಗೆ ಬಾಲಿವುಡ್ ಬೇಬೋ ಮೆಚ್ಚುಗೆ
ಆದರೆ ನಟಿ ಆಲಿಯಾ ಪರವಾಗಿ ಹಲವಾರು ಮಂದಿ ಬೆಂಬಲವಾಗಿ ನಿಂತರು. ಆಲಿಯಾ ನಿರ್ಧಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದವರಲ್ಲಿ ಕರೀನಾ ಕಪೂರ್ ಖಾನ್ ಕೂಡ ಒಬ್ಬರು. ಆಲಿಯಾ ನಿರ್ಧಾರದ ಬಗ್ಗೆ ಮೆಚ್ಚಿಕೊಂಡ ಕರೀನಾ ಕಪೂರ್ ನಟಿಯ ಧೈರ್ಯದ ಬಗ್ಗೆ ಹೊಗಳಿದ್ದಾರೆ. ಟಾಪ್ ನಟಿಯಾಗಿ 29ನೇ ವಯಸ್ಸಿನಲ್ಲಿಯೇ ಮಗುವನ್ನು ಹೊಂದುವ ಆಲಿಯಾ ನಿರ್ಧಾರ ಅತ್ಯಂತ ಧೈರ್ಯಶಾಲಿ ಮತ್ತು ಉತ್ತಮ ನಿರ್ಧಾರವಾಗಿದೆ. ಗರ್ಭಿಣಿಯಾಗಿದ್ದಾಗಲೂ ಅವಳು ತನ್ನ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಳೆ. ಮತ್ತೆ ಎಂದಿನಂತೆ ಸಖತ್ ಗ್ಲ್ಯಾಮ್ ಆಗಿ ಕಾಣುತ್ತಿದ್ದಾಳೆ ಎಂದಿದ್ದಾರೆ ನಟಿ ಕರೀನಾ ಕಪೂರ್. ಮಾತು ಮುಂದುವರೆಸಿದ ಬೆಬೋ ಆಲಿಯಾ ಈಗ ನನ್ನ ಕುಟುಂಬದವಳು ಎಂಬ ಕಾರಣಕ್ಕೆ ಹೊಗಳುತ್ತಿಲ್ಲ, ಆಲಿಯಾ ನಿಜಕ್ಕೂ ಅದ್ಭುತ ನಟಿ, ಧೈರ್ಯವಂತೆ ಎಂದು ಹೊಗಳಿದ್ದಾಳೆ.

ಇದನ್ನೂ ಓದಿ: Liger: ರೊಮ್ಯಾಂಟಿಕ್ ಸಾಂಗ್​ನಲ್ಲಿ ವಿಜಯ್​-ಅನನ್ಯಾ, ಲೈಗರ್​ ಚಿತ್ರದ ಆಫತ್ ವಿಡಿಯೋ ಟೀಸರ್ ರಿಲೀಸ್​

ಡೆಲಿವರಿ ನಂತರ ಅಲಿಯಾ ಎಂದಿನಂತೆ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂಬುದರ ಬಗ್ಗೆಯೂ ತಿಳಿಸಿದ್ದಾರೆ. ಈ ಎಲ್ಲಾ ಕಾರಣಕ್ಕಾಗಿ ನಾನು ಆಲಿಯಾಳನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಆಲಿಯಾರ ಗುಣಗಾನ ಮಾಡಿದ್ದಾರೆ ಬಾಲಿವುಡ್ ಬೇಬೋ.

ಕರೀನಾ ಕೂಡ ಇದೇ ರೀತಿ ಗಟ್ಟಿಗಿತ್ತಿ ಎನ್ನಬಹುದು. ಚಿತ್ರರಂಗದಲ್ಲಿ ಸ್ಟಾರ್ ಡಮ್ ಇರುವಾಗಲೇ ಮದುವೆಯಾಗಿ ಮಕ್ಕಳನ್ನು ಸಹ ಹೊಂದಿದರು. ಮದುವೆ, ಮಕ್ಕಳಾದ ಮೇಲೆ ನಟಿಯರದ್ದು ಇಷ್ಟೇ ಎನ್ನುವ ಮಾತನ್ನು ಸಹ ಸುಳ್ಳು ಮಾಡಿದ ಕರೀನಾ ಈಗಲೂ ಸಹ ಬೇಡಿಕೆಯ ನಟಿಯರಲ್ಲಿ ಒಬ್ಬರು ಎನ್ನಬಹುದು.

ಕೈಯಲ್ಲಿ ಹಲವಾರು ಸಿನಿಮಾ ಹೊಂದಿರುವ ಆಲಿಯಾ
ಆಲಿಯಾ ಪ್ರಸ್ತುತ ತನ್ನ ಮುಂಬರುವ ಚಿತ್ರ 'ಡಾರ್ಲಿಂಗ್ಸ್' ಅನ್ನು ಪ್ರಚಾರ ಮಾಡುತ್ತಿದ್ದಾಳೆ, ಇದು ನಿರ್ಮಾಪಕಿಯಾಗಿ ನಟಿಯ ಚೊಚ್ಚಲ ಚಿತ್ರವಾಗಿದೆ. ಚಿತ್ರವು ಆಗಸ್ಟ್ 5 ರಂದು OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಮತ್ತು ಶೆಫಾಲಿ ಶಾ ಮತ್ತು ವಿಜಯ್ ವರ್ಮಾ ಮುಂತಾದ ನಟರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:  Sita Ramam: ಹೇಗಿದೆ ಸೀತಾರಾಮಮ್? ದುಲ್ಕರ್ ಸಲ್ಮಾನ್‌ಗೆ ಸಲಾಂ ಹೇಳಿದ್ರಾ ಪ್ರೇಕ್ಷಕರು?

ಮತ್ತೊಂದೆಡೆ ಕರೀನಾ, ಅಮೀರ್ ಖಾನ್ ಜೊತೆಗಿನ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದು ಆಗಸ್ಟ್ 11, 2022 ರಂದು ಚಿತ್ರಮಂದಿರಗಳಿಗೆ ಬರಲಿದೆ. ಇದರ ಹೊರತಾಗಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಕರಣ್ ಜೋಹರ್ ನಿರ್ಮಾಪಕ. ಈಗ ಆಲಿಯಾ ಗರ್ಭಿಣಿ ಆಗಿರುವ ಕಾರಣ ಸಿನಿಮಾದ ಚಿತ್ರೀಕರಣ ತಡವಾಗಲಿದೆ. ಆಲಿಯಾ ಭಟ್ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು ಸಿನಿಮಾದ ಬಿಡುಗಡೆ ಸೆಪ್ಟೆಂಬರ್ ತಿಂಗಳಲ್ಲಿ ಆಗಲಿದೆ. ಈ ಸಿನಿಮಾದಲ್ಲಿ ಪತಿ ರಣಬೀರ್ ಕಪೂರ್ ನಾಯಕರಾಗಿದ್ದಾರೆ.
Published by:Ashwini Prabhu
First published: