Alia Bhatt: ಒಂದು ವೇಳೆ ನಟಿಯಾಗದಿದ್ದರೆ ಏನಾಗ್ತಿದ್ರು ಆಲಿಯಾ? ಅವ್ರ ಇಷ್ಟ ಬೇರೆಯೇ ಇತ್ತಂತೆ!

ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಸಿಕ್ಕಾಪಟ್ಟೆ ದಪ್ಪಗಿದ್ದ ಆಲಿಯಾ ಭಟ್, ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಶನಾಯಾ ಪಾತ್ರಕ್ಕಾಗಿ ಸುಮಾರು 16 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು.

ಆಲಿಯಾ ಭಟ್ ಎಂಬ ಬೆಡಗು

ಆಲಿಯಾ ಭಟ್ ಎಂಬ ಬೆಡಗು

  • Share this:
ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದ ಇಯರ್ (Student Of The Year) ಸಿನಿಮಾದ ಮೂಲಕ ಬಾಲಿವುಡ್‍ಗೆ ಪದಾರ್ಪಣೆ ಮಾಡಿದ ಭಟ್ ಕುಟುಂಬದ ಕಿರಿಯ ಕುಡಿ ಆಲಿಯಾ ಭಟ್ (Alia Bhatt)  ಪ್ರಥಮ ಚಿತ್ರದಲ್ಲೇ ಅಪಾರ ಮೆಚ್ಚುಗೆ ಪಡೆದುಕೊಂಡವರು. ಆ ಸಿನಿಮಾದ “ಓ ರಾಧಾ ತೇರಿ ಚುನರಿ.. . ಓ ರಾಧಾ ತೆರಾ ಚಲ್ಲಾ. . .” ಹಾಡಿನಲ್ಲಿ ಆಲಿಯಾ ಭಟ್ ನೃತ್ಯವನ್ನು ಕಂಡು ಫಿದಾ ಆಗದ ಪಡ್ಡೆ ಹುಡುಗರಿಲ್ಲ. ಅಂದಿನಿಂದ ಇಂದಿನವರೆಗೂ ಸಿನಿಮಾ ರಂಗದಲ್ಲಿ (Film Industry) ಒಂದೊಂದೇ ಹೆಜ್ಜೆಗಳನ್ನು ಇಡುತ್ತಾ ಬಂದಿರುವ ಆಲಿಯಾ ಭಟ್, ನಟನಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಹೈವೇ, ರಾಝಿ, ಡಿಯರ್ ಜಿಂದಗಿ ಮುಂತಾದವು ಅವರ ಅಭಿನಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡುವ ಸಿನಿಮಾ ಎಂಬುದು ಒಪ್ಪತಕ್ಕ ಮಾತು.

ಇದೀಗ ಅವರು ತಮ್ಮ ಹೊಚ್ಚ ಹೊಸ ಸಿನಿಮಾ ಗಂಗೂಬಾಯಿ ಕಾಠಿಯಾವಾಡಿಯ ಯಶಸ್ಸಿನ ಖುಷಿಯಲ್ಲಿದ್ದಾರೆ. ಅದರಲ್ಲಿನ ಅವರು ನಿರ್ವಹಿಸಿರುವ ಗಂಗೂಬಾಯಿಯ ಪಾತ್ರಕ್ಕೆ ಬಹಳಷ್ಟು ಮಂದಿ ವಾಹ್ ವಾಹ್ ಎಂದಿದ್ದಾರೆ. ಇವೆಲ್ಲವನ್ನು ನೋಡಿದರೆ, ಸಿನಿಮಾ ರಂಗವನ್ನು ಹೊರತು ಪಡಿಸಿ ಆಲಿಯಾ ಮತ್ಯಾವುದೇ ಪರ್ಯಾಯ ಉದ್ಯಮದಲ್ಲಿ ತೊಡಗಿಕೊಳ್ಳುವುದನ್ನು ಆಕೆಯ ಅಭಿಮಾನಿಗಳಿಂದ ಊಹಿಸಲು ಸಾಧ್ಯವಾಗದಿರಬಹುದು. ಆದರೆ ಆಲಿಯಾ ಹಿಂದೊಮ್ಮೆ ತಮ್ಮ ಪರ್ಯಾಯ ವೃತ್ತಿ ಆಯ್ಕೆಯ ಕುರಿತು ಸಂದರ್ಶನವೊಂದರಲ್ಲಿ ಉಲ್ಲೇಖಿಸಿದ್ದರು.

ಆಲಿಯಾ ಭಟ್ ಈ ವಿಷಯದಲ್ಲಿ ಮಾಸ್ಟರ್ ಅಂತೆ!
ಮಾಧ್ಯಮ ಸಂದರ್ಶನವೊಂದರಲ್ಲಿ ಆಲಿಯಾ ಭಟ್, “ನಾನು ಸಂಘಟನೆಯಲ್ಲಿ ಮಾಸ್ಟರ್ ಆಗಬಹುದು ಎಂದು ನನಗೆ ಅನಿಸುತ್ತದೆ. ಸಂಘಟಿಸುವುದರ ಕುರಿತು ನಾನು ಅತಿಯಾದ ಗೀಳನ್ನು ಹೊಂದಿದ್ದೇನೆ. ನನಗೆ ಯೋಜನೆಗಳನ್ನು ರೂಪಿಸುವುದು ಎಂದರೆ ತುಂಬಾ ಇಷ್ಟ” ಎಂದು ಹೇಳಿದ್ದರು.

ಭೂಮಿಯ ಮೇಲೆ ತನ್ನ ಕೊನೆಯ ಊಟವನ್ನು ಆರಿಸಿಕೊಳ್ಳುವ ಆಯ್ಕೆ ಒದಗಿ ಬಂದಲ್ಲಿ ತಾನು ಏನನ್ನು ಆಯ್ಕೆ ಮಾಡುತ್ತೇನೆ ಎಂಬುದನ್ನು ಸಹ ಅವರು ಬಹಿರಂಗಪಡಿಸಿದ್ದರು. “ ನಾನು ಏನಾದರೂ ಉತ್ತಮವಾದದ್ದನ್ನು ತಿನ್ನುತ್ತೇನೆ. ಅತ್ಯಂತ ಅನಾರೋಗ್ಯಕರವಾದದ್ದನ್ನು- ಒಂದು ಬರ್ಗರ್ ಮತ್ತು ಒಂದು ಪಿಜ್ಜಾ ಮತ್ತು ಹೆಚ್ಚುವರಿ ಚಾಕೊಲೇಟನ್ನು ಹಾಕಿರುವ ಒಂದು ದೊಡ್ಡ ಚಾಕೋಲೇಟ್ ಸಿಹಿ ತಿನಿಸು” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Zee Picchar: 2ನೇ ವರ್ಷದ ಸಂಭ್ರಮದಲ್ಲಿ ಜೀ ಪಿಚ್ಚರ್​​​, ವೀಕ್ಷಕರಿಗೆ ಕೊಡಲಿದೆ ಕೆಜಿಎಫ್​-2 ಪ್ರೀಮಿಯರ್​​ ಗಿಫ್ಟ್​!

ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಸಿಕ್ಕಾಪಟ್ಟೆ ದಪ್ಪಗಿದ್ದ ಆಲಿಯಾ ಭಟ್, ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾದ ಶನಾಯಾ ಪಾತ್ರಕ್ಕಾಗಿ ಸುಮಾರು 16 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು. ಸುಮಾರು 400 ಮಂದಿ ಹುಡುಗಿಯರ ಜೊತೆ ಸ್ಫರ್ಧಿಸಿ ಆ ಪಾತ್ರವನ್ನು ತಮ್ಮದಾಗಿಸಿಕೊಂಡಿದ್ದರು ಆಲಿಯಾ ಭಟ್.

ಯಶಸ್ಸಿನ ಉತ್ತುಂಗದಲ್ಲಿದ್ದಾರಾ ಆಲಿಯಾ?
ಒಂದೆಡೆ ಬಾಲಿವುಡ್‍ನಲ್ಲಿ ನಟಿಯಾಗಿ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದರೆ, ಇನ್ನೊಂದೆಡೆ ಅದೇ ಬಾಲಿವುಡ್‍ಗೆ ಸೇರಿದ ಜೀವನ ಸಂಗಾತಿಯನ್ನು ಪಡೆಯ ಹೊರಟಿದ್ದಾರೆ ಆಲಿಯಾ ಭಟ್. ಹಿಂದಿ ಸಿನಿಮಾ ರಂಗದ ದಿಗ್ಗಜರಲ್ಲಿ ಒಂದಾಗಿರುವ ಕಪೂರ್ ಕುಟುಂಬದ ಕುಡಿ, ರಣ್‍ಬೀರ್ ಕಪೂರ್ ಅವರ ಜೊತೆ ಆಲಿಯಾ ಭಟ್ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ತನ್ನ ಪ್ರೇಮಿಯ ಬಗ್ಗೆ ಪ್ರೀತಿ ವ್ಯಕ್ತಪಡಿಸಲು ಎಲ್ಲಿಯೂ ಹಿಂಜರಿಯುವುದಿಲ್ಲ ಅವರು. ರಣ್‍ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರೇಮಕ್ಕೆ ಎರಡೂ ಕುಟುಂಬದವರ ಒಪ್ಪಿಗೆಯ ಮುದ್ರೆಯೂ ಬಿದ್ದಾಗಿಯಂತೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಬಹುದು ಎಂಬ ಸುದ್ದಿ ಬಾಲಿವುಡ್ ಗಾಸಿಪ್ ಗಲ್ಲಿಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: James Lyrical Song: ಟ್ರೆಂಡ್​ ಸೃಷ್ಟಿಸಿದ `ಟ್ರೇಡ್​ ಮಾರ್ಕ್’ ಸಾಂಗ್​​, ಅಪ್ಪು.. ನಿಮ್ಮನ್ನು ವರ್ಣಿಸೋಕೆ ಪದಗಳೇ ಸಾಲದು!

ರಣ್‍ಬೀರ್ ಕಪೂರ್ ಮತ್ತು ಆಲಿಯಾ ಭಟ್, ತಮ್ಮ ಸ್ನೇಹಿತ ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಸಿನಿಮಾದಲ್ಲೂ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಜೂನಿಯರ್ ಎನ್‍ಟಿಆರ್, ರಾಮ್ ಚರಣ್ ತೇಜಾ ಮತ್ತು ಅಜಯ್ ದೇವಗನ್ ಅವರಂತಹ ಘಟಾನುಘಟಿ ತಾರೆಯರು ಅಭಿನಯಿಸಿರುವ ರಾಜಾಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದಾರೆ ಆಲಿಯಾ. ಕೋವಿಡ್ ಪ್ರಕರಣಗಳ ಹೆಚ್ಚಳದ ಕಾರಣದಿಂದಾಗಿ ಈ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಅವರು ತಮ್ಮ ಮುಂದಿನ ಸಿನಿಮಾ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿಯಲ್ಲಿ, ರಣವೀರ್ ಸಿಂಗ್ ಅವರ ಜೊತೆ ಕಾಣಿಸಿಕೊಳ್ಳಲಿದ್ದಾರೆ.
Published by:guruganesh bhat
First published: