Alia Bhatt: ಆ ಒಂದು ಫೋಟೋಗಾಗಿ ಆಲಿಯಾ ಭಟ್ 20 ಸಾವಿರ ರೂ ಡ್ರೆಸ್ ಹಾಕೊಂಡ್ರು ! ಏನು ಆ ಡ್ರೆಸ್ ವಿಶೇಷ ?

Alia Bhatt: ಬಾಲಿವುಡ್ ಬೆಡಗಿ ಆಲಿಯಾ ಭಟ್ ಆ ಒಂದು ಫೋಟೋಗೋಸ್ಕರ 20 ಸಾವಿರ ರೂಪಾಯಿ ಬೆಲೆಬಾಳುವ ಡ್ರೆಸ್ ಧರಿಸಿದ್ದಾರೆ. ಅಂಥಾ ವಿಶೇಷತೆ ಇರುವ ಡ್ರೆಸ್ ಯಾವ್ದು? ಏನದರ ವಿಶೇಷತೆ ? ಇಲ್ಲಿದೆ ಪೂರ್ತಿ ವಿವರ...

ಆಲಿಯಾ ಭಟ್- ಡಬ್ಬೂ ರತ್ನಾನಿ

ಆಲಿಯಾ ಭಟ್- ಡಬ್ಬೂ ರತ್ನಾನಿ

 • Share this:
  ಆAlia Bhatt: ಪ್ರತೀ ವರ್ಷ ಖ್ಯಾತ ಫೋಟಾಗ್ರಫರ್ ಡಬ್ಬೂ ರತ್ನಾನಿ ಸೆಲಬ್ರಿಟಿಗಳನ್ನೆಲ್ಲಾ ಒಂದು ಕಡೆ ಸೇರಿಸಿ ಫೋಟೋ ಶೂಟ್ ಮಾಡುತ್ತಾರೆ. ಡಬ್ಬೂ ರತ್ನಾನಿ ಕ್ಯಾಲೆಂಡರ್​ ಎಂದರೆ ಅದಕ್ಕೆ ಅದರದ್ದೇ ಆದ ಒಂದು ಸ್ಥಾನ ಇರುವಂತಿದೆ. ಫ್ಯಾಷನ್ ಮತ್ತು ಸಿನಿಮಾ ಇಂಡಸ್ಟ್ರಿಯ ದಿಗ್ಗಜರಲ್ಲಿ ಡಬ್ಬೂ ತಮಗೆ ಬೇಕೆನಿಸಿದ ತಾರೆಯನ್ನು ವಿಧವಿಧವಾಗಿ ಫೋಟೋ ಶೂಟ್ ಮಾಡ್ತಾರೆ. ಈ ಕ್ಯಾಲೆಂಡರ್ ಕಿಂಗ್ ಫಿಶರ್ ಕ್ಯಾಲೆಂಡರ್ ನಂತರ ಅತೀ ಹೆಚ್ಚು ಪ್ರಸಿದ್ಧಿ ಪಡೆದ ಕ್ಯಾಲೆಂಡರ್ ಶೂಟ್ ಅಂದ್ರೂ ತಪ್ಪಾಗಲ್ಲ. ಇದರ ಫೋಟೋಗಳು ತಿಂಗಳುಗಟ್ಟಲೆ ಚರ್ಚೆಯಲ್ಲಿರುತ್ತವೆ.

  ಕೆಲವು ಬಾಲಿವುಡ್ ತಾರೆಯರು ಬಹುತೇಕ ಪ್ರತೀ ವರ್ಷವೂ ಡಬ್ಬೂ ರತ್ನಾನಿ ಕ್ಯಾಲೆಂಡರ್​ಗೆ ಪೋಸ್ ಕೊಡ್ತಾರೆ. ಬಾಲಿವುಡ್ ಬೆಡಗಿ ಆಲಿಯಾ ಭಟ್ ಕೂಡಾ ಅದರಲ್ಲೊಬ್ಬರು. ಪ್ರತೀ ಬಾರಿ ವಿಭಿನ್ನವಾಗಿ ಆಲಿಯಾರನ್ನು ತೋರಿಸೋ ಪ್ರಯತ್ನ ಮಾಡ್ತಾರೆ ಡಬ್ಬೂ. ಈ ಸಲ ಆಲಿಯಾರ ಸರಳತೆಯನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ ಡಬ್ಬೂ ರತ್ನಾನಿ.

  ಇದನ್ನೂ ಓದಿ: Money Matters: ನಿಮ್ಮ ಬಳಿ ಹಳೇ 25 ಪೈಸೆ ನಾಣ್ಯ ಇದ್ಯಾ? 1.5 ಲಕ್ಷ ರೂಪಾಯಿಗೆ ಅದನ್ನು ಕೊಳ್ಳುವವರಿದ್ದಾರೆ ನೋಡಿ !

  ಟರ್ಕಾಯ್ಸ್ ಬಣ್ಣದ ಪ್ಲೀಟೆಡ್ ಡ್ರೆಸ್ ಧರಿಸಿರುವ ಆಲಿಯಾ ಅತ್ಯಂತ ಮಿನಿಮಮ್ ಮೇಕಪ್ ಧರಿಸಿದ್ದಾರೆ. ಕೂದಲನ್ನು ಹಾಗೇ ಫ್ರೀ ಬಿಟ್ಟಿರುವ ಆಲಿಯಾ ಧರಿಸಿರುವ ಮೈಕ್ರೊ ಪ್ಲೀಟೆಡ್​ ಡ್ರೆಸ್​ನ ಬೆಲೆ ಬರೋಬ್ಬರಿ 20 ಸಾವಿರ ರೂಪಾಯಿಗಳು. ಕೈಬೆರಳಿಗೆ ನಾನಾ ಬಗೆಯ ಉಂಗುರಗಳನ್ನು ಧರಿಸಿರುವ ಆಲಿಯಾ ಡೀಪ್ ನೆಕ್ ಡ್ರೆಸ್ ನಲ್ಲಿ ಸರಳ ಸುಂದರಿಯಾಗಿ ಮಿಂಚಿದ್ದಾರೆ.

  ಆಕೆ ಒಂದು ಮ್ಯಾಜಿಕ್ ನಂತೆ ಸಣ್ಣ ಕವಿತೆಯಂತೆ ಕಾಣುತ್ತಿದ್ದಾಳೆ ಎಂದು ಚಿತ್ರಗಳನ್ನು ತೆಗೆದ ಫೋಟಾಗ್ರಫರ್ ಡಬ್ಬೂ ರತ್ನಾನಿ ಹೇಳಿದ್ದಾರೆ. ಲಕ್ಷ್ಮಿ ಲೆಹೆರ್ ಆಲಿಯಾರನ್ನು ಸ್ಟೈಲ್ ಮಾಡಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಚಿತ್ರಗಳೇ ಆದರೂ ಅವು ಉಳಿದ ನೂರಾರು ಚಿತ್ರಗಳಿಗೆ ಸಮ ಎನ್ನುವಂತೆ ಆಲಿಯಾ ಫೋಟೋಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. ಆಲಿಯಾ ಭಟ್ ಸದ್ಯ ಡಾರ್ಲಿಂಗ್ಸ್ ಎನ್ನುವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ, ಎಸ್ ಎಸ್ ರಾಜಮೌಳಿಯ ಆರ್ ಆರ್ ಆರ್, ಕರಣ್ ಜೋಹರ್ ನಿರ್ಮಾಣದ ತಖ್ತ್, ಬ್ರಹ್ಮಾಸ್ತ್ರ ಸೇರಿದಂತೆ ಅನೇಕ ಬಿಗ್ ಬಜೆಟ್ ಸಿನಿಮಾಗಳು ಆಲಿಯಾ ಬಳಿಯಲ್ಲಿದೆ. ಸಾಕಷ್ಟು ಸಮಯದಿಂದ ನೆಚ್ಚಿನ ತಾರೆಯನ್ನು ತೆರೆ ಮೇಲೆ ನೋಡದ ಅಭಿಮಾನಿಗಳು ಈ ಫೋಟೋ ಶೂಟ್ ನ ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
  Published by:Soumya KN
  First published: