Alia Bhatt: ಮತ್ತೊಬ್ಬ ಸ್ಟಾರ್​ ನಟನ ಜೊತೆ ನಟಿಸ್ತಿದ್ದಾರೆ ಆಲಿಯಾ, ಈ ಚಿತ್ರಕ್ಕೆ ರಾಜಮೌಳಿ ಆ್ಯಕ್ಷನ್​-ಕಟ್​!

‘ಆರ್​ಆರ್​ಆರ್​’(RRR) ಸಿನಿಮಾದಲ್ಲಿ ಆಲಿಯಾ ಭಟ್​ ನಟಿಸಿದ್ದಾರೆ. ಇತ್ತೀಚೆಗೆ ಜ್ಯೂ.ಎನ್​ಟಿಆರ್(J.NTR)​ ಸಿನಿಮಾದಲ್ಲಿ ಆಲಿಯಾ ನಟಿಸುತ್ತಾರೆ ಅಂತ ಹೇಳಲಾಗುತ್ತಿದೆ. ಇದೀಗ ಮತ್ತೊಬ್ಬ ಟಾಲಿವುಡ್ ಸ್ಟಾರ್​(Tollywood) ಜೊತೆ ಆಲಿಯಾ ನಟಿಸುತ್ತಿದ್ದಾರೆ.

ಮಹೇಶ್​ ಬಾಬು, ಆಲಿಯಾ ಭಟ್​

ಮಹೇಶ್​ ಬಾಬು, ಆಲಿಯಾ ಭಟ್​

  • Share this:
ಆಲಿಯಾ ಭಟ್​​(Alia Bhat).. ಯಾವುದೇ ಪಾತ್ರ ಕೊಟ್ಟರು ನೀರು ಕುಡಿದ ಹಾಗೇ ಸುಲಭವಾಗಿ ಮಾಡಿಬಿಡುತ್ತಾರೆ. ವಯಸ್ಸು ಚಿಕ್ಕದಾದರೂ ಸ್ಟಾರ್​ ನಟಿ ಪಟ್ಟ ಪಡೆದುಕೊಂಡಿದ್ದಾರೆ. ಸದ್ಯ ಸಂಜಯ್ ಲೀಲಾ ಬನ್ಸಾಲಿ(Sanjay Leela Bhansali) ನಿರ್ದೇಶನದ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ'(Gangubai Kathiawadi) ಸಿನಿಮಾ ಕಳೆದ ವಾರ ರಿಲೀಸ್ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರ ಅದ್ಬುತ ಯಶಸ್ಸಿನ ಜೊತೆಗೆ ಹೊಸ ಆಯಾಮಗಳನ್ನು ಸೃಷ್ಟಿಸಿದೆ. ಚಿತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್(Box Office) ನಲ್ಲಿ ಭಾರಿ ಸದ್ದು ಮಾಡುತ್ತಿದೆ. ವಾರಾಂತ್ಯದಲ್ಲಿ ಕಲೆಕ್ಷನ್‌(Collection) ಭಾರಿ ಏರಿಕೆಯಾಗಿದೆ. ‘ಆರ್​ಆರ್​ಆರ್​’(RRR) ಸಿನಿಮಾದಲ್ಲಿ ಆಲಿಯಾ ಭಟ್​ ನಟಿಸಿದ್ದಾರೆ. ಇತ್ತೀಚೆಗೆ ಜ್ಯೂ.ಎನ್​ಟಿಆರ್(J.NTR)​ ಸಿನಿಮಾದಲ್ಲಿ ಆಲಿಯಾ ನಟಿಸುತ್ತಾರೆ ಅಂತ ಹೇಳಲಾಗುತ್ತಿದೆ. ಇದೀಗ ಮತ್ತೊಬ್ಬ ಟಾಲಿವುಡ್ ಸ್ಟಾರ್​(Tollywood) ಜೊತೆ ಆಲಿಯಾ ನಟಿಸುತ್ತಿದ್ದಾರೆ.

ಮಹೇಶ್​ ಬಾಬು ಜೊತೆ ನಟಿಸ್ತಿದ್ದಾರೆ ಆಲಿಯಾ ಭಟ್​!

ಇದೇ ಮಾರ್ಚ್ 25ಕ್ಕೆ RRR ರಿಲೀಸ್ ಆಗುತ್ತಿದೆ. ರಾಜಮೌಳಿ ಚಿತ್ರದಲ್ಲಿ ಆಲಿಯಾ ಅಭಿನಯ ಹೇಗಿರಲಿದೆ ಎನ್ನುವ ಸಾಕಷ್ಟು ಕುತೂಹಲ ಮೂಡಿದೆ. ಈ ಚಿತ್ರದಲ್ಲಿ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಇದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ಆಲಿಯಾ ಭಟ್ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರಕ್ಕೆ ನಿರ್ದೇಶಕ ರಾಜಮೌಳಿ ನಿರ್ದೇಶನ ಇರಲಿದೆ.ನಿರ್ದೇಶಕ ರಾಜಮೌಳಿ RRR ಚಿತ್ರದ ಬಳಿಕ ಮಹೇಶ್ ಬಾಬುಗೆ ಸಿನಿಮಾ ಮಾಡಲಿದ್ದಾರೆ.

ಮಹೇಶ್​-ರಾಜಮೌಳಿ ಕಾಂಬಿನೇಷನ್​ ಸಿನಿಮಾ!

ಮಹೇಶ್​ ಬಾಬು ಜೊತೆ ಅದ್ಧೂರಿ ವೆಚ್ಚದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಖ್ಯಾತ ನಿರ್ಮಾಪಕರೊಬ್ಬರು ಬಂಡವಾಳ ಹೂಡಲಿದ್ದಾರಂತೆ. ‘ಆರ್​ಆರ್​ಆರ್​’ ಸಿನಿಮಾ ರಿಲೀಸ್​ ಆದ ಬಳಿಕ ಮಹೇಶ್​ ಬಾಬು ಅವರ ಸಿನಿಮಾವನ್ನು ಕೈಗೆತ್ತಿಗೊಳ್ಳಲಿದ್ದಾರಂತೆ.ಆದರೆ ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಸುದ್ದಿ ಈಗ ಮುನ್ನೆಲೆಗೆ ಬಂದಿದೆ. ನಟಿ ಆಲಿಯಾ ಭಟ್ ಮಹೇಶ್ ಬಾಬು ಜೊತೆಗೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಆದರೆ, ಈ ಸುದ್ದಿ ಅಧಿಕೃತವಾಗಿಲ್ಲ. ಚಿತ್ರತಂಡದಿಂದ ಯಾವುದೇ ಮಾಹಿತಿ ಬಂದಿಲ್ಲ.

ಇದನ್ನೂ ಓದಿ: ಅಬ್ಬಬ್ಬಾ ಲಾಟ್ರಿ.. `ವಂಡರ್​ ವುಮೆನ್​’ ಜೊತೆ ಹಾಲಿವುಡ್​ ಸಿನಿಮಾದಲ್ಲಿ ನಟಿಸ್ತಿದ್ದಾರೆ ರೀ ಆಲಿಯಾ!

ಹಾಲಿವುಡ್​ನಲ್ಲಿ ಮಿಂಚಲು ರೆಡಿಯಾದ ಆಲಿಯಾ!

ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದ ಭಾರತದ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾಗಿ ಬಾಲಿವುಡ್ ಸಿನಿಮಾಗಳಲ್ಲಿ ಪ್ರಾಬಲ್ಯ ಸಾಧಿಸಿದ ನಂತರ ಆಲಿಯಾ, ಇದೀಗ ಹಾಲಿವುಡ್​ಗೆ ಕಾಲಿಡುತ್ತಿದ್ದಾರೆ. ‘ವಂಡರ್​ ವುಮೆನ್​’ ಸಿನಿಮಾಗಳಲ್ಲಿ ನಟಿಸಿರುವ ಗಾಲ್​ ಗಡೋಟ್​ ಅವರ ಜೊತೆ ಆಲಿಯಾ ಭಟ್​ ನಟಿಸಿಲಿದ್ದಾರೆ. ಅದು ಈ ಸಿನಿಮಾವನ್ನು ಓಟಿಟಿಯ ದೈತ್ಯ ಸಂಸ್ಥೆ ನೆಟ್​​ಫ್ಲಿಕ್ಸ್​​ ನಿರ್ಮಾಣ ಮಾಡುತ್ತಿದೆ. ಇತ್ತೀಚೆಗೆ ರೆಡ್​ ನೋಟಿಸ್​ ಎಂಬ ಸಿನಿಮಾದಲ್ಲಿ ಗಾಲ್​ ಗಡೋಟ್​ ನಟಿಸಿದ್ದರು. ಈ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ರಿಲೀಸ್​ ಆಗಿತ್ತು. ಒಳ್ಳೆಯ ಪ್ರತಿಕ್ರಿಯ ಕೂಡ ದೊರಕಿತ್ತು.

ಇದನ್ನೂ ಓದಿ: ಒಂದೇ ಡಿಸೈನ್​ ಡ್ರೆಸ್ ಹಾಕಿದ ಈ ಬಾಲಿವುಡ್​ ನಟಿಯರು! ಇದನ್ನು ನೋಡಿ ನೆಟ್ಟಿಗರು ಹೇಳಿದ್ದೇನು?

ವಂಡರ್​ ವುಮೆನ್​ ಜೊತೆ ನಟಿಸ್ತಿದ್ದಾರೆ ಆಲಿಯಾ!

ಆಲಿಯಾ ಭಟ್ ಅವರು ಗಾಲ್ ಗಡೋಟ್ ಎದುರು ಜಾಗತಿಕವಾಗಿ ಪಾದಾರ್ಪಣೆ ಮಾಡಲಿದ್ದಾರೆ, ನೆಟ್‌ಫ್ಲಿಕ್ಸ್‌ನ ‘ಹಾರ್ಟ್ ಆಫ್ ಸ್ಟೋನ್‌’ ತಂಡ ಸೇರಲಿದ್ದಾರೆ. ಜೋಯಾ ಅಖ್ತರ್ ನಿರ್ದೇಶಿಸಿದ ಅವರ 2019 ರ ಚಲನಚಿತ್ರ ‘ಗಲ್ಲಿ ಬಾಯ್’ ಆ ವರ್ಷದ ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತ್ತು. ‘ಗಲ್ಲಿ ಬಾಯ್’​ ಸಿನಿಮಾ ಇಲ್ಲಿಯವರೆಗೆ ವಿಶ್ವದಾದ್ಯಂತ $25M ಗಳಿಸಿದೆ. ಈ ಚಲನಚಿತ್ರವು ಈಗ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ. ಇದೀಗ ಆಲಿಯಾ ಹಾಲಿವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
Published by:Vasudeva M
First published: