Alia Bhatt: ಟ್ರೋಲ್​ ಆಗುತ್ತಿದೆ ಆಲಿಯಾ ಭಟ್​ ಅಭಿನಯದ ಸಡಕ್​ 2 ಚಿತ್ರದ ಪೋಸ್ಟರ್​..!

Sadak 2 Poster: ಬಹಳ ವರ್ಷಗಳ ನಂತರ ಮಹೇಶ್ ಭಟ್​ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಡಕ್​ 2 ಚಿತ್ರದಲ್ಲಿ ಸಂಜಯ್​ ದತ್​, ಪೂಜಾ ಭಟ್​, ಆಲಿಯಾ ಭಟ್​ ಹಾಗೂ ಆದಿತ್ಯ ರಾಯ್​ ಕಪೂರ್​ ನಟಿಸಿದ್ದಾರೆ. ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಮರ ಸಾರಿದ್ದಾರೆ. 

Anitha E | news18-kannada
Updated:July 1, 2020, 10:33 AM IST
Alia Bhatt: ಟ್ರೋಲ್​ ಆಗುತ್ತಿದೆ ಆಲಿಯಾ ಭಟ್​ ಅಭಿನಯದ ಸಡಕ್​ 2 ಚಿತ್ರದ ಪೋಸ್ಟರ್​..!
ಆಲಿಯಾ ಭಟ್​ ಹಾಗೂ ಮಹೇಶ್​ ಭಟ್​
  • Share this:
ಫಿಲ್ಮ್​ ಮೇಕರ್​ ಮಹೇಶ್ ಭಟ್​ ತಮ್ಮ ಹೊಸ ಸಿನಿಮಾ 'ಸಡಕ್​ 2' ಪೋಸ್ಟರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದಾರೆ. ಆಲಿಯಾ ಭಟ್​ ಅಭಿನಯದ ಈ ಸಿನಿಮಾ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಹಾಟ್​ಸ್ಟಾರ್​ನಲ್ಲಿ ಇತ್ತೀಚೆಗಷ್ಟೆ ನಡೆದ ಡಿಜಿಟಲ್​ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಯಿತು.

ಬಹಳ ವರ್ಷಗಳ ನಂತರ ಮಹೇಶ್ ಭಟ್​ ನಿರ್ದೇಶನದಲ್ಲಿ ಮೂಡಿ ಬಂದಿರುವ 'ಸಡಕ್​ 2 'ಚಿತ್ರದಲ್ಲಿ ಸಂಜಯ್​ ದತ್​, ಪೂಜಾ ಭಟ್​, ಆಲಿಯಾ ಭಟ್​ ಹಾಗೂ ಆದಿತ್ಯ ರಾಯ್​ ಕಪೂರ್​ ನಟಿಸಿದ್ದಾರೆ. ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಮರ ಸಾರಿದ್ದಾರೆ.

When you come to the end, you discover that there is no END. pic.twitter.com/sAchR8k8mv
ಮಹೇಶ್​ ಭಟ್​ ಹಾಗೂ ಆಲಿಯಾ ಭಟ್​ ಅವರನ್ನು ಈ ಹಿಂದೆ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಾಗ ನೆಟ್ಟಿಗರು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಸಾಲದಕ್ಕೆ ಇವರ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ್ದರು.ಈಗ ಆಲಿಯಾ ಅಭಿನಯದ ಹಾಗೂ ಮಹೇಶ್​ ಭಟ್​ ನಿರ್ದೇಶನದ ಈ 'ಸಡಕ್​ 2' ಚಿತ್ರವನ್ನು ಬಹಿಷ್ಕರಿಸುವಂತೆ ಮತ್ತೆ ನೆಟ್ಟಿಗರು ಅಭಿಯಾನ ಆರಂಭಿಸಿದ್ದಾರೆ. ಜೊತೆಗೆ ಈ ಸಿನಿಮಾವನ್ನು ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆದಾಗ ಯಾರೂ ನೋಡದಂತೆ ಫ್ಲಾಪ್​ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

 

ಆಲಿಯಾ ಭಟ್​ 'ಸಡಕ್​ 2' ಸಿನಿಮಾದ ಪೋಸ್ಟರ್ ಅನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಕಮೆಂಟ್​ ಅನ್ನು ಲಿಮಿಟ್​ ಮಾಡಿದ್ದಾರೆ. ಇದಕ್ಕೆ ಕಾರಣ ಸುಶಾಂತ್ ಸಿಂಗ್ ವಿಷಯದಲ್ಲಿ ಆಲಿಯಾರನ್ನು ಟ್ರೋಲ್​ ಮಾಡಲಾಗಿತ್ತು. ಅಲ್ಲದೆ ಸಾಕಷ್ಟು ಮಂದಿ ಇವರನ್ನು ಅನ್​ಫಾಲೋ ಸಹ ಮಾಡಿದ್ದರು.

Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!ಇದನ್ನೂ ಓದಿ: Neha Kakkar: ದೊಡ್ಡ ದೊಡ್ಡ ಸ್ಟಾರ್​ಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ನೇಹಾ ಕಕ್ಕರ್..!

 
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading