Alia Bhatt: RRR ಸಿನಿಮಾದಲ್ಲಿ ಆಲಿಯಾ ಸೀನ್ಸ್​​ಗೆ ಕತ್ತರಿ? ರಾಜಮೌಳಿಯನ್ನು ಅನ್​ಫಾಲೋ ಮಾಡಿದ್ರಾ `ಸೀತಾ’?

ಆರ್​ಆರ್​ಆರ್​​ ಸಿನಿಮಾದಲ್ಲಿ ರಾಮ್​ಚರಣ್​ ಹಾಗೂ ಜೂ.ಎನ್​ಟಿಆರ್​ ಅವರೇ ತುಂಬಿ ಹೋಗಿದ್ದಾರೆ. ಆಲಿಯಾ ಭಟ್​ ಕೇವಲ 10 ರಿಂದ 15 ನಿಮಿಷ ಪಾತ್ರ ತೆರೆ ಮೇಲೆ ಇರುತ್ತಾರೆ. ಆಲಿಯಾ ಭಟ್​ ಅವರ ಕೆಲ ಸೀನ್​ಗಳನ್ನು ಕಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ರಾಜಮೌಳಿ, ಆಲಿಯಾ ಭಟ್​

ರಾಜಮೌಳಿ, ಆಲಿಯಾ ಭಟ್​

  • Share this:
ರಾಜಮೌಳಿ(Rajamouli), ಎನ್‌ಟಿಆರ್‌(NTR), ರಾಮಚರಣ್‌(Ramcharan) ಕಾಂಬಿನೇಷನ್‌ನ ಆರ್‌ಆರ್‌ಆರ್‌(RRR) ಸಿನಿಮಾ ಟಾಲಿವುಡ್‌(Tollywood) ಜೊತೆಗೆ ಇತರ ಭಾಷೆಗಳಲ್ಲೂ ಸದ್ದು ಮಾಡುತ್ತಿದೆ. ಆರ್ ಆರ್ ಆರ್ ಮಾರ್ಚ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಪ್ರೇಕ್ಷಕರು ಚಿತ್ರ ನೋಡಿ ಆನಂದಿಸುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್(Jr NTR and Ram Charans) ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಬಾಕ್ಸ್ ಆಫೀಸ್(Box Ofice) ನಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಈಗಾಗಲೇ ರಾಜಮೌಳಿ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ದಾಟಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜಕ್ಕಣ್ಣನ ನಿರ್ದೇಶನದಲ್ಲಿ ಈ ಹಿಂದೆ ತೆರೆಕಂಡಿದ್ದ ಬಾಹುಬಲಿ(Bahubhali) ಹಾಗೂ ಬಾಹುಬಲಿ ದಿ ಕನ್​ಕ್ಲೂಷನ್(Bahubhali​ The Conclusion)ಸಿನಿಮಾಗಳಿಗಿಂತ ಆರ್​ಆರ್​ಆರ್​ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.ಜೊತೆಗೆ ನಿರ್ಮಾಪಕರಿಗೆ ಭರ್ಜರಿ ಕಲೆಕ್ಷನ್​ ಮಡುತ್ತಿದೆ. ಆದರೆ, ಈಗ ಮತ್ತೊಂದು ವಿಚಾರ ಎಲ್ಲಕ್ಕಿಂತ ಹೆಚ್ಚಾಗಿ ಸುದ್ದಿಯಾಗುತ್ತಿದೆ.

ಆರ್​ಆರ್​ಆರ್​ ಸಿನಿಮಾದಲ್ಲಿ ಆಲಿಯಾ ಸೀನ್ಸ್​​ಗೆ ಕತ್ತರಿ!

ರಾಜಮೌಳಿ ನಿರ್ದೇಶನ ಆರ್​ಆರ್​ಆರ್​ ಸಿನಿಮಾ ಅವಧಿ 3ಗಂಟೆ 3 ನಿಮಿಷ. ಎಲ್ಲೂ ಬೋರ್​ ಆಗದೇ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತೆ. ಈ ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ಗಳು ಕೂಡ ನಟಿಸಿದ್ದಾರೆ. ಆಲಿಯಾ ಭಟ್​ ಹಾಗೂ ಅಜಯ್​ ದೇವಗನ್​ ನಟಿಸಿದಿದ್ದಾರೆ. ಅದರಲ್ಲೂ ಸೀತೆ ಪಾತ್ರದಲ್ಲಿ ನಟಿಸಿರುವ ಆಲಿಯಾ ಭಟ್​ ನಟನಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆರ್​ಆರ್​ಆರ್​​ ಸಿನಿಮಾದಲ್ಲಿ ರಾಮ್​ಚರಣ್​ ಹಾಗೂ ಜೂ.ಎನ್​ಟಿಆರ್​ ಅವರೇ ತುಂಬಿ ಹೋಗಿದ್ದಾರೆ. ಆಲಿಯಾ ಭಟ್​ ಕೇವಲ 10 ರಿಂದ 15 ನಿಮಿಷ ಪಾತ್ರ ತೆರೆ ಮೇಲೆ ಇರುತ್ತಾರೆ. ಆಲಿಯಾ ಭಟ್​ ಅವರ ಕೆಲ ಸೀನ್​ಗಳನ್ನು ಕಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ರಾಜಮೌಳಿ ವಿರುದ್ಧ ಗರಂ ಆದ್ರಾ ಆಲಿಯಾ? 

ದೀರ್ಘ ಅವಧಿಯ ಚಿತ್ರದಲ್ಲಿ ಆಲಿಯಾಗೆ ಇದ್ದ ಸ್ಕ್ರೀನ್ ಸ್ಪೇಸ್ ಕೆಲವೇ ನಿಮಿಷಗಳು. ಚಿತ್ರವನ್ನು ನೋಡಿದ ಆಲಿಯಾಗೆ ಇದರಿಂದ ಅಸಮಾಧಾನವಾಗಿದೆ ಎನ್ನಲಾಗಿದೆ. ಆಲಿಯಾ ತಮ್ಮ ಇನ್​ಸ್ಟಾಗ್ರಾಂನಿಂದ ‘ಆರ್​ಆರ್​ಆರ್​’ ಕುರಿತ ಕೆಲವು ಪೋಸ್ಟ್​ಗಳನ್ನೂ ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ. ಆಲಿಯಾ ನಿರ್ದೇಶಕ ರಾಜಮೌಳಿಯನ್ನು ಇನ್​ಸ್ಟಾಗ್ರಾಂನಲ್ಲಿ ಅನ್​ಫಾಲೋ ಮಾಡಿದ್ದಾರೆ ಎಂದೂ ವರದಿಯಾಗಿದೆ. ಈ ನಡುವೆ ಆಲಿಯಾ ಜ್ಯೂ.ಎನ್​ಟಿಆರ್ ಹಾಗೂ ರಾಮ್ ಚರಣ್​ರನ್ನು ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ: RRR ಸಿನಿಮಾ ಹೊಗಳಿದ ಸಲ್ಮಾನ್​ ಖಾನ್​, ಸೌತ್​ ಸಿನಿಮಾದ ಸಕ್ಸಸ್​ ಕಂಡು ಗರಂ ಆದ `ಬಜರಂಗಿ ಭಾಯ್​ಜಾನ್’!

ಚಿತ್ರ  ರಿಲೀಸ್​ ನಂತ್ರ ಎಲ್ಲೂ ಕಾಣಿಸಿಕೊಳ್ಳದ ಆಲಿಯಾ!

ಚಿತ್ರದ ರಿಲೀಸ್​ಗೂ ಮುನ್ನ ಆಲಿಯಾ ಚಿತ್ರತಂಡದೊಂದಿಗೆ ಪ್ರಚಾರ ಕಾರ್ಯದಲ್ಲಿ ಹೆಚ್ಚು ಭಾಗಿಯಾಗಿದ್ದರು. ಆದರೆ ಚಿತ್ರದ ರಿಲೀಸ್ ನಂತರ ಪ್ರಚಾರ ಕಾರ್ಯದಲ್ಲಿ ಆಲಿಯಾ ತೊಡಗಿಸಿಕೊಳ್ಳುತ್ತಿಲ್ಲ. ಆಲಿಯಾ ಇನ್​ಸ್ಟಾಗ್ರಾಂ ಫೀಡ್​ನಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಪ್ರಚಾರ ಹಾಗೂ ಆ ಚಿತ್ರದ ಕುರಿತ ಪೋಸ್ಟ್​ಗಳು ಹೆಚ್ಚಿವೆ. ಪೋಸ್ಟ್ ಹಂಚಿಕೊಳ್ಳದ ಹೊರತಾಗಿಯೂ ಆಲಿಯಾ ತಮ್ಮ ಸ್ಟೋರಿಯಲ್ಲಿ ಆಗೊಂದು ಈಗೊಂದು ‘ಆರ್​ಆರ್​ಆರ್​’ ಕುರಿತ ಮಾಹಿತಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ‘ಆರ್​ಆರ್​ಆರ್​’ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಈ ಫೋಟೋ ನಿಮಗೆ ಇಷ್ಟ ಆಗಲ್ಲ ಆದ್ರೂ ಹಾಕಿದ್ದೀನಿ.. ಹಿಂಗ್ಯಾಕ್​ ಅಂದ್ರು ರಶ್ಮಿಕಾ ಮೇಡಂ?

ರಾಮಚರಣ್ ಬಗ್ಗೆ ಹೊಗಳಿದ ಸಲ್ಮಾನ್​ ಖಾನ್!

ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್(Salman Khan) RRR ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. IIFA 2022 ಬಿಡುಗಡೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಲ್ಮಾನ್ ಖಾನ್, ಗಾಡ್ ಫಾದರ್(God Father) ಚಿತ್ರದಲ್ಲಿ ಚಿರಂಜೀವಿ(Chiranjeevi) ಅವರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ ಎಂದು ಪ್ರತಿಕ್ರಿಯಿಸಿದ್ದಾರೆ. ‘ಚಿರಂಜೀವಿ ಅವರನ್ನು ಬಹಳ ದಿನಗಳಿಂದ ಬಲ್ಲೆ.. ಅವರು ಒಳ್ಳೆಯ ಸ್ನೇಹಿತ’ ಎಂದು ಕಾಮೆಂಟ್ ಮಾಡಿದ್ದಾರೆ. ‘ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಒಳ್ಳೆಯ ಗೆಳೆಯ’ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ RRR ನಲ್ಲಿ ರಾಮ್ ಚರಣ್ ಅವರ ಅಭಿನಯಕ್ಕಾಗಿ ಸಲ್ಮಾನ್ ಖಾನ್ ಅವರನ್ನು ಅಭಿನಂದಿಸಿದ್ದಾರೆ.
Published by:Vasudeva M
First published: