Alia Bhatt ಮದುವೆಗೆ ಎಲ್ರೂ ವಿಶ್ ಮಾಡಿದ್ರು, ಆದ್ರೆ ಅವನೊಬ್ಬನ ಹಾರೈಕೆ ಮುಂದೆ ಇನ್ಯಾವ್ದೂ ಇಲ್ಲ ಬಿಡಿ!

Bollywood: ಇನ್ನು ಮದುವೆಯಲ್ಲಿ ಆಲಿಯಾ ಧರಿಸಿದ್ದ ಸೀರೆ, ಒಡವೆ ಹಾಗೂ ಮಾಂಗಲ್ಯ ಸರ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಅದರ ಡಿಸೈನ್ ಬೆಲೆ ಎಲ್ಲಾವೂ ಹೆಚ್ಚು ಸುದ್ದಿ ಮಾಡಿದೆ. ಇನ್ನು ಆಲಿಯಾ ಮದುವೆಯ ದಿನದ ಸಿಂಪಲ್ ಮೇಕಪ್ ಲುಕ್ ಹಾಗೂ ಸಿಂಪಲ್ ಮೆಹೆಂದಿ ಕೂಡ ಹೊಸ ಟ್ರೆಂಡ್​ ಸೃಷ್ಟಿ ಮಾಡಿದೆ.

ಆಲಿಯಾ ಭಟ್​ - ರಣಬೀರ್ ಕಪೂರ್

ಆಲಿಯಾ ಭಟ್​ - ರಣಬೀರ್ ಕಪೂರ್

  • Share this:
ಬಾಲಿವುಡ್​ನ (Bollywood) ಮತ್ತೊಂದು ತಾರಾ ಜೋಡಿ ಇದೀಗ ಸತಿ-ಪತಿಗಳಾಗಿದ್ದಾರೆ. ಫೇಮಸ್​ ಕಪಲ್​ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbeer Kapoor) ಗುರುವಾರ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾಗಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಮುಂಬೈನಲ್ಲಿರುವ ರಣಬೀರ್ ಮನೆಯಲ್ಲಿ ಮದುವೆ ನಡೆದಿದ್ದು, ಆಲಿಯಾ ಭಟ್​ ತನ್ನ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿ ಸಂತಸ ಹಂಚಿಕೊಂಡಿದ್ದು, ಬಾಲಿವುಡ್​ ಸೆಲೆಬ್ರಿಟಿಗಳು ಶುಭಾಶಯಸ ಮಹಾಪೂರವನ್ನೇ ಹರಿಸಿದ್ದಾರೆ. ಕೇವಲ ಬಾಲಿವುಡ್​ ಮಾತ್ರವಲ್ಲದೇ ಹಾಲಿವುಡ್​ ನಟಿ ಕೂಡ ನವ ದಂಪತಿಗಳಿಗೆ ವಿಶ್ ಮಾಡಿದ್ದಾರೆ. ಆದರೆ ಆಲಿಯಾಗೆ ಮಾತ್ರ ಈ ಎಲ್ಲಾ ವಿಶ್​ಕ್ಕಿಂತ ಆ ಒಬ್ಬ ವ್ಯಕ್ತಿಯ ವಿಶ್​ ಬಹಳ ಮುಖ್ಯ ಹಾಗೂ ಭಾವನಾತ್ಮಕ ಕೂಡ ಎನ್ನಬಹುದು. ಅರೇ ಯಾರಪ್ಪ ಅದು ಅಂತೀರಾ? ಈ ಸ್ಟೋರಿ ಓದಿ.

ಆಲಿಯಾ ಅವರ ಬಾಡಿಗಾರ್ಡ್ ಸುನಿಲ್ ತಳೇಕರ್ ಅವರು ನವದಂಪತಿಗಳ ಜೊತೆ ಇರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿದ್ದು,  ಫೋಟೋದ ಜೊತೆಗೆ, ನಿಮ್ಮ ಪುಟ್ಟ ಪುಟ್ಟ ಕೈಗಳನ್ನು ಹಿಡಿದು ನಡೆಸುವುದರಿಂದ, ಈಗ ನಿಮ್ಮನ್ನ ವಧುವಾಗಿ ನೋಡುವುದು ನಿಜಕ್ಕೂ ನನಗೆ ಸಂತೋಷದ ವಿಚಾರ. ನನ್ನ ಹೃದಯ ಇಂದು ಸಂತೋಷದಿಂದ ತುಂಬಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಸುನೀಲ್ ಅವರ ಈ ಪೋಸ್ಟ್​ಗೆ ಹಲವಾರು ಸಾಮಾಜಿಕ ಜಾಲಾತಾಣ ಬಳಕೆದಾರರು ಕಾಮೆಂಟ್​ ಮಾಡಿದ್ದು, ಆಲಿಯಾ ಬಗ್ಗೆ ಸುನೀಲ್ ಬರೆದಿರುವ ಪದಗಳು ಸ್ವೀಟ್​ ಎಂದು ಬರೆದಿದ್ದಾರೆ. ಇನ್ನೂ ಕೆಲವರು ಹಾರ್ಟ್, ಕಿಸ್ಸಿಂಗ್ ಇಮೋಜಿಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








View this post on Instagram






A post shared by sunil (@suniltalekar1977)






ಕೇವಲ ಆಲಿಯಾ ಬಾಡಿಗಾರ್ಡ್ ಮಾತ್ರವಲ್ಲದೇ, ರಣವೀರ್ ಕಪೂರ್ ಬಾಡಿಗಾರ್ಡ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಶೇರ್​ ಮಾಡುವ ಮೂಲಕ ನವದಂಪತಿಗಳಿಗೆ ಶುಭಾಶಯ ಕೋರಿದ್ದಾರೆ. ರಣಬೀರ್ ಅವರ ಬಾಡಿಗಾರ್ಡ್ ಯೂಸುಫ್ ಇಬ್ರಾಹಿಂ ಫೋಟೋ ಜೊತೆಗೆ ಮಿಸ್ಟರ್ ಆ್ಯಂಡ್ ಮಿಸೆಸ್ ಕಪೂರ್​ಗೆ ಶುಭಾಶಯ ಎಂದು ಬರೆದಿದ್ದಾರೆ.








View this post on Instagram






A post shared by Yusuf Ibrahim (@yusuf_911)






ಮದುವೆಯ ನಂತರ ರಣಬೀರ್ ಮತ್ತು ಆಲಿಯಾ ಅವರು ಇಡೀ ದಿನ ಕಾಯುತ್ತಿದ್ದ ಮಾಧ್ಯಮಗಳನ್ನು ಭೇಟಿಯಾಗಿದ್ದಾರೆ. ಅಲ್ಲದೇ ನವಜೋಡಿ, ಸಿಹಿ ಹಂಚಿ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಮರಳಿ ಹೋಗುವಾಗ ಆಲಿಯಾ ಅವರನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಕರೆದುಕೊಂಡು ಹೋಗಿದ್ದು, ಅಭಿಮಾನಿಗಳು ಇದನ್ನು ಕ್ಯೂಟ್​ ಮೂಮೆಂಟ್​ ಎಂದು ಬಣ್ಣಿಸಿದ್ದಾರೆ.

ಆಲಿಯಾ ಮತ್ತು ರಣಬೀರ್ ಮದುವೆಯ ಸಂಬಂಧ ಬಹಳಷ್ಟು ಖಾಸಗಿತನವನ್ನು ಕಾಪಾಡಿಕೊಳ್ಳಲಾಗಿತ್ತು, ಮಾಧ್ಯಮಗಳಿಗೆ ಸಹ ಮದುವೆಯ ದಿನಾಂಕವನ್ನು ಜೋಡಿ ಅಧಿಕೃತವಾಗಿ ಹೇಳಿರಲಿಲ್ಲ. ಅಲ್ಲದೇ ಮದುವೆಯಲ್ಲಿ ಸಹ ಹೆಚ್ಚಿನ ಜನರಿಗೆ ಆಹ್ವಾನ ನೀಡಿರಲಿಲ್ಲ. ಮದುವೆಯಲ್ಲಿ ಬಾಲಿವುಡ್ ತಾರೆಯರು ರಣಬೀರ್-ಆಲಿಯಾ ಅವರ ಮದುವೆಗೆ ಹಾಜರಾಗಿದ್ದು, ಅದರಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್, ಕರಿಷ್ಮಾ ಕಪೂರ್, ಕರಣ್ ಜೋಹರ್ ಭಾಗಿಯಾಗಿದ್ದರು.

ಮುಂಬೈನ ತಾಜ್ ಹೋಟೆಲ್‌ನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ನಂತರ ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂಬ ಸುದ್ದಿ ಕೇಳಿ ಬಂದಿತು. ಆದರೆ ಅದು ನಡೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸತಿ-ಪತಿಗಳಾದ ರಣಬೀರ್​-ಆಲಿಯಾ; ಮದುವೆಯ ಫೋಟೋ ಇಲ್ಲಿದೆ

ಇನ್ನು ಮದುವೆಯಲ್ಲಿ ಆಲಿಯಾ ಧರಿಸಿದ್ದ ಸೀರೆ, ಒಡವೆ ಹಾಗೂ ಮಾಂಗಲ್ಯ ಸರ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಅದರ ಡಿಸೈನ್ ಬೆಲೆ ಎಲ್ಲಾವೂ ಹೆಚ್ಚು ಸುದ್ದಿ ಮಾಡಿದೆ. ಇನ್ನು ಆಲಿಯಾ ಮದುವೆಯ ದಿನದ ಸಿಂಪಲ್ ಮೇಕಪ್ ಲುಕ್ ಹಾಗೂ ಸಿಂಪಲ್ ಮೆಹೆಂದಿ ಕೂಡ ಹೊಸ ಟ್ರೆಂಡ್​ ಸೃಷ್ಟಿ ಮಾಡಿದೆ.
Published by:Sandhya M
First published: