• Home
  • »
  • News
  • »
  • entertainment
  • »
  • OTT Star Heroines: 2022ರಲ್ಲಿ ಒಟಿಟಿಯಲ್ಲಿ ಮಿಂಚಿದ ಬಾಲಿವುಡ್ ಬ್ಯೂಟೀಸ್ ಇವರು

OTT Star Heroines: 2022ರಲ್ಲಿ ಒಟಿಟಿಯಲ್ಲಿ ಮಿಂಚಿದ ಬಾಲಿವುಡ್ ಬ್ಯೂಟೀಸ್ ಇವರು

ಆಲಿಯಾ ಭಟ್

ಆಲಿಯಾ ಭಟ್

ನಟ-ನಟಿಯರು ಒಟಿ‌ಟಿಯಲ್ಲಿ ಪ್ರಸಾರವಾಗುವ ವೆಬ್ ಶೋ, ವೆಬ್ ಸಿರೀಸ್ ಗಳಲ್ಲಿ ನಟಿಸಿ ಅಭಿಮಾನಿಗಳಿಂದ ಭೇಷ್ ಅಂತ ಅನ್ನಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಹ ಅವರನ್ನು ಹುಡುಕಿಕೊಂಡು ಬರುತ್ತಿವೆ.

  • Trending Desk
  • 3-MIN READ
  • Last Updated :
  • Bangalore, India
  • Share this:

ಮೊದಲೆಲ್ಲಾ ಚಿತ್ರೋದ್ಯಮದವರು ತಮ್ಮ ಹೊಸ ಹೊಸ ಚಿತ್ರಗಳನ್ನು ಬರೀ ಸಿನೆಮಾ ಥಿಯೇಟರ್ (Theater) ಗಳಲ್ಲಿಯೇ ಬಿಡುಗಡೆ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಎಷ್ಟೋ ಸಿನೆಮಾಗಳು ಒಟಿಟಿ (OTT) ಪ್ಲಾಟ್‌ಫಾರ್ಮ್ ಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಷ್ಟೇ ಅಲ್ಲದೆ ಥಿಯೇಟರ್ ನಲ್ಲಿ ಬಿಡುಗಡೆ ಮಾಡಿದ ನಂತರ ಆ ಚಿತ್ರವನ್ನು (Cinema) ಭಾರಿ ಮೊತ್ತಕ್ಕೆ ಒಟಿಟಿ ಪ್ಲಾಟ್‌ಫಾರ್ಮ್ ನವರಿಗೆ ನೀಡುತ್ತಾರೆ. ಬರೀ ಸಿನಿಮಾಗಳು ಅಷ್ಟೇ ಅಲ್ಲದೆ, ಒಟಿಟಿಯಲ್ಲಿ ವೆಬ್ ಸಿರೀಸ್ ಗಳು, ರಿಯಾಲಿಟಿ ಶೋ ಗಳು ಮತ್ತು ಚಾಟ್ ಶೋ ಗಳು ಸಹ ಬಿಡುಗಡೆಯಾಗುತ್ತವೆ.


ಒಟ್ಟಿನಲ್ಲಿ ಹೇಳುವುದಾದರೆ ಒಟಿ‌ಟಿ ಬಂದ ನಂತರವಂತೂ ಚಿತ್ರೋದ್ಯಮದ ಮಂದಿಗೆ ಥಿಯೇಟರ್ ಬಿಟ್ಟು ತಮ್ಮ ಚಿತ್ರ ಬಿಡುಗಡೆ ಮಾಡಲು ವೇದಿಕೆ ಸಿಕ್ಕಂತಾಗಿದೆ ಅಂತ ಹೇಳಬಹುದು.




ಇದು ಅನೇಕ ಹೊಸ ನಟ ಮತ್ತು ನಟಿಯರಿಗೂ ಸಹ ತುಂಬಾನೇ ಅವಕಾಶಗಳನ್ನು ನೀಡಿದೆ ಅಂತ ಹೇಳಬಹುದು. ಎಷ್ಟೋ ಜನ ಪ್ರತಿಭಾವಂತ ನಟ ಮತ್ತು ನಟಿಯರಿಗೆ ನಟಿಸಲು ಒಂದು ಸಿನಿಮಾ ಸಹ ಸಿಗುವುದಿಲ್ಲ.


ಅಂತಹ ಸಮಯದಲ್ಲಿ ಆ ನಟ-ನಟಿಯರು ಒಟಿ‌ಟಿಯಲ್ಲಿ ಪ್ರಸಾರವಾಗುವ ವೆಬ್ ಶೋ, ವೆಬ್ ಸಿರೀಸ್ ಗಳಲ್ಲಿ ನಟಿಸಿ ಅಭಿಮಾನಿಗಳಿಂದ ಭೇಷ್ ಅಂತ ಅನ್ನಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೆ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಸಹ ಅವರನ್ನು ಹುಡುಕಿಕೊಂಡು ಬರುತ್ತಿವೆ ಅಂತ ಹೇಳಬಹುದು.


ಇದನ್ನೂ ಓದಿ: Celebrities Health: 2022ರಲ್ಲಿ ತಮ್ಮ ಕಾಯಿಲೆ ಬಗ್ಗೆ ರಿವೀಲ್ ಮಾಡಿದ ಸ್ಟಾರ್​ಗಳಿವರು


ಹೀಗೆ 2022 ರಲ್ಲಿ ಒಟಿಟಿಯಲ್ಲಿ ಪ್ರಸಾರವಾಗುವ ವೆಬ್ ಸಿರೀಸ್, ವೆಬ್ ಶೋ ನಲ್ಲಿ ನಟಿಸಿ ಸೈ ಎನಿಸಿಕೊಂಡು ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ನಟಿಯರಾದವರ ಪಟ್ಟಿ ತುಂಬಾನೇ ಉದ್ದವಿದೆ ಅಂತ ಹೇಳಬಹುದು. ಆ ಪಟ್ಟಿಯಲ್ಲಿ ಯಾವ ಯಾವ ನಟಿಯರಿದ್ದಾರೆ ನೀವೇ ನೋಡಿ.


ಶೇಫಾಲಿ ಶಾ


ಬಾಲಿವುಡ್ ಚಿತ್ರಗಳಲ್ಲಿ ಹೆಚ್ಚಾಗಿ ತಾಯಿ ಪಾತ್ರಗಳನ್ನು ಅಥವಾ ಬೇರೆ ಯಾವುದೋ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಶೇಫಾಲಿ ಶಾ ಅವರಿಗೆ ಈ 2022 ರ ವರ್ಷ ವೃತ್ತಿಜೀವನದ ಭಾಗವಾಗಿ ನೋಡಿದರೆ ತುಂಬಾನೇ ಚೆನ್ನಾಗಿತ್ತು ಅಂತ ಹೇಳಬಹುದು. ಈ ವರ್ಷ ಒಟಿಟಿಯಲ್ಲಿ ಇವರು ನಟಿಸಿದ್ದ 4 ಪ್ರಾಜೆಕ್ಟ್ ಗಳು ಬಿಡುಗಡೆಗೊಂಡಿದ್ದವು. ಡಾರ್ಲಿಂಗ್ಸ್, ಡೆಲ್ಲಿ ಕ್ರೈಮ್ 2, ಹ್ಯೂಮನ್ಸ್ ಮತ್ತು ಜಲ್ಸಾ ದಲ್ಲಿ ನಟಿಸಿ ತುಂಬಾನೇ ಅಭಿಮಾನಿಗಳನ್ನು ಗಳಿಸಿದ್ದಾರೆ ಅಂತ ಹೇಳಬಹುದು.


ಈ ವರ್ಷ ಶೇಫಾಲಿ ಅವರು ನಾನಾ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ಪ್ರತಿಯೊಂದು ಪಾತ್ರದ ಬಗ್ಗೆ ಸಿನಿ ರಸಿಕರು ತುಂಬಾನೇ ಮೆಚ್ಚಿಕೊಂಡರು.


ಆಲಿಯಾ ಭಟ್


ನಟಿ ಆಲಿಯಾ ಭಟ್ ಅವರು ಈ ವರ್ಷ ಡಾರ್ಲಿಂಗ್ಸ್ ಚಿತ್ರದಲ್ಲಿ ಮಾಡಿದ ಉತ್ತಮ ನಟನೆಯಿಂದ ಅಭಿಮಾನಿಗಳ ಮನವನ್ನು ಗೆದ್ದಿದ್ದಾರೆ ಅಂತ ಹೇಳಬಹುದು. ಈ ನಟಿ ಎಂತಹ ಪಾತ್ರದಲ್ಲಿಯಾದರೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಒಂದರ ನಂತರ ಇನ್ನೊಂದು ಎಂಬಂತೆ ಚಿತ್ರಗಳಲ್ಲಿ ನಟಿಸುತ್ತಾ ಫುಲ್ ಬ್ಯುಸಿಯಾಗಿದ್ದಾರೆ ನಟಿ ಅಂತ ಹೇಳಬಹುದು.




ರಾಧಿಕಾ ಆಪ್ಟೆ


ನಟಿ ರಾಧಿಕಾ ಆಪ್ಟೆ ಅವರ ಅಭಿನಯದ, ಈ ವರ್ಷ ತೆರೆಕಂಡ ‘ಮೋನಿಕಾ ಒ ಮೈ ಡಾರ್ಲಿಂಗ್’ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಯಿತು. ಅದರಲ್ಲಿ ರಾಧಿಕಾ ‘ಎಸಿಪಿ ನಾಯ್ಡು’ ಪಾತ್ರದಲ್ಲಿ ಕಾಣಿಸಿಕೊಂಡು ಚೆನ್ನಾಗಿ ನಟಿಸಿ ಅಭಿಮಾನಿಗಳಿಂದ ಸೈ ಎನಿಸಿಕೊಂಡರು.


ವಿದ್ಯಾ ಬಾಲನ್


ನಟಿ ವಿದ್ಯಾ ಬಾಲನ್ ಈಗಾಗಲೇ ತಮ್ಮನ್ನು ತಾವು ಅನೇಕ ಚಿತ್ರಗಳಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಅಭಿನಯಿಸುವುದರ ಮೂಲಕ ಒಳ್ಳೆಯ ನಟಿ ಅಂತ ಸಾಬೀತು ಪಡಿಸಿಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ವರ್ಷ ಬಿಡುಗಡೆಗೊಂಡ ‘ಜಲ್ಸಾ’ ದಲ್ಲಿ ವಿದ್ಯಾ ಅವರ ನಟನೆ ತುಂಬಾ ಜನರಿಗೆ ಇಷ್ಟವಾಗಿದೆ.




ಆದಿತಿ ಪೋಹಾನ್ಕರ್


ನಟಿ ಆದಿತಿ ಪೋಹಾನ್ಕರ್ ಅವರ ನಟನೆಯಿಂದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ ಅಂತ ಹೇಳಬಹುದು. ಇವರು ಈ ವರ್ಷ ತೆರೆಕಂಡ ‘ಶೀ’ ದಲ್ಲಿ ನಟಿಸಿ ಅಭಿಮಾನಿಗಳಿಗೆ ಮೆಚ್ಚಿನ ನಟಿಯಾಗಿದ್ದಾರೆ.


ಪ್ರಜಕ್ತಾ ಕೊಹ್ಲಿ


ನಟಿ ಪ್ರಜಕ್ತಾ ಅವರು ತಮ್ಮ ನಟನೆಯ ಪಾದಾರ್ಪಣೆಯನ್ನು ‘ಜುಗ್ ಜುಗ್ ಜಿಯೋ’ ಎಂಬ ಚಿತ್ರದಲ್ಲಿ ನಟಿಸುವುದರೊಂದಿಗೆ ಮಾಡಿದರು. ಇಷ್ಟೇ ಅಲ್ಲದೆ ‘ಮಿಸ್ ಮ್ಯಾಚ್ಡ್ 2’ ಸಿರೀಸ್ ನಲ್ಲಿಯೂ ಸಹ ಡಿಂಪಲ್ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮನವನ್ನು ಗೆದ್ದರು.


ಮಾಧುರಿ ದೀಕ್ಷಿತ್


ನಟಿ ಮಾಧುರಿ ದೀಕ್ಷಿತ್ ಅವರ ಬಗ್ಗೆ ಹೊಸದಾಗಿ ಹೇಳುವುದಕ್ಕೆ ಏನಿದೆ? ಈಗಾಗಲೇ ಅನೇಕ ಚಿತ್ರಗಳನ್ನು ಮಾಡಿ ಅನೇಕ ಅಭಿಮಾನಿಗಳ ಬಳಗವನ್ನು ಹೊಂದಿರುವ ನಟಿ ಈ ವರ್ಷ ಒಟಿಟಿಯಲ್ಲಿಯೂ ಸಹ ಮಿಂಚಿದ್ದಾರೆ.


ಸಾಂದರ್ಭಿಕ ಚಿತ್ರ


‘ದಿ ಫೇಮ್ ಗೇಮ್’ ಶೋ ನ ಮುಖಾಂತರ ಮತ್ತೆ ನಟನೆಗೆ ಹಿಂದಿರುಗಿದ ಮಾಧುರಿ ಇದಷ್ಟೇ ಅಲ್ಲದೆ ‘ಮಜಾ ಮಾ’ ಎಂಬ ಚಿತ್ರದಲ್ಲಿ ಸಹ ನಟಿಸಿದ್ದಾರೆ. ಇದು ಈ ವರ್ಷ ಒಟಿಟಿಯಲ್ಲಿ ತೆರೆಕಂಡಿದೆ.


ಶ್ವೇತಾ ತ್ರಿಪಾಠಿ


ನಟಿ ಶ್ವೇತಾ ಮತ್ತೊಮ್ಮೆ ತಮ್ಮ ವೆಬ್ ಶೋ ಗಳಲ್ಲಿ ನಟನೆಯ ಮೂಲಕ ತಮ್ಮನ್ನು ತಾವು ಸಾಬೀತು ಪಡಿಸಿಕೊಂಡಿದ್ದಾರೆ. ‘ಯೇ ಕಾಲಿ ಕಾಲಿ ಆಂಖೆ’ ಎಂಬ ವೆಬ್ ಶೋ ದಲ್ಲಿ ನಟಿಸುವುದರೊಂದಿಗೆ ಶ್ವೇತಾ ಅವರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.


ಕೀರ್ತಿ ಕುಲ್ಹಾರಿ


‘ಫೋರ್ ಮೋರ್ ಶಾಟ್ಸ್’ ಮತ್ತು ‘ಹ್ಯೂಮನ್’ ವೆಬ್ ಸಿರೀಸ್ ಗಳಲ್ಲಿ ನಟಿ ಕೀರ್ತಿ ಕುಲ್ಹಾರಿ ಅವರು ನಟಿಸಿ ಸಿನಿ ರಸಿಕರಿಗೆ ಮೆಚ್ಚಿನ ನಟಿಯಾಗಿದ್ದಾರೆ.

Published by:Divya D
First published: